Advertisements

500 ಮನೆಗಳಿಗೆ ಆ್ಯಂಟೆನಾ ಕಟ್ಟುವ ಕೆಲಸ ಮಾಡಿದ್ದೆ..ನನ್ನ ಬ್ಯಾಂಕ್ ಬ್ಯಾಲೆನ್ಸ್ ಕೇಳಿದ್ರೆ !

Cinema

ನಮಸ್ತೇ ಸ್ನೇಹಿತರೇ, ಕನ್ನಡದ ಹಾಸ್ಯ ಕಲಾವಿದರಲ್ಲಿ ನಟ ರವಿಶಂಕರ್ ಗೌಡ ಕೂಡ ಒಬ್ಬರು. ಸಿಲ್ಲಿ ಲಲ್ಲಿ ಸೀರಿಯಲ್ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟಿದ್ದ ರವಿಶಂಕರ್ ಅವರು ಡಾ.ವಿಠ್ಠಲ್ ರಾವ್ ಪಾತ್ರದ ಮೂಲಕ ಕರ್ನಾಟಕದ ಮನೆಮಾತಾದವರು. ಇನ್ನು ಇತ್ತೀಚೆಗಷ್ಟೇ ಅವರು ತಮ್ಮ ಜೀವನದಲ್ಲಿ ತಾವು ಎದುರಿಸಿದ ಘಟನೆಗಳನ್ನು ಬಗ್ಗೆ ಹೇಳಿಕೊಂಡು ಭಾವುಕರಾಗಿದ್ದಾರೆ. ನಮ್ಮ ಮನೆಯಲ್ಲಿ ನೊನೊಬ್ಬನೇ ಮಗನಾಗಿದ್ದು ನಂಗೆ ಇಬ್ಬರು ತಂಗಿಯರು ಇದ್ದಾರೆ. ಇನ್ನು ನಮ್ಮ ತಂದೆ ಒಬ್ಬರೇ ದುಡಿದು ನಮ್ಮನ್ನೆಲ್ಲಾ ಸಾಕುತ್ತಿದ್ದರು. ಇನ್ನು ಶಾಲೆಗೆ ಹೋಗುತ್ತಿದ್ದ ಸಮಯದಲ್ಲಿ ನನ್ನಿಂದ ಮನೆಗೆ ಸಹಾಯವಾಗಲಿ ಎಂದು ಬೆಳಿಗ್ಗೆಯೇ ಎದ್ದುಮನೆ ಮನೆಗೆ ಪೇಪರ್, ಹಾಲು ಹಾಕುವ ಕೆಲಸ ಮಾಡುತ್ತಿದ್ದೆ.

Advertisements

ಇನ್ನು ಇದರ ಜೊತೆಗೆ ರಜೆ ಇದ್ದ ಸಮಯದಲ್ಲಿ ಟಿವಿ ಅಂಗಡಿಗಳಲ್ಲಿ ಕೆಲಸ ಮಾಡುತ್ತಿದ್ದ ರವಿಶಂಕರ್ ಗೌಡ ಅವರು ಮಂಡ್ಯದಲ್ಲಿ ಮನೆ ಮನೆಗೆ ಆ್ಯಂಟೆನಾ  ಕೂಡ ಮಾಡಿದ್ದಾರಂತೆ. ಇನ್ನು ಮಂಡ್ಯ ಬಿಟ್ಟು ಬೆಂಗಳೂರಿಗೆ ಬಂದಾಗ ಪಾತ್ರೆ ಅಂಗಡಿಯಲ್ಲಿ ಕೂಡ ಕೆಲಸ ಮಾಡಿದ್ದೆ ಎಂದು ಅವರು ಹೇಳಿದ್ದಾರೆ. ಇನ್ನು ಇದೆಲ್ಲವನ್ನು ನಾನು ಯಾವುದೇ ಅನುಕಂಪವನ್ನ ಪಡೆದುಕೊಳ್ಳಲು ಹೇಳುತ್ತಿಲ್ಲ. ನಿಯತ್ತಾಗಿ ಯಾವುದೇ ಕೆಲಸ ಮಾಡುವುದು ಅವಮಾನವೇ ಅಲ್ಲ ಎಂದು ನಟ ರವಿಶಂಕರ್ ಹೇಳಿದ್ದಾರೆ. ಇನ್ನು ಮಂಡ್ಯ ಬಿಟ್ಟು ಬೆಂಗಳೂರಿಗೆ ಬಂದ ನಾನು ನನ್ನಲ್ಲಿರುವ ಅವಕಾಶ ಸಿಗುತ್ತದೆಯೇ ಎಂದು ಯೋಚಿಸಿ ಆರ್ಕೆಸ್ಟ್ರಾ ಸೇರಿಕೊಂಡ ನಾನು ಏಳೆಂಟು ವರ್ಷ ಆರ್ಕೆಸ್ಟ್ರಾಗಳಲ್ಲಿ ಹಾಡುವ ಕೆಲಸ ಮಾಡಿದ್ದೇನೆ ಎಂದು ರವಿಶಂಕರ್ ಹೇಳಿದ್ದಾರೆ.

ಇನ್ನು ಆರ್ಕೆಸ್ಟ್ರಾದಲ್ಲಿ ಹಾಡಿ ಅದರಿಂದ ಬಂದ ಹಣ ಹಾಗೂ ಸಾಲದ ಹಣ ಸೇರಿಸಿ ನನ್ನ ಇಬ್ಬರು ಸಹೋದರಿಯರ ಮದುವೆ ಕೂಡ ಮಾಡಿದ್ದೇನೆ. ಇನ್ನು ನನ್ನ ತಂದೆಗೆ ಕ್ಯಾನ್ಸರ್ ಕೂಡ ಆಗಿತ್ತು..ಇನ್ನು ಎರಡು ವರ್ಷಗಳ ಹಿಂದಷ್ಟೇ ನನ್ನ ಸಹೋದರಿಯರ ಮದುವೆಗೆ ಮಾಡಿದ ಸಾಲದ ಹಣವನ್ನ ತೀರಿಸಿದ್ದೇನೆ. ನಾನೇನೋ ಕೋಟು ಹಾಕಿಕೊಂಡು ಜಿಮ್ ಜಾಮ್ ಆಗಿ ಬಂದಿದ್ದೇನೆ ಅಂತ ನೀವಂದುಕೊಂಡಿದ್ದೀರಾ..ಆದರೆ ನನ್ನ ಬ್ಯಾಂಕ್ ನ ಬ್ಯಾಲೆನ್ಸ್ ನೋಡಿದ್ರೆ ನಿಮಗೆ ನಗು ಬರ್ದೇ ಇರೋದಿಲ್ಲ..ಹೀಗೆ ನಟ ರವಿಶಂಕರ್ ಅವರು ತಮ್ಮ ಬಾಲ್ಯ ಜೀವನದಿಂದ ಹಿಡಿದು ಬೆಂಗಳೂರಿಗೆ ಬಂದ ದಿನಗಳಲ್ಲಿ ಎದುರಿಸಿದ ಕಷ್ಟಗಳ ಬಗ್ಗೆ ಭಾವುಕರಾಗಿ ಹೇಳಿಕೊಂಡಿದ್ದಾರೆ.