Advertisements

ರೈತನ ಮಿತ್ರನಾರು ಎಂಬ ಪ್ರಶ್ನೆಗೆ ಕೊಟ್ಟ ಉತ್ತರದ ಆಯ್ಕೆಗಳನ್ನ ನೋಡಿದ್ರೆ ನೀವು ದಂಗಾಗ್ತೀರಾ.! ನಿಮ್ಮ ಆಯ್ಕೆಯ ಉತ್ತರ ಯಾವುದು ಅಂತ ಥಟ್ಟನೆ ಹೇಳಿ ?

News

ನಮಸ್ತೇ ಸ್ನೇಹಿತರೇ, ನಾವು ಪ್ರಾಥಮಿಕ ಅಥ್ವಾ ಪ್ರೌಢ ಶಾಲೆಯ ಹಂತದಲ್ಲಿ ಓದುವಾಗ ಹಲವಾರು ಪರೀಕ್ಷೆಗಳನ್ನ ಎದುರಿಸುತ್ತೇವೆ. ಇನ್ನು ಸಾಮಾನ್ಯವಾಗಿ ಪರೀಕ್ಷೆಗಳಲ್ಲಿ ಕೇಳಲಾಗುವ ಪ್ರಶ್ನೆಗಳಿಗೆ ಉತ್ತರದ ನಾಲ್ಕು ಆಯ್ಕೆಗಳನ್ನ ಕೊಡಲಾಗಿರುತ್ತದೆ. ಆದರೆ, ಹೀಗೆ ಕೆಲವೊಂದು ಸಾರಿ ಪ್ರಶ್ನೆ ಪತ್ರಿಕೆಗಳಲ್ಲಿ ಉತ್ತರವಾಗಿ ಕೊಡುವ ಆಯ್ಕೆಗಳು ವಿಚಿತ್ರವಾಗಿರುತ್ತವೆ. ಅದೇ ರೀತಿ ರೈತನ ಮಿತ್ರನಾರು ಎಂಬ ಪ್ರಶ್ನೆಯೊಂದಕ್ಕೆ ಕೊಟ್ಟಿರುವ ಆಯ್ಕೆಯ ಉತ್ತರಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಹೌದು, ಸಾಮಾನ್ಯವಾಗಿ ರೈತನ ಮಿತ್ರನಾರು ಎಂಬ ವಿಜ್ಞಾನದ ಪ್ರಶ್ನೆಗೆ ಎರೆಹುಳ ಸೇರಿದಂತೆ ಬೇರೆ ಬೇರೆ ರೀತಿಯ ಆಯ್ಕೆಗಳನ್ನ ಕೊಡಲಾಗಿರುತ್ತದೆ.

Advertisements

ಆದರೆ ಕಳೆದ ವರ್ಷ ತಾನೇ ನಡೆದ ಬೆಂಗಳೂರಿನ ಶಾಲೆಯೊಂದರ ಎಂಟನೇ ತರಗತಿಯ ವಾರ್ಷಿಕ ಪರೀಕ್ಷೆಯಲ್ಲಿ ರೈತನ ಮಿತ್ರನಾರು ಎಂಬ ಪ್ರಶ್ನೆಯನ್ನ ಕೇಳಲಾಗಿದ್ದು ಅದಕ್ಕೆ ಉತ್ತರವಾಗಿ ಕೊಟ್ಟಿರುವ ಆಯ್ಕೆಗಳಂತೂ ನಗು ತರಿಸುವಂತಿದ್ದು ಸೋಷಿಯಲ್ ಮೀಡಿಯಾಗಳಲ್ಲಿ ಸಖತ್ ವೈರಲ್ ಆಗಿದೆ. ಆ ಪ್ರಶ್ನೆ ಪತ್ರಿಕೆಯಲ್ಲಿ ರೈತನ ಮಿತ್ರನಾರು ಎಂದು ಕೇಳಿದ ಪ್ರಶ್ನೆಗೆ ಈ ರೀತಿಯಾಗಿ ಆಯ್ಕೆಗಳನ್ನ ಕೊಡಲಾಗುತ್ತು. HD. ಕುಮಾರಸ್ವಾಮಿ.? ಎರೆಹುಳು.? BS. ಯಡಿಯೂರಪ್ಪ.?

ಇನ್ನು ರೈತನ ಮಿತ್ರ ಯಾರು ಎಂಬ ಪ್ರಶ್ನೆಗೆ ಎರೆಹುಳ ಉತ್ತರದ ಆಯ್ಕೆಯಾಗಿ ಕೊಟ್ಟಿದ್ದೇನೋ ಸರಿ..ಆದರೆ ರಾಜಕಾರಣಿಗಳಾದ ಯಡಿಯೂರಪ್ಪ ಮತ್ತು ಕುಮಾರಸ್ವಾಮಿ ಅವರ ಹೆಸರುಗಳನ್ನ ಉತ್ತರದ ಆಯ್ಕೆಗಳಾಗಿ ಕೊಟ್ಟಿದ್ದೇಕೆ ಎಂಬುದೇ ಜಾಲತಾಣಗಳಲ್ಲಿ ಪ್ರಶ್ನೆ ಮೂಡುವಂತೆ ಮಾಡಿತ್ತು. ಇನ್ನು ಕಳೆದ ವರ್ಷ ಎಂಟನೇ ತರಗತಿಯ ಪರೀಕ್ಷೆಯಲ್ಲಿ ನಡೆದ ಈ ಪ್ರಮಾದಕ್ಕೆ ಸಾರ್ವಜನಿಕ ಶಿಕ್ಷಣ ಇಲಾಖೆ ಕೊಟ್ಟಿದ್ದ ಉತ್ತರ ಏನೆಂದರೆ, ಆಯಾ ಶಾಲೆಗಳಲ್ಲೇ ವಾರ್ಷಿಕ ಪರೀಕ್ಷೆಯ ಪ್ರಶ್ನೆ ಪತ್ರಿಕೆಗಳನ್ನಪ್ರಿಪೇರ್ ಮಾಡಲು ಅವಾಕಾಶ ನೀಡಿದ್ದೆ ಇದಕ್ಕೆ ಕಾರಣ ಎಂದು. ಏನೇ ಆಗಲಿ ಎಂಟನೇ ತರಗತಿಯ ಪರೀಕ್ಷೆಯಲ್ಲಿ ಹೀಗೆ ರೈತನ ಮಿತ್ರನಿಗೆ ರಾಜಕಾರಣಿಗಳನ್ನ ಹೋಲಿಸಿ ಆಯ್ಕೆಗಳನ್ನ ಕೊಟ್ಟದ್ದು ಮಿಡಿಯಾಗಲ್ಲಲಿ ಹೆಚ್ಚು ಚರ್ಚೆಗೆ ಬರಲು ಕಾರಣವಾಗಿತ್ತು.