Advertisements

ತಮ್ಮ ಮನೆಗೆ ಕರೆಂಟ್ ಕೊಡಲು ನಿರಾಕರಿಸದ ವಿದ್ಯುತ್ ಇಲಾಖೆಗೆ ಸೆಡ್ಡು ಹೊಡೆದ ಈ ಕನ್ನಡಿಗ ರೈತ ಮಾಡಿದ್ದೇನು ಗೊತ್ತಾ? ದೇಶವೇ ತಿರುಗಿ ನೋಡುತ್ತಿದೆ..

Inspire Kannada Mahiti

ನಮಸ್ತೆ ಸ್ನೇಹಿತರೆ, ಪರಿಶ್ರಮ ಮತ್ತು ವಿಭಿನ್ನ ಅಲೋಚನೆ ಇದ್ದರೆ ಪ್ರಪಂಚವೇ ನಮ್ಮ ಕಡೆ ತಿರುಗಿ ನೋಡುವಂತೆ ಮಾಡುಬಹುದು.. ಆಗೆ ನಮ್ಮ ಕರ್ನಾಟಕ ರೈತರೊಬ್ಬರು ತಮ್ಮ ವಿಭಿನ್ನ ಅಲೋಚನೆಯಿಂದ ಮಾಡಿದ ಕೆಲಸಕ್ಕೆ ಈಗ ಎಲ್ಲರೂ ತಿರುಗಿ ನೋಡುವಂತೆ ಮಾಡಿದೆ. ತಮ್ಮ ಮನೆಗೆ ಕರೆಂಟ್ ಕೊಡಲು ನಿರಾಕರಿಸದ ವಿದ್ಯುತ್ ಇಲಾಖೆಗೆ ಸೆಡ್ಡು ಹೊಡೆದ ಈ ರೈತ ತನಗೆ ಬೇಕಾಗುವಷ್ಟು ವಿದ್ಯುತ್ ಅನ್ನು ತನಗೆ ತಾನೇ ತಯರಿಸಿಕೊಂಡು ಎಲ್ಲರೂ ಒಮ್ಮೆ ಆಶ್ಚರ್ಯ ಪಡುವಂತಹ ಕೆಲಸ ಮಾಡಿದ್ದಾರೆ.. ಇನ್ನೂ ರೈತ ಮಾಡಿದ ಈ ಕೆಲಸಕ್ಕೆ ಈಗ ವಿದ್ಯುತ್ ಇಲಾಖೆಯು ಸಹ ತಲೆ ಬಗ್ಗಿಸಿದೆ‌‌‌.

Advertisements

ಅಷ್ಟಕ್ಕೂ ಈ ರೈತ ಯಾರು, ಹೇಗೆ ವಿದ್ಯುತ್ ಅನ್ನು ಉತ್ಪಾದನೆ ಮಾಡುತ್ತಿದ್ದಾರೆ ಎನ್ನುವ ಸಂಪೂರ್ಣ ಮಾಹಿತಿಯನ್ನು ತಿಳಿಯೋಣ ಬನ್ನಿ.. ಗದಗ ಜಿಲ್ಲೆ ಸೋಮಪುರ ಗ್ರಾಮದವರಾದ ಈ ರೈತನ ಹೆಸರು ಸಿದ್ದಪ್ಪ.. ತೀರ ಕುಗ್ಗ್ರಾಮದಲ್ಲಿದ್ದ ಸಿದ್ದಪ್ಪ ಅವರ ಮನೆಗೆ ವಿದ್ಯುತ್ ಅನ್ನು ಪೂರೈಸಲು ಕೆಲವು ಕಾರಣಗಳಿಂದ ಇಲಾಖೆ ನಿರಾಕರಿಸಿದ್ದಾರೆ.. ಆದರೆ ಸಿದ್ದಪ್ಪ ಅವರು ಇದನ್ನೇ ಚಾಲೆಂಜಿಂಗ್ ಆಗಿ ತೆಗೆದುಕೊಂಡು ಏನಾದರೂ ಮಾಡಿ ವಿದ್ಯುತ್ ಅನ್ನು ಉತ್ಪಾದನೆ ಮಾಡಿ ಕತ್ತಲೆಯ ಸಮಯದಲ್ಲಿ ನನ್ನ ಮನೆಯ ಮೇಲೆ ಬೆಳಕು ಚೆಲ್ಲಬೇಕು ಎಂದು ನಿರ್ದಾರ ಮಾಡುತ್ತಾರೆ.. ಇನ್ನೂ ಕೆಲವರ ಹತ್ತಿರ ಸಲಹೆಗಳನ್ನು ಪಡೆದು ಮೊದಲು ಗಾಳಿ ಯಂತ್ರದ ಮೂಲಕ ವಿದ್ಯುತ್ ಅನ್ನು ಉತ್ಪಾದನೆ ಮಾಡಲು ಮುಂದಾದ ಸಿದ್ದಪ್ಪ ಅವರು..

ಹತ್ತು ಬಲ್ಪಿಗೆ ಹಾಗು ಎರಡು ಟಿವಿಗೆ ಬೇಕಾಗುವ 60 ವ್ಯಾಟ್ ನಷ್ಟು ವಿದ್ಯುತ್ ಅನ್ನು ಉತ್ಪಾದನೆ ಮಾಡಿ ಯಶಸ್ಸು ಕಂಡಿದ್ದಾರೆ.. ಇಷ್ಟಕ್ಕೆ ನಿಲ್ಲಿಸದೇ ದೊಡ್ಡ ಮಟ್ಟಕ್ಕೆ ವಿದ್ಯುತ್ ಅನ್ನು ತಯಾರು ಮಾಡಲು ಮುಂದಾದ ಸಿದ್ದಪ್ಪ ಮನೆಯ ಹತ್ತಿರ ನಾಲೆಯನ್ನು ನೋಡಿ ಒಂದು ಐಡಿಯಾ ಬರುತ್ತದೆ. ನಾಲೆಯಲ್ಲಿ ಬರುವ ರಭಸದ ನೀರಿನಲ್ಲಿ ವಿದ್ಯುತ್ ಉತ್ಪಾದನೆ ಮಾಡಲು ಮುಂದಾಗುತ್ತಾರೆ.. ಸುಮಾರು ಐದು ಸಾವಿರ ಖರ್ಚು ಮಾಡಿದ ಸಿದ್ದಪ್ಪ ಒಂದು ಯಂತ್ರ ತಯಾರು ಮಾಡಿ ನಾಲೆಯಲ್ಲಿ ಪಿಕ್ಸ್ ಮಾಡಿ ಇದರಿಂದ 150 ವ್ಯಾಟ್ ನಷ್ಟು ವಿದ್ಯುತ್ ಅನ್ನು ತಯಾರು ಮಾಡುತ್ತಾರೆ. ಆದರೆ ಯಾವಾಗಲೂ ನೌಲೆಯಲ್ಲಿ ನೀರು ಹರಿಯುವುದಿಲ್ಲ..

ಅಕಸ್ಮಾತ್ ಯಾವಾಗಲೂ ನೀರು ಹರಿದರೆ ತಮ್ಮ ಮನೆಗೆ ಅಲ್ಲಾ ಊರಿಗೆ ಬೇಕಾಗುವಷ್ಟು ವಿದ್ಯುತ್ ಅನ್ನು ತಯಾರು ಮಾಡುವ ಶಕ್ತಿ ಈ ಹಠವಾದಿ ಸಿದ್ದಪ್ಪ ಅವರಿಗೆ ಇದೆ. ಇನ್ನೂ ಈ ಸಿದ್ದಪ್ಪ ಅವರ ಕೆಲಸ ನೋಡಿದ ಮಾಜಿ ಆಟಗಾರ ಸಚಿನ್ ತೆಂಡೂಲ್ಕರ್ ಅವರು ಇವರನ್ನು ನೋಡಿದರೆ ಹೆಮ್ಮೆಯಾಗುತ್ತಿದೆ ಎಂದು ಟ್ವೀಟ್ ಮಾಡಿದ್ದಾರೆ.. ವಿದ್ಯುತ್ ಇಲಾಖೆಯವರು ಕರೆಂಟ್ ಕೊಡಲಿಲ್ಲ, ಹೆಗೋ ದೀಪದ ಬೆಳಕಿನಲ್ಲೇ ಜೀವನವನ ಕಳೆದು ಬಿಡೋಣ ಎಂದು ಅಲೋಚನೆ ಮಾಡದೆ ನಾನು ಸ್ವಾಭಿಮಾನದಿಂದ ಬದುಕಬಲ್ಲೇ ಎಂದು ತೋರಿಸಿಕೊಟ್ಟಿರುವ ಈ ಸಿದ್ದಪ್ಪ ಅವರ ಕೆಲಸದ ಬಗ್ಗೆ ನಿಮ್ಮ ಅಭಿಪ್ರಾಯ, ಅನಿಸಿಕೆ ತಿಳಿಸಿ..