Advertisements

ಈ ಹಿಂದೆ ಯಾವ ಸೀಸನ್ ನಲ್ಲಿಯೂ ನಡೆದ ಘಟನೆ ನಡೆದಿದೆ.. ಬಿಗ್ ಬಾಸ್ ನಲ್ಲಿ ನಡೆದ ಘಟನೆ ಏನು ಗೊತ್ತಾ?

Entertainment

ನಮಸ್ತೆ ಸ್ನೇಹಿತರೆ, ಬಿಗ್ ಬಾಸ್ ಸೀಸನ್ 8 ರಲ್ಲಿ ಈ ಹಿಂದೆ ಯಾವ ಸೀಸನ್ ನಲ್ಲಿಯೂ ನಡೆದ ಘಟನೆ ನಡೆದಿದೆ, ಹೌದು ಬಿಗ್ ಬಾಸ್ ಅವಕಾಶವನ್ನ ಬೇಡ ಎಂದವರು ಯಾರು ಇಲ್ಲ ಅಂತ ಹೇಳಬಹುದು. ಆದರೆ ನಿನ್ನೆ ಮಾತ್ರ ವೈಜಯಂತಿ ಅಡಿಗ ತೆಗೆದುಕೊಂಡ ನಿರ್ಧಾರ ಅಕ್ಷರಶಃ ಮನೆಯ ಇತರ ಸದಸ್ಯರನ್ನ ಆಶ್ಚರ್ಯಗೊಳಿಸಿದೆ.. ಅದೇ ವಿಚಾರ ಬಿಗ್ ಬಾಸ್ ಮನೆಯ ಸದಸ್ಯರ ನಡುವೆ ಇದೀಗ ಬಿಸಿ ಬಿಸಿ ಸುದ್ದಿಯಾಗಿದೆ. ಆದರೆ ವೈಜಯಂತಿ ಅಡಿಗ ಬಿಗ್ ಬಾಸ್ ಮನೆಯಿಂದ ಹೊರಬರಲು ನಿಜವಾದ ಕಾರಣ ಬೇರೆಯೇ ಇದೆ.. ವೈಜಯಂತಿ ಅಡಿಗ ಬಿಗ್ ಬಾಸ್ ಮನೆಗೆ ಎರಡನೇ ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ತೆರಳಿದ್ದರು.

Advertisements

ಮೊದಲ ದಿನ ಸಿಕ್ಕಾಪಟ್ಟೆ ಆ್ಯಕ್ಟಿವ್ ಆಗಿದ್ದ ವೈಜಯಂತಿ ಅಡಿಗ ನೇರವಾಗಿ ಸ್ಪರ್ಧಿಗಳಿಗೆ ಟಕ್ಕರ್ ನೀಡುತ್ತಿದ್ದರು.. ಜೊತೆಗೆ ಚಕ್ರವರ್ತಿ ಚಂದ್ರಚೂಡ ಮತ್ತು ಪ್ರಶಾಂತ್ ಸಂಬರಗಿ ಜೊತೆ ಬಹಳ ಆಪ್ತರಾದ ವೈಜಯಂತಿ ಅಡಿಗ ಮೂರನೇ ದಿನಕ್ಕೆ ಮನೆಗೆ ಮರಳುವ ನಿರ್ಧಾರ ಮಾಡಿದ್ರೂ.. ಹೌದು ವೈಜಯಂತಿ ಅವರು ಬಿಗ್ ಬಾಸ್ ಮನೆಗೆ ಬಂದ ಎರಡನೇ ದಿನದಿಂದಲೂ ಬಿಗ್ ಬಾಸ್ ಮನೆಯಿಂದ ಹೊರಹೋಗುವ ನಿರ್ಧಾರ ಮಾಡಿದ್ರೂ. ನಾನು ಅಂದುಕೊಂಡದ್ದೇ ಒಂದು ಇಲ್ಲಿ ಆಗ್ತಿರೋದೆ ಮತ್ತೊಂದು ನಾನು ಈ ರೇಸ್ ನಲ್ಲಿ ಇಲ್ಲ.. ಮೊದಲು ನಾನು ಹೊರಗೆ ಹೋಗಬೇಕು ಎಂದು ಹೇಳಿದ್ರು.

ಅಷ್ಟೇ ಅಲ್ಲದೇ ಅಪ್ಪ ಅಮ್ಮ ಗಂಡನನ್ನ ಮಿಸ್ ಮಾಡಿಕೊಳ್ಳುತ್ತಿದ್ದೇನೆ ಎಂದು ಹೇಳ್ತಿದ್ರು.. ವೈಜಯಂತಿ ಅವರಿಂದ ಮನರಂಜನೆ ಬದಲಿಗೆ ಬಿಗ್ ಬಾಸ್ ಮನೆಯಿಂದ ಹೊರಹೋಗುವ ಮಾತುಗಳಷ್ಟೇ ಬರುತ್ತಿದ್ದವು. ಪದೇ ಪದೇ ಇದನ್ನು ನೋಡುತ್ತಿದ್ದ ಬಿಗ್ ಬಾಸ್ ವೈಜಯಂತಿ ಅವರನ್ನ ಮನೆಯಿಂದ ಹೊರಗೆ ಕಳುಹಿಸುವ ನಿರ್ಧಾರ ಮಾಡಿದ್ದರು. ಇನ್ನೂ ಮಾನಸಿಕವಾಗಿ ಕುಗ್ಗಿದ ವೈಜಯಂತಿ ಅವರನ್ನ ಕನ್ಪೆಷನ್ ರೂಮಿಗೆ ಕರಿಸಿ ಮಾತನಾಡಿ ಸಮಾಧಾನ ಪಡಿಸಿದ್ದರು..

ಆದರು ಸಹ ಬಿಗ್ ಬಾಸ್ ಮನೆಯಲ್ಲಿ ಮುಂದುವರೆಯಲು ವೈಜಯಂತಿ ಆಸಕ್ತಿ ತೋರದ ಕಾರಣ ಅವರನ್ನ ಮನೆಯಿಂದ ಹೊರಹೋಗಲು ಅವಕಾಶ ಕೊಟ್ಟು ಶಮಂತ್ ಅವರನ್ನ ಉಳಿಸಲಾಯಿತು‌. ಇನ್ನೂ ಒಂದು ರೀತಿ ಇತ್ತ ಶಮಂತ್ ಅವರ ಅದೃಷ್ಟ ಎನ್ನಬಹುದು. ಮೊದಲ ಎರಡು ವಾರ ಕ್ಯಾಪ್ಟನ್ ಆಗುವ ಮೂಲಕ ಮೂರು ವಾರಗಳು ಮನೆಯಲ್ಲೇ ಉಳಿಯುವಂತಾಯಿತು. ಇನ್ನು ಎರಡು ವಾರ ಸೇಪ್ ಆಗಿ ಈಗ ಮೂರನೇ ವಾರ ವೈಜಯಂತಿ ಮೂಲಕ ಮತ್ತೆ ಸೇಪ್ ಆಗಿದ್ದಾರೆ.. ಈಗಲಾದ್ರೂ ಸಿಕ್ಕ ಅವಕಾಶವನ್ನ ಸರಿಯಾಗಿ ಉಪಯೋಗಿಸಿಕೊಳ್ಳಬೇಕು.