Advertisements

ನಟ ರಘುವೀರ್ ದುರಂತ ಅಂ’ತ್ಯಕ್ಕೆ ಆ ನಟಿಯೇ ಕಾರಣನಾ ! ಶ್ರೀಮಂತನಾಗಿದ್ದ ನಟ ಬೀದಿಗೆ ಬಂದಿದ್ದೇಗೆ ?

Cinema

ನಮಸ್ತೇ ಸ್ನೇಹಿತರೇ, ಬೆರಳೆಣಿಕೆಯಷ್ಟು ಚಿತ್ರಗಳಲ್ಲಿ ನಟಿಸಿದ್ರೂ ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿಹೋದ ಹಲವರಲ್ಲಿ ನಟ ರಘುವೀರ್ ಕೂಡ ಒಬ್ಬರು. ಇವರ ತಂದೆ ಮುನಿಯಲ್ಲಪ್ಪ ಬಿಲ್ಡಿಂಗ್ ಕಂಟ್ರಾಕ್ಟರ್ ಆಗಿದ್ದರು. ಇನ್ನು ಬಣ್ಣದ ಲೋಕಕ್ಕೆ ಎಂಟ್ರಿ ಕೊಡುವ ಮುಂಚೆ ತಾನು ತಂದೆಯವರ ಹಾದಿಯಲ್ಲೇ ನಡೆಯಬೇಕೆಂದು ನಟ ರಘುವೀರ್ ಅವರು ಸಿವಿಲ್ ಇಂಜಿನಿಯರಿಂಗ್ ಓದುತ್ತಿದ್ದರು. ಇನ್ನು ರಘುವೀರ್ ಅವರ ತಂದೆಗೆ ರೆಬೆಲ್ ಸ್ಟಾರ್ ಅಂಬರೀಷ್ ರವರ ಮನೆ ಕಟ್ಟುವ ಕಾಂಟ್ರಾಕ್ಟ್ ಸಿಗುತ್ತದೆ. ಇನ್ನು ರಘುವೀರ್ ಅವರು ಸಿವಿಲ್ ಇಂಜಿನಿಯರಿಂಗ್ ಓದುತ್ತಿದ್ದ ಕಾರಣ ಪ್ರಾಕ್ಟಿಕಲ್ ಅನುಭವ ಸಿಗುತ್ತದೆ ಎನ್ನುವ ಕಾರಣಕ್ಕೆ ಅಲ್ಲಿಗೆ ಹೋಗುತ್ತಿರುತ್ತಾರೆ. ಇದೆ ವೇಳೆ ರಘುವೀರ್ ಗೆ ಅಂಬರೀಷ್ ಅವರ ಪರಿಚಯವಾಗುತ್ತದೆ.

ಇನ್ನು ಆಗಿನ ಕಾಲಕ್ಕೇ ಮೇರು ನಟರಾಗಿದ್ದ ಅಂಬರೀಷ್ ರವರ ನಟನೆ, ಅವರ ಗತ್ತು, ಎಲ್ಲವನ್ನು ನೋಡಿದ ರಘುವೀರ್ ಅವರಿಗೆ ತಾನು ಕೂಡ ಕನ್ನಡ ಚಿತ್ರರಂಗದಲ್ಲಿ ನಾಯಕ ನಟನಾಗಿ ಮಿಂಚಬೇಕೆಂಬ ಆಸೆ ಅವರ ಮನಸ್ಸಿನಲ್ಲಿ ಕವಲೊಡೆಯುತ್ತದೆ. ತನ್ನ ಮನದಾಸೆಯನ್ನ ತಂದೆಯ ಬಳಿ ಹೇಳಿಕೊಳ್ಳುತ್ತಾರೆ. ತನ್ನ ಮಗನ ಮೇಲೆ ಅತಿಯಾದ ಪ್ರೀತಿ ಹೊಂದಿದ್ದ ಮುನಿಯಲ್ಲಪ್ಪ ಅವರು ಮಗನ ಆಸೆಗೆ ಒಪ್ಪುತ್ತಾರೆ..ಒಂದು ಕಂಡೀಷನ್ ಜೊತೆಗೆ. ಹೌದು, ನೀನು ಓದು ಅಥ್ವಾ ಸಿನಿಮಾ ಎರಡರಲ್ಲಿ ಒಂದನ್ನು ಮಾತ್ರ ಆಯ್ಕೆ ಮಾಡಿಕೋ ಎನ್ನುತ್ತಾರೆ. ಬಣ್ಣದ ಲೋಕದಲ್ಲೇ ಮಿಂಚಲೇಬೇಕೆಂಬ ಆಸೆ ಅದಾಗಲೇ ರಘುವೀರ್ ಅವರ ಮನಸ್ಸಿನಲ್ಲಿ ಹುಟ್ಟಿದ್ದ ಕಾರಣ ಓದನ್ನ ಬಿಟ್ಟು ಸಿನಿಮಾ ರಂಗದ ಕಡೆ ಹೆಜ್ಜೆ ಇಡುತ್ತಾರೆ.

Advertisements

ಇನ್ನು ಎಂಟು ಜನ ಮಕ್ಕಳ ತಂದೆಯಾಗಿದ್ದ ಮುನಿಯಲ್ಲಪ್ಪ ಅವರಿಗೆ ಆರನೆಯ ಪುತ್ರನಾದ ರಘುವೀರ್ ಮೇಲೆ ಇನ್ನಿಲ್ಲಿದ ಪ್ರೀತಿ. ಹಾಗಾಗಿಯೇ ತನ್ನ ಮಗ ಸಿನಿಮಾದಲ್ಲಿ ನಾಯಕ ನಟನಾಗಿ ಮಿಂಚುವುದನ್ನ ನೋಡಬೇಕೆಂಬ ಆಸೆಯಿಂದ ಒಬ್ಬ ನಟನಾಗಿ ಮಿಂಚಲು ಇರಬೇಕಾದ ಎಲ್ಲಾ ವಿದ್ಯಗಳನ್ನ ಕಲಿತು ಬರಲು ಚೆನ್ನೈಗೆ ಕಳುಹಿಸುತ್ತಾರೆ. ಚೆನ್ನೈನಿಂದ ಬಂದ ಬಳಿಕ ರಘುವೀರ್ ಮೊಟ್ಟ ಮೊದಲು ನಟಿಸಿದ ಚಿತ್ರವೇ ಅಜಯ್ ವಿಜಯ್ ಎಂದು. ಈ ಚಿತ್ರಕ್ಕೆ ರಘುವೀರ್ ಅವರ ತಂದೆಯೇ ೩೦ ಲಕ್ಷಕ್ಕಿಂತ ಹೆಚ್ಚು ಬಂಡವಾಳ ಹಾಕುತ್ತಾರೆ. ಇನ್ನು ಒಂದು ವಿಷಯ ಏನೆಂದರೆ ರಘುವೀರ್ ಅವರ ಮೊದಲ ಹೆಸರು ದಿನೇಶ್ ಎಂದು. ಅದಾಗಲೇ ಕನ್ನಡ ಚಿತ್ರರಂಗದಲ್ಲಿ ದಿನೇಶ್ ಹೆಸರಿನ ಹಾಸ್ಯ ನಟ ಇದ್ದ ಕಾರಣ ಆ ಚಿತ್ರದ ನಿರ್ದೇಶಕರು ದಿನೇಶ್ ಹೆಸರು ಬೇಡ ಎಂದಾಗ ತಂದೆ ಮುನಿಯಲ್ಲಪ್ಪ ಅವರೇ ತನ್ನ ಮಗನಿಗೆ ರಘು ವೀರ್ ಎಂಬ ಹೆಸರಿನಿಂದ ಮರುನಾಮಕರಣ ಮಾಡುತ್ತಾರೆ.

ಆದರೆ ಅದೇಕೋ ನಟ ರಘುವೀರ್ ಅವರ ಮೊದಲ ಚಿತ್ರ ತುಂಬಾ ನಿರಾಸೆ ಮೂಡಿಸುತ್ತದೆ. ಇದರ ಬಳಿಕ ಬಂದ ಚಿತ್ರವೇ ಕನ್ನಡ ಚಿತ್ರರಂಗದ ಎವರ್ ಗ್ರೀನ್ ಚಿತ್ರಗಳಲ್ಲಿ ಒಂದಾದ ಚೈತ್ರದ ಪ್ರೇಮಾಂಜಲಿ. ಇನ್ನು ಅಲ್ಲಿಯವರೆಗೂ ಅಸಿಸ್ಟೆಂಟ್ ನಿರ್ದೇಶಕರಾಗಿದ್ದ ಎಸ್.ನಾರಾಯಣರವರು ಈ ಚಿತ್ರದ ಮೂಲಕ ಫುಲ್ ಟೈಮ್ ನಿರ್ದೇಶಕರಾಗಿ ಹೊರಹೊಮ್ಮುತ್ತಾರೆ. ಆದರೆ ಈ ಚಿತ್ರವನ್ನ ಖರೀದಿ ಮಾಡಲು ವಿತರಕರೇ ಮುಂದೆ ಬರಲಿಲ್ಲ. ಇದಕ್ಕೆ ವಿತರಕರು ಕೊಟ್ಟ ಕಾರಣ ಈ ಚಿತ್ರದ ಮೈನೆಸ್ ಪಾಯಿಂಟ್ ಸ್ವತಃ ಹೀರೊ ರಘುವೀರ್ ಎಂದು. ಅವರ ಮುಖ ನೋಡಿ ಅವರನ್ನ ಗೇಲಿ ಮಾಡುವುದರ ಜೊತೆಗೆ ಅವಮಾನ ಮಾಡುತ್ತಾರೆ. ಬಳಿಕ ಮುಂದೆ ಬಂದ ನಿರ್ಮಾಪಕ ರಾಮು ಅವರು ಚಿತ್ರವನ್ನ ಬಿಡುಗಡೆ ಮಾಡಿದ್ರು. ಆ ಬಳಿಕ ನಡೆದದ್ದೇ ಇತಿಹಾಸ. ಚಿತ್ರ ಯಾರೂ ನಿರೀಕ್ಷೆ ಮಾಡದ ರೀತಿಯಲ್ಲಿ ಸೂಪರ್ ಹಿಟ್ ಆಯಿತು. ಆಗ ನಟ ರಘುವೀರ್ ಅವರನ್ನ ಅವಮಾನ ಮಾಡಿದವರೇ ಅವರ ಮನೆ ಮುಂದೆ ಡೇಟ್ಸ್ ಆಗಿ ಕಾಯುವಂತಾಯಿತು.

ಈ ಚಿತ್ರದ ಸಕ್ಸಸ್ ಬಳಿಕ ಬಂದ ಮತ್ತೊಂದು ಹಿಟ್ ಚಿತ್ರವೇ ಶೃಂಗಾರ ಕಾವ್ಯ. ಈ ಚಿತ್ರದ ನಾಯಕಿ ನಟಿಯಾಗಿ ಅಭಿನಯಿಸಲು ಚೆನ್ನೈನಿಂದ ನಟಿ ಸಿಂಧು ಬಂದರು. ಇನ್ನು ಈ ಚಿತ್ರ ಕೂಡ ಕನ್ನಡ ಚಿತ್ರರಂಗದಲ್ಲಿ ಸೂಪರ್ ಹಿಟ್ ಚಿತ್ರವಾಗಿ ಹೆಸರು ಬರೆಯಿತು. ಇದರ ಜೊತೆಗೆ ಅದಾಗಲೇ ರಘುವೀರ್ ಮತ್ತು ನಟಿ ಸಿಂಧು ಪ್ರೀತಿಯಲ್ಲಿ ಬಿದ್ದಿದ್ದರು. ಪ್ರೀತಿ ಮದುವೆವರೆಗೂ ಹೋಯಿತು. ಆದರೆ ರಘುವೀರ್ ಅವರ ತಂದೆಗೆ ಈ ಮದುವೆ ಇಷ್ಟವಿಲ್ಲದೆ, ತಂದೆ ಬೇಡ ಎಂದರೂ ಅವರ ಮಾತಿಗೆ ಬೆಲೆ ಕೊಡದ ರಘುವೀರ್ ಅವರು ಸಿಂದು ಅವರ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಇದರಿಂದ ಮನಸ್ತಾಪ ಉಂಟಾಗಿ ತಂದೆಯಿಂದ ದೂರಾದರು ನಟ ರಘುವೀರ್. ಆದರೆ ಮನುಷ್ಯ ಸಂಕಷ್ಟದಲ್ಲಿದ್ದಾಗಲೇ ಕಷ್ಟ ಅವಮಾನಗಳು ಜಾಸ್ತಿ ಎನ್ನುವಂತೆ ಇದೆ ವೇಳೆ ನಟ ರಘುವೀರ್ ಮನೆ ಬಿಟ್ಟು ಓಡಿಹೋಗಿದ್ದಾರೆ, ಅವರ ಬಳಿ ಒಂದು ಪೈಸೆ ಕಾಸು ಕೂಡ ಇಲ್ಲ. ಅವರ ತಂದೆ ಮನೆಯಿಂದ ಓಡಿಸಿದ್ದಾರೆ ಎಂಬ ಮಾತುಗಳು ಕೇಳಿಬಂದು ಇಲ್ಲ ಸಲ್ಲದ ಟೀಕೆಗಳಿಗೆ ಗುರಿಯಾದ್ರು ನಟ ರಘುವೀರ್.

ಹಿಟ್ ಚಿತ್ರಗಳನ್ನ ಕೊಟ್ಟಿದ್ದ ರಘುವೀರ್ ಅವರಿಗೆ ಇದೇ ಸಮಯದಲ್ಲಿ ಯಾವುದೇ ಅವಕಾಶಗಳು ಸಿಗಲಿಲ್ಲ. ಇವರನ್ನ ಕೇಳುವವರೇ ಇಲ್ಲವಂತಾಯಿತು. ಹಣಕಾಸಿನ ಪರಿಸ್ಥಿತಿ ಕೂಡ ಎದುರಿಸಬೇಕಾಯಿತು. ಪೆಟ್ಟಾದ ಕಾಲಿಗೆ ಪೆಟ್ಟು ಬೀಳುವುದು ಎಂಬಂತೆ ನಟಿ ಸಿಂಧು ಅವರು ಚೆನ್ನೈನ ಸುನಾಮಿ ಸಂತ್ರಸ್ತರಿಗೆ ನೆರವು ನೀಡಲು ಹೋಗಿದ್ದೆ ಅವರ ಜೀವನಕ್ಕೆ ತೊಡಕಾಗಿ ಏರ್ಪಟ್ಟಿತ್ತು. ಈ ವೇಳೆ ಸುಂಟರಗಾಳಿಗೆ ಸಿಲುಕಿ ಕೊಂಡಿದ್ದ ಸಿಂಧು ಅವರ ಮೂಗಿನ ಒಳಗೆ ಧೂಳು ಹೋಗಿತ್ತು. ಅವರು ಮೊದಲೇ ಉಸಿರಾಟದ ತೊಂದರೆ ಅನುಭವಿಸುತ್ತಿದ್ದ ಕಾರಣ ಕೋ’ಮಾ’ಗೆ ಜಾರಿದ ಸಿಂಧು ಬಳಿಕ ಎದ್ದೇಳಲೇ ಇಲ್ಲ. ಅವರು ೨೦೦೩ರಲ್ಲಿ ಚಿರನಿದ್ರೆಗೆ ಜಾರಿಬಿಟ್ಟರು. ಇನ್ನು ಅದಾಗಲೇ ನಟ ರಘುವೀರ್ ತಮ್ಮ ಜೀವನದಲ್ಲಿ ಅ’ವಮಾನ ಆ’ಘಾಗಳನ್ನ ಎದುರಿಸಿದ್ದರು. ಆದರೆ ತನ್ನ ಪತ್ನಿಯನ್ನ ಕಳೆದುಕೊಂಡ ಮೇಲಂತೂ ರಘುವೀರ್ ಸಂಪೂರ್ಣವಾಗಿ ಖಿ’ನ್ನತೆಗೆ ಒಳಗಾಗಿಬಿಟ್ಟರು.

ಬಳಿಕ ಬೆಂಗಳೂರು,ಚೆನ್ನೈ ಬೇಡವೆಂದು ಮುಂಬೈಗೆ ಹೋದ್ರು. ಆದರೆ ಅಲ್ಲಿ ಬೀದಿ ಬೀದಿ ತಿರುಗಾಡುತ್ತಿದ್ದ ತನ್ನ ಮಗನ ಅವಸ್ಥೆಯ ಬಗ್ಗೆ ತಿಳಿದ ಅವರ ತಂದೆ ಎಲ್ಲಾ ದ್ವೇ’ಷವನ್ನ ಮರೆತು ಅವರನ್ನ ಮುಂಬೈನಿಂದ ಕರೆದುಕೊಂಡು ಬಂದು ೨೦೦೪ರಲ್ಲಿ ಮತ್ತೊಂದು ಮದುವೆ ಮಾಡಿದ್ರು. ಇನ್ನು ಇದಕ್ಕೂ ಮೊದಲೇ ರಘುವೀರ್ ಸಿಂಧು ದಂಪತಿಗೆ ೧೯೯೬ ಜುಲೈನಲ್ಲಿ ಹೆಣ್ಣುಮಗು ಜನಿಸಿತ್ತು. ಇನ್ನು ಎರಡನೆಯ ಮದುವೆಯಾಗಿ ತನ್ನ ಅತ್ತೆಯ ಮಗಳನ್ನೇ ವರಿಸಿದ್ದರು ರಘುವೀರ್. ಎರಡನೇ ಮದುವೆಯ ಬಳಿಕ ಹಲವಾರು ಚಿತ್ರಗಳಲ್ಲಿ ನಟ ರಘುವೀರ್ ನಟಿಸಿದ್ರು ಕೂಡ ಕೆಲವು ಚಿತ್ರಗಳಿಗೆ ಬಿಡುಗಡೆ ಭಾಗ್ಯವೇ ಕಾಣಲಿಲ್ಲ. ಮೊದಲೇ ಸಿಂಧು ಅವರ ಅಗಲಿಕೆಯಿಂದ ನೊಂದಿದ್ದ ನಟ ರಘುವೀರ್ ಅವರಿಗೆ ೨೦೧೪ ಮೇ ೮ರಂದು ಎದೆನೋವು ಕಾ’ಣಿಸಿಕೊಂಡಿದ್ದು ಆಸ್ಪತ್ರೆಗೆ ದಾಖಲಾಗುತ್ತಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದ ಕಾರಣ ಇಹಲೋಕ ತ್ಯಜಿಸಿದ್ರು ನಟ ರಘುವೀರ್. ಆಗ ಅವರಿಗೆ ಕೇವಲ 46 ವರ್ಷವಾಗಿತ್ತು. ಆದರೆ ಹಿಟ್ ಚಿತ್ರಗಳನ್ನ ಕೊಟ್ಟ ನಟನ ಕೊನೆಯ ದಿನಗಳು ಈ ರೀತಿ ಅಂ’ತ್ಯವಾಗಿದ್ದು ಮಾತ್ರ ದು’ರಂತವೇ ಸರಿ.