Advertisements

ಸರ್ಕಾರದ ವಿರುದ್ಧ ಸಿ’ಡಿದೆದ್ದ ಸ್ಟಾರ್‌ ನಟರು.. ಯಾಕೆ ಗೊತ್ತಾ?

Cinema

ನಮಸ್ತೇ ಸ್ನೇಹಿತರೆ, ಕೇಂದ್ರ ಸರ್ಕಾರವು ಥಿಯೇಟರ್ ನಲ್ಲಿ ಹೆಚ್ಚುವರಿ ಆಸನಗಳನ್ನು ಬರ್ತಿ ಮಾಡಿ ಸಿನಿಮಾ ಪ್ರದರ್ಶನ ಮಾಡಬಹುದು ಎಂದು ಹೊಸ ಮಾರ್ಗ ಸೂಚಿಯಲ್ಲಿ ಸೂಚಿಸಿತ್ತು.. ಆದರೆ ಕರ್ನಾಟಕ ರಾಜ್ಯ ಸರ್ಕಾರ ಇದಕ್ಕೆ ಬ್ರೇಕ್ ಆಕಿದೆ‌. ಇದರ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವ ಚಿತ್ರರಂಗದ ನಟರು ಏನು ಹೇಳಿದ್ದಾರೆ ಎಂಬುದನ್ನ ನೊಡೋಣ ಬನ್ನಿ. ರಾಜ್ಯ ಸರ್ಕಾರದ ಈ ನಿಯಮದ ಬಗ್ಗೆ ಪ್ರಶ್ನೆ ಮಾಡಿರುವ ಧ್ರುವ ಸರ್ಜಾ ಅವರು ಮಾರ್ಕೆಟ್ ನಲ್ಲಿ ಗಿಜಿ ಗಿಜಿ ಜನ, ಬಸ್ ನಲ್ಲೂ ಫುಲ್ ರೆಶ್.. ಚಿತ್ತ ಮಂದಿರದಲ್ಲಿ ಮಾತ್ರ ಯಾಕೆ 50 ರಷ್ಟು ನಿರ್ಬಂಧ ಎಂದು ಧ್ರುವ ಸರ್ಜಾ ಎಮ್.ಎಲ್ .ಎ ಸುಧಾಕರ್, ಸಿ.ಎನ್ ಅಶ್ವಥ್ ನಾರಾಯಣ್, ಸಿ.ಎಮ್ ಬಿ.ಎಸ್ ಯಡಿಯೂರಪ್ಪ ಅವರಿಗೆ ಪ್ರಶ್ನೆ ಮಾಡಿದ್ದಾರೆ..

Advertisements

ಹಿರಿಯ ನಟ ಶಿವರಾಜ್ ಕುಮಾರ್ ಈ ಬಗ್ಗೆ ಟ್ವೀಟ್ ಮಾಡಿದ್ದು ಎಲ್ಲರಿಗೂ ನಾರ್ಮಲ್ ನಮಗೇಕೆ ಅಬ್ ನಾರ್ಮಲ್.. ಚಿತ್ರಮಂದಿರದಲ್ಲಿ ಪೂರ್ಣ ಪ್ರಮಾಣದಲ್ಲಿ ಪ್ರೇಕ್ಷಕರಿಗೆ ಅವಕಾಶ ನೀಡಬೇಕು ಎಂದು ಹೊತ್ತಾಯಿಸಿದ್ದಾರೆ.. ನಟ ಪುನೀತ್ ರಾಜ್‍ಕುಮಾರ್ ಟ್ವೀಟ್ ಮಾಡಿ. ಖಾಸಗಿ ಕಾರ್ಯಕ್ರಮಗಳು ಪೂಜಾ ಸ್ಥಳಗಳು, ಸಂಚಾರ ವ್ಯವಸ್ಥೆ, ಪ್ರವಾಸಿ ತಾಣಗಳು ಮಾರಕಟ್ಟೆಗಳಲ್ಲಿ ಅವಕಾಶ ನೀಡಿರುವಾಗ ಥಿಯೇಟರ್ ಗಳಿಗೆ ಯಾಕೆ ನೀಡಿಲ್ಲ ಎಂದಿದ್ದಾರೆ. ‌ನಟರಾದ ರಕ್ಷಿತ್ ಶೆಟ್ಟಿ, ದುನಿಯಾ ವಿಜಯ್, ಧನಂಜಯ್, ನಿರ್ದೇಶಕ ಪ್ರಶಾಂತ್ ನೀಲ್, ಪ್ರೀತಮ್ ಗುಬ್ಬಿ, ಹೇಮಂತ್ ರಾವ್, ಸಿಂಪಲ್ ಸುನಿ, ನಿರ್ಮಾಪಕ ಕಾರ್ತಿಕ್ ಗೌಡ.. ಮುಂತಾದವರು ಟ್ವೀಟ್ ಮಾಡಿ ಸರ್ಕಾರವನ್ನು ಒತ್ತಾಯಿಸಿದ್ದಾರೆ..

ಇನ್ನೂ ಇದರ ಬಗ್ಗೆ ದರ್ಶನ್ ಅವರು ಕೂಡ ಈಗಾಗಲೇ ಧ್ವನಿ ಎತ್ತಿದ್ದು ಥಿಯೇಟರ್ ಸಂಪೂರ್ಣ ತೆರೆಯದೇ ಇರೋದ್ರಿಂದ 5ಜಿ ನೆಟ್ವರ್ಕ್ ಕಾರಣ.. ಉದ್ಯಮಿ ಅಂಬಾನಿ 5ಜಿ ನೆಟ್ವರ್ಕ್‌ ಲಾಂಚ್ ಮಾಡುತ್ತಿದ್ದಾರೆ. ಇದು ದೊಡ್ಡ ಹ’ಗರಣ ಅನಿಸುತ್ತದೆ.. 5ಜಿ ನೆಟ್ವರ್ಕ್ ಕ್ಲಿಕ್ ಆಗಬೇಕು ಎಂದರೆ ಒಟಿಟಿ ಸಿನಿಮಾಗಳು, ಆನ್ಲೈನ್ ಸಿನಿಮಾಗಳು ಇರಬೇಕು. ಆಗಲೇ ಅವರಿಗೆ ದುಡ್ಡು ಬರೋದು.. ಅದಕ್ಕೊಸ್ಕರ ದೊಡ್ಡವರಿಗೆ ಹೇಳಿ ಈ ರೀತಿ ಮಾಡಿಸಿದ್ದಾರೆ. ಅಲ್ಲದೇ ಇದ್ದರೆ ದೇವಸ್ಥಾನ, ಮಾಲ್, ಸಮಾರಂಭಕ್ಕೆ ಇಲ್ಲದ ರಿಸ್ಟ್ರಿಕ್ಷನ್ ಥಿಯೇಟರ್ ಗೆ ಮಾತ್ರ ಏಕೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸ್ನೇಹಿತರೆ ಸರ್ಕಾರದ ಈ ನಿರ್ದಾರ ಸರಿಯೋ ತಪ್ಪೋ ಎಂಬುದನ್ನು ನಿಮ್ಮ ಅನಿಸಿಕೆ ತಿಳಿಸಿ.