Advertisements

ವಾರದ ಕೊನೆಯಲ್ಲಿ ಸಂಬರಗಿಗೆ ಖಡಕ್ ವಾರ್ನಿಂಗ್ ಕೊಟ್ಟ ಕಿಚ್ಚ ! ಅಸಲಿಗೆ ಪ್ರಶಾಂತ್ ಅವರು ಮಾಡಿದ್ದೇನು ಗೊತ್ತಾ ?

Entertainment

ಕನ್ನಡ ಕಿರುತೆರೆಯ ಖ್ಯಾತ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ ೮ ಪ್ರಸಾರವಾಗುತ್ತಿದ್ದು ಟಾಸ್ಕ್ ಗಳು ನಡೆಯುತ್ತಿವೆ. ಜೊತೆಗೆ ಸ್ಪರ್ಧಿಗಳ ನಡುವೆ ಕ’ಚ್ಚಾಟ, ಕಿರುಚಾಟ ಕೂಡ ಶುರುವಾಗಿದೆ. ಇನ್ನು ಒಬ್ಬಬ್ಬ ಸ್ಪರ್ಧಿಗಳ ಅಸಲಿ ಮುಖ ಕೂಡ ಬಹಿರಂಗವಾಗುತ್ತಿದೆ. ಹೌದು, ಹೌದು, ವಾರದ ಕೊನೆಯ, ವಾರದ ಕತೆ ಕಿಚ್ಚನ ಜೊತೆ ಕಾರ್ಯಕ್ರಮದಲ್ಲಿ ಕಿಚ್ಚ ಸುದೀಪ್ ರವರು ಸಾಮಾಜಿಕ ಕಾರ್ಯಕರ್ತ ಎನಿಸಿಕೊಂಡಿರುವ ಬಿಗ್ ಮನೆ ಸ್ಪರ್ಧಿ ಪ್ರಶಾಂತ್ ಸಂಬರಗಿ ಅವರಿಗೆ ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ. ಹೌದು, ಇದಕ್ಕೆ ಕಾರಣವೂ ಇದೆ..

Advertisements

ಹೌದು, ಪ್ರಶಾಂತ್ ಸಂಬರಗಿ ಅವರು ಬಿಗ್ ಮನೆಗೆ ಹೋದಾಗಿನಿಂದಲೂ ಹಲವು ವಿಷಯಗಳನ್ನು ಸುದ್ದಿಯಾಗುತ್ತಿದ್ದಾರೆ. ಬಿಗ್ ಮನೆಯ ಸ್ಪರ್ಧಿಗಳ ಬಗ್ಗೆ ರೇಗಾಡ್ತಾರೆ ಜೊತೆಗೆ ಮಹಿಳಾ ಸ್ಪರ್ಧಿಗಳನ್ನ ಟೈಟ್ ಆಗಿ ಹಗ್ ಮಾಡಿಕೊಳ್ಳುತ್ತಾರೆ ಎಂಬ ವಿಚಾರಗಳು ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ಚರ್ಚೆ ಆಗುತ್ತಿದ್ದು, ಸಂಬರಗಿ ಅವರು ಟ್ರೋಲಿಗರ ಬಾಯಿಗೆ ತುತ್ತಾಗಿದ್ದಾರೆ. ಇನ್ನು ಬಿಗ್ ಬಾಸ್ ನೀಡಿದ್ದ ವೈರಸ್ ಟಾಸ್ಕ್ ನಡೆಯುವ ವೇಳೆಪ್ರಶಾಂತ್ ಸಂಬರಗಿ ಕೆಲ ಮಹಿಳಾ ಸ್ಪರ್ಧಿಗಳನ್ನ ಗಟ್ಟಿಯಾಗಿ ಹಗ್ ಮಾಡಿಕೊಂಡಿದ್ದು ಇದಕ್ಕೆ ಸಂಬಂಧಪಟ್ಟ ಫೋಟೋಗಳು ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿವೆ. ಇನ್ನು ಇದೆ ವಿಚಾರ ಕುರಿತಂತೆ ಸುದೀಪ್ ಅವರು ವಾರದ ಕೊನೆಯ ಕಾರ್ಯಕ್ರಮದಲ್ಲಿ ಸಂಬರಗಿ ಅವರಿಗೆ ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ.

ಹೌದು, ವಾರದ ಜೊತೆ ಕಿಚ್ಚನ ಜೊತೆ ಕಾರ್ಯಕ್ರಮದಲ್ಲಿ ಸ್ಫರ್ಧಿಗಳ ಬಗ್ಗೆ ಮಾತನಾಡುತ್ತಿರುವ ವೇಳೆ ಸುದೀಪ್ ರವರು ಈ ವಿಷಯವನ್ನ ಮಾತನಾಡಿದ್ದು ಸಂಬರಗಿ ಅವರೇ ನೀವು ಎಲ್ಲರನ್ನು ತಬ್ಬಿಕೊಳ್ಳುತ್ತೀರಿ. ಇನ್ನು ಕೆಲ ಮಹಿಳಾ ಸ್ಪರ್ಧಿಗಳನ್ನ ಗಟ್ಟಿಯಾಗಿ ತುಂಬಾ ಸಮಯ ತಬ್ಬಿಕೊಳ್ಳುತ್ತೀರಿ. ಪ್ರಶಾಂತ್ ಅವರೇ ನೀವು ಸ್ಪರ್ಧಿಗಳನ್ನ ತಬ್ಬಿಕೊಳ್ಳೋದು ತಪ್ಪಲ್ಲ. ಆದರೆ ನೀವು ತಬ್ಬಿ ಕೊಂಡಾಗ ಮೈಕ್ ಒತ್ತಿಕೊಂಡಿರುವ ಕಾರಣ ನೀವು ಮಾತನಾಡೋದು ಬೇರೆ ರೀತಿಯೇ ಕೇಳಿಸುತ್ತೆ. ಆದರೆ ತಬ್ಬಿಸಿಕೊಳ್ಳುವವರಿಗೇನೆ ಯಾವುದೇ ಸಮಸ್ಯೆ ಇಲ್ಲ ಎಂದ ಮೇಲೆ ನಮಮ್ದೇನು ಅಭ್ಯಂತರವಿಲ್ಲ. ಇನ್ನು ಹೆಚ್ಚು ಸಮಯ ತಬ್ಬಿಕೊಳ್ಳಬಾರದಂತ ಬಿಗ್ ಬಾಸ್ ಯಾವುದೇ ನಿಯಮ ಕೂಡ ಮಾಡಿಲ್ಲ. ಆದರೆ ಇದೆ ವಿಚಾರಕ್ಕೆ ಬಿಗ್ ಮನೆಯಲ್ಲಿ ಬಿಗ್ ಬಾಸ್ ನಿಯಮ ಮಾಡುವಂತೆ ಮಾಡಬೇಡಿ ಎಂದು ತುಂಬಾ ಸ್ವೀಟ್ ಆಗಿಯೇ ಪ್ರಶಾಂತ್ ಅವರಿಗೆ ವಾರ್ನಿಂಗ್ ಕೊಟ್ಟಿದ್ದಾರೆ ಕಿಚ್ಚ ಸುದೀಪ್. ಸ್ನೇಹಿತರೇ, ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯ ಏನು ಎಂಬುದನ್ನ ಕಾ’ಮೆಂಟ್ ಮಾಡಿ .ತಿಳಿಸಿ.