Advertisements

ಕನ್ನಡ ಚಿತ್ರರಂಗದ ಎಂದು ಮರೆಯದ ಖಳನಟರ ಬಗ್ಗೆ ನಿಮಗೆ ಗೊತ್ತಿಲ್ಲ ಇಂಟ್ರೆಸ್ಟಿಂಗ್ ಸಂಗತಿಗಳು.. ಸಿನಿಮಾ ರಂಗಕ್ಕೆ ಬರುವ ಮುಂಚೆ ಇವರು ಏನಾಗಿದ್ದರು ಗೊತ್ತಾ?

Cinema

ನಮಸ್ತೆ ಸ್ನೇಹಿತರೆ, ಒಂದು ಸಿನಿಮಾಗೆ ನಾಯಕನ ಪಾತ್ರ ಎಷ್ಟು ಮುಖ್ಯವೋ ಖಳನಾಯಕನ ಪಾತ್ರ ಅಷ್ಟೇ ಮುಖ್ಯ.. ಕಪ್ಪು ಬಿಳಿಪಿನ ಕನ್ನಡ ಸಿನಿಮಾ ರಂಗದಲ್ಲಿ ಕೇಡಿ ನಾಗಪ್ಪ ರಂಗ ಅವರಿಂದ ಖಳ ನಟರ ಪರಂಪರೆ ಆರಂಭವಾಗುತ್ತದೆ. ನಂತರದಲ್ಲಿ ಬಂದ ಹಲವಾರು ಖಳ ನಟರು ತನ್ಮ ಖಳ ಪಾತ್ರಗಳ ಮೂಲಕ ಮನೆ ಮಾತಾದರು.. ಸ್ನೇಹಿತರೆ ಕನ್ನಡ ಸಿನಿಮಾ ರಂಗದಲ್ಲಿ ಮಿಂಚಿದ ಹಳೆಯ ಖಳ ನಟರ ಬಗ್ಗೆ ಒಂದಿಷ್ಟು ಜ್ಞಾಪಿಸಿಕೊಳ್ಳುವ ಪ್ರಯತ್ನ ಮಾಡೋಣ ಬನ್ನಿ. ಮೊದಲನೆಯದಾಗಿ ನಟ ಬಾಲಕೃಷ್ಣ.. ಬಾಲಣ್ಣ ಎಂದೇ ಕನ್ನಡ ಸಿನಿಮಾ ರಂಗದಲ್ಲಿ ಖ್ಯಾತರಾಗಿದ್ದ ಇವರು ಕಿವಿ ಕೇಳಿಸದೇ ಇದ್ದರು ಸಹ ನಟರ ಆವ ಭಾವ ನೋಡಿ ನಟಿಸುತ್ತಿದ್ದ ಇವರ ಅಭಿನಯ ಅದ್ಬುತವಾಗಿರುತ್ತಿತ್ತು. ಕೇವಲ ಖಳನಟರಾಗಿ ಮಾತ್ರವಲ್ಲದೇ ಹಾಸ್ಯ ಹಾಗೂ ಪೋಷಕ ಪಾತ್ರಗಳಲ್ಲಿಯೂ ಕೂಡ ಬಾಲಣ್ಣ ಅವರು ಮಿಂಚಿದ್ದಾರೆ..

Advertisements

ನಟ ವಜ್ರಮುನಿ ತಮ್ಮ ಉ’ಗ್ರ ನಟನೆಯಿಂದ ಕಂಚಿನ ಕಂಟದಿಂದ ಕನ್ನಡ ಪ್ರೇಕ್ಷಕರ ಎದೆಯಲ್ಲಿ ನಡುಕ ಹುಟ್ಟಿಸಿದ ವಜ್ರಮುನಿ ತಮ್ಮ ಪ್ರಚಂಡ ರಾವಣ ನಾಟಕದ ರಾವಣ ಪಾತ್ರದ ಖ್ಯಾತಿಯಿಂದ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು. ನಟ ಭ’ಯಂ’ಕರ ಮತ್ತು ನಟ ಭೈರವ ಎಂದು ಖ್ಯಾತಿ ಪಡೆದಿರುವ ಇವರು ಮಲ್ಲಮ್ಮನ ಪ’ವಾಡ ಚಿತ್ರದಿಂದ ಸಿನಿಮಾ ಪಯಣ ಆರಂಭಿಸಿದರು.. ಎಂಪಿ ಶಂಕರ್ ಕನ್ನಡ ಪ್ರಸಿದ್ಧ ನಟ ನಿರ್ದೇಶಕ ಮತ್ತು ಚಿತ್ರ ನಿರ್ಮಾಪಕ. ಮೂಲತಃ ಕುಸ್ತಿ ಪಟುವಾಗಿ ಮೈಸೂರಿನ ದಸರಾ ಸಂದರ್ಭದಲ್ಲಿ ಭಾಗವಹಿಸುತ್ತಿದ್ದ ಇವರು.. ನಂತರ ಚಿತ್ರರಂಗಕ್ಕೆ ಬಂದು ನಟರಾಗಿ ಮತ್ತು ನಿರ್ಮಾಪಕರಾಗಿ ಭರಣಿ ಚಿತ್ರ ಬ್ಯಾನರ್ ಮೂಲಕ ಪ್ರಸಿದ್ದರಾಗುತ್ತಾರೆ.

ಸುದರ್ಶನ್ ಪ್ರಸಿದ್ಧ ಚಿತ್ರ ಸಾಹಿತಿ ಆರ್. ಎನ್ ಜೈ ಗೋಪಾಲ್ ಅವರ ಸಹೋದರರಾಗಿದ್ದ ಇವರು ನಾಯಕರಾಗಿ ಸಿನಿ ಪಯಣ ಆರಂಭಿಸಿ ನಂತರ ಖಳನಟರಾಗಿ ಮಿಂಚಿದರು.. ಕೇವಲ ಕನ್ನಡ ಮಾತ್ರವಲ್ಲದೇ ತಮಿಳು, ತೆಲುಗು, ಮಲಯಾಳಂ ಹಾಗು ಹಿಂದಿ ಈ ಎಲ್ಲಾ ಬಾಷೆ ಚಿತ್ರಗಳಲ್ಲಿಯೂ ಕೂಡ ನಟಿಸಿದ್ದಾರೆ. ಶಕ್ತಿ ಪ್ರಸಾದ್ ದಕ್ಷಿಣ ಭಾರತದ ಸಿನಿಮಾ ರಂಗದಲ್ಲಿ ಸಖತ್ ಪೇಮಸ್ ಆಗಿರುವ ಆ್ಯಕ್ಷನ್ ಕಿಂಗ್ ಅರ್ಜುನ್ ಸರ್ಜಾ ಅವರ ತಂದೆ. ಇವರು ಕೂಡ ಕನ್ನಡ ಸಿನಿಮಾ ರಂಗದ ಆಗಿನ ಕಾಲದ ಟಾಪ್ ವಿಲನ್ ಗಳಲ್ಲಿ ಒಬ್ಬರಾಗಿದ್ದರು.. ಶಕ್ತಿ ಪ್ರಸಾದ್ ಅವರು ಸುಮಾರು 200 ಕ್ಕು ಹೆಚ್ಚು ಚಿತ್ರಗಳಲ್ಲಿ ಖಳನಾಯಕರಾಗಿ ಪೋಷಕ ನಟರಾಗಿ ಮಿಂಚಿದ್ದಾರೆ.

ತೂಗುದೀಪ ಶ್ರೀನಿವಾಸ್.. ಇಂದು ಕನ್ನಡದ ಸಿನಿಮಾ ರಂಗದಲ್ಲಿ ಡಿಬಾಸ್ ಚಾಲೆಂಜಿಂಗ್ ಸ್ಟಾರ್ ಎಂದು ಬಿರುದು ಪಡೆದಿರುವ ದರ್ಶನ್ ಅವರ ತಂದೆ. 1966 ರಲ್ಲಿ ತೆರೆಕಂಡ ತೂಗುದೀಪ ಚಿತ್ರದಿಂದ ಸಿನಿ ಪಯಣ ಆರಂಭಿಸಿದ ಶ್ರೀನಿವಾಸ್ ಅವರು ಮುಂದೆ ಕನ್ನಡ ಪ್ರಖ್ಯಾತ ಖಳನಟರಾದರು.. ತೂಗುದೀಪ ಶ್ರೀನಿವಾಸ್ ಅವರು ಖಳನಟರಾಗಿ, ಪೋಷಕನಟರಾಗಿ ಕನ್ನಡ ಸಿನಿಮಾ ರಂಗದಲ್ಲಿ ಮಿಂಚಿದ್ದಾರೆ. ಟೈಗರ್ ಪ್ರಭಾಕರ್.. ಉತ್ತಮ ಮೈಕಟ್ಟು ಹಾಗು ವಿಭಿನ್ನ ಅಭಿನಯದಿಂದ ಕನ್ನಡ ಸಿನಿಮಾ ರಂಗದಲ್ಲಿ ಪೇಮಸ್ ಆದ ಇವರು ಮೊದಲಿಗೆ ಖಳನಟರಾಗಿ ನಟಿಸಿ ನಂತರದಲ್ಲಿ ನಾಯಕ ನಟರಾಗಿ, ನಿರ್ದೇಶಕರಾಗಿ ಸಾಹಸ ನಿರ್ದೇಶಕರಾಗಿ ಹೀಗೆ ಸಿನಿಮಾ ರಂಗದ ಹಲವು ವಿಭಾಗಗಳಲ್ಲಿ ಕೆಲಸ ಮಾಡಿದ್ದಾರೆ.. ಇನ್ನೂ ಇವರ ಪುತ್ರ ವಿನೋದ್ ಪ್ರಭಾಕರ್ ಅವರು ಕನ್ನಡ ಸಿನಿಮಾ ರಂಗದಲ್ಲಿ ನಾಯಕರಾಗಿ ಗುರುತಿಸಿಕೊಂಡಿದ್ದಾರೆ.

ಸುದೀರ್.. ಸುಮಾರು 200 ಕ್ಕು ಹೆಚ್ಚು ಚಿತ್ರಗಳಲ್ಲಿ ನಟಿಸಿರುವ ಇವರು ಕನ್ನಡದ ಖ್ಯಾತ ಖಳನಟರಲ್ಲಿ ಒಬ್ಬರು. ಸಾಂಗ್ಲಿಯಾನ ಚಿತ್ರದ ಕುಮ್ಮಿ‌ಪಾತ್ರ ಇವರಿಗೆ ತುಂಬಾ ಹೆಸರು ತಂದುಕೊಟ್ಟಿತು.. ಇವರಿಬ್ಬರ ಪುತ್ರರಾದ ನಂದ ಕಿಶೋರ್ ಮತ್ತು ತರುಣ್ ಸುದೀರ್ ಕನ್ನಡ ಚಿತ್ರರಂಗದಲ್ಲಿ ನಿರ್ದೇಶಕರಾಗಿ ಖ್ಯಾತಿ ಗಳಿಸಿದ್ದಾರೆ. ಸುಂದರ್ ಕೃಷ್ಣ ಅರಸ್.. ನಟರಾಗಿ ಮತ್ತು ಕಂಟದಾನ ಕಲಾವಿದರಾಗಿ ಕಾರ್ಯನಿರ್ವಹಿಸಿದ ಇವರು.. ಹಲವು ಚಿತ್ರಗಳಲ್ಲಿ ಖಳನಾಯಕ ಮತ್ತು ಪೋಷಕ ಪಾತ್ರಗಳಲ್ಲಿ ಮಿಂಚಿದ್ದಾರೆ. ಶಂಕರ್ ನಾಗ್ ಜೊತೆ ಒಂದಾನೊಂದು ಕಾಲದಲ್ಲಿ ಚಿತ್ರದ ಮೂಲಕ ಇವರು ಬೆಳಕಿಗೆ ಬಂದರು.. ಈ ಚಿತ್ರದ ನಟನೆಗಾಗಿ ರಾಜ್ಯ ಪ್ರಶಸ್ತಿ ಕೂಡ ಪಡೆದರು.

ದಿರೇಂದ್ರ ಗೋಪಾಲ್.. ಕನ್ನಡದ ಖ್ಯಾತ ಹಾಸ್ಯ ನಟರಾಗಿ ಗುರುತಿಸಿಕೊಂಡಿದ್ದ ಇವರು. ತಮ್ಮ ಸಿನಿ ಜೀವನದ ಆರಂಭದಲ್ಲಿ ಹಲವಾರು ಚಿತ್ರಗಳಲ್ಲಿ ಖಳನಟರ ಪಾತ್ರದಲ್ಲಿ ನಟಿಸಿದ್ದಾರೆ. ವಿಷ್ಣುವರ್ಧನ್ ಅವರ ನಾಗರಹಾವು ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಿದ ಇವರು.. ನಂತರ ವಿಷ್ಣು ಸರ್ ಅವರ ಸಾಹಸಸಿಂಹ ಸೇರಿದಂತೆ ಹಲವು ಚಿತ್ರಗಳಲ್ಲಿ ಖಳನಟರಾಗಿ ಮಿಂಚಿದ್ದಾರೆ. ಮುಸುರಿ ಕೃಷ್ಣಮೂರ್ತಿ.. ಇವರು ಮೈಸೂರಿನ ಹತ್ತಿರದ ಹಳ್ಳಿಯೊಂದರಲ್ಲಿ ಜಮೀನ್ದಾರಿ ಕುಟುಂಬದಲ್ಲಿ ಜನಿಸಿದರು. ಅಭಿನಯದತ್ತ ಆಸಕ್ತಿ ಬೆಳೆಸಿಕೊಂಡ ಇವರು ಹಾಸ್ಯ ನಟರಾಗಿ ಹಾಗು ಖಳನಟರಾಗಿ ಕನ್ನಡ ಸಿನಿಮಾ ರಂಗದಲ್ಲಿ ಮಿಂಚಿದ್ದಾರೆ.

ದೊಡ್ಡಣ್ಣ ಸುಮಾರು 800 ಕ್ಕು ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. ಮೊದಲಿಗೆ ಖಳನಟರಾಗಿ ಗುರುತಿಸಿಕೊಂಡ ಇವರು ನಂತರದಲ್ಲಿ ಹಾಸ್ಯ ಹಾಗು ಪೋಷಕ ನಟರಾದರು.. ಮುಖ್ಯಮಂತ್ರಿ ಚಂದ್ರು. ಇವರು ಕೂಡ ಖಳನಟರಾಗಿ ಹಾಸ್ಯ ನಟರಾಗಿ, ಪೋಷಕ ನಟರಾಗಿ ಕನ್ನಡದ ಹಲಾವರು ಚಿತ್ರಗಳಲ್ಲಿ ಮಿಂಚಿದ್ದಾರೆ. ಕನ್ನಡ ಬಾಷೆಯ ಮೇಲೆ ಅಪಾರ ಗೌರವ ಹಾಗು ಪ್ರೀತಿ ಬೆಳೆಸಿಕೊಂಡಿರುವ ಇವರು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮುಖ್ಯಸ್ಥರಾಗಿದ್ದಾರೆ.. ಸ್ನೇಹಿತರೆ ಈ ಖಳನಟರಲ್ಲಿ ನಿಮ್ಮ ಪೇವರೇಟ್ ನಟ ಯಾರು..