Advertisements

ನಿಮ್ಮ ತಲೆ ತಿರುಗುವಂತೆ ಮಾಡುತ್ತೆ ಈ 5 ಪ್ರಶ್ನೆಗಳು ! ನೀವೂ ಒಮ್ಮೆ ಪ್ರಯತ್ನ ಮಾಡಿ ನೋಡಿ..

Kannada Mahiti

ನಮಸ್ತೇ ಸ್ನೇಹಿತರೇ, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುವ ಕೆಲವೊಂದು ಪ್ರಶ್ನೆಗಳು ನಮ್ಮ ತಲೆ ತಿರುಗಿಸುವಂತೆ ಮಾಡುತ್ತವೆ. ನಮ್ಮ ಇಂದಿನ ವೇಗದ ಜೀವನದಲ್ಲಿ ಮೆದುಳಿಗೆ ಕೆಲಸ ಕೊಡುವುದನ್ನೇ ಮರೆತುಬಿಟ್ಟಿದ್ದೇವೆ. ಆದರೆ ಈ ತರಹದ ಪ್ರಶ್ನೆಗಳು ನಮ್ಮ ಮೆದುಳಿಗೆ ಕೆಲಸ ಕೊಟ್ಟು ಯೋಚಿಸುವಂತೆ ಮಾಡುತ್ತದೆ. ಇನ್ನು ಇಂತಹ ಪ್ರಶ್ನೆಗಳು ನಮ್ಮ ಮನಸ್ಸನ್ನ ರಿಲ್ಯಾಕ್ಸ್ ಮಾಡುವುದರ ಜೊತೆಗೆ ಬುದ್ದಿ ಸಾಮರ್ಥ್ಯವನ್ನ ಹೆಚ್ಚು ಮಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಇಲ್ಲಿ ನಿಮ್ಮ ತಲೆತಿರುಗುವಂತೆ ಮಾಡುವ ೫ ಪ್ರಶ್ನೆಗಳನ್ನ ಕೊಡಲಾಗಿದೆ. ಸ್ನೇಹಿತರೆ ಪ್ರಶ್ನೆಯ ನಂಬರ್ ಜೊತೆಗೆ ಉತ್ತರವನ್ನ ಕಾಮೆಂಟ್ ಮಾಡಿ ತಿಳಿಸಿ..ಹಾಗಾದ್ರೆ ಆ ಪ್ರಶ್ನೆಗಳು ಏನೆಂದು ನೋಡೋಣ ಬನ್ನಿ..

ಮೊದಲ ಪ್ರಶ್ನೆ 1 : ಬಾವಿಯೊಂದರಲ್ಲಿ ಎಂಟು ಕಪ್ಪೆಗಳಿವೆ. ಆ ಕಪ್ಪೆಗಳಲ್ಲಿ ಒಂದು ಕಪ್ಪೆ ಸ’ತ್ತುಹೋಗುತ್ತದೆ. ಆಗ ಆ ಬಾವಿಯಲ್ಲಿ ಉಳಿದ ಕಪ್ಪೆಗಳೆಷ್ಟು ? ನಿಮ್ಮ ಉತ್ತರವನ್ನ ಕಾಮೆಂಟ್ ಮಾಡಿ ತಿಳಿಸಿ.

ಈ ಪ್ರಶ್ನೆಗೆ ಉತ್ತರ 8 ಕಪ್ಪೆಗಳು. ಹೇಗಂತಾ ನೋಡೋಣ ಬನ್ನಿ..ಸ’ತ್ತಿರುವ ಕಪ್ಪೆ ಕೂಡ ಅದೇ ಕಪ್ಪೆಗಳ ಜೊತೆ ಇರುತ್ತೆ ಅಲ್ಲವೇ..

Advertisements

ಎರಡನೆಯ ಪ್ರಶ್ನೆ 2 : ರಾಜೇಶನ ತಂದೆಯ ಮೂರು ಮಕ್ಕಳು ಮೊದಲನೆಯವನು ಉಮೇಶ, ಎರಡನೆಯವನು ಸುರೇಶ ಹಾಗಾದ್ರೆ ಮೂರನೆಯ ಮಗನ ಹೆಸರೇನೆಂದು ನಿಮ್ಮ ಉತ್ತರ ತಿಳಿಸಿ..

ಎರಡನೆಯ ಪ್ರಶ್ನೆಗೆ ಉತ್ತರ ರಾಜೇಶನ ತಂದೆಗೆ ಮೂರು ಜನ ಮಕ್ಕಳು. ಉಮೇಷ ಮತ್ತು ಸುರೇಶ ಸೇರಿ ರಾಜೇಶ ಮೂರನೆಯ ಮಗ.

ಮೂರನೆಯ ಪ್ರಶ್ನೆ 3 : ಗೋಡೆಯೊಂದನ್ನ ಕಟ್ಟಲು 10 ಜನರಿಗೆ 10 ದಿನಗಳ ಸಮಯ ಬೇಕಾಗುತ್ತದೆ. ಆದರೆ ಅದೇ ಗೋಡೆಯ ಗೋಡೆಯನ್ನ ಕಟ್ಟಲು 5 ಜನರು ತೆಗೆದುಕೊಳ್ಳುವ ಸಮಯ ಎಷ್ಟು ಎಂದು ನಿಮ್ಮ ಉತ್ತರವನ್ನ ಕಾಮೆಂಟ್ ಮಾಡಿ ತಿಳಿಸಿ..

ನಾಲ್ಕನೆಯ ಪ್ರಶ್ನೆ 4 : ಕೆಲವೊಂದು ತಿಂಗಳುಗಳಲ್ಲಿ ಮೂವತ್ತೊಂದು ದಿನಗಳು ಇರುತ್ತವೆ. ಹಾಗೆಯೆ ಮತ್ತೆ ಕೆಲವೊಂದು ತಿಂಗಳುಗಳಲ್ಲಿ ಮೂವತ್ತು ದಿನಗಳು ಇರುತ್ತವೆ. ಆಗ ಎಷ್ಟು ತಿಂಗಳಿನಲ್ಲಿ ೨೮ ದಿನಗಳು ಇರುತ್ತವೆ ? ಉತ್ತರವನ್ನ ಕಾಮೆಂಟ್ ಮಾಡಿ ತಿಳಿಸಿ..

ಐದನೆಯ ಪ್ರಶ್ನೆ 5 : ನನ್ನನ್ನ ಜಗ್ಗಿದಷ್ಟೂ ನಾನು ಅಷ್ಟು ಸಣ್ಣದಾಗುತ್ತಾ ಹೋಗುತ್ತೇನೆ. ಹಾಗಾದ್ರೆ ನಾನು ಯಾರು ಅಂತ ನಿಮಗೆ ಗೊತ್ತಾ ? ಉತ್ತರ ಗೊತ್ತಾದವರು ಪ್ರಶ್ನೆಯ ಸಂಖ್ಯೆ ಸಮೇತ ಕಾಮೆಂಟ್ ಮಾಡಿ ತಿಳಿಸಿ..