Advertisements

ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ವಿನ್ನರ್ ಆದ ಬೃಂದ ಮತ್ತು ರಾಹುಲ್ ಗೆ ಸಿಕ್ಕ ಹಣ ಮತ್ತು ಸೈಟ್ ಎಷ್ಟು ಗೊತ್ತಾ?

Entertainment

ನಮಸ್ತೇ ಸ್ನೇಹಿತರೆ, ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಖ್ಯಾತ ರಿಯಾಲಿಟಿ ಶೋ ಅಂದರೆ ಅದು ಡಿಕೆಡಿ.. ಅಂದರೆ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್. ಹೌದು ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ರಿಯಾಲಿಟಿ ಶೋ 2021 ತುಂಬಾನೆ ಯಶಸ್ವಿಯಾಗಿ ಮುಕ್ತಾಯಗೊಂಡಿತ್ತು.. ಹಾಗಾದರೆ ಡಿಕೆಡಿ ವಿನ್ನರ್ ಯಾರಾಗಿರಬಹುದು ರನ್ನರ್ ಅಫ್ ಯಾರು ಇವರಿಗೆಲ್ಲಾ ಸಿಕ್ಕಿರುವ ಬಹುಮಾನ ಎಷ್ಟು ನೋಡೋಣ. ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದಂತಹ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ರಿಯಾಲಿಟಿ ಶೋ ತುಂಬಾನೆ ಅದ್ಬುತವಾಗಿ ಮೂಡಿ ಬರ್ತಿದ್ದವು..

Advertisements

ಎಲ್ಲಾ ಸ್ಪರ್ಧಿಗಳು ಕೂಡ ಅಷ್ಟೇ ಅಚ್ಚುಕಟ್ಟಾಗಿ ಡ್ಯಾನ್ಸ್ ಅನ್ನು ಕಲಿತು ವೇದಿಕೆಯ ಮೇಲೆ ತಮ್ಮ ಪ್ರತಿಭೆಯನ್ನ ಪ್ರದರ್ಶನ ಮಾಡ್ತಿದ್ರು ಅದರಲ್ಲೂ ರಾಹುಲ್ ಬೃಂದಾ ಜೋಡಿಯಂತೂ ಪ್ರಾರಂಭದಿಂದಲೂ ಕೂಡ ತುಂಬಾನೆ ಯಶಸ್ವಿಯಾಗಿ ತಮ್ಮ ಡ್ಯಾನ್ಸ್ ಪ್ರದರ್ಶನವನ್ನ ಮಾಡ್ತಿದ್ರು.. ಈಗಾಗಿ ರಾಹುಲ್ ಹಾಗು ಬೃಂದಾ ಈ ಬಾರಿ.. ಅಂದರೆ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ರಿಯಾಲಿಟಿ ಶೋ 2021 ರ ವಿನ್ನರ್ ಆಗಿದ್ದಾರೆ. ಹೌದು ವಿನ್ನರ್ ಆಗಿರುವಂತಹ ರಾಹುಲ್ ಹಾಗು ಬೃಂದಾ ಜೋಡಿಗೆ 20 ಲಕ್ಷ ಮೌಲ್ಯದ ಸೈಟ್ ಜೊತೆಗೆ 5 ಲಕ್ಷ ರೂಪಾಯಿ ನಗದು ಬಹುಮಾನವನ್ನ ನೀಡಿಲಾಗಿದೆ.‌.

ಹೌದು ಎಲ್ಲರ ಮೆಚ್ಚಿನ ಜೋಡಿ, ಎಲ್ಲರ ಮೆಚ್ಚಿನ ನೃತ್ಯ ಜೋಡಿ ಅಂದರೆ ರಾಹುಲ್ ಬೃಂದಾ ಈ ಜೋಡಿಯೇ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ 2021 ರ ವಿನ್ನರ್ ಆಗಿರೋದು ಎಲ್ಲರಿಗೂ ಖುಷಿ ತಂದು ಕೊಟ್ಟಿದೆ. ಇನ್ನೂ ವಿಕ್ರಮ್ ಮತ್ತು ಶಿಫಾಲಿ ರನ್ನರ್ ಅಪ್ ಆಗಿದ್ದು ಇವರಿಗೆ 10ಕ್ಷ ನಗದು ಬಹುಮಾನವನ್ನ ನೀಡಲಾಗಿದೆ. ಇನ್ನೂ ಸೂರ್ಯ ತೇಜ ಮತ್ತು ಅಮೂಲ್ಯ ಅವರು ಮೂರನೇ ಸ್ಥಾನದಲ್ಲಿದ್ದು ಇವರಿಗೂ ಕೂಡ 5 ಲಕ್ಷ ರೂಪಾಯಿ ನಗದು ಬಹುಮಾನವನ್ನ ನೀಡಲಾಗಿದೆ.. ಇನ್ನೂ ಈ ಸ್ಪರ್ಧಿಗಳಲ್ಲಿ ಯಾರು ತುಂಬಾ ಇಷ್ಟ‌‌. ರಾಹುಲ್ ಬೃಂದಾ ಗೆದ್ದಿದ್ದು ನಿಮಗೂ ಖುಷಿ ಕೊಟ್ಟಿದಿಯಾ.. ನಿಮ್ಮ ಪ್ರಕಾರ ಯಾವ ಜೋಡಿ ಗೆಲ್ಲಬೇಕಾಗಿತ್ತು.