Advertisements

ಬಿಗ್ ಬಾಸ್ ಗೆ ಕೊನೆಗೂ ಡೇಟ್ ಪಿಕ್ಸ್ ಆಯ್ತು.. ಯಾವಾಗಿನಿಂದ ಗೊತ್ತಾ?

Entertainment

ನಮಸ್ತೆ ಸ್ನೇಹಿತರೆ, ಕನ್ನಡದ ರಿಯಾಲಿಟಿ ಶೋಗಳಲ್ಲಿ ಅತ್ಯಂತ ಜನಪ್ರಿಯ ಶೋ ಎಂದರೆ ಅದು ಬಿಗ್ ಬಾಸ್ ಶೋ. ಜನರನ್ನು ಮನರಂಜಿಸುವ ಮೂಲಕ ಈ ಶೋ ಸಾಕಷ್ಟು ಖ್ಯಾತಿಯನ್ನು ಕೂಡ ಗಳಿಸಿದೆ. ಈ ಬಾರಿ ಚೀನಾ ಖಾಯಿಲೆಯಿಂದ ಆಕ್ಟೋಬರ್ ನಲ್ಲಿ ಪ್ರಾರಂಭವಾಗಬೇಕಿದ್ದ ಈ ಶೋ ಲಾಕ್ ಡೌನ್ ನಿಂದಾಗಿ ಸ್ಥಗಿತಗೊಂಡಿತ್ತು.. ಅಕ್ಟೋಬರ್ ನಲ್ಲಿ ಸ್ಥಗಿತಗೊಂಡಿದ್ದ ಬಿಗ್ ಬಾಸ್ ಶೋ ಮತ್ತೆ ಜನವರಿಯಲ್ಲಿ ಪ್ರಾರಂಭವಾಗಲಿದೆ ಎಂದು ಸುದ್ದಿಯೊಂದು ಕೇಳಿಬಂದಿತ್ತು.

Advertisements

ಇನ್ನೂ ಬಿಗ್ ಬಾಸ್ ರಿಯಾಲಿಟಿ ಶೋ ಯಾವಾಗ ಆರಂಭವಾಗುತ್ತದೆ ಎಂದು ಅಭಿಮಾನಿಗಳು ಬಹಳ ಕಾತುರದಿಂದ ಕಾಯುತ್ತಿದ್ದಾರೆ. ಇದೀಗ ಅಭಿಮಾನಿಗಳಿಗೆ ಸಿಹಿ ಸುದ್ದಿಯೊಂದು ಕೇಳಿ ಬಂದಿದೆ.. ಅದೇನೆಂದರೆ ಬಿಗ್ ಬಾಸ್ ಶೋ ಆರಂಭವಾಗುವ ದಿನಾಂಕ ತಿಳಿದು ಬಂದಿದೆ. ಹೌದು ಸ್ನೇಹಿತರೆ ಈವರೆಗಿನ ಮಾಹಿತಿಯ ಪ್ರಕಾರ ಜನವರಿ ಮೂರನೇ ವಾರದಲ್ಲಿ ಬಿಗ್ ಬಾಸ್ ಶೋ ಆರಂಭವಾಗಬೇಕಿತ್ತು..

ಆದರೆ ಕಾರಣಾಂತರಗಳಿಂದ ಇದನ್ನು ಮುಂದೂಡಲಾಗಿದೆ. ಇನ್ನೂ ಬಿಗ್ ಬಾಸ್ ಸೀಸನ್ 8 ರ ಪ್ರೋಮೊ ಈಗಾಗಲೇ ಬಿಡುಗಡೆಯಾಗಿದೆ. ಇದರ ಇನ್ನೊಂದು ಪ್ರೋಮೊ ಶೀಘ್ರದಲ್ಲೇ ಬರಲಿದೆ.. ಆ ಪ್ರೋಮೊದಲ್ಲಿ ಬಿಗ್ ಬಾಸ್ ಶೋ ಯಾವಾಗ ಬರಲಿದೆ ಎಂದು ತಿಳಿಸಲಾಗಿದೆ. ಈ ತಿಂಗಳಿನ ಕೊನೆಯಲ್ಲಿ. ಅಂದರೆ 28 ಪೆಬ್ರವರಿ ಸಂಜೆ ಆರು ಗಂಟೆಗೆ ಕಲರ್ಸ್ ಕನ್ನಡದಲ್ಲಿ ಬಿಗ್ ಬಾಸ್ ಪ್ರಾರಂಭವಾಗಲಿದೆ.. ನಿಮ್ಮ ಪ್ರಕಾರ ಈ ಬಾರಿ ಯಾರು ಬಿಗ್ ಬಾಸ್ ಶೋಗೆ ಬಂದರೆ ಜನರನ್ನು ಅತಿ ಹೆಚ್ಚು ಮನರಂಜಿಸುತ್ತಾರೆ ಎಂದು ನಿಮ್ಮ ಅನಿಸಿಕೆ ತಿಳಿಸಿ.