Advertisements

ಸೀರಿಯಲ್ ನೋಡಿದ ಈ ಹೆಣ್ಣುಮಗಳು ತನ್ನ ತಂದೆಗಾಗಿ ಯಾರೂ ಮಾಡದ ಕೆಲಸ ಮಾಡಿದ್ದಾಳೆ ! ನಿಜಕ್ಕೂ ಗ್ರೇಟ್..

Kannada Mahiti

ಸ್ನೇಹಿತರೇ, ಸಿನಿಮಾ ಹಾಗೂ ಧಾರಾವಾಹಿಗಳಿಂದ ಒಳ್ಳೆಯದು ಕಲಿಯಲಿಕ್ಕಿದೆ ಜೊತೆಗೆ ಕೆಟ್ಟದ್ದು ಸಹ. ಒಳ್ಳೆಯದನ್ನ ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಅದರಿಂದ ಪ್ರೇರೇಪಣೆಗೊಂಡ ಬಹುತೇಕರು ದೊಡ್ಡ ದೊಡ್ಡ ಬದಲಾವಣೆಗೆ ಕಾರಣವಾಗಿದ್ದಾರೆ. ಅದರಲ್ಲಿ ಇತ್ತೀಚೆಗಷ್ಟೇ ನಡೆದಿರುವ ಘಟನೆಯೊಂದು ನೈಜ ನಿದರ್ಶನವಾಗಿದೆ. ಹೌದು, ಕನ್ನಡದ ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಕನ್ನಡತಿ ಸೀರಿಯಲ್ ಹಲವಾರು ಕಾರಣಗಳಿಂದ ತನ್ನತ್ತ ವೀಕ್ಷಕರನ್ನ ಸೆಳೆಯುವಲ್ಲಿ ಯಶಸ್ವಿಯಾಗಿದೆ. ಇನ್ನು ಈ ಧಾರಾವಾಹಿಯಲ್ಲಿ ಪ್ರಸಾರವಾದ ದ್ರಶ್ಯವೊಂದರಿಂದ ಪ್ರೇರೇಪಣೆಗೊಂಡ ಯುವತಿಯೊಬ್ಬಳು ತಾನು ಕೂಡ ಅದೇ ಮಾರ್ಗವನ್ನ ಅನುಸರಿಸಿ ಎಲ್ಲರ ಮೆಚ್ಚುಗೆಗೆ ಪಾತ್ರಳಾಗಿದ್ದಾಳೆ.

Advertisements

ನೀವು ಕನ್ನಡತಿ ಧಾರವಾಹಿಯನ್ನ ನೋಡುವವರಾಗಿದ್ದರೆ ಅದರಲ್ಲಿ ಬರುವ ನಾಯಕಿ ಪಾತ್ರದಾರಿ, ತನ್ನ ತಂದೆಯ ಅಂತಿಮ ಸಂ’ಸ್ಕಾರದ ಕಾರ್ಯವನ್ನ ತಾನೇ ನೆರವೇರಿಸುತ್ತಾಳೆ. ಗಂಡು ಮಕ್ಕಳು ಮಾಡಬೇಕಾದ ಕಾರ್ಯವನ್ನ ಹೆಣ್ಣು ಮಗಳೊಬ್ಬಳು ಮಾಡಿದ ಈ ದೃಶ್ಯ ಸೋಷಿಯಲ್ ಮೀಡಿಯಾಗಳಲ್ಲಿ ಹೆಚ್ಚು ವೈರಲ್ ಆಗಿದ್ದು, ಈ ರೀತಿಯ ಬದಲಾವಣೆ ನಿಜ ಜೀವನದಲ್ಲೂ ಆಗಬೇಕೆಂಬ ಚರ್ಚೆಗೆ ಕಾರಣವಾಗಿತ್ತು. ಆ ದೃಶ್ಯ ಕಾಲ್ಪನಿಕವಾಗಿದ್ದರೂ ಸಮಾಜಕ್ಕೆ ಒಂದು ಬದಲಾವಣೆಯ ಸಂದೇಶವನ್ನ ಸಾರುವಂತಿತ್ತು. ಈಗ ಇದೆ ಕಾಲ್ಪನಿಕ ದೃಶ್ಯ ನಿಜ ಜೀವನದಲ್ಲೂ ಕೂಡ ನಡೆದಿದೆ. ಈ ಸೀರಿಯಲ್ ನಿಂದ ಪ್ರೇರೇಪಣೆಗೊಂಡ ಹೆಣ್ಣು ಮಗಳೊಬ್ಬಳು ಇದನ್ನ ನಿಜಜೀವನದಲ್ಲಿ ಮಾಡಿ ತೋರಿಸಿದ್ದಾಳೆ. ತಂದೆಯ ಅಂತಿಮ ಕಾರ್ಯವನ್ನ ಗಂಡು ಮಕ್ಕಳೇ ಮಾಡಬೇಕು ಎಂದಂತಿಲ್ಲ, ಹೆಣ್ಣು ಮಕ್ಕಳು ಕೂಡ ಮಾಡಬಹುದು ಎಂಬುದನ್ನ ಮಾಡಿ ತೋರಿಸಿದ್ದಾಳೆ.

ಹೌದು, ಈ ಘಟನೆ ನಡೆದಿರುವುದು ಉತ್ತರ ಕನ್ನಡದ ಕಾರವಾರದ ಕುರ್ನಿಪೇಟೆ ಎಂಬ ಗ್ರಾಮದಲ್ಲಿ. ಇದೆ ಹಳ್ಳಿಯಲ್ಲಿ ವಾಸ ಮಾಡುತ್ತಿರುವ ಚಂದ್ರಕಾಂತ್ ಎಂಬುವವರಿಗೆ ಒಂಬತ್ತು ಜನ ಹೆಣ್ಣು ಮಕ್ಕಳು. ಇನ್ನುಮೂರು ದಿನಗಳ ಹಿಂದೆ ಶುಕ್ರವಾರದಂದು ಅವರು ಅನಾರೋಗ್ಯದ ಕಾರಣ ತೀ’ರಿಕೊಂಡಿದ್ದರು. ಆದರೆ ಗಂಡುಮಕ್ಕಳಿಲ್ಲದ ಚಂದ್ರಕಾಂತ್ ಅವರ ಅಂತಿಮ ಸಂ’ಸ್ಕಾರದ ಕಾರ್ಯವನ್ನ ಮಾಡಲು ಅವರ ಅಳಿಯಿಂದಿರು ಹಾಗೂ ಸಂಬಂದಿಕರು ಮುಂದೆ ಬರಲಿಲ್ಲ. ಆಗ ಇವರ ನಾಲ್ಕನೇ ಹೆಣ್ಣು ಮಗಳು ಸರೋಜಾ ಎನ್ನುವವರು ಒಂದು ದೊಡ್ಡ ನಿರ್ಧಾರಕ್ಕೆ ಬಂದಿದ್ದು, ತಾನೇ ಮುಂದೆ ನಿಂತು ತಂದೆಯ ಅಂತಿಮ ಕಾರ್ಯಗಳನ್ನ ನೆರವೇರಿಸಿದ್ದಾಳೆ. ಇನ್ನು ಅಲ್ಲಿ ನೆರದಿದ್ದವರು ಸಹ ಹೆಣ್ಣುಮಗಳ ಈ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಹೆಣ್ಣು ಮತ್ತು ಗಂಡುಮಕ್ಕಳು ಒಬ್ಬರೇ ಸಂತಾನದವರು ಅಂದ ಮೇಲೆ ಅವರ ನಡುವೆ ಭೇದವೇಕೆ ಅಲ್ಲವೇ..ತಂದೆ ತಾಯಿ ಇರುವಷ್ಟು ದಿವಸ ಅವರನ್ನ ಮಕ್ಕಳಂತೆ ಪ್ರೀತಿಯಿಂದ ಸಾಕಿ ಸಲುಹವವರೇ ನಿಜವಾದ ಮಕ್ಕಳಲ್ಲವೇ. ಒಟ್ಟಿನಲ್ಲಿ ಸಂಸಾರ, ಸಂಬಂಧಗಳು ನಡುವೆ ಬಿರುಕು ಸೃಷ್ಟಿ ಮಾಡುವ ಎಷ್ಟೋ ಧಾರಾವಾಹಿಗಳ ನಡುವೆ, ಸಮಾಜದಲ್ಲಿ ಇಂತಹ ಮಹತ್ತರವಾದ ಬದಲಾವಣೆಗೆ ಕಾರಣವಾಗುವ ಸಿನಿಮಾ ಧಾರಾವಾಹಿಗಳನ್ನ ಮೆಚ್ಚುವಂತದ್ದೇ. ಸ್ನೇಹಿತರೇ, ಇದೆ ರೀತಿ ಸಮಾಜದಲ್ಲಿ ಬದಲಾವಣೆಗೆ ಕಾರಣವಾದ ನಿಮ್ಮ ನೆಚ್ಚಿನ ಸಿನಿಮಾ ಯಾವದೆಂದು ತಿಳಿಸಿ..