Advertisements

ಬಿಗ್ ಬಾಸ್ ಕೊಟ್ರು ಗುಡ್ ನ್ಯೂಸ್! ಬಿಗ್ ಬಾಸ್ 8 ಮತ್ತೆ ಆರಂಭ.. ಯಾವಾಗ ಗೊತ್ತಾ?

Entertainment

ನಮಸ್ತೆ ಸ್ನೇಹಿತರೆ, ಬಿಗ್ ಬಾಸ್ ಕನ್ನಡ ಸೀಸನ್ 8 ಅರ್ಧಕ್ಕೆ ನಿಂತಿದೆ.. ಭಾನುವಾರ ನಡೆದ ವಿಶೇಷ ದಿನದ ಸಂಚಿಕೆಯನ್ನು ಮೇ 11 ಹಾಗು 12 ರಂದು ಪ್ರಸಾರ ಮಾಡಿ ಮುಗಿಸಿದ್ದಾರೆ. ಸೀಸನ್ ಅರ್ಧಕ್ಕೆ ನಿಂತಿರುವುದು ಸ್ಪರ್ಧಿಗಳು ಮಾತ್ರವಲ್ಲ ವೀಕ್ಷಕರಲ್ಲು ಕೂಡ ಬೇಸರ ಹೊರ ಹಾಕಿದ್ದಾರೆ.. ಇದೀಗ ವೀಕ್ಷಕರ ಒತ್ತಾಯಕ್ಕೆ ಮಣಿದಿರುವ ಬಿಗ್ ಬಾಸ್ ಸ್ಪರ್ಧಿಗಳಿಗೆ ಮತ್ತು ವೀಕ್ಷಕರಿಗೆ ಗುಡ್ ನ್ಯೂಸ್ ಒಂದನ್ನ ನೀಡಿದ್ದಾರೆ. ಆಗಾದ್ರೆ ಆ ಗುಡ್ ನ್ಯೂಸ್ ಏನು ಗೊತ್ತಾ? 72 ದಿನಗಳ ಕಾಲ ಬಿಗ್ ಬಾಸ್ ಮನೆಯಲ್ಲಿದ್ದು ಪ್ರಯಾಣ ಅಪೂರ್ಣವಾಗಿದ್ದು ಎಲ್ಲಾ ಸ್ಪರ್ಧಿಗಳಿಗೂ ನಿರಾಸೆಯಾಗಿದೆ..

Advertisements

ಈಗಿರುವಾಗ ವೂಟ್ ಕಡೆಯಿಂದ ಬಂದಿರುವ ವಿಶೇಷವಾದ ಟ್ವೀಟ್ ಎಲ್ಲರಲ್ಲೂ ಹೊಸ ಭರವಸೆಯನ್ನ ಮೂಡಿಸಿದೆ. ಬಿಗ್ ಬಾಸ್ ಕನ್ನಡ ಸೀಸನ್ 8 ಸಧ್ಯಕ್ಕೆ ಬ್ರೇಕ್ ತೆಗೆದುಕೊಂಡಿದ್ದು.. ಎಲ್ಲವೂ ಸರಿಯಾದ ಕೂಡಲೇ ಮತ್ತೆ ಆರಂಭವಾಗುತ್ತದೆ ಎಂದು ಟ್ವೀಟ್ ಮಾಡಲಾಗಿದೆ. ಇನ್ನೂ ಕೊನೆಯ ದಿನ ಬಿಗ್ ಬಾಸ್ ಮಾತನಾಡುವಾಗ ನಿಂತಿರುವ ಪ್ರಯಾಣ ಯಾವುದೇ ಸಂದರ್ಭದಲ್ಲಿ ಪುನಃ ಆರಂಭಿಸಲು ಅವಕಾಶ ಇದೆ ಎನ್ನುವುದು ನಿಮಗೆ ನೆನಪಿರಲಿ ಎಂದು ಹೇಳಿದ್ದಾರೆ..

ಇದರ ಜೊತೆ ಕಿಚ್ಚ ಸುದೀಪ್ ಅವರು ಮಾತನಾಡಿ ಬಿಗ್ ಬಾಸ್ ಶೋನ ಯಾರು ವಿನ್ನರ್ ಎಂದು ತಿರ್ಮಾನ ಆಗದೇ ಬಿಗ್ ಬಾಸ್ ಗೆ ಒಂದು ಕ್ಲೋಸರ್ ಸಿಗೋದಿಲ್ಲ ಎಂದು ಸ್ಪರ್ದಿಗಳಿಗೆ ಕಿಚ್ಚ ಸುದೀಪ್ ಅವರು ತಿಳಿಸಿದ್ದಾರೆ. ಇದೆಲ್ಲವನ್ನ ನೋಡಿದರೆ ಬಿಗ್ ಬಾಸ್ ಶೋ ಶುರುವಾಗುವುದು ನೂರಕ್ಕೆ ನೂರರಷ್ಟು ಕನ್ಪರ್ಮ್ ಆಗಿದೆ.. ರಾಜ್ಯದಲ್ಲಿ ಮ’ಹಾಮಾರಿಯ ಆವಳಿ ಕಡಿಮೆಯಾದ ಮೇಲೆ. ಅಂದರೆ ಇನ್ನೊಂದೆರಡು ತಿಂಗಳ ನಂತರ ಈ ಶೋ ಮತ್ತೆ ಆರಂಭವಾಗಲಿದೆ ಎಂದು ಹೇಳಲಾಗುತ್ತಿದೆ.. ನೀಮಗೂ ಕೂಡ ಮತ್ತೆ ಬಿಗ್ ಬಾಸ್ ಶುರುವಾಗಬೇಕು ಅಂತ ಇದ್ದರೆ ಇದರ ಬಗ್ಗೆ ಅನಿಸಿಕೆ ತಿಳಿಸಿ.