Advertisements

ತಂದೆ ಸತ್ಯಜಿತ್ ವಿರುದ್ದವೇ ತಿರುಗಿಬಿದ್ದ ಮಗಳು ! ಕೊಟ್ಟ ದೂರಲ್ಲೇನಿದೆ ಗೊತ್ತಾ ?

Cinema

ಕನ್ನಡ ಚಿತ್ರರಂಗದ ಖ್ಯಾತ ನಟರಲ್ಲಿ ಹಿರಿಯ ನಟ ಸತ್ಯಜಿತ್ ಕೂಡ ಒಬ್ಬರು. ಖಳನಾಯಕ ಸೇರಿದಂತೆ ಹಾಸ್ಯ ಪಾತ್ರಗಳಲ್ಲಿ ನಟಿಸಿ ಜನರನ್ನ ರಂಜಿಸುತ್ತಾ ಕನ್ನಡಿಗರ ಮನದಲ್ಲಿ ಹಚ್ಚಹಸಿರಾಗಿ ಉಳಿದಿರುವ ನಟ. ಆದರೆ ಬೆಳ್ಳಿ ಪರದೆಯ ಮೇಲೆ ವಿಜೃಂಭಿಸುತ್ತಿದ್ದ ನಟ ಸತ್ಯ ಜಿತ್ ಅವರ ವೈಯುಕ್ತಿಕ ಜೀವನ ಅಷ್ಟೇನೂ ಚೆನ್ನಾಗಿಲ್ಲ. ನಾನು ಜೀವನದಲ್ಲಿ ಎಷ್ಟು ಸಂತೋಷವನ್ನ ಕಂಡಿರುವನೋ ಅಷ್ಟೇ ನೋವನ್ನ ಕೂಡ ಅನುಭವಿಸಿದ್ದೇನೆ ಎಂದು ಅವರೇ ಎಷ್ಟೋ ವೇದಿಕೆಗಳಲ್ಲಿ ಏಳಿಕೊಂಡಿದ್ದಾರೆ. ಈಗ ಸತ್ಯಜಿತ್ ಅವರ ಮೇಲೆ ಅವರ ಮಗಳೇ ಆರೋಪ ಮಾಡಿದ್ದು ಠಾಣೆಯಲ್ಲಿ ದೂರು ಕೂಡ ದಾಖಲು ಮಾಡಿದ್ದಾರೆ.

Advertisements

ಹೌದು, ಸತ್ಯಜಿತ್ ಅವರ ಹೆತ್ತ ಮಗಳು ಅಖ್ತರ್ ಸ್ವಲೇಹಾ ಅವರೇ ತನ್ನ ತಂದೆ ಹಣಕ್ಕಾಗಿ ಪ್ರತೀ ದಿನ ಪೀ’ಡಿಸುತ್ತಿದ್ದು ಕಿ’ರುಕುಳ ನೀಡುತ್ತಿದ್ದಾರೆ ಎಂದು ದೂರು ನೀಡಿದ್ದಾರೆ. ಸತ್ಯಜಿತ್ ಪುತ್ರಿ ಸ್ವಲೇಹಾ ಅವರು ಏರ್ ಲೈನ್ಸ್ ಕಂಪನಿಯೊಂದರಲ್ಲಿ ಪೈಲಟ್ ಆಗಿ ಕೆಲಸ ಮಾಡುತ್ತಿದ್ದಾರೆ. ಅಖ್ತರ್ ಸ್ವಲೇಹಾ ಹೇಳಿರುವ ಪ್ರಕಾರ, ನಾನು ನನ್ನ ತಂದೆಯ ಜೀವನಾಂಶಕ್ಕಾಗಿ ಪ್ರತೀ ತಿಂಗಳು ಒಂದು ಲಕ್ಷ ಹಣ ಕೊಡುತ್ತಿದ್ದೆ. ಈಗ ನಾನು ತುಂಬು ಗರ್ಭಿಣಿಯಾಗಿದ್ದು ಕೆಲಸಕ್ಕೆ ಹೋಗಲಾಗುತ್ತಿಲ್ಲ. ಇದೆ ಕಾರಣದಿಂದ ತನ್ನ ತಂದೆಯ ಜೀವನಕ್ಕೆ ಕೊಡುತ್ತಿದ್ದ ಹಣ ನಿಲ್ಲಿಸಿದೆ. ಹಣ ಕೊಡದ ಕಾರಣ ನನ್ನ ತಂದೆ ಸತ್ಯಜಿತ್ ಅವರು ನನಗೆ ಕಿ’ರುಕುಳ ಕೊಡಲು ಶುರುಮಾಡಿದ್ದು ಬೆ’ದರಿಕೆ ಕರೆಗಳನ್ನ ಮಾಡಿಸುತ್ತಿದ್ದಾರೆ ಎಂದು ತಮ್ಮ ದೂರಿನಲ್ಲಿ ತಿಳಿಸಿದ್ದಾರೆ.

ಆದರೆ ಇದರ ಬಗೆ ಹಿರಿಯ ನಟ ಸತ್ಯಜಿತ್ ಅವರು ಹೇಳುವದೇ ಬೇರೆ. ನಾನು ಹಣಕ್ಕೋಸ್ಕರ ನನ್ನ ಮಗಳಿಗೆ ಯಾವುದೇ ತೊಂದರೆ ಕೊಟ್ಟಿಲ್ಲ. ನನ್ನ ಮನೆಯನ್ನ ಮಾರಿ ಮಗಳನ್ನ ಓದಿಸಿದ್ದೇನೆ. ಮಾರಿದ ಮನೆಯನ್ನ ಬಿಡಿಸಿಕೊಡು ಅಂತ ಕೇಳಿದ್ದೆ ಒರತು, ಹಣಕ್ಕಾಗಿ ತೊಂದರೆ ಕೊಟ್ಟಿಲ್ಲ. ಯಾರೋ ತನ್ನ ಮಗಳನ್ನ ಉಪಯೋಗಿಸಿಕೊಂಡು ನನಗೆ ಮಸಿ ಬಳಿಯಲು ಪ್ರಯತ್ನ ಮಾಡುತ್ತಿದ್ದಾರೆ ಎಂದು ನಟ ಹೇಳಿದ್ದು, ವಯಸ್ಸಾದ ಸಮಯದಲ್ಲಿ ನಾನೇಕೆ ನನ್ನ ಮಗಳ ವಿರುದ್ಧ ನಿಲ್ಲಲಿ, ಮಗಳ ಏಳಿಗೆ ಬಯಸುತ್ತೇನೆಯೇ ವಿನಃ ಕೇಡು ಬಯಸುವುದಿಲ್ಲ. ಆದರೆ ಈಗ ನನ್ನ ಮಗಳೇ ನನ್ನ ವಿರುದ್ಧ ನಿಂತಿರುವುದು ನನಗೆ ನುಂಗಲಾರದ ನೋವಾಗಿದೆ ಎಂದು ನಟ ಸತ್ಯಜಿತ್ ಕಣ್ಣೀರು ಸುರಿಸಿದ್ದಾರೆ.