Advertisements

ಸೆಕೆಂಡ್ ಹ್ಯಾಂಡ್ ಸ್ಟೂಲ್ ತಂದು ಅದರ ಜಿಪ್ ತೆರೆದು ನೋಡಿದಾಗ ಕಾದಿತ್ತು ಶಾಕ್ ! ಕುಣಿದು ಕುಪ್ಪಳಿಸಿದ ಕುಟುಂಬ..

Uncategorized

ನಮಸ್ತೇ ಸ್ನೇಹಿತರೇ, ಈ ಜಗತ್ತಿನಲ್ಲಿ ತುಂಬಾ ಪ್ರಾಮಾಣಿಕರಾಗಿರುವ ವ್ಯಕ್ತಿಗಳು ಸಿಗುವುದು ಅಪರೂಪದಲ್ಲಿ ಅಪರೂಪ. ಆದರೆ ಇಲ್ಲೊಬ್ಬ ವ್ಯಕ್ತಿ ಸೆಕೆಂಡ್ ಹ್ಯಾಂಡ್ ಫರ್ನಿಚರ್ ಗಳು ಸಿಗುತ್ತಿದ್ದ ಅಂಗಡಿಗೆ ಹೋಗಿ ಸ್ಟೂಲ್ ಒಂದನ್ನ ಮನೆಗೆ ಕೊಂಡು ತರುತ್ತಾನೆ. ಆದರೆ ಒಂದು ತಿಂಗಳ ಬಳಿಕ ಒಂದು ದಿನ ಆ ಸ್ಟೂಲ್ ನ ಜಿಪ್ ನ್ನ ತೆಗೆದು ನೋಡಿದಾಗ ಆ ವ್ಯಕ್ತಿ ಒಂದು ಕ್ಷಣ ಶಾಕ್ ಆಗುತ್ತಾನೆ.! ಹಾಗಾದ್ರೆ ಆ ಫರ್ನಿಚರ್ ಒಳಗೆ ಇದ್ದದಾದರೂ ಏನು? ಬಳಿಕ ಅದನ್ನ ಆತ ಏನು ಮಾಡಿದ ಎಂಬ ಕುತೂಹಲಕಾರಿ ವಿಷಯವನ್ನ ತಿಳಿಯೋಣ ಬನ್ನಿ..

ಇನ್ನು ಆ ಸ್ಟೂಲ್ ನ್ನ ತಂದ ವ್ಯಕ್ತಿ ೬೪ ವರ್ಷದ ಕಿರುಬಿ ಎಂಬಾತ. ಈತ ಅಮೇರಿಕಾದ ಮಿಚಿಗನ್ ನಗರದಲ್ಲಿ ವಾಸ ಮಾಡುತ್ತಿದ್ದ. ಈತ ತನ್ನ ಜೀವನವನ್ನೆಲ್ಲಾ ಕಷ್ಟದಲ್ಲೇ ಕಳೆದರೂ ಸಹ ಇರುವದರಲ್ಲೇ ನೆಮ್ಮದಿಯಿಂದ ಜೀವನ ನಡೆಸುತ್ತಿದ್ದ. ತನ್ನಲ್ಲಿ ಎಷ್ಟಿದೆಯೋ ಅಷ್ಟು ಹಣದಲ್ಲೇ ಮಾತ್ರ ಜೀವನ ನಡೆಸುತ್ತಿದ್ದ ಆತ, ಯಾವತ್ತು ಕೂಡ ಹೊಸ ಫರ್ನಿಚರ್ ನ್ನ ತನ್ನ ಮನೆಗೆ ತಂದವನಲ್ಲ. ಪ್ರತೀ ಬಾರಿಯೂ ಕೂಡ ತನಗೆ ಬೇಕಾದ ವಸ್ತುಗಳನ್ನ ಸೆಕೆಂಡ್ ಹ್ಯಾಂಡ್ ಶಾಪ್ ಗಳಲ್ಲೇ ಕೊಂಡು ತರುತ್ತಿದ್ದ. ಇನ್ನು ಕ್ರಿಸ್ ಮಸ್ ಹಬ್ಬದ ವೇಳೆ ಮನೆಗೆ ಸ್ಟೂಲ್ ಒಂದನ್ನ ತರಬೇಕೆಂದು ಯೋಚಿಸಿದ ಕಿರುಬಿ, ಸೆಕೆಂಡ್ ಹ್ಯಾಂಡ್ ಫರ್ನಿಚರ್ ಅಂಗಡಿಗೆ ಹೋಗಿ ೭೦ ಡಾಲರ್ ಹಣ ಕೊಟ್ಟು ಸ್ಟೂಲ್ ಒಂದನ್ನ ಖರೀದಿ ಮಾಡಿ ಮನೆಗೆ ತಂದ.

Advertisements

ಇನ್ನು ಹೀಗೆಯೇ ಒಂದು ತಿಂಗಳು ಕಳೆದುಹೋಯಿತು. ಬಳಿಕ ಒಂದು ದಿನ ಕಿರುಬಿಯವರ ಸೊಸೆ ಮನೆ ಕ್ಲೀನ್ ಮಾಡುತ್ತಿರುವ ವೇಳೆ, ಈ ಸ್ಟೂಲ್ ನ್ನ ಕೂಡ ಕ್ಲೀನ್ ಮಾಡೋಣವೆಂದು ಅದರ ಜಿಪ್ ನ್ನ ತೆರೆದು ನೋಡಿ ಶಾಕ್ ಗೆ ಒಳಗಾದ ಆಕೆ ಕಿ’ರುಚಾಡುತ್ತಾ ಕುಣಿದಾಡುತ್ತಾಳೆ. ಇದನ್ನ ಕಂಡ ಮನೆಯವರೆಲ್ಲಾ ಏನಾಯಿತು ಎಂದು ಬಂದು ನೋಡಿದಾಗ ಆ ಸ್ಟೂಲಿನ ಒಳಗೆ ಕಂತೆ ಕಂತೆ ಡಾಲರ್ ನೋಟುಗಳಿರುವುದು ಕಂಡುಬರುತ್ತದೆ. ಇನ್ನು ಇದನ್ನ ಅಚ್ಚರಿಯಿಂದ ನೋಡಿದ ಕಿರುಬಿಯವರ ಕುಟುಂಬ, ಇಷ್ಟೊಂದು ದೊಡ್ಡ ಮೊತ್ತದ ಹಣವನ್ನ ಎಂದು ನೋಡಿರಲಿಲ್ಲ, ಮುಟ್ಟಿರಲಿಲ್ಲ ಸಹ. ಇನ್ನು ಆ ಹಣವನ್ನೆಲ್ಲಾ ತೆಗೆದು ಲೆಕ್ಕಾ ಹಾಕಿದಾಗ ಅದರಲ್ಲಿ ಬರೋಬ್ಬರಿ 43 ಸಾವಿರ ಡಾಲರ್ ಹಣವಿತ್ತು. ಅಂದರೆ ಭಾರತೀಯ ರೂಪಾಯಿಯಲ್ಲಿ 31 ಲಕ್ಷಕ್ಕಿಂತ ಹೆಚ್ಚು ಹಣ.

ಹೆಚ್ಚು ಅಂದರೂ ತಿಂಗಳಿಗೆ ೨ ಸಾವಿರ ದುಡಿಯುತ್ತಿದ್ದ ಕಿರುಬಿ ಕುಟುಂಬದವರಿಗೆ, ಒಂದೇ ಬಾರಿಗೆ ಇಷ್ಟೊಂದು ಹಣ ನೋಡಿದ್ದು, ಅವರ ಖುಷಿಗೆ ಪಾರವೇ ಇರಲಿಲ್ಲ. ಆದರೆ ಈ ಸಂತೋಷ ಕಿರುಬಿಗೆ ಇರಲಿಲ್ಲ. ಅವರು ತನ್ನ ಕುಟುಂಬದವರನ್ನೆಲ್ಲಾ ಒಟ್ಟಾಗಿ ಕರೆದು ಹೇಳುತ್ತಾನೆ..ನೋಡಿ ಇದು ನಾವು ದುಡಿದ ಹಣ ಅಲ್ಲ. ಪಾಪ ಯಾರೋ ಕಷ್ಟಪಟ್ಟು ದುಡಿದ ತಮ್ಮ ಹಣವನ್ನ ಇದರಲ್ಲಿ ಬಚ್ಚಿಟ್ಟಿದ್ದಾರೆ, ಅವರನ್ನ ಹುಡುಕಿ ಈ ಹಣವನ್ನ ಅವರಿಗೆ ಕೊಟ್ಟುಬಿಡೋಣ ಎಂದು ತನ್ನ ಕುಟುಂಬದವರಿಗೆ ಹೇಳುತ್ತಾನೆ. ಇನ್ನು ಲಾಯರ್ ಆಗಿರುವ ತನ್ನ ಮಿತ್ರನೊಬ್ಬನಿಗೆ ಕಿರುಬಿ ಹಣದ ವಿಷಯ ಕುರಿತು ಹೇಳಿದಾಗ ಆತ ಹೇಳುತ್ತಾನ.. ಕಾನೂನಿನ ಪ್ರಕಾರ ಈ ಹಣ ನಿನಗೆ ಸೇರಬೇಕಾದದ್ದು ಎಂದು. ಆದರೆ ಆತ್ಮಸಾಕ್ಷಿಯುಳ್ಳವನಾಗಿದ್ದ ಕಿರುಬಿ ತನ್ನ ಸ್ನೇಹಿತ ಹೇಳಿದ ಮಾತನ್ನ ಒಪ್ಪಲು ಸಿದ್ಧನಿರಲಿಲ್ಲ.

ಹಾಗಾಗಿ ತಾನು ಸ್ಟೂಲ್ ತಂದಿದ್ದ ಆ ಸೆಕೆಂಡ್ ಹ್ಯಾಂಡ್ ಫ್ಉರ್ನಿಚರ್ ಅಂಗಡಿಗೆ ಹೋಗಿ, ಈ ಸ್ಟೂಲ್ ಯಾರದ್ದು ಎಂಬ ಮಾಹಿತಿಯನ್ನ ಪಡೆದ ಕಿರುಬಿ ಆ ಸ್ಟೂಲ್ ನ ಮಾಲೀಕನನ್ನ ಹುಡುಕಿ 43 ಸಾವಿರ ಡಾಲರ್ ಹಣವನ್ನ ಆ ವ್ಯಕ್ತಿಗೆ ಕೊಡುತ್ತಾನೆ. ಇನ್ನು ಕಿರುಬಿಯ ಒಳ್ಳೆಯತನವನ್ನ ಕಂಡು ಬೆರಗಾದ ಆ ಸ್ಟೂಲ್ ನ ಮಾಲೀಕ ಮತ್ತು ಅವರ ಕುಟುಂಬದವರು ತಮ್ಮ ಹಣವನ್ನ ತೆಗೆದುಕೊಳ್ಳುವಾಗ ಕಣ್ಣೀರು ಹಾಕಿದ್ದಾರೆ. ಇನ್ನು ಇದರ ಬಗ್ಗೆ ಮಾತನಾಡಿದ ಕಿರುಬಿ, ಆ ಹಣ ಅವರಿಗೆ ಸೇರಬೇಕಾದದ್ದು. ಒಬ್ಬ ಮನುಷ್ಯನಾಗಿ ನಾನು ಏನು ಮಾಡಬೇಕೋ ಅದನ್ನೇ ಮಾಡಿದ್ದೇನೆ, ಇದರಿಂದ ಅವರ ಕುಟುಂಬಕ್ಕೆ ಒಳ್ಳೆಯದಾದರೆ ನನಗೆ ಅಷ್ಟೇ ಸಾಕು, ಎಂದು ತಮ್ಮ ಮನೆಯ ಕಡೆ ಹೆಜ್ಜೆ ಹಾಕುತ್ತಾರೆ ಕಿರುಬಿ. ಸ್ನೇಹಿತರೇ, ಇಂತಹ ಒಳ್ಳೆಯ ವ್ಯಕ್ತಿಗಳು ಇರುವುದರಿಂದಲೇ ಜಗತ್ತಿನಲ್ಲಿ ಕಾಲಕಾಲಕ್ಕೆ ಸ್ವಲ್ಪವಾದರೂ ಮಳೆ ಬೆಳೆ ಆಗುತ್ತಿರುವುದು ಅಲ್ಲವೇ..ಒಂದು ವೇಳೆ ಈ ತರಹದ ಒಳ್ಳೆಯ ಪ್ರಾಮಾಣಿಕ ಗುಣವುಳ್ಳ ವ್ಯಕ್ತಿಗಳನ್ನ ನಿಮ್ಮ ಜೀವನದಲ್ಲಿ ನೀವು ನೋಡಿದ್ದರೆ, ಅದರ ಬಗ್ಗೆ ನಮ್ಮೊಂದಿಗೆ ನಿಮ್ಮ ಅಭಿಪ್ರಾಯವನ್ನ ಹಂಚಿಕೊಳ್ಳಿ..

Leave a Reply

Your email address will not be published. Required fields are marked *