Advertisements

ನಮ್ಮ ಕನ್ನಡದ ಗಾಯಕರು ಒಂದು ಹಾಡಿಗೆ ಪಡೆಯುವ ಸಂಭಾವನೆ ಎಷ್ಟು ಗೊತ್ತಾ.?

Cinema

ಸ್ನೇಹಿತರೇ, ಸಿನಿಮಾಗಳಲ್ಲಿ ನಾಯಕ ನಟಿಯರೇ ಎಷ್ಟು ಮುಖ್ಯವೋ ಹಾಗೆಯೇ ಗಾಯಕರು ಕೂಡ. ಎಷ್ಟೋ ಸಿನಿಮಾಗಳನ್ನ ಹಾಡುಗಳೇ ಗೆಲ್ಲಿಸಿದ ಉದಾಹರಣೆ ನಮ್ಮಲ್ಲಿವೆ. ನಟ ನಟಿಯರೇನೋ ಕೋಟ್ಯಂತರ ರೂಪಾಯಿಗಳನ್ನ ಸಂಭಾವನೆಯ ರೂಪದಲ್ಲಿ ಪಡೆಯುತ್ತಾರೆ. ಆದರೆ ಸುಮುಧುರವಾಗಿ ಹಾಡುವೆ ಗಾಯಕ ಗಾಯಕಿಯರು ಒಂದು ಹಾಡಿಗೆ ಎಷ್ಟು ಸಂಭಾವನೆ ಪಡೆಯುತ್ತಾರೆ ಎಂಬ ಕುತೂಹಲ ಇದ್ದೆ ಇರುತ್ತದೆ. ಇನ್ನು ಒಂದು ಕಾಲದಲ್ಲಿ ಒಂದು ಹಾಡನ್ನ ಹಾಡಲು ಕೇವಲ ಒಂದು ಸಾವಿರದ ರೂಪಾಯಿಗಳನ್ನ ಪಡೆಯುತ್ತಿದ್ದರು.

ಆದರೆ ಈಗೆಲ್ಲಾ ಬದಲಾಗಿದೆ. ಕಾಲದ ಜೊತೆಗೆ ಸಂಭಾವನೆ ಕೂಡ ಬದಲಾಗಿದೆ. ಮೊದಲಿಗೆ ಒಂದು ಸಿನಿಮಾದ ಹಾಡುಗಳನ್ನ ಒಬ್ಬರೇ ಗಾಯಕರು ಹಾಡುತ್ತಿದ್ದರು. ಆದರೆ ಈಗ ಸಿನಿಮಾದ ಒಂದೊಂದು ಹಾಡಿಗೂ ಬೇರೆ ಬೇರೆ ಗಾಯಕರು ಧ್ವನಿ ನೀಡಿರುತ್ತಾರೆ. ಹಾಗಾದ್ರೆ ಸ್ಯಾಂಡಲ್ವುಡ್ ಚಿತ್ರಗಳಿಗೆ ತಮ್ಮ ಸುಮಧುರ ಕಂಠದಿಂದ ಧ್ವನಿ ನೀಡುವ ಗಾಯಕರ ಸಂಭಾವನೆ ಎಷ್ಟಿದೆ ಎಂಬುದನ್ನ ನೋಡೋಣ ಬನ್ನಿ..

Advertisements

ಇನ್ನು ಕನ್ನಡದ ಚಿತ್ರಗಳಿಗೆ ಹಾಡುವ ಗಾಯಕಿಯರಲ್ಲಿ ಹೆಚ್ಚು ಸಂಭಾವನೆ ಪಡೆಯುವ ಗಾಯಕಿ ಎಂದರೆ ಅನುರಾಧ ಭಟ್. ಇನ್ನು ಇವರು ಒಂದು ಹಾಡಿಗೆ ೬೦ರಿಂದ ೭೦ ಸಾವಿರ ಸಂಭಾವನೆ ಪಡೆಯುತ್ತಾರೆ ಎಂದು ಹೇಳಲಾಗಿದೆ. ಇನ್ನು ಸುಮಧುರ ಕಂಠದ ಅರ್ಚನಾ ಉಡುಪರವರು ತಮ್ಮ ಒಂದು ಹಾಡಿಗೆ ೪೦ ಸಾವಿರದವರೆಗೆ ಸಂಭಾವನೆ ಪಡೆಯುತ್ತಾರಂತೆ. ಗಾಯಕಿ ನಂದಿತಾ ಕೂಡ ಒಂದು ಹಾಡಿಗೆ ೪೦ ಸಾವಿರದವರೆಗೆ ಸಂಭಾವನೆ ಪಡೆಯುತ್ತಾರೆ ಎಂದು ಹೇಳಲಾಗಗಿದೆ.

ಇನ್ನು ಕನ್ನಡದ ಖ್ಯಾತ ಗಾಯಕರಲ್ಲಿ ಒಬ್ಬರಾದ ಮೆಲೋಡಿ ಕಿಂಗ್ ಎಂದೇ ಹೆಸರು ಮಾಡಿರುವ ರಾಜೇಶ್ ಕೃಷ್ಣನ್ ಒಂದು ಲಕ್ಷದವರೆಗೆ ಸಂಭಾವನೆ ಪಡೆಯುತ್ತಾರೆ. ಜೊತೆಗೆ ಸಂಗೀತದ ರಿಯಾಲಿಟಿ ಶೋಗಳಲ್ಲಿಯೂ ಕೂಡ ಜಡ್ಜ್ ಆಗಿ ಕೆಲಸ ಮಾಡುತ್ತಾರೆ. ಇನ್ನು ಲಕ್ಷಾಂತರ ಅಭಿಮಾನಿಗಳನ್ನ ಹೊಂದಿರುವ ವಿನೂತನ ಗಾಯಕ ವಿಜಯ್ ಪ್ರಕಾಶ್ ತಮ್ಮ ಒಂದು ಹಾಡಿಗೆ ಒಂದು ವಿವರೇ ಲಕ್ಷದವರೆಗೆ ಸಂಭಾವನೆ ಪಡೆಯುತ್ತಾರೆ. ಮೂಲತಃ ಬಾಲಿವುಡ್ ನವರಾದರೂ ಕೂಡ ಸ್ಯಾಂಡಲ್ವುಡ್ ನಲ್ಲಿ ಹೆಚ್ಚು ಚಿತ್ರಗಳಿಗೆ ತಮ್ಮ ಮೆಲೋಡಿ ಹಾಡುಗಳನ್ನ ಕೊಟ್ಟಿರುವ ಸೋನು ನಿಗಮ್ ಒಂದು ಲಕ್ಷದವರೆಗೆ ಸಂಭಾವನೆ ಇದೆ.

ದಕ್ಷಿಣ ಭಾರತ ಸಿನಿಮಾ ರಂಗದ ಖ್ಯಾತ ಗಾಯಕಿ ಚಿತ್ರರವರು 1 ಲಕ್ಷದವರೆಗೆ ಸಂಭಾವನೆ ಪಡೆಯುತ್ತಾರೆ. ಇನ್ನು ಸಿಗಿಂಗ್ ರಿಯಾಲಿಟಿ ಶೋದಿಂದ ಬಂದು ಫೇಮಸ್ ಆಗಿರುವ ಯುವಗಾಯಕ ತಮ್ಮ ವಿಭಿನ್ನ ಗಾಯನಕ್ಕೆ ೫೦ ಸಾವಿರದವರೆಗೆ ಸಂಭಾವನೆ ತೆಗೆದುಕೊಳ್ಳುವ ಬೇಡಿಕೆಯ ಗಾಯಕ ಕೂಡ ಆಗಿದ್ದಾರೆ. ಇನ್ನು ಕನ್ನಡದ ಹೆಚ್ಚು ಹಾಡುಗಳಿಗೆ ತಮ್ಮ ಸುಮಧುರ ಕಂಠ ನೀಡಿರುವ ಫೇಮಸ್ ಗಾಯಕಿ ಶ್ರೇಯಾ ಘೋಶಾಲ್ ಅವರ ಸಂಭಾವನೆ 1.5 ಲಕ್ಷದವರೆಗೆ ಇದೆ ಎಂದು ಹೇಳಲಾಗಿದೆ.