Advertisements

ಸರಿಗಮಪ ಸೀಸನ್ 17 ರಲ್ಲಿ ನಿಜವಾಗ್ಲು ನಡಿತಾ ಮೋಸ! ಹಾಗಾದ್ರೆ ಗೆಲ್ಲಬೇಕಾಗಿದ್ದು ಯಾರು? ಸೋಷಿಯಲ್ ಮೀಡಿಯಾದಲ್ಲಿ ಬಾರಿ ಆಕ್ರೋಶ..

Entertainment

ನಮಸ್ತೆ ಸ್ನೇಹಿತರೆ, ಕಿರುತೆರೆ ಲೋಕದ ಅತಿ ದೊಡ್ಡ ರಿಯಾಲಿಟಿ ಶೋ ಸರಿಗಮಪ ಸೀಸನ್ 17 ಮೊನ್ನೆ ಅಂತ್ಯಗೊಂಡಿದೆ.. ಸಂಗೀತ ಪ್ರಿಯರು ಬಹಳ ಇಷ್ಟಪಟ್ಟು ನೋಡುತ್ತಿದ್ದ ಸರಿಗಮಪ ಕಾರ್ಯಕ್ರಮದ ವಿಜೇತರು ಯಾರು ಅನ್ನೋದು ಈಗಾಗಲೇ ಬಹಿರಂಗವಾಗಿದೆ.. ಆದರೆ ಇದರ ಬಗ್ಗೆ ವೀಕ್ಷಕರು ಬಹಳ ಅಸಮಾಧಾನ ವ್ಯಕ್ತಪಡಿಸಿದ್ದಾರೆ.. ಹಾಗಾದರೆ ವೀಕ್ಷಕರ ಪ್ರಕಾರ ನಿಜವಾಗಿಯೂ ಗೆಲ್ಲಬೇಕಿದ್ದ ಸ್ವರ್ದಿ ಯಾರು.. ಮತ್ತು ನಿಜಕ್ಕೂ ಸರಿಗಮಪ ವೇದಿಕೆಯ ಮೇಲೆ ಅನ್ಯಾಯ ನಡೆದಿದ್ದೀಯಾ ಎಂಬುದನ್ನು ತಿಳಿಯೋಣ. ಸರಿಗಮಪ 17ರ ಫಿನಾಲೆಯಲ್ಲಿ ಅಂತಿಮವಾಗಿ ಶ್ರೀನಿಧಿ ಶಾಸ್ತ್ರೀಗೆ ಈ ಬಾರಿ ವಿನ್ನರ್ ಪಟ್ಟ ಸಿಕ್ಕಿತ್ತು.‌.

Advertisements

ಡಾ. ರಾಜ್‍ಕುಮಾರ್ ಅಭಿನಯದ ಜೀವನ ಚೈತ್ರ ಸಿನಿಮಾದ ನಾದಮಯ ಹಾಡಿಗೆ ಧ್ವನಿಯಾಗುವ ಮೂಲಕ ಶ್ರೀನಿಧಿಯವರು ವೀಕ್ಷಕರನ್ನು ಮತ್ತು ತೀರ್ಪುಗಾರರನ್ನ ರಂಜಿಸಿದರು.. ಈ ಮೂಲಕ ಶ್ರೀ ನಿಧಿಯವರು ಟ್ರೋಫಿ ಜೊತೆ ಹತ್ತು ಲಕ್ಷ ರೂಪಾಯಿಗಳನ್ನು ಬಹುಮಾನವಾಗಿ ಪಡೆದಿದ್ದಾರೆ.. ಮೊದಲ ರನ್ನರ್ ಆಗಿ ಅಶ್ವಿನಿ ಶರ್ಮಾ ಅವರು ಹೊರಹೊಮ್ಮಿದರೆ ಅವರಿಗೆ 5 ಲಕ್ಷ ನಗದು ಬಹುಮಾನ ದೊರಕಿದೆ.. ಕಂಬದ ರಂಗಯ್ಯ ಎರಡನೇ ರನ್ನರ್ ಅಪ್ ಹಾಗಿ ಸ್ಥಾನ ಪಡೆದುಕೊಂಡರು..

ಆದರೆ ಈ ತೀರ್ಪಿನ ಬಗ್ಗೆ ವೀಕ್ಷಕರು ಬಹಳ ಬೇಸರ ವ್ಯಕ್ತಪಡಿಸಿದ್ದಾರೆ. ಸಾಕಷ್ಟು ನಡೆದ ಸರ್ವೇ ಪ್ರಕಾರ ಕಂಬದ ರಂಗಯ್ಯ ವಿಜೇತರಾಗಬೇಕಿತ್ತು.. ರಂಗಯ್ಯ ಅವರನ್ನ ಲಕ್ಷಾಂತರ ಜನರು ಬೆಂಬಲಿಸಿದ್ದರು.. ಇದೀಗ ರಂಗಯ್ಯ ಸೋತಿದಕ್ಕೆ ಬೇಸರಗೊಂಡ ವೀಕ್ಷಕರು ಇದು ನಿಜಕ್ಕೂ ಮೋಸ ಎಂದು ಜೀ ವಾಹಿನಿಯ ಪೋಸ್ಟ್ ಗಳಲ್ಲಿ ಕಾಮೆಂಟ್ ಮಾಡುವ ಮೂಲಕ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.. ನಿಮಗೂ ಕೂಡ ಹಾಗೆ ಅನಿಸಿದ್ರೆ ನಿಮ್ಮ ಅಭಿಪ್ರಾಯ ತಿಳಿಸಿ..