Advertisements

ತನ್ನ ತಾಯಿಗೆ ವಯಸ್ಸಾಯಿತು ಎಂದು ಕಾಡಿಗೆ ಬಿಟ್ಟು ಬರಲು ಹೋದ ಮಗ ! ಆದರೆ ಮುಂದೆ ಆಗಿದ್ದೇನು ನೋಡಿ..

Kannada Mahiti

ನಮಸ್ತೇ ಸ್ನೇಹಿತರೇ, ತಾಯಿಯ ಮಮತೆಗೆ ಸರಿಸಾಟಿಯೇ ಇಲ್ಲ. ಒಂಬತ್ತು ತಿಂಗಳುಗಳ ಕಾಲ ಮಕ್ಕಳನ್ನು ತನ್ನ ಗರ್ಭದಲ್ಲಿ ಕಾಪಾಡುವ ತಾಯಿ ಅವರು ಬೆಳೆದು ದೊಡ್ಡವರಾಗುವ ತನಕ ತನ್ನ ಮಕ್ಕಳಿಗೆ ಕಿಂಚಿತ್ತೂ ತೊಂದರೆ ಆಗದಂತೆ ಬೆಳೆಸುತ್ತಾಳೆ. ಆದರೆ ದೊಡ್ಡರಾಗುವ ಎಷ್ಟೋ ಮಕ್ಕಳು ವಯಸ್ಸಾದ ತಂದೆ ತಾಯಿಗಳ ಮಮತೆ ಪ್ರೀತಿಯನ್ನ ಮರೆತು ಅವರನ್ನ ಸಾಕುವುದೇ ಭಾರವೆಂದು ತಿಳಿದು ಅವರನ್ನ ಮನೆಯಿಂದ ಹೊರಕ್ಕೆ ಹಾಕುವ ಕೆಲಸಗಳನ್ನ ಮಾಡುತ್ತಿದ್ದಾರೆ. ಹೌದು, ಇದೇ ರೀತಿ ಮಗನೊಬ್ಬ ತನ್ನ ತಾಯಿಗೆ ವಯಸ್ಸಾಗಿದೆ ಎಂದು ಕಾಡಿಗೆ ಬಿಡಲು ಹೋದವ ಕೊನೆಗೆ ಏನಾದ ಗೊತ್ತಾ ? ಹೌದು, ಬಹಳ ಹಿಂದೆ ಜಪಾನ್ ದೇಶದಲ್ಲಿ ಅಲ್ಲಿನ ಜನ ಪದ್ದತಿಯೊಂದನ್ನ ಅನುಸರಿಸುತ್ತಿದ್ದರು. ಆ ಪದ್ದತಿಯ ಬಗ್ಗೆ ನೀವು ಕೇಳಿದ್ರೆ ನಿಮಗೂ ಕಣ್ಣಲ್ಲಿ ನೀರು ಬರುತ್ತೆ..

Advertisements

ಹೌದು, ತಮ್ಮ ಕೆಲಸಗಳನ್ನು ಮಾಡಿಕೊಳ್ಳಲಾಗದವರು ವಯಸ್ಸಾದ ತಂದೆ ತಾಯಿಗಳನ್ನ ದೂರದ ಕಾಡಿನಲ್ಲಿ ಬೆಟ್ಟ ಗುಟ್ಟಗಳ ನಡುವೆ ಬಿಟ್ಟು ಬರುತ್ತಿದ್ದರಂತೆ. ಇನ್ನು ತಮ್ಮ ಕೆಲಸಗಳನ್ನೂ ಮಾಡಿಕೊಳ್ಳಲಾಗದವರು ಊಟಕ್ಕಾಗಿ ಏನು ಮಾಡುತ್ತಾರೆ ಹೇಳಿ ಪಾಪ. ಹಾಗಾಗಿ ವಯಸ್ಸಾದ ಅಜ್ಜ ಅಜ್ಜಿಯರು ಊಟ ಇಲ್ಲದೆ ಹಸಿವಿನಿಂದಲೇ ಪ್ರಾ’ಣ ತ್ಯಜಿಸುತ್ತಿದ್ದರಂತೆ. ಇದು ಎಂತಹ ಕಲ್ಲು ಹೃದಯದವರಿಗೆ ಕಣ್ಣೀರು ತರುವ ವಿಷಯ ಆಲ್ವಾ ಸ್ನೇಹಿತರೇ.. ಇದೆ ರೀತಿ ಮಗನೊಬ್ಬ ತನ್ನ ವಯಸ್ಸಾದ ಅಮ್ಮನನ್ನ ದೂರದ ಕಾಡಿನ ಪ್ರದೇಶದಲ್ಲಿ ಬಿಟ್ಟು ಬರಲು ನಿರ್ಧಾರ ಮಾಡಿ ತನ್ನ ಭುಜಗಳ ಮೇಲೆ ತಾಯಿಯನ್ನ ಎತ್ತಿಕೊಂಡು ಕಾಡಿನ ಕಡೆ ಮುಖಮಾಡಿ ಹೊರಟ. ಇನ್ನು ಕಾಡಿನ ದಾರಿಯಲ್ಲಿ ಹೋಗುವಾಗ ಭುಜದ ಮೇಲಿರುವ ತನ್ನ ತಾಯಿ ಏನನ್ನೋ ಮಾಡುತ್ತಿರುವುದನ್ನ ಗಮನಿಸಿದ್ದಾನೆ. ಹೀಗೆ ಕಾಡಿನ ದಾರಿಯಲ್ಲಿ ಬಹಳ ದೂರ ಹೋದ ಬಳಿಕ ತಾಯಿಯನ್ನ ಕೆಳಗೆಳಿಸಿ ಕೇಳುತ್ತಾನೆ..ಅಮ್ಮ ನಿನ್ನನ್ನ ನಾನು ಎತ್ತಿಕೊಂಡು ಬರುವಾಗ ಮರ ಗಿಡದ ರೆಂಬೆಗಳನ್ನ ಕಿತ್ತು ಕೆಳಗಡೆ ಹಾಕುತ್ತಿದ್ದೆ..ಹೀಗೇಕೆ ಮಾಡುತ್ತಿದ್ದೆ ಎಂದು ಕೇಳುತ್ತಾನೆ.

ಆಗ ತಾಯಿ ಹೇಳುತ್ತಾಳೆ. ವಯಸ್ಸಾಗಿರುವ ನಾನು ಕೈಲಾಗದವಳು. ಹಾಗಾಗಿ ನನ್ನನ್ನ ಕಾಡಿನಲ್ಲಿ ಬಿಡಲು ಹೋಗುತ್ತಿರುವೆಯಲ್ಲ. ಅದರಿಂದ ನನಗೇನು ಬೇಸರವಿಲ್ಲ. ನಾನು ಮತ್ತೆ ಹಿಂತಿರುಗಿ ಬರಬಾರದೆಂದು ಇಷ್ಟು ದೂರ ನನ್ನನ್ನ ಹೊತ್ತುಕೊಂಡು ಬಂದಿರುವೆ. ಆದರೆ ನೀನು ನನ್ನನ್ನ ಬಿಟ್ಟ ಬಳಿಕ ಹಿಂತಿರುಗಿ ಹೋಗುವ ಸಮಯದಲ್ಲಿ ನೀನು ಬಂದಿರುವ ದಾರಿ ತಪ್ಪಬಹುದು. ಇದರಿಂದ ನೀನು ತುಂಬಾ ಕಷ್ಟಪಡಬೇಕಾಗುತ್ತೆ. ಹಾಗಾಗಿ ನೀನು ಹಿಂತಿರುಗಿ ಹೋಗುವಾಗ ನಿನಗೆ ದಾರಿ ತೋರಿಸಲೆಂದೇ ಮರಗಿಡಗಳ ರೆಂಬೆ ಕೊಂಬೆಗಳನ್ನ ಮುರಿದು ದಾರಿಯುದ್ದಕ್ಕೂ ಹಾಕಿರುವೆ. ಇದರಿಂದ ನೀನು ಯಾವುದೇ ತೊಂದರೆಯಿಲ್ಲದೆ ಮನೆಗೆ ಹಿಂತಿರುಗಿ ಹೋಗಬಹುದು ಎಂದು ಹೇಳುತ್ತಾಳೆ. ತನ್ನ ತಾಯಿಯ ಮಾತನ್ನ ಕೇಳಿ ಮಗನನ್ನ ಕಣ್ಣಲ್ಲಿ ನೀರು ಬರುತ್ತೆ. ಕೊನೆಗೆ ಆ ಯುವಕನಿಗೆ ಬುದ್ದಿ ಬಂದು ಮತ್ತೆ ತನ್ನ ತಾಯಿಯನ್ನ ಮನೆಗೆ ಕರೆದುಕೊಂಡು ಹೋಗಿ ಸುಖವಾಗಿ ನೋಡಿಕೊಳ್ಳುತ್ತಾನೆ. ಇದಕ್ಕೆ ನೋಡಿ ಅಮ್ಮನನ್ನ ದೇವರು ಎನ್ನುವುದು. ತನ್ನ ಮಕ್ಕಳು ತನಗೇನೆ ಕೇಡು ಬಯಸಿದರೂ ಮಕ್ಕಳಿಗೆ ಒಳ್ಳೆಯದನ್ನೇ ಮಾಡುತ್ತಾಳೆ.