Advertisements

ಸೀರಿಯಲ್ ಗೆ ಬರೋ ಮುಂಚೆ ಈ ನಟ ನಟಿಯರು ಯಾವ ಕೆಲಸ ಮಾಡ್ತಿದ್ರು ಗೊತ್ತಾ?

Cinema Entertainment

ನಮಸ್ತೇ ಸ್ನೇಹಿತರೆ, ಮೊದಲದಾಗಿ ಅಭಿನವ್ ವಿಶ್ವನಾಥನ್.‌. ನನ್ನರಸಿ ರಾದೆ ಧಾರವಾಹಿಯನ್ನ ಇವರಿಗೋಸ್ಕರ ಎಷ್ಟೋ ಜನ ನೋಡುತ್ತಾರೆ. ಅಭಿನವ್ ಅವರು ನಟನೆಗು ಮುನ್ನ ಮಿಸ್ಟರ್ ಇಂಡಿಯಾ 2019 ಮೊದಲ ರನ್ನರಪ್. ಜೊತೆಗೆ ಇವರು ರಂಗಭೂಮಿ ಕಲಾವಿದ.. ಶರಣ್ಯ ಶೆಟ್ಟಿ.. ಜೀ ಕನ್ನಡ ವಾಹಿನಿಯ ಮತ್ತೊಂದು ಪವರ್ ಫುಲ್ ಪ್ರೇಮಕಥೆ ಗಟ್ಟಿಮೇಳ ಧಾರವಾಹಿಯಲ್ಲಿ ವಿಲನ್ ಪಾತ್ರ ಮಾಡ್ತಿರೋ ಶರಣ್ಯ ಶೆಟ್ಟಿ ಕೂಡ ನಟನೆಗೂ ಮೊದಲು ಮಾಡಲ್ ಆಗಿದ್ದರು. ರಾಮೋಲಾ.. ಕನ್ನಡ ಅಭಿಮಾನಿಗಳ ಮೆಚ್ಚಿನ ಧಾರವಾಹಿ ಕನ್ನಡತಿಯಲ್ಲಿ ವಿಲನ್ ಪಾತ್ರ ಮಾಡ್ತಿರೋ ರಾಮೋಲಾ ಅವರು ನಟನೆಗು ಮೊದಲು ಡ್ಯಾನ್ಸರ್ ಹಾಗು ಮಾಡಲ್ ಆಗಿದ್ದರು..

[widget id=”custom_html-3″]

Advertisements

ಕಾವ್ಯ ಶ್ರೀ ಗೌಡ, ಮಂಗಳಗೌರಿ ಮದುವೆ ಸದ್ಯ ಕಲರ್ಸ್ ಕನ್ನಡಲ್ಲಿ ಸಂಚಲನ ಮೂಡಿಸುತ್ತಿರುವ ಧಾರವಾಹಿ. ಮಂಗಳ ಗೌರಿ ಪಾತ್ರ ನಿಭಾಯಿಸುತ್ತಿರುವ ಕಾವ್ಯಾಶ್ರೀ ಗೌಡ ಪತ್ರಕರ್ತೆಯಾಗಿದ್ದರು.. ಮೇಘಾ ಶೆಟ್ಟಿ ಪ್ರೀತಿ ಕಥೆ ಹಂದರದಲ್ಲಿ ಹೆಚ್ಚು ಪೇಮಸ್ ಆಗಿರುವ ಮೇಘಾ ಶೆಟ್ಟಿ ಜೀ ಕನ್ನಡ ವಾಹಿನಿಯ ಅತಿ ಹೆಚ್ಚು ಟಿ.ಆರ್.ಪಿ ಪಡೆಯುತ್ತಿರುವ ಜೊತೆ ಜೊತೆಯಲಿ ಸೀರಿಯಲ್ ನಲ್ಲಿ ನಟಿಸುತ್ತಿರುವ ಇವರು ಎಂಬಿಎ ಮುಗಿಸಿದ್ದರು.. ಕೌಸ್ತುಬ ಮಣಿ, ನನ್ನರಸಿ ರಾದೆ ಸೀರಿಯಲ್ ನಲ್ಲಿ ಕ್ಯೂಟ್ ಆಗಿ ಕಾಣಿಸಿಕೊಂಡು ಮುಗ್ದ ನಗುವಿನಲ್ಲೇ ಎಲ್ಲರ ಮನಸ್ಸು ಗೆದ್ದಿರುವ ಇಂಚರ ಅಲಿಯಾಸ್ ಕೌಸ್ತುಬ ಮಣಿ ನಟನೆಗೂ ಮುನ್ನ ಬ್ಯಾಂಕ್ ನಲ್ಲಿ ಕೆಲಸ ಮಾಡುತ್ತಿದ್ದರು.

[widget id=”custom_html-3″]

ಭವ್ಯ ಗೌಡ.. ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಅಭಿಮಾನಿಗಳ ಅಚ್ಚುಮೆಚ್ಚಿನ ಹಾಗು ಟಿ‌.ಆರ್.ಪಿ ನಲ್ಲೂ ಮುಂದಿರುವ ಗೀತಾ ಧಾರವಾಹಿಯಲ್ಲಿ ಗೀತಾ ಹೆಸರಿನಿಂದಲೇ ಅತಿ ಹೆಚ್ಚು ಪೇಮಸ್ ಆಗಿರುವ ಭವ್ಯ ಗೌಡ ನಟನೆಗೂ ಬರುವ ಮುಂಚೆ ವಿದ್ಯಾರ್ಥಿನಿಯಾಗಿದ್ದರು. ಸ್ವಾಮಿನಾಥನ್ ಅನಂತರಾಮ್, ಮಿಥುನ ರಾಶಿ ಸೀರಿಯಲ್ ನಲ್ಲಿ ಮುಂಗೋಪ ಹಾಗು ಆ್ಯಟಿಟ್ಯೂಡ್ ನಿಂದಲೇ ಅಭಿಮಾನಿಗಳ ಮನಸ್ಸನ್ನು ಗೆದ್ದಿರುವ ಇವರು ಇಂಜನಿಯರಿಂಗ್ ಆಗಿದ್ದರು..