Advertisements

ಇದು ಮನುಷ್ಯನ ಕಾಲುಬೆರಳಲ್ಲ ! ಆದ್ರೆ ನೆಟ್ಟಿಗರ ನಿದ್ದೆ ಗೆಡಿಸಿರುವ ಈ ವೈರಲ್ ಫೋಟೋದಲ್ಲಿ ಇರುವುದೇನು ಗೊತ್ತಾ ?

Kannada Mahiti

ಇಂಟರ್ನೆಟ್ ನಲ್ಲಿ ವೈರಲ್ ಆಗುವ ಕೆಲವೊಂದು ಫೋಟೋಗಳು ವಿಚಿತ್ರವೆನಿಸಿದ್ರೂ, ಅದರ ಹಿಂದಿರುವ ಅಸಲಿ ಸತ್ಯೇ ಬೇರೆಯೇ ಇರುತ್ತದೆ. IFS ಅಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿರುವ ಸುಶಾಂತ್ ನಂದಾ ಎಂಬುವವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಆಗಾಗ ವಿಭಿನ್ನ ರೀತಿಯ ಫೋಟೋ ಹಾಗೂ ವಿಡಿಯೊಗಳನ್ನ ಪೋಸ್ಟ್ ಮಾಡುತ್ತಿರುತ್ತಾರೆ. ಜೊತೆಗೆ ಜನರಿಗೆ ಗೊತ್ತಿಲ್ಲದ ಕುತೂಹಲಕಾರಿಯಾದ ವಿಷಯಗಳನ್ನ ಈ ಮೂಲಕ ತಿಳಿಸುತ್ತಾರೆ.

Advertisements

ಇನ್ನು ಸುಶಾಂತ್ ಅವರು ಇತ್ತೀಚೆಗಷ್ಟೇ ಒಂದು ವಿಚಿತ್ರವಾದ ಫೋಟೋವೊಂದನ್ನ ತಮ್ಮ ಟ್ವಿಟ್ಟರ್ ಖಾತೆಯಲ್ಲ ಪೋಸ್ಟ್ ಮಾಡಿದ್ದು, ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿರುವ ಈ ಫೋಟೋ ವೀಕ್ಷಕರ ನಿದ್ದೆಗೆಡಿಸಿದೆ. ಇನ್ನು ಫೋಟೋದಲ್ಲಿರುವಂತೆ ಒಂದು ದೊಡ್ಡದಾದ ಮರದ ತುಂಡಿನ ಕೆಳಗಡೆ ಸಿಕ್ಕಿಹಾಕಿಕೊಂಡ ಮನುಷ್ಯನ ಕಾಲು ಬೆರುಳುಗಳ ಪಾದದಂತಿದೆ. ಆದರೆ ಸುಶಾಂತ್ ಅವರು ಫೋಟೋದಲ್ಲಿ ಕಾಣಿಸುವ ಪ್ರಾಣಿ ಯಾವುದು ಎಂದು ಕಂಡುಹಿಡಿಯಬಲ್ಲಿರಾ ಎಂದು ಪ್ರಶ್ನೆ ಮಾಡಿದ್ದಾರೆ ?

ನೀವು ಫೋಟೋ ನೋಡುತ್ತಿದಂತೆ ನಿಮ್ಮ ಊಹಿಸುವುದು ಇದು ಮನುಷ್ಯನ ಕಾಲು ಬೆರಳಿಗಳಿರಬಹುದು ಎಂದು. ಆದರೆ ಫೋಟೋದಲ್ಲಿರುವ ಪ್ರಾಣಿಯನ್ನ ಗೆಸ್ ಮಾಡಿರುವ ನೆಟ್ಟಿಗರು ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ಉತ್ತರವನ್ನ ಕೊಟ್ಟಿದ್ದಾರೆ. ಬಹುತೇಕರು ಅದು ಮನುಷ್ಯನ ಪಾದ ಎಂದು ಹೇಳಿದ್ದಾರೆ, ಕೆಲವರು ಗೊರಿಲ್ಲಾ ಪ್ರಾಣಿಯ ಪಾದ ಎಂದು ಉತ್ತರ ಕೊಟ್ಟಿದ್ದಾರೆ. ಇನ್ನು ಕೆಲವರು ಇದೇನೋ ತುಂಬಾ ಭಯಂಕರವಾಗಿದೆ ಎಂದು ರೀ ಟ್ವೀಟ್ ಮಾಡಿದ್ದಾರೆ. ಆದರೆ ಇದ್ಯಾವುದು ಅಸಲಿ ಉತ್ತರವಲ್ಲ.

ಇನ್ನು ಸುಶಾಂತ್ ರವರು ಜನರ ಪ್ರತಿಕ್ರಿಯೆಗಳನ್ನ ನೋಡಿ ತಾವೇ ಮತ್ತೆ ಟ್ವೀಟ್ ಮಾಡಿ ಉತ್ತರ ಹೇಳಿದ್ದಾರೆ. ಅದು ಯಾವುದೊ ಮನುಷ್ಯ ಅಥ್ವಾ ಪ್ರಾಣಿಯ ಪಾದವೇ ಅಲ್ಲ. ಕ್ಸೈಲೇರಿಯಾ ಪಾಲಿಮಾರ್ಪ ಎಂದು ಕರೆಯುವ ಒಂದು ರೀತಿಯ ಫಂಗಸ್ ಎಂದು ಉತ್ತರ ತಿಳಿಸಿದ್ದಾರೆ.