Advertisements

ಬಿಗ್ ಬಾಸ್ ಈ ವರ್ಷ ನಡೆಯುತ್ತೋ ಇಲ್ಲವೋ! ಬಿಗ್ ಬಾಸ್ ಪ್ರಿಯರಿಗೆ ಶಾಕಿಂಗ್ ಸುದ್ದಿ.

Entertainment

ನಮಸ್ತೆ ಸ್ನೇಹಿತರೆ ಕೊರೊನ ದಿಂದ ಈಗಾಗಲೇ ಅನೇಕ, ಧಾರಾವಾಹಿಗಳು, ಸಿನಿಮಾಗಳು, ರಿಯಾಲಿಟಿ ಶೋಗಳು ನಿಂತು ಹೋಗಿದ್ದವು, ಆದರೆ ಇತ್ತೀಚಿಗೆ ಧಾರಾವಾಹಿಗಳು, ಹಾಗೂ ಸಿನಿಮಾಗಳ ಚಿತ್ರೀಕರಣ ಪ್ರಾರಂಭವಾಗಿದೆ. ಆದರೆ ಈಗ ದೊಡ್ಡ ರಿಯಾಲಿಟಿ ಶೋ ನಡೆಯುವುದಿಲ್ಲ ಎಂಬ ಮಾಹಿತಿ ಒರಬಿದ್ದಿದೆ . ಹೌದು ಸ್ನೇಹಿತರೆ ಈಗಾಗಲೇ ಸತತವಾಗಿ 7 ಸೀಸನ್ ಗಳನ್ನು ಪೂರೈಸಿರುವ ಬಿಗ್ ಬಾಸ್ ಈ ವರ್ಷ ನಡೆಯುವುದಿಲ್ಲ ಎಂದು ಹೇಳಲಾಗಿದೆ. ಇನ್ನೂ ಬಿಗ್ ಬಾಸ್ ಸೀಸನ್ 7 ರಲ್ಲಿ ಶೈನ್ ಶೆಟ್ಟಿಯವರು ಭಾಗವಹಿಸಿ ವಿನ್ನರ್ ಆಗಿದ್ದರು.

Advertisements

ಟಾಲಿವುಡ್ ನಲ್ಲಿ ನಟ ನಾಗಾರ್ಜುನ ನಿರೂಪಣೆಯ ಬಿಗ್ ಬಾಸ್ ಸೀಸನ್ 4 ಈಗಾಗಲೇ ಆರಂಭವಾಗಿದ್ದು ಸೆಪ್ಟೆಂಬರ್ 6 ರಂದು ಪ್ರಾರಂಭವಾಗಿದೆ, ಈ 4 ಬಿಗ್ ಬಾಸ್ ಸೀಸನ್ ನಲ್ಲಿ 16 ಸೆಲಿಬ್ರೆಟಿಗಳು ಭಾಗವಹಿಸಿದ್ದಾರೆ. ಇನ್ನೂ ಹಿಂದಿಯಲ್ಲೂ ಕೂಡ ಹೊಸ ಬಿಗ್ ಬಾಸ್ ಸೀಸನ್ ನಡೆಸಲು ತಯಾರಿ ಮಾಡಿಕೊಂಡಿದೆ. ಆದರೆ ಈ ವರ್ಷ ಕನ್ನಡದಲ್ಲಿ ಬಿಗ್ ಬಾಸ್ ನಡೆಯುವುದಿಲ್ಲ.

ಹೌದು ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರತಿ ವರ್ಷ ಇದೆ ತಿಂಗಳು ಸೆಪ್ಟೆಂಬರ್ ರಂದು ಬಿಗ್ ಬಾಸ್ ರಿಯಾಲಿಟಿ ಷೋ ಪ್ರಾರಂಭವಾಗುತ್ತಿತ್ತು. ಇನ್ನೂ ಬಿಗ್ ಬಾಸ್ ಸೀಸನ್ 8 ಗೆ ಇದೆ ತಿಂಗಳು ಎಲ್ಲಾ ತಯಾರಿ ನಡೆದು ಸ್ವರ್ದಿಗಳು ಬಿಗ್ ಬಾಸ್ ಮನೆಗೆ ತೆರಳಬೇಕಿತ್ತು ಆದರೆ ಕೊರೋ’ನಾ ಕಾರಣದಿಂದ ಬ್ರೇಕ್ ಬಿದ್ದಿದೆ. ಮಾಹಿತಿ ಪ್ರಕಾರ ಮುಂದಿನ ವರ್ಷ ಅಂದರೆ 2021 ಮಾರ್ಚ್ ತಿಂಗಳಲ್ಲಿ ಕನ್ನಡ ಬಿಗ್ ಬಾಸ್ ಸೀಸನ್ 8 ಪ್ರಾರಂಭವಾಗಲಿದೆ. ಇನ್ನೂ ಕಿಚ್ಚ ಸುದೀಪ್ ಮಾಡುತ್ತಿದ್ದ ನಿರೂಪಣೆ ಜನಮನ್ನಣೆ ಗಳಿಸಿತ್ತು ಆದರೆ ಈಗ ಬಿಗ್ ಬಾಸ್ ಇಲ್ಲ ಎಂಬುದು ಬಿಗ್ ಬಿ ಪ್ರಿಯರಿಗೆ ಬೇಸರ ತಂದಿದೆ.

ಸದ್ಯದ ಪರಿಸ್ಥಿತಿ ಧಾರವಾಹಿ ಚಿತ್ರೀಕರಣ, ಸಿನಿಮಾ ಶೂಟಿಂಗ್ ಹಾಗೂ ರಿಯಾಲಿಟಿ ಶೋಗಳನ್ನು ಮುಂದುವರೆಸುವಂತೆ ಅನುಮತಿ ನೀಡಿದ್ದರು ಆದರೆ ಬಿಗ್ ಬಾಸ್ ನಡೆಯುತ್ತದೆ ಎಂಭ ನಿರೀಕ್ಷೆಯಲ್ಲಿದ್ದರು ಆದರೆ ಈ ವರ್ಷ ಬಿಗ್ ಬಾಸ್ ನಡೆಯುವುದಿಲ್ಲ ಎಂಬುವ ಮಾಹಿತಿ ಹೊರಬಿದ್ದಿದೆ. ಇನ್ನು ಬಿಗ್ ಬಾಸ್ ನಿರೂಪಣೆ ಮಾಡುವ ಕಿಚ್ಚ ಸುದೀಪ್ ಅವರು ಕೂಡ ತಮ್ಮ ಹೊಸ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಹೌದು ಕಿಚ್ಚ ಸುದೀಪ್ ಅವರ ಪ್ಯಾಂಟಮ್ ಸಿನಿಮಾ ಶೂಟಿಂಗ್ ಹೈದರಾಬಾದ್ ನಲ್ಲಿ ನಡೆಯುತ್ತಿದ್ದರೆ ಮತ್ತೊಂದು ಕಡೆ ಕೋಟಿಗೊಬ್ಬ 3 ಸಿನಿಮಾ ಕೂಡ ರಿಲೀಸ್ ಆಗಲು ರೆಡಿಯಾಗಿದೆ.