Advertisements

ದಶಕಗಳ ಕಾಲ ಕನ್ನಡ ಚಿತ್ರರಂಗವನ್ನಾಳಿದ ನಟಿ ಜಯಂತಿಯ ಮೊಮ್ಮಗ ಕೂಡ ಸ್ಟಾರ್ ನಟ !

Cinema

ಇಂದಿನ ಎಷ್ಟೋ ಯುವನಟಿಯರಿಗೆ ಸ್ಫೂರ್ತಿಯಾಗಿದ್ದಾರೆ ಅಭಿನಯ ಶಾರದೆ ನಟಿ ಜಯಂತಿ. ಅಂದಿನ ಕಾಲದಲ್ಲಿ ಕನ್ನಡ ಚಿತ್ರರಂಗದಲ್ಲಿ ಟಾಪ್ ಹೀರೋಯಿನ್ ಆಗಿ ಮಿಂಚಿದ ಕೆಲವೇ ನಟಿಯರಲ್ಲಿ ಇವರೂ ಕೂಡ ಒಬ್ಬರು. ಇನ್ನು ಹೀರೋಗಳಿಗೆ ಡಾಮಿನೇಟ್ ಮಾಡುತ್ತಾ ಅವರ ಸರಿಸಮನಾಗಿ ನಟಿಸುತ್ತಿದ್ದರು ನಟಿ ಜಯಂತಿ. ಅವರ ಅಭಿನಯವೇ ಆಗಿತ್ತು. ಜೊತೆಗೆ ತಮ್ಮದೇ ಆದ ಅಭಿಮಾನಿ ಬಳಗ ಹೊಂದಿದ್ದ ನಟಿ. 60ರ ದಶಕದ ಜನರೇಷನ್ ನಿಂದ ಹಿಡಿದು 80ರ ದಶಕದ ಜನರೇಷನ್ ವರೆಗೆ ನಾಯಕಿ ನಟಿಯಾಗಿ ಮಿಂಚಿದವರು. ಇನ್ನು ಇಲ್ಲಿಯವರೆಗೂ ೫೦೦ ಸಿನಿಮಾಗಳಲ್ಲಿ ನಟಿಸಿರುವ ಜಯಂತಿಯವರು ಕನ್ನಡ ಮಾತ್ರವಲ್ಲದೇ, ತೆಲುಗು, ತಮಿಳು, ಮಲಯಾಳಂ ಸೇರಿದಂತೆ ಹಿಂದಿ ಚಿತ್ರರಂಗದಲ್ಲೂ ಕೂಡ ಮಿಂಚಿ ಬಹುಭಾಷಾ ನಟಿ ಎನಿಸಿಕೊಂಡಿದ್ದಾರೆ.

Advertisements

6 ಜನವರಿ 1945ರಂದು ಬಳ್ಳಾರಿಯಲ್ಲಿ ಜನಿಸಿದ ಜಯಂತಿಯವರ ಮೊದಲ ಹೆಸರು ಕಮಲಾ ಕುಮಾರಿ ಎಂದು. ಇನ್ನು ಇವರ ತಂದೆ ಬಾಲಸುಬ್ರಮಣ್ಯಂ ಬೆಂಗಳೂರಿನ ಸೆಂಟ್ ಜೋಸೆಫ್ ಕಾಲೇಜಿನಲ್ಲಿ ಇಂಗ್ಲಿಷ್ ಪ್ರೋಫೆಸರ್ ಆಗಿದ್ದರು. ತಾಯಿ ಹೆಸರು ಸಂತಾನ ಲಕ್ಷ್ಮಿ. ನಟಿ ಜಯಂತಿಗೆ ಇಬ್ಬರು ಸಹೋದರರು ಕೂಡ ಇದ್ದಾರೆ. ಆದರೆ ಜಯಂತಿಯವರ ಬಾಲ್ಯ ಜೀವನ ಅಷ್ಟು ಸುಲಭವಾಗಿರಲಿಲ್ಲ.

ಜಯಂತಿ ಚಿಕ್ಕವರಿದ್ದಾಗಲೇ ಅವರ ತಂದೆ ತಾಯಿ ಬೇರೆ ಯಾಗುತ್ತಾರೆ. ಆಗ ತಾಯಿ ಸಂತಾನ ಲಕ್ಷ್ಮಿ ತನ್ನ ಮಕ್ಕಳನ್ನ ಕರೆದುಕೊಂಡು ಆಗಿನ ಮದ್ರಾಸ್ (ಚೆನ್ನೈ)ಗೆ ಹೋಗುತ್ತಾರೆ. ಅಲ್ಲಿ ಮಗಳನ್ನ ಕ್ಲಾಸಿಕಲ್ ಡಾನ್ಸ್ ಶಾಲೆಗೆ ಸೇರಿಸುತ್ತಾರೆ. ದಶಕಗಳ ಕಾಲ ಕನ್ನಡ ಚಿತ್ರರಂಗವನ್ನ ಆಳಿದ ಜಯಂತಿಯವರು ಸಿನಿಮಾ ಲೋಕಕ್ಕೆ ಎಂಟ್ರಿ ಕೊಟ್ಟಿದ್ದು ಮಾತ್ರ ೧೯೬೧ರಲ್ಲಿ ತೆರೆಕಂಡ ತೆಲುಗು ಸಿನಿಮಾ ಮೂಲಕ.

ಇನ್ನು ಬಹುತೇಕರಿಗೆ ಜಯಂತಿಯವರ ಪತಿ ಯಾರಂತ ಗೊತ್ತಿಲ್ಲ. ಅವರ ಗಂಡನ ಹೆಸರು, ನಟ ಹಾಗೂ ನಿರ್ದೇಶನಾಗಿ ಕೆಲಸ ಮಾಡಿದ ಬಿಕೆಟಿ ಶಿವರಾಂ ಎಂದು. ಚಂದನವನದಲ್ಲಿ ಏಳು ಚಿತ್ರಗಳನ್ನ ನಿರ್ದೇಶನ ಮಾಡಿದ್ದಾರೆ ಶಿವರಾಂ ಅವರು. ಇನ್ನು ಅಚ್ಚರಿಯ ವಿಷಯ ಏನೆಂದರೆ ಶಿವರಾಂ ಅವರು ಜಯಂತಿಯವರನ್ನ ಮದ್ವೆಯಾಗುವ ಮುಂಚೆಯೇ ಅವರಿಗೆ ವಿವಾಹವಾಗಿದ್ದು ಅವರಿಗೆ ಎಂಟು ಜನ ಮಕ್ಕಳು ಕೂಡ ಇದ್ದರು. ಇನ್ನು ಶಿವರಾಂ ಅವರ ಮೊದಲ ಪತ್ನಿಯ ಹೆಸರು ಪ್ರಭಾವತಿ ಎಂದು. ಇವರಿಗೆ ನಾಲ್ಕು ಜನ ಗಂಡು ಮತ್ತು ನಾಲ್ಕು ಜನ ಹೆಣ್ಣು ಮಕ್ಕಳಿದ್ದರು. ಹೆಣ್ಣುಮಕ್ಕಳಲ್ಲಿ ಒಬ್ಬಬ್ಬರಾದ ಶಾಂತಿ ಎನ್ನುವವರನ್ನ ಸೌತ್ ಇಂಡಿಯಾ ಸಿನಿಮಾದ ದೊಡ್ಡ ನಿರ್ದೇಶರಾಗಿ ಖ್ಯಾತರಾಗಿರುವ ತ್ಯಾಗರಾಜ್ ಅವರ ಜೊತೆ ಮದ್ವೆ ಮಾಡಿದ್ರು. ಇವರ ಮಗನೆ ಜೀನ್ಸ್ ಸಿನಿಮಾದಲ್ಲಿ ನಟಿಸಿದ್ದ ನಟ ಪ್ರಶಾಂತ್. ಆ ಕಾಲಕ್ಕೆ ಹಿಟ್ ಚಿತ್ರಗಳನ್ನ ಕೊಟ್ಟ ನಟ ಇವರು.

ಇನ್ನು ಈ ಪ್ರಶಾಂತ್ ಸಂಬಂಧದ ಪ್ರಕಾರ ನಟಿ ಜಯಂತಿಯವರಿಗೆ ಮೊಮ್ಮಗನಾಗುತ್ತಾನೆ. ತಮ್ಮ ಬಾಲ್ಯದಿಂದಲೇ ಕಷ್ಟಗಳಿಗೆ ಗುರಿಯಾದ ನಟಿ ಜಯಂತಿಯವರು ಸಿನಿಮಾ ಹಿನ್ನಲೆ ಇಲ್ಲದೆಯೇ ದೊಡ್ಡ ನಟಿಯಾಗಿ ಬೆಳೆದವರು. ಕನ್ನಡ ಚಿತ್ರರಂಗವನ್ನ ಆಳಿದವರು. ಇಂದು ಕನ್ನಡ ಮಾತ್ರವಲ್ಲದೆ, ತೆಲುಗು ತಮಿಳಿನಲ್ಲೂ ಕೂಡ ಬಂಧು ಬಳಗ ಹಾಗೂ ತಮ್ಮದೇ ಆದ ಅಭಿಮಾನಿ ಬಳಗವನ್ನ ಹೊಂದಿದ್ದಾರೆ. ಜಯಂತಿಯವರು ಕನ್ನಡ ಚಿತ್ರರಂಗ ಕಂಡ ಧ್ರುವತಾರೆ, ಮೇರುನಟಿ. ಸ್ನೇಹಿತರೆ ನಿಮಗೆ ಜಯಂತಿಯವರ ಯಾವ ಸಿನಿಮಾ ತುಂಬಾ ಇಷ್ಟ ಎಂಬುದರ ಬಗೆ ಕಾ’ಮೆಂಟ್ ಮಾಡಿ ತಿಳಿಸಿ..