Advertisements

ಎಲ್ಲಿ ಮರೆಯಾಗಿ ಹೋದ್ರು ಶೋಭರಾಜ್.. ಇಂತಹ ಅದ್ಬುತ ಕಲವಿದನಿಗೆ ಅವಕಾಶ ಇಲ್ವಾ! ಏನಾಯ್ತು ಗೊತ್ತಾ?

Cinema

ಆರಡಿ ಎತ್ತರದ ಆ ಅಜಾನುಬಾಹುವಿನ ಅಭಿನಯಕ್ಕೆ ಮನಸೋಲದವರುಂಟೆ? ನಟನೆಯಲ್ಲಿ ಕ್ರೂ’ರ’ತೆಯನ್ನು ತೋರಿಸುವ ಖ’ಳನಟ ಶೋಬ್‌ರಾಜ್ ಅವರ ವೈಯಕ್ತಿಕ ಜೀವನ ಸಿನಿ ಜೀವನದ ಸ್ವಾರಸ್ಯಕರ ಸಂಗತಿಗಳನ್ನು ಹೇಳ್ತೀವಿ.. ಶೋಭ್‌ರಾಜ್ ಎಂದ ತಕ್ಷಣ ಎತ್ರದ ಜೀವ ನೆನೆಪಿಗೆ ಬರುತ್ತದೆ, ಜೊತೆಗೆ ಆಳಿಗೆ ತಕ್ಕದಾದ ಅಭಿನಯ. ವಿ’ಲನ್ ಪಾತ್ರಕ್ಕೆ ಹೇಳಿಮಾಡಿಸಿದ ಕ್ಯಾರೆಕ್ಟರ್ ಶೋಭರಾಜ್ ಅವರದ್ದು 90ರ ದಶಕದ ಬಹು ಬೇಡಿಕೆಯ ಖ’ಳನಟನಾಗಿದ್ದ ಶೋಭರಾಜ್ ಅವರು ಸಿನಿ ಜಗತ್ತಿಗೆ ಪದಾರ್ಪಣೆ ಮಾಡಿದ್ದೇ ಆಕ’ಸ್ಮಿಕವಾಗಿ.
ಶೋಭರಾಜ್ ಅವರು ಮೂಲತಃ ತುಮಕೂರಿನವರು. ತನ್ನ ಪ್ರಾಥಮಿಕ ಶಿಕ್ಷಣವನ್ನು ಹುಟ್ಟೂರಿನಲ್ಲಿಯೇ ಮುಗಿಸಿ ಪ್ರೌಢ ಹಾಗೂ ಕಾಲೇಜು ಶಿಕ್ಷಣವನ್ನು ಬೆಂಗಳೂರಿಲ್ಲಿ ಮುಗಿಸ್ತಾರೆ.

[widget id=”custom_html-3″]

Advertisements

ಶೋಭರಾಜ್ ಅವರಿಗೆ ಓದುವುದೆಂದರೆ ಅಷ್ಟಕಷ್ಟೆ. ಸಿನಿಮಾ ನೋಡುವುದು ಗೆಳೆಯರ ಜೊತೆ ಸುತ್ತುವುದೆಂದರೆ ಶೋಭರಾಜ್ ಅವರಿಗೆ ಬಹಳ ಇಷ್ಟ, ಯಾವುದೇ ಸಿನಿಮಾ ತೆರೆಗೆ ಬಂದ್ರೆ ಅದನ್ನು ಫಸ್ಟ್ ಡೇ ಫಸ್ಟ್ ಶೋ ನೋಡಿಯೇ ಶೋಭರಾಜ್ ಅವರಿಗೆ ಅಭ್ಯಾಸವಂತೆ.. ಇನ್ನು ಕನ್ನಡದ ಪ್ರಖ್ಯಾತ ನಟ ರಘುವೀರ್ ಅವರು ಶೋಭರಾಜ್ ಅವರ ಆತ್ಮೀಯ ಗೆಳೆಯನಂತೆ, ಒಂದು ರೀತಿಯಲ್ಲಿ ಅವರ ಮುಖಾಂತರವೇ ಶೋಭರಾಜ್ ಸಿನಿ ಜಗತ್ತಿಗೆ ಎಂಟ್ರಿ ಕೊಡ್ತಾರೆ. ಹೌದು ಎಸ್ ನಾರಾಯಣ್ ಅವರು ನಿರ್ದೇಶಿಸಿದ ಚೈತ್ರದ ಪ್ರೇಮಾಂಜಲಿ ಸಿನಿಮಾದಲ್ಲಿ ರಘುವೀರ್ ಅವರು ನಾಯಕನಟನ ಪಾತ್ರ ಮಾಡ್ತಾಯರ‍್ತಾರೆ.

[widget id=”custom_html-3″]

ಆಗ ಶೋಭರಾಜ್ ಅವರು ರಘುವೀರ್ ಅವರ ಹಣಕಾಸು ಲೆಕ್ಕಾಚಾರ ನೋಡಿಕೊಂಡು ಅವರ ಜೊತೆಯೇ ಸೆಟ್‌ನಲ್ಲಿ ಓಡಾಡಿಕೊಂಡಿದ್ರು. ಆಗ ಪ್ರೇಮಾಂಜಲಿ ಸಿನಿಮಾದಲ್ಲಿ ಅಭಿನಯಿಸಬೇಕಿದ್ದ ಖ’ಳ ನಟ ಒಂದು ದಿನ ಸಿನಿಮಾ ಸೆಟ್‌ಗೆ ಬಂದಿರುವುದಿಲ್ಲ, ನೋಡಲು ಸೇಮ್ ವಿ’ಲನ್ ತರನೇ ಇದ್ದ ಶೋಭರಾಜ್ ಆ ಕ್ಯಾರೆಕ್ಟರ್‌ಗೆ ಹೇಳಿ ಮಾಡಿಸಿದಂತಿದ್ರು. ನಂತರ ಆ ಸಿನಿಮಾದಲ್ಲಿ ಶೋಭರಾಜ್ ಖ’ಳನಟನಾಗಿ ಅಭಿನಯಿಸ್ತಾರೆ. ಆ ಸಿನಿಮಾ ಭರ್ಜರಿ ಹಿಟ್ ಕಾಣುತ್ತದೆ. ಹಾಗೆಯೇ ಇತಿಹಾಸ ಪುಟದಲ್ಲಿ ದಾಖಲಾಗುತ್ತೆ. ನಂತರ ಮುಂದಿನ ಮೂರರಿಂದ ನಾಲ್ಕು ವರ್ಷಗಳ ಕಾಲ ಶೋಭರಾಜ್ ಕೇವಲ ಎಸ್ ನಾರಾಯಣ್ ಹಾಗೂ ವಿಟಿ ರಘು ಅವರ ನಿರ್ದೆಶನದ ಸಿನಿಮಾಗಳಲ್ಲಿಯೇ ಕಾಣಿಸಿಕೊಂಡ್ರು.

[widget id=”custom_html-3″]

ಬಳಿಕ ದೇವರಾಜ್ ಅವರು ಅಭಿನಯಿಸಿದ ಗೋ’ಲಿಬಾ’ರ್‌ನಲ್ಲಿ ಅಭಿನಯಿಸಿ ಸೈ ಎನಿಸಿಕೊಂಡ್ರು, ಡಾಕ್ಟರ್ ವಿಷ್ಣುವರ್ಧನ್ ಅವರ ಜೊತೆ ಬಂಗಾರದ ಕಳಶ ಸಿನಿಮಾದಲ್ಲಿ ಅಭಿನಯಿಸಿದ್ರು. ಹೃ’ದಯವಂತ, ಡೆ’ಡ್ಲಿ ಸೋಮ, ಓಂ ನಮಶಿವಾಯ, ಗಲಾಟೆ ಅಳಿಯಂದ್ರು, ಹೀಗೆ ಸಾಲು ಸಾಲು ಸಿನಿಮಾಗಳಲ್ಲಿ ಅಭಿನಯಿಸ್ತಾ ಬ್ಯುಸಿ ನಟನಾದ್ರು, ನಂತರ ವರನಟ ಡಾಕ್ಟರ್ ರಾಜಕುಮಾರ್ ಅವರ ಜೊತೆಯೂ ಶೋ’ಭರಾಜ್ ಅವರಿಗೆ ಬಣ್ಣ ಹಚ್ಚುವ ಸೌಭಾಗ್ಯ ಸಿಕ್ಕಿದ್ದು ಶಬ್ದವೇದಿ ಸಿನಿಮಾದಲ್ಲಿ ವಿ’ಲನ್ ಪಾತ್ರದಲ್ಲಿ ಮಿಂ’ಚಿದ್ರು. ಕೇವಲ ಕನ್ನಡ ಮಾತ್ರವಲ್ಲದೇ ತಮಿಳು, ತೆಲುಗು ಸಿನಿಮಾಗಳಲ್ಲಿಯೂ ಸಹ ಶೋಭರಾಜ್ ಸಕ್ರಿಯರಾಗಿದ್ರು.

ಒಂದು ಆಸಕ್ತಿದಾಯಕ ವಿಚಾರ ಅಂದ್ರೆ ಶೋಭರಾಜ್ ಮೂಲ ಹೆಸರು ಸುರೇಂದ್ರ ಪಾಲ್. ಚೈತ್ರದ ಪ್ರೇಮಾಂಜಲಿ ಸಿನಿಮಾ ಬಿಡುಗಡೆಯ ಸಂದರ್ಭದಲ್ಲಿ ಆ ಹೆಸರು ಅಷ್ಟೊಂದು ತೂಕವಿಲ್ಲವಂತ ಒಬ್ಬ ಹಂತಕನ ಹೆಸರನ್ನು ಎಸ್ ನಾರಾಯಣ್ ಅವರು ಸುರೇಂದ್ರಪಾಲ್ ಅವರಿಗೆ ಇಟ್ರು. ಆ ಹೆಸರೇ ಈಗ ಸಿನಿರಂಗದಲ್ಲಿ ಹೆ’ಮ್ಮರವಾಗಿ ಶೋಭರಾಜ್ ಅಂತ ಪ್ರಸಿದ್ಧಿಯನ್ನು ಪಡೆದುಕೊಂಡಿದೆ.
ಹಾಸ್ಯದಲ್ಲಿಯೂ ಖ’ಳನಟನಾಗಿಯೂ ಪೋಷಕನಟನಾಗಿಯೂ ಎಲ್ಲವುದರಲ್ಲಿ ಸೈ ಎನಿಸಿಕೊಂಡಿರುವ ಅಭಿನಯ ಚತುರನಿಗೆ ಅವಕಾಶಗಳು ಕನ್ನಡ ಸಿನಿರಂಗದಲ್ಲಿ ಕಡಿಮೆಯಾಗುತ್ತಿರೋದೆ ಬೇಸರದ ಸಂಗತಿ. ಶೋಭರಾಜ್ ಅವರಿಗೆ ಇನ್ನಷ್ಟು ಮಗದಷ್ಟು ಸಿನಿಮಾ ಅವಕಾಶಗಳು ಒದಗಿಬರಲಿ.. ಇವರ ಬಗ್ಗೆ ನೀವೇನ್ ಹೇಳ್ತಿರಾ..