Advertisements

ನೆನೆ ಹಾಕಿದ ನೆಲಗಡಲೆಯನ್ನು ಸೇವನೆ ಮಾಡಿದರೆ ಏನೆಲ್ಲಾ ಲಾಭವಿದೆ ಗೊತ್ತಾ?

Health

ನೆಲಗಡಲೆ ಬಡವರ ಸ್ನಾಕ್ಸ್ ಎನ್ನಬಹುದು, ಹೌದು ಸ್ನೇಹಿತರೆ ನೆಲಗಡಲೆಯನ್ನು ಕೆಲವರು ಉರಿದು ತಿನ್ನಲು ಇಷ್ಟ ಪಟ್ಟರೆ ಇನ್ನೂ ಕೆಲವರು ಬೇಯಿಸಿ ತಿನ್ನಲು ಇಷ್ಟಪಡುತ್ತಾರೆ, ಇನ್ನೂ ಕೆಲವರು ನಾನಾ ರೀತಿಯ ರೆಸಿಪಿಗಳನ್ನು ಮಾಡಿಕೊಳ್ಳುತ್ತಾರೆ. ನೆಲಗಡಲೆಯನ್ನು ಚಿತ್ರಾನ್ನ, ಪುಳಿಯೋಗರೆ, ಹಾಗೂ ಇನ್ನೂ ವಿಧ ವಿಧವಾದ ಅಡುಗೆಗಳನ್ನು ಮಾಡಿಕೊಂಡು ಸೇವನೆ ಮಾಡುತ್ತಾರೆ. ನೆಲಗಡಲೆ ಬಾಯಿ ರುಚಿಗೆ ಮಾತ್ರವಲ್ಲದೆ ಇದರಲ್ಲಿ ಹಲವು ಔಷಧಿ ಗುಣಗಳಿವೆ. ಇದರಲ್ಲಿ ನಾರಿನಂಶ, ವಿಟಮಿನ್ ಬಿ, ಕೊಬ್ಬಿನಂಶ, ಪೊಟಾಷ್ಯಿಯಂ, ರಂಜಕ, ಮೆಗ್ನಿಷ್ಯಿಯಂ ಇದೆ ಈಗಾಗಿ ನೆಲಗಡಲೆಯನ್ನು ನೆನೆಸಿ ತಿಂದರೆ ಆರೋಗ್ಯಕ್ಕೆ ತುಂಬಾ ಒಳ್ಳೆಯದು.

Advertisements

ಸಾಮಾನ್ಯವಾಗಿ ಎಲ್ಲರಿಗೂ ತಿಳಿದಿರುವ ಪ್ರಕಾರ ಬಾದಾಮಿಯನ್ನು ನೆನೆಸಿ ತಿಂದರೆ ಆರೋಗ್ಯಕ್ಕೆ ಒಳ್ಳೆಯದು ಎಂದು ಗೊತ್ತಿರುತ್ತದೆ ಆದರೆ ನೆಲಗಡಲೆಯನ್ನು ನೆನೆಸಿ ತಿಂದರೆ ಎಷ್ಟೊಂದು ಆರೋಗ್ಯಕರ ಎನ್ನುವುದು ಹಲವರಿಗೆ ತಿಳಿದಿಲ್ಲ. ಈ  ನೆಲಗಡಲೆ ನಮ್ಮ ದೇಹದ ಆರೋಗ್ಯಕ್ಕೆ ಏನೆಲ್ಲಾ ಲಾಭ ನೀಡುತ್ತದೆ ಎಂಬುದನ್ನು ತಿಳಿಯೋಣ ಮುಂದೆ ಓದಿ.

1.  ನೆಲಗಡಲೆಯಲ್ಲಿ ಹೃದಯದ ಸಮಸ್ಯೆಯನ್ನು ಗುಣಪಡಿಸುವ ಶಕ್ತಿ ಇದೆ ಹೃದಯ ಸಮಸ್ಯೆ ಇರುವವರು ಈ ನೆಲಗಡಲೆಯನ್ನು ಸೇವಿಸಿ. ನೆಲಗಡಲೆಯನ್ನು ನೀರಿನಲ್ಲಿ ನೆನೆಸಿ ತಿಂದರೆ ನಿಮ್ಮ ಹೃದಯದ ಸಮಸ್ಯೆಯನ್ನು ಹೋಗಲಾಡಿಸಲು ಸಹಾಯ ಮಾಡುತ್ತದೆ. ಇಷ್ಟಲ್ಲದೆ ನಿಮ್ಮ ದೇಹದ ರಕ್ತ ಸಂಚಾರವು ಕೂಡ ಸರಾಗವಾಗಿ ಆಗುತ್ತದೆ.

2. ಜೀರ್ಣಕ್ರಿಯೆ ಉತ್ತಮವಾಗಿ ಮಾಡುತ್ತದೆ, ಹಲವರಿಗೆ ತಾನು ತಿಂದ ಆಹಾರ ಜೀರ್ಣ ಆಗದೆ ಇರುವುದು, ಹೊಟ್ಟೆ ಹುಬ್ಬುವುದು, ಗ್ಯಾಸ್ಟ್ರಿಕ್ ಸಮಸ್ಯೆಗಳು ಇರುತ್ತದೆ ಈ ರೀತಿಯ ಸಮಸ್ಯೆ ಇರುವವರು ಪ್ರತಿದಿನ ನೆನೆ ಹಾಕಿದಂತಹ ನೆಲಗಡಲೆಯನ್ನು ಸೇವಿಸಿದರೆ ಈ ಎಲ್ಲಾ ಸಮಸ್ಯೆಗಳು ದೂರವಾಗುತ್ತದೆ.

3. ಹಲವು ಜನರು ತಮ್ಮ ದೇಹದ ಫಿಟ್ನೆಸ್ ಗಾಗಿ ಹಲವು ಪ್ರಯತ್ನಗಳನ್ನು ಮಾಡುತ್ತಾರೆ, ಜಿಮ್ ಗಳಿಗೂ ಹೋಗಿ ಗಂಟೆಗಟ್ಟಲೆ ವರ್ಕೌಟ್ ಮಾಡುತ್ತಾರೆ. ಈ ರೀತಿ ಮಾಡುವವರು ತಾವು ಸೇವಿಸುವು ಪೌಷ್ಠಿಕ ಆಹಾರಗಳ ಜೊತೆಗೆ ನೆನೆಸಿದ ನೆಲಗಡಲೆಯನ್ನು ಸೇವನೆ ಮಾಡಿ ಬಹಳ ಒಳ್ಳೆಯದು. ದೇಹದ ಫಿಟ್ನೆಸ್ ಗೆ ನೆಲಗಡಲೆಯಲ್ಲಿರುವ ಪೋಷಕಾಂಶ ಸಹಾಯ ಮಾಡುತ್ತದೆ. ಇನ್ನೂ ನೆಲಗಡಲೆಯನ್ನು ನೀರಿನಲ್ಲಿ ಮೊಳಕೆ ಬರಿಸಿ ಸೇವನೆ ಮಾಡಿದರೆ ಆರೋಗ್ಯಕ್ಕೆ ಇನ್ನೂ ಒಳ್ಳೆಯದು.

4. ಕ್ಯಾನ್ಸರ್ ಕಣಗಳ ಉತ್ವತ್ತಿಯನ್ನು ತಡೆಗಟ್ಟಲು ಸಹಾಯ ಮಾಡುತ್ತದೆ. ಸ್ನೇಹಿತರೆ ಇತ್ತೀಚಿನ ದಿನಗಳಲ್ಲಿ ಕ್ಯಾನ್ಸರ್ ಸಮಸ್ಯೆ ಹೆಚ್ಚಾಗಿ ಕಾಡುತ್ತಿದೆ.  ಈಗಿನ ಕಲುಷಿತ ವಾತಾವರಣ, ರಾಸಾಯನಿಕ ಬಳಕೆಯ ವಸ್ತುಗಳ ಸೇವನೆಯಿಂದ ಈ ಕ್ಯಾನ್ಸರ್ ಬರುತ್ತಿದೆ.  ನೆನೆಸಿದ ನೆಲಗಡಲೆ ಸೇವನೆ ಮಾಡಿದರೆ ನಮ್ಮ ದೇಹದಲ್ಲಿರುವ ಫ್ರೀ ರ‌್ಯಾಡಿಕಲ್ಸ್ ಹೋಗಲಾಡಿಸುವಲ್ಲಿ ಸಹಾಯ  ಮಾಡುತ್ತದೆ. ಇದರಲ್ಲಿ ಕ್ಯಾಲ್ಸಿಯಂ ಕಬ್ಬಿಣದಂಶ, ಫೋಲೆಟ್, ಇದ್ದು ಕ್ಯಾನ್ಸರ್ ಕಣಗಳು ದೇಹದಲ್ಲಿ ಉತ್ವತ್ತಿಯಾಗದಂತೆ ತಡೆದು, ನಮ್ಮ ದೇಹ ಆರೋಗ್ಯಕರವಾಗಿರಲುಸಹಕರಿಸುತ್ತದೆ.

5. ಬೆನ್ನು ನೋವಿನ ಸಮಸ್ಯೆ ದೂರ ಮಾಡುತ್ತದೆ. ಇತ್ತೀಚಿನ ನಮ್ಮ ಜೀವನ ಶೈಲಿ ಬದಲಾಗಿರುವ ಕಾರಣ ಬೆನ್ನು ನೋವಿನ ಸಮಸ್ಯೆ ಸಾಮಾನ್ಯ, ಬೆನ್ನು ನೋವು ಬರಲು ವಯಸ್ಸಾಗಬೇಕು ಅಂತೇನಿಲ್ಲ ಈಗಿನ ಚಿಕ್ಕ ವಯಸ್ಸಿನಲ್ಲಿ ಬೆನ್ನು ನೋವಿನ ಸಮಸ್ಯೆ ಹಲವರಿಗೆ ಕಾಡುತ್ತದೆ. ನಾವು ಕುಳಿತುಕೊಳ್ಳುವ ವಿಧಾನ, ಹೊಡಾಡುವ ವಿಧಾನ, ಇನ್ನಿತರ ಕಾರಣಗಳಿಂದ ಬೆನ್ನು ನೋವಿನ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ನೆನೆ ಹಾಕಿದ ನೆಲಗಡಲೆ ಜೊತೆಗೆ ಸ್ವಲ್ಪ ಬೆಲ್ಲವನ್ನು ಸೇರಿಸಿ ತಿಂದರೆ ನಿಮ್ಮ ಬೆನ್ನು ನೋವು ಕಡಿಮೆ ಯಾಗುತ್ತದೆ.

Leave a Reply

Your email address will not be published. Required fields are marked *