Advertisements

ವಿಚಾರಣೆ ಮುಗಿಸಿ ಬಂದ ಬಳಿಕ ಖ್ಯಾತ ನಿರೂಪಕಿ ಅನುಶ್ರೀ ಹೇಳಿದ್ದೇನು ನೋಡಿ ?

Cinema

ಈ ವರ್ಷ ಡ್ರ’ಗ್ ಧಂದೆ ಗೆ ಬ್ರೇಕ್ ಬಿದ್ದಿದೆ. ಮಾ’ದಕ ಲೋಕದಲ್ಲಿ ಅಕ್ರಮವಾಗಿ ತೊಡಗಿದವರೆಲ್ಲ ಒಬ್ಬೊಬ್ಬರಾಗಿ ಸಿಸಿಬಿಯ ಜಾಲದಲ್ಲಿ ಸಿಕ್ಕಿ ಬೀಳುತ್ತಿದಾರೆ. ಬಾಲಿವುಡ್ ಮಾತು ಸ್ಯಾಂಡಲ್ ವುಡ್ ಮಂದಿಯ ಪಾತ್ರವೂ ಇದರಲ್ಲಿ ಕಡಿಮೆಯಿಲ್ಲ. ಬಾಲಿವುಡ್ ನಟ ಸುಶಾಂತ್ ಸಿಂಗ್ ಸಾ’ವಿನ ಬಳಿಕ ಶುರುವಾದ ಈ ಡ್ರ’ಗ್ ಪ್ರಕರಣ ಎಲ್ಲಾ ಕಡೆ ಸುತ್ತಿ ಈಗ ನಟಿ ದೀಪಿಕಾ ಪಡುಕೋಣೆಯ ವಿಚಾರಣೆಯವರೆಗೂ ಬಂದು ನಿಂತಿದೆ.

ಇನ್ನು ಈ ಪ್ರ’ಕರಣ ಸ್ಯಾಂಡಲ್ವುಡ್ ನಲ್ಲಿ ಬಿರುಗಾಳಿ ಎಬ್ಬಿಸಿದ್ದು ಕನ್ನಡದ ನಟಿಯರಾದ ಸಂಜನಾ ಮತ್ತು ರಾಗಿಣಿ ಈಗಾಗಲೇ ಜೈಲು ಕಂಬಿ ಎಣಿಸುತ್ತಿದ್ದಾರೆ. ಇನ್ನು ಇದೇ ವಿಷಯದಲ್ಲಿ ಈಗಾಗಲೇ ದಿಗಂತ್ ಐಂದ್ರಿತಾ ರೈ ವಿಚಾರಣೆ ಕೂಡ ನಡೆದಿದ್ದು ಕ್ರಿಕೆಟ್ ಆಟಗಾರ ಅಯ್ಯಪ್ಪ ಹಾಗೂ ದುನಿಯಾ ಖ್ಯಾತಿಯ ಲೂಸ್ ಮಾದ ಯೋಗಿಯ ವಿಚಾರಣೆ ಸಹ ನಡೆದಿದೆ. ಇನ್ನು ಸೀರಿಯಲ್ ನಟ ನಟಿಯರನ್ನ ಕರೆದು ವಿಚಾರಣೆ ಮಾಡಲಾಗಿದೆ.

Advertisements

ಇನ್ನು ಈಗ ನಟಿ ಕಮ್ ಕನ್ನಡದ ಖ್ಯಾತ ನಿರೂಪಕಿಯಾಗಿ ಅನುಶ್ರೀ ಯವರ ಹೆಸರು ಕೇಳಿಬಂದಿದ್ದು, ಅವರ ವಿಚಾರಣೆ ನಿಜಕ್ಕೂ ಅಭಿಮಾನಿಗಳಲ್ಲಿ ಅಚ್ಚರಿ ಮೂಡಿಸಿದೆ. ಇನ್ನು ಈಗಾಗಲೇ ಮಂಗಳೂರಿನ ಸಿಸಿಬಿ ಕಚೇರಿಯಲ್ಲಿ ಹಾಜರಾಗಿದ್ದ ಅವರು ವಿಚಾರಣೆಯ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿ , ನನಗೂ ಇದಕ್ಕೂ ಯಾವುದೇ ಸಂಬಂಧ ಇಲ್ಲ. ಹತ್ತಾರು ವರ್ಷ ಗಳಿಂದ ನಂಗೆ ಕೊರಿಯೋಗ್ರಫರ್ ಆಗಿದ್ದ ಒಬ್ಬರ ಬಂ’ಧನ ಆಗಿದ್ದು, ಕೆಲ ಮಾಹಿತಿಯನ್ನು ಪಡೆದುಕೊಳ್ಳಲು ಸಿಸಿಬಿಯವರು ಕರೆಸಿದ್ದರು ಎಂದು ಹೇಳಿದರು.

ಮತ್ತೆ ಅಧಿಕಾರಿಗಳು ಏನಾದರೂ ಮಾಹಿತಿ ಕೇಳಿದರೂ ಬಂದು ಹೇಳುತ್ತೇನೆ ಎಂದಿದ್ದಾರೆ. ಆದರೆ ಪೂರ್ತಿ ವಿಚಾರಣೆಯ ಬಳಿಕವೇ ಅನುಶ್ರೀ ಅಪರಾಧಿ’ಯೋ ಇಲ್ಲವೋ ಎಂಬುದು ಬೆಳಕಿಗೆ ಬರಲಿದೆ. ಅನುಶ್ರೀ ಕೆಲ ಪಾರ್ಟಿಗಳಲ್ಲಿ ಭಾಗಿ ಆಗಿದ್ದರಿಂದ ಸಿಸಿಬಿ ಇಂದ ನೋಟಿಸ್ ಬಂದಿದೆ ಎಂಬ ಸುದ್ದಿಗಳೂ ಹರಿದಾಡುತ್ತಿವೆ.