Advertisements

ಪರಿಚಯವಿಲ್ಲದೆ ವಿದೇಶಿಗನನ್ನು ಆಶ್ರಮದಲ್ಲಿ ಮದುವೆಯಾದ ಕನ್ನಡದ ಟಾಪ್ ನಟಿ..

Cinema

ನಮಸ್ತೆ ಸ್ನೇಹಿತರೆ, ಕೆಲವೊಬ್ಬರ ಮದುವೆಗಳು ಸ್ವರ್ಗದಲ್ಲಿ ನಿಶ್ಚಯವಾಗಿರುತ್ತವೆ ಎಂಬುದಕ್ಕೆ ಈ ನಟಿಯ ಮದುವೆ ಸ್ಪಷ್ಟ ಉದಾಹರಣೆ.. ಪ್ರೀತಿ ಹಾಗು ಮದುವೆ ಎಂಬುದು ಜಾತಿ ಬೇದ, ಧರ್ಮ, ಗಡಿ ದೇಶ ಭಾಷೆ ಎಲ್ಲವನ್ನು ಮೀರಿ ಕೆಲವೊಮ್ಮೆ ನಡೆಯುವಂತದ್ದು.. ಸಿನಿಮಾದಲ್ಲಿ ಸ್ಟಾರ್ ನಟಿಯಾಗಿ ಬೆಳೆದರು ಸಂಪ್ರದಾಯ ಬದ್ದವಾಗಿ ತನ್ನ ಪೋಷಕರು ತೋರಿಸಿದ ವರ‌ನನ್ನೇ ಮದುವೆಯಾದ ನಟಿ ಮಾಧವಿ. 80, 90 ರ ದಶಕದಲ್ಲಿ ಟಾಪ್ ನಟಿಯಾಗಿ ಪ್ರೇಕ್ಷಕರ ಮನೆಗೆದ್ದ ಮಾದವಿ ತಮ್ಮ ವೈಯಕ್ತಿಕ ಬದುಕಿನಲ್ಲೂ ಸರಿ ದಾರಿಯಲ್ಲಿಯೇ ನಡೆದರು.. ಕನ್ನಡದ ಹಲಾವರು ಸಿನಿಮಾಗಳಲ್ಲಿ ತಮ್ಮ ಅಭಿನಯದ ಮೂಲಕ ಟಾಪ್ ನಟಿಯಾದ ಮಾದವಿ ಡಾ.ರಾಜ್ ಕುಮಾರ್ ಸೇರಿದಂತೆ ಕನ್ನಡದ ಇನ್ನೂ ಅನೇಕ ಸ್ಟಾರ್ ನಟರ ಜೊತೆ ನಾಯಕಿಯಾಗಿ ನಟಿಸಿದರು..

Advertisements

ತೆಲುಗು ತಮಿಳಿ ಮಲಯಾಳಂ, ಹಿಂದಿ ಹಾಗು ಕನ್ನಡ ಈ ಎಲ್ಲಾ ಬಾಷೆಗಳಲ್ಲಿಯೂ ಸ್ಟಾರ್ ನಾಯಕಿಯಾಗಿ ಮಿಂಚಿದ ಮಾಧವಿಯವರು ಅಂದಿನ ಕಾಲದ ಬಹು ಬೇಡಿಕೆಯ ನಟಿಯಾಗಿದ್ದರು. ಚಿತ್ರರಂಗದಲ್ಲಿ ಬಹು ಬೇಡಿಕೆ ಇರುವಾಗಲೇ ನಟನೆಯಿಂದ ದೂರ ಉಳಿದ ಮಾಧವಿ ಪೆಬ್ರವರಿ 14, 1996 ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ನಂತರ ಮಾಧವಿ ಯಾವುದೇ ಬಾಷೆಯ ಸಿನಿಮಾಗಳಲ್ಲೂ ನಟಿಸಲಿಲ್ಲ.. ಇನ್ನೂ ಇವರ ಮದುವೆಯ ವಿಚಾರವಂತು ತುಂಬಾ ಸ್ವಾರಸ್ಯಕರವಾಗಿದೆ. ತಮಗೆ ಎಂದೂ ಪರಿಚಯವೇ ಇಲ್ಲದಂತಹ ತಮ್ಮ ತಂದೆ ತಾಯಿ ನೋಡಿದಂತಹ ವರನನ್ನು ಮಾಧವಿ ಮದುವೆಯಾದರು.. ಮಾಧವಿಯ ಪತಿಯ ಹೆಸರು ರಾಲ್ಪ್ ಶರ್ಮಾ.

ಇವರ ತಂದೆ ಪಂಜಾಬಿಯಾಗಿದ್ದು ತಾಯಿ ಜರ್ಮನ್ ಮೂಲದವರು.. ಇನ್ನೂ ಇವರ ಮದುವೆ ಸ್ವಾಮಿರಾಮ ಆಶ್ರಮದಲ್ಲಿ ಗುರುಗಳ ಸಮ್ಮುಖದಲ್ಲಿ ಸಂಪ್ರದಾಯ ಬದ್ದವಾಗಿ ನಡೆದಿತ್ತು. ಮದುವೆಯ ನಂತರ ಮಾಧವಿ ತಮ್ಮ ಪತಿಯ ಜೊತೆ ಅಮೇರಿಕಾಗೆ ಹೋಗಿ ನೆಲೆಸಿದರು. ಮೂವರು ಮಕ್ಕಳಿಗೆ ತಾಯಿಯಾಗಿರುವ ಮಾಧವಿ ಅವರು.. ತಮ್ಮ ಮಕ್ಕಳನ್ನು ಹಿಂದೂ ಸಂಸ್ಕೃತಿ ಹಾಗು ಸಂಪ್ರದಾಯ ಬದ್ದವಾಗಿ ಬೆಳೆಸುತ್ತಿದ್ದಾರೆ. ಪೂಜೆ ಪುನಸ್ಕಾರಗಳನ್ನು ಮಾಡುವುದು.. ಶ್ಲೋಕ ಮಂತ್ರ ಪಠಣ ಮಾಡುವುದನ್ನು ಕಲಿಸಿದ್ದಾರೆ. ಒಟ್ಟಿನಲ್ಲಿ ಮಾಧವಿ ಅವರು ಅಮೇರಿಕಾದಲ್ಲಿ ಇದ್ದರು.. ಹಿಂದೂ ಸಂಸ್ಕೃತಿ ಹಾಗು ಸಂಪ್ರದಾಯವನ್ನು ಚಾಚು ತಪ್ಪದೇ ಪಾಲಿಸುತ್ತಿದ್ದಾರೆ. ಹಾಗು ತಮ್ಮ ಮಕ್ಕಳನ್ನು ಸಹ ಅದೇ ರೀತಿ ಬೆಳೆಸುತ್ತಿದ್ದಾರೆ..