Advertisements

ಏಕಾಏಕಿ ರಸ್ತೆ ಮಧ್ಯೆ ಎಂಟು ಅಡಿ ಗುಂಡಿ ಪತ್ತೆ.. ಜನರಲ್ಲಿ ಆತಂಕ ಮುಟ್ಟಿಸಿದ ಘಟನೆ! ಎಲ್ಲಿ ಗೊತ್ತೇ..

News

ನಮಸ್ಕಾರ ಸ್ನೇಹಿತರೆ ಬೆಂಗಳೂರಿನ ಪ್ರತಿಷ್ಠಿತ ರಸ್ತೆ ಜೆಸಿ ರಸ್ತೆಯ ಮಧ್ಯ ಭಾಗದಲ್ಲಿ ಸುಮಾರು 8 ಅಡಿ ಆಳದ ಗುಂಡಿ ದಿಡೀರ್ ಸೃಷ್ಟಿ ಆಗಿದ್ದರಿಂದ ಸುತ್ತಮುತ್ತ ಪ್ರದೇಶದಲ್ಲಿ ಆತಂಕ ಎದುರಾಗಿದೆ. ಅತಿ ಹೆಚ್ಚು ಸಂಚಾರದಿಂದ ಜೆಸಿ ರಸ್ತೆ ಮಧ್ಯ ಭಾಗದಲ್ಲಿ ಏಕಾಏಕಿ 8 ಅಡಿ ವೃತ್ತಾಕಾರದ ಗುಂಡಿ ಬಿದ್ದಿದ್ದು ವಾಹನ ಸವಾರರು ಕೂಡ ಆತಂಕದಲ್ಲಿ ಸಂಚರಿಸುತ್ತಿದ್ದರು. ಬೆಳಿಗ್ಗೆಯೇ ವೃತ್ತಾಕಾರದ ಗುಂಡಿ ಮಧ್ಯೆ ಕಾಣಿಸಿ ಕೊಂಡಿದ್ದರಿಂದ ಕೆಲವೊತ್ತು ಉದ್ದೇಶಿತ ಮಾರ್ಗದಲ್ಲಿ ಸವಾರರು ಕೈಯಲ್ಲಿ ಜೀವ ಹಿಡಿದುಕೊಂಡು ಸಂಚರಿಸುತ್ತಿದ್ದರು. ವೇಗವಾಗಿ ಬರುವ ವಾಹನಗಳಿಗೆ ಗುಂಡಿ ಹತ್ತಿರ ಬರುತ್ತಿದ್ದಂತೆ ಬ್ರೇಕ್ ಬೀಳುತ್ತಿತ್ತು.. ಇದರಿಂದ ಹಿಂದೆ ಬರುವ ಇತರೆ ವಾಹನ ಸವಾರರು ಗಲಿಬಿಲಿ ಗೊಳ್ಳುತ್ತಿದ್ದರು ಎಂದು ಇಲ್ಲಿನ ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ. ಇದರಿಂದ ತೀವ್ರ ವಾಹನದ ಸಂಚಾರ ಉಂಟಾಗಿದ್ದು ಈ ಗುಂಡಿ ಹೇಗೆ ಸೃಷ್ಟಿಯಾಗಿತ್ತು ಅನ್ನುವುದು ಬಿಬಿಎಂಪಿ ವಲಯದ ಇಂಜಿನಿಯರ್ ಗಳಿಗೂ ಕೂಡ ಇದೊಂದು ಆಶ್ಚರ್ಯಕರ ಸಂಗತಿ ಯಾಗಿದೆ.

[widget id=”custom_html-3″]

Advertisements

ಈ ಬಗ್ಗೆ ಬಿಬಿಎಂಪಿ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ. ಗುಂಡಿ ಯಾಗಿರುವುದು ಗಮನಕ್ಕೆ ಬಂದಂತೆ ಸ್ಥಳಕ್ಕೆ ಧಾವಿಸಿದ ಬಿಬಿಎಂಪಿ ಅಧಿಕಾರಿಗಳು ಯಾವುದೇ ಅ’ನಾ’ಹುತಗಳು ಆಗದಂತೆ ತಾತ್ಕಾಲಿಕ ತಡೆ ನಿರ್ಮಿಸಿ ಗುಂಡಿಯನ್ನು ಅಗೆದು ನೋಡಿದರು ಕಾರಣ ಗೊತ್ತಾಗಿಲ್ಲ. ಈ ಭಾಗದಲ್ಲಿ ಬಿಬಿಎಂಪಿ ಮೆಟ್ರೋ ಸೇರಿದಂತೆ ಯಾವುದೇ ಸಿವಿಲ್ ಕಾಮಗಾರಿಕೆಯು ನಡೆದಿಲ್ಲ. ಇಂಜಿನಿಯರ್ ಗಳೊಂದಿಗೆ ಘಟನಾ ಸ್ಥಳಕ್ಕೆ ಭೇಟಿ ನೀಡಿ ಗುಂಡಿ ಅಗೆದು ಪರಿಶೀಲನೆ ನಡೆಸಲಾಗಿದೆ ಆದರೂ ಕೂಡ ನಿಖರ ಕಾರಣ ಗೊತ್ತಾಗಿಲ್ಲ.. ಯಾವುದಾದರೂ ಹಳೆಯ ಬಾವಿ ಇರುವುದೆಂದು ನಂಬಲಾಗಿದೆ. ಕಾರಣ ಇಂತಹ ಸಮಸ್ಯೆಗಳನ್ನು ಸುಲಭವಾಗಿ ಪತ್ತೆ ಮಾಡಲು ಸಾಧ್ಯವಿಲ್ಲ.

[widget id=”custom_html-3″]

ಇದು ಹಳೆಯ ರಸ್ತೆ ಮೂರರಿಂದ ನಾಲ್ಕು ಅಡಿಯಷ್ಟು ಕೆಳಗಡೆ ನೀರು ಭಸಿದಿರುವ ಸಾಧ್ಯತೆ ಇರುವುದರಿಂದ ಪತ್ತೆ ಮಾಡೋದು ಸ್ವಲ್ಪ ಕಷ್ಟ ಎಂದು ತಿಳಿಸಿದ್ದಾರೆ. ಆದರೂ ಏಕಾಏಕಿ ಈತರ ಗುಂಡಿಯಾಗುವುದು ನಿಜಕ್ಕೂ ಇಲ್ಲಿನ ಜನರಲ್ಲಿ ಹೆಚ್ಚಿನ ಆತಂಕವನ್ನು ಸೃಷ್ಟಿ ಸಿದೆ ಕಾರಣ ಜೆಸಿ ನಗರ ಸುತ್ತಮುತ್ತ ಇದು ಬೆಂಗಳೂರಿನ ಅತ್ಯಂತ ಹಳೆಯ ಪ್ರದೇಶ ಇಲ್ಲಿ ಹಿಂದೆ ನೂರಾರು ಬಾವಿಗಳಿದ್ದವು. ಅವುಗಳನ್ನೆಲ್ಲ ಮುಚ್ಚಿ ಇಲ್ಲಿ ರಸ್ತೆಗಳನ್ನು ಹೊಸ ಹೊಸ ಕಟ್ಟಡಗಳನ್ನು ಇಲ್ಲಿ ನಿರ್ಮಿಸ ಲಾಗಿದೆ. ಯಾವ ಸಮಯದಲ್ಲಿ ಯಾವ ಕಟ್ಟಡ ಬೀಳುತ್ತದೆ ಎಂದು ನಂಬಲು ಸಾಧ್ಯವಿಲ್ಲವೆಂದು ಇಲ್ಲಿನ ಹಿರಿಯರು ಹೇಳುತ್ತಿದ್ದಾರೆ..