Advertisements

ಪದೇ ಪದೇ ನೆಗಡಿ ಕೆಮ್ಮು ಗಂಟಲು ಕಿರಿ ಕಿರಿ ಆಗುತ್ತಿದ್ದರೆ ಹೀಗೆ ಮಾಡಿ ಸಾಕು !

Health

ಸ್ಬೇಹಿತರೇ, ಎಲ್ಲಾ ಕಾಲದಲ್ಲೂ ನಮ್ಮನ್ನ ಸಾಮಾನ್ಯವಾಗಿ ಭಾ’ದಿಸುವ ಕಾಯಿಲೆಗಳೆಂದರೆ ಅದು ನೆಗಡಿ, ಕೆಮ್ಮು, ತಲೆನೋ’ವು ಹಾಗೂ ಜ್ವರ. ಇನ್ನು ನೆಗಡಿ ಕೆಮ್ಮು ಬಂದರಂತೂ ಹೈರಾಣಾಗಿ ಬಿಡುತ್ತೇವೆ. ಈಗಂತೂ ಪಬ್ಲಿಕ್ ಜಾಗಗಳಲ್ಲಿ ಜೋರಾಗಿ ಕೆಮ್ಮೋ ಹಾಗೂ ಇಲ್ಲ. ಜೋರಾಗಿ ಕೆಮ್ಮಿದ್ರೆ ಜನ ಅನುಮಾನವಾಗಿ ನೋಡುವಂತಹ ಸನ್ನಿವೇಶ ನಿರ್ಮಾಣವಾಗಿರುವುದು ನಿಮ್ಮೆಲ್ಲರಿಗೂ ಗೊತ್ತಿರುವಂತದ್ದೇ. ಇನ್ನು ನೆಗಡಿ ಕೆಮ್ಮು ಬಂದಾಗ ನೀವು ಆಸ್ಪತ್ರೆಗೆ ಹೋಗುವ ಬದಲು ಮನೆಯಲ್ಲಿರುವ ವಸ್ತುಗಳಿಂದಲೇ ಗುಣ ಮಾಡಿಕೊಳ್ಳಬಹುದಾಗಿದೆ. ಹಾಗಾದ್ರೆ ಈ ಮನೆಮ’ದ್ದು ಮಾಡೋದು ಹೇಗೆ ಅಂತ ನೋಡೋಣ ಬನ್ನಿ..

Advertisements

ಹೌದು, ಅಡುಗೆಮನೆಯಲ್ಲಿರುವ ಪದಾರ್ಥಗಳಿಂದಲೇ ನೆಗಡಿ ಕೆಮ್ಮಿಗೆ ಮನೆಮ’ದ್ದನ್ನ ನೀವೇ ಮಾಡಿಕೊಳ್ಳಬಹುದು. ಇದಕ್ಕಾಗಿ ಬೇಕಾಗಿರುವ ಪದಾರ್ಥಗಳು ಶುಂಠಿ, ಬೆಲ್ಲ, ಓಂಕಾಳು, ಅರಿಶಿನ ಹಾಗೂ ನಿಮ್ಮ ಮನೆಯ ಮುಂದೆಯೇ ಇರುವ ತುಳಸಿ. ಮಾಡುವ ವಿಧಾನ ಹೇಗೆಂದರೆ..ಮೊದಲಿಗೆ ಬೆಲ್ಲವನ್ನ ಪಾಕ ಮಾಡಿಕೊಳ್ಳಿ. ಬಳಿಕ ಶುಂಠಿಯನ್ನ ತುರಿದು ರಸದ ರೀತಿ ಮಾಡಿಕೊಳ್ಳಿ. ಅನಂತರ ಓಂಕಾಳು ಮತ್ತು ತುಳಸಿಯನ್ನ ಜೊತೆ ಸೇರಿಸಿ ಜ’ಜ್ಜಿ.

ಇದೆಲ್ಲದರ ಬಳಿಕ ಒಲೆಯ ಮೇಲೆ ಪಾತ್ರೆ ಇಟ್ಟು ಅದರಲ್ಲಿ ಬೆಲ್ಲದ ಪಾಕ ಮತ್ತು ಶುಂಠಿ ರಸ ಹಾಕಿ ಚೆನ್ನಾಗಿ ಕುದಿಸಿ. ಬಳಿಕ ನೀವು ಜ’ಜ್ಜಿದ ಓಂಕಾಳು ಮತ್ತು ತುಳಸಿಯನ್ನ ಅದೇ ಪಾತ್ರೆಯಲ್ಲಿ ಹಾಕಿ ಮತ್ತಷ್ಟು ಸಮಯ ಕುದಿಸಿ. ಇದನ್ನ ಒಂದು ಬಟ್ಟಲಿನಲ್ಲಿ ಸ್ಟೋರ್ ಮಾಡಿಡಿ. ಯಾವಾಗಲಾದ್ರೂ ನಿಮಗೆ ಕೆಮ್ಮು ನೆಗಡಿ ಬಂದರೆ ಸ್ಟೋರ್ ಮಾಡಿದ ರಸವನ್ನ ಸೇವಿಸಿ. ಇದರಿಂದ ನಿಮ್ಮ ಕೆಮ್ಮು ನೆಗಡಿ ಕಡಿಮೆಯಾಗಿ ಆಸ್ಪತ್ರೆಗೆ ಹೋಗುವುದು ತಪ್ಪುತ್ತದೆ. ಆರೋಗ್ಯ ಕೂಡ ಚೆನ್ನಾಗಿರುತ್ತದೆ.