Advertisements

ಹಾಸ್ಯ ನಟರ ಒಂದು ದಿನದ ಸಂಭವಾನೆ ಎಷ್ಟು ಗೊತ್ತಾ? ಇವರಲ್ಲಿ ಟಾಪ್ ಸಂಭವಾನೆ ಪಡೆಯುವ ನಟ ಒಬ್ಬರೇ..

Cinema Entertainment

ನಮಸ್ತೆ ಸ್ನೇಹಿತರೆ, ಸಿನಿಮಾಗಳಲ್ಲಿ ನಾಯಕ ಹಾಗೂ ನಾಯಕಿಯರ ಪಾತ್ರಕ್ಕೆ ಎಷ್ಟು ಪ್ರಾಮುಖ್ಯತೆ ಇದಿಯೋ ಅಷ್ಟೇ ಪ್ರಾಮುಖ್ಯತೆ ಹಾಸ್ಯ ನಟರಿಗೂ ಸಹ ಇರುತ್ತದೆ. ಯಾವುದೇ ಸಿನಿಮಾ ಆಗಲಿ ಕಾಮಿಡಿ ಪಾತ್ರ ಇಲ್ಲ ಅಂದರೆ ಆ ಸಿನಿಮಾ ನೋಡುವುದಕ್ಕೆ ಅಷ್ಟೇನು ಮಜಾ ಇರುವುದಿಲ್ಲ. ಸಿನಿಮಾಗಳಲ್ಲಿ ಕೇವಲ ಹಾಡು, ಪೈಟ್ ಇದ್ದರೆ ಮಾತ್ರ ಸಿನಿಮಾ ಗೆಲುವು ಕಾಣೋದಿಲ್ಲ ಅದರಲ್ಲಿ ನಕ್ಕಿ ನಲಿಸುವ ಕಾಮಿಡಿ ಪಂಚ್ ಗಳು ಸಹ ಇರಬೇಕು ಆಗ ಮಾತ್ರ ಸಿನಿಮಾ ಕಂಪ್ಲೀಟ್ ಮನೋರಂಜನೆ ಕೊಟ್ಟಿದೆ ಅನಿಸುತ್ತದೆ. ಹೌದು ಕಾಮಿಡಿ ಸೀನ್ ಗಳು ಇಲ್ಲದಿದ್ದರೆ ನೋಡುಗರಿಗೂ ಸಹ ಬೇಸರ ಉಂಟುಮಾಡುತ್ತದೆ..

Advertisements

ಇನ್ನೂ ಈ ರೀತಿಯ ಕಾಮಿಡಿ ಪಾತ್ರಗಳನ್ನು ಮಾಡಿ ಎಲ್ಲರನ್ನೂ ಹೊಟ್ಟೆ ಹುಣ್ಣಾಗುವ ರೀತಿ ನಗಿಸುವ ಕಾಮಿಡಿ ನಟರ ಸಂಭಾವನೆ ಎಷ್ಟಿರಬಹುದು ಎಂಬುದನ್ನ ನೋಡೊಣ ಬನ್ನಿ. ಕಲರ್ಸ್ ಸೂಪರ್ ನಲ್ಲಿ ಪ್ರಸಾರವಾಗುವ ಮಜಾ ಟಾಕೀಸ್ ಶೋ ಎಂದ ತಕ್ಷಣ ಮೊದಲಿಗೆ ನೆನಪಿಗೆ ಬರೋದು ಕುರಿ ಪ್ರತಾಪ್. ಇವರು ಮಜಾ ಟಾಕಿಸ್ ನ ಒಂದು ಎಪಿಸೋಡ್ ಗೆ 45 ಸಾವಿರ ಸಂಭಾವನೆ ಪಡೆಯುತ್ತಾರೆ. ಇನ್ನೂ ಮಜಾ ಟಾಕೀಸ್ ಶೋ ಬಿಟ್ಟು ಸಿನಿಮಾ ವಿಷಯಕ್ಕೆ ಬಂದರೆ ಕುರಿ ಪ್ರತಾಪ್ ಅವರು ಒಂದು ದಿನಕ್ಕೆ 80 ಸಾವಿರ ಸಂಬಳವನ್ನು ಪಡೆಯುತ್ತಾರೆ. ತಬಲ ನಾಣಿಯವರು ಸಹ ಕಾಮಿಡಿ ನಟನಾಗಿದ್ದು ಇವರಿಗೆ 60 ಸಾವಿರ ಸಂಭಾವನೆ ಪಡೆಯುತ್ತಾರೆ..

ಹಿರಿಯ ಅತ್ಯುತ್ತಮ ಕಾಮಿಡಿ ನಟರಾದ ರಂಗಾಯಣ ರಘು ಅವರು ಒಂದು ದಿನಕ್ಕೆ ಹೆಚ್ಚಾಗಿ ಸಂಬಾವನೆ ಪಡೆಯುವ ನಟರಲ್ಲಿ ಇವರೂ ಕೂಡ ಒಬ್ಬರು.. ಹೌದು ಒಂದು ದಿನಕ್ಕೆ  ಒಂದು ಲಕ್ಷದ ಐವತ್ತು ಸಾವಿರ ಸಂಭಾವನೆ ಪಡೆಯುತ್ತಾರೆ‌. ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ಕಾಮಿಡಿ ಕಿಲಾಡಿಗಳು ಶೋ ನಲ್ಲಿ ಅತ್ಯುತ್ತಮವಾಗಿ ಅಭಿನಯಿಸಿ ಈಗ ಹಲವು ಸಿನಿಮಾಗಳಲ್ಲಿ ಹಾಸ್ಯ ನಟನಾಗಿ ಮಿಂಚುತ್ತಿರುವ ಶಿವರಾಜ್ ಕೆ.ಆರ್ ಪೇಟೆ ಅವರು ಒಂದು ದಿನಕ್ಕೆ 90 ಸಾವಿರ ಸಂಭಾವನೆ ಪಡೆಯುತ್ತಿದ್ದಾರೆ.

ಗಿರಿಶ್ ಶಿವಣ್ಣ ಅವರು ಒಂದು ದಿನಕ್ಕೆ 75 ಸಾವಿರ ಸಂಭಾವನೆ ಪಡೆಯುತ್ತಾರೆ. ಸಕಲಾಕಲವಲ್ಲಬ ಸಾಧುಕೋಕಿಲ ಅವರು ಬರೋಬ್ಬರಿ ಎರಡು  ಲಕ್ಷದ 20 ಸಾವಿರ ರುಪಾಯಿ ಸಂಭಾವನೆ ಪಡೆಯುತ್ತಾರೆ.. ಇನ್ನೂ ಕಿರಿಯ ನಟನಾಗಿ ಅಧಿಕ ಅಭಿಮಾನಿ ಬಳಗವನ್ನು ಹೊಂದಿರುವ ಮತ್ತು ಹೆಚ್ಚಾಗಿ ಸಂಭವಾನೆ ಪಡೆಯುತ್ತಿರುವ ನಟ ಚಿಕ್ಕಣ್ಣ ಅವರು ಎರಡು ಲಕ್ಷದ 75 ಸಾವಿರ ರೂಪಾಯಿ ಸಂಭಾವನೆ ಪಡೆಯುತ್ತಾರೆ.. ಸ್ನೇಹಿತರೆ ಈ ಎಲ್ಲಾ ಕಾಮಿಡಿ ನಟರಲ್ಲಿ ನಿಮ್ಮ ನೆಚ್ಚಿನ ನಟ ಯಾರು ಎಂಬುದನ್ನು ತಿಳಿಸಿ.