Advertisements

ಅದ್ಬುತ ಕಲಾವಿದ ಕರಿಬಸವಯ್ಯರ ಜೀವನ ದು’ರಂ’ತ ಅಂ’ತ್ಯ ಹೆಗಾಯ್ತು ಗೊತ್ತಾ? ಅವತ್ತು ಬೆಳಗಿನ ಜಾವ ಆಗಿದ್ದೇನು..

Cinema

ಕರಿ ಬಸವಯ್ಯ ಒಬ್ಬ ಹಾಸ್ಯನಟನಾಗಿ ಮಾತ್ರವಲ್ಲದೇ, ಉತ್ತಮ ಕಲಾವಿದನಾಗಿ ಗಂಭೀರ ಪಾತ್ರಗಳಿಗೆ ಜೀವ ತುಂಬಿಯೂ, ನಟಿಸುತ್ತಿದ್ದ ಬಹುಮುಖ ಪ್ರತಿಭೆ. ಆದರೆ ತೆರೆ ಮೇಲೆ ವೀಕ್ಷಕರನ್ನು ನಕ್ಕು ನಗಿಸುತ್ತಿದ್ದ ಹಾಸ್ಯನಟನ ಬದುಕಿನಲ್ಲಿ ನಿಜಕ್ಕೂ ಊಹಿಸಿಕೊಳ್ಳಲಾಗದ ಕಣ್ಣೀರಿನ ಕ್ಷಣಗಳೇ ಕಳೆದುಹೋಗಿವೆ. ಕರಿಬಸವಯ್ಯ ಅವರು ಬೇರೆ ಏಲ್ಲಿನವರೋ ಅಲ್ಲ, ಅವರು ಹುಟ್ಟಿ ಬೆಳೆದದ್ದು ಎಲ್ಲ ಬೆಂಗಳೂರಿನ ನೆಲಮಂಗಳ ಸಮೀಪದ ಒಂದು ಪುಟ್ಟ ಹಳ್ಳಿಯಲ್ಲಿ, ಹಳ್ಳಿ ಜನಗಳ ಮಧ್ಯೆ ಗ್ರಾಮೀಣ ಸೊಗಡಿನಲ್ಲಿ ಕೂಡು ಕುಟುಂಬದಲ್ಲಿ ಕರಿಬಸವಯ್ಯ ಅವರು ಜನಿಸ್ತಾರೆ. ಕುರುಬಗೌಡ ಸಮುದಾಯದಲ್ಲಿ ಜನಸಿದವರಾದ್ದರಿಂದ ಬಾಲ್ಯದಿಂದಲೇ ಕುಲಕಸುಬು ಡುಳ್ಳು ಕುಣಿತ, ಕಂಸಾಳೆಯನ್ನು ಕರಗತ ಮಾಡಿಕೊಂಡಿದ್ರು. ಜನಪದ ಕಲೆಗಳಲ್ಲಿ ಎಳೆವೆಯಲ್ಲಿಯೇ ನಿಸ್ಸೀಮರಾಗಿದ್ದರು.

[widget id=”custom_html-3″]

Advertisements


ಇನ್ನು ಕರಿಬಸವಯ್ಯ ಅವರ ತಾತ ಸಹ ಹರಿಕಥೆಯನ್ನು ಹೇಳುವುದರಲ್ಲಿ ಪ್ರಸಿದ್ಧಿ ಪಡೆದಿದ್ದರು. ತಾತನ ಜೊತೆ ಮೊಮ್ಮಗನು ಸಹ ಹರಿಕಥೆ ಹೇಳೋದನ್ನು ಅಭ್ಯಾಸ ಮಾಡಿಕೊಂಡಿದ್ದರು. ನಂತರದ ದಿನಗಳಲ್ಲಿ ರಂಗಭೂಮಿಯಲ್ಲಿ ಅಭಿನಯಿಸುವುದನ್ನು ಶುರು ಮಾಡಿದ ಕರಿಬಸವಯ್ಯ ಅವರು ತನ್ನ ಮನೋಜ್ಞ ಅಭಿನಯದ ಮುಖೇನ ವೀಕ್ಷಕರನ್ನು ಮೂಕ ಪ್ರೇಕ್ಷಕರನ್ನಾಗಿಸುತ್ತಿದ್ದರು. ರ’ಕ್ತಾ’ಕ್ಷಿ, ಸ್ಪೂರ್ತಿ ಹೀಗೆ ಸಾಲು ಸಾಲು ನಾಟಕಗಳಲ್ಲಿ ಅಭಿನಯಿಸಿ ಸೈ ಎನಿಸಿಕೊಂಡ್ರು. ನಂತರ ದೊಡ್ಡಮನೆ ಎನ್ನುವ ಧಾರವಾಹಿಗೂ ಸಹ ಬಣ್ಣ ಹಚ್ಚಿದ್ರು. ಪ್ರಪ್ರಥಮವಾಗಿ ಇದೇ ಧಾರವಾಹಿ ಮುಖೇನ ಕಿರುತೆರೆಯನ್ನು ಕರಿಬಸವಯ್ಯ ಪ್ರವೇಶ ಮಾಡಿದ್ರು. ಆಗ ಯಾವುದೇ ಪ್ರಾದೇಶಿಕ ಚಾನೆಲ್​ಗಳಿಲ್ಲದ ಕಾರಣ ಡಿಡಿ1ನಲ್ಲಿ ಈ ದಾರವಾಹಿ ಪ್ರಸಾರವಾಗಿ ಕನ್ನಡಿಗರ ಮನೆ ತಲುಪಿತ್ತು.

[widget id=”custom_html-3″]


ಧಾರವಾಹಿಯ ಅಮೋಘ ಅಭಿನಯಕ್ಕೆ ಮನಸೋತು ಪ್ರಖ್ಯಾತ ನಿರ್ದೇಶಕರಾದ ನಾಗತಿಹಳ್ಳಿ ಚಂದ್ರಶೇಖರ್ ಅವರು ಸಿನಿಮಾದಲ್ಲಿ ಅಭಿನಯಿಸಲಿಕ್ಕೆ ಅವಕಾಶ ಕೊಡ್ತಾರೆ. ಒಬ್ಬ ಹಳ್ಳಿ ವ್ಯಕ್ತಿಯಾಗಿ ಹೆಚ್ಚಿನ ಲಾಭದ ಅಪೇಕ್ಷೆಯಲ್ಲಿದ್ದ ವ್ಯಕ್ತಿ ಮೋಸ ಹೋಗಿ ನಷ್ಟಕ್ಕೆ ಸಿಲುಕುವ ಮುಗ್ಧ ಪಾತ್ರದಲ್ಲಿ ಮೊದಲ ಬಾರಿಗೆ ಬೆಳ್ಳಿತೆರೆಯಲ್ಲಿ ಕರಿಬಸವಯ್ಯ ಕಾಣಿಸಿಕೊಳ್ತಾರೆ. ಅದಾದ ಮೇಲೆ ಜನರ ಮನಸ್ಸಲ್ಲಿ ಅಚ್ಚೊತ್ತಿ ಸಾಲು ಸಾಲು ಸಿನಿಮಾಗಳಲ್ಲಿ ಕರಿಬಸವಯ್ಯ ಕಾಣಿಸಿಕೊಳ್ತಾರೆ. ಜನುಮದ ಜೋಡಿ, ಭೂಮಿ ತಾಯಿಯ ಚೊಚ್ಚಲ ಮಗ ಹೀಗೆ ಸಾಕಷ್ಟು ಸಿನಿಮಾದಲ್ಲಿ ಬಣ್ಣ ಹಚ್ಚಿ ಆಗಿನ ಕಾಲದ ಜನಪ್ರಿಯ ಹಾಸ್ಯ ಕಲಾವಿದರಾದ ಸಾಧು ಕೋಕಿಲ, ಟೆನಿಸ್ ರವರಂತೆಯೇ ಸಮಕಾಲೀನ ಹಾಸ್ಯ ನಟರಾಗಿ ಗುರುತಿಸಿಕೊಂಡ್ರು.

[widget id=”custom_html-3″]

ಅಷ್ಟೊತ್ತಿಗಾಗಲೇ ಕನ್ನಡ ಸಿನಿ ಲೋಕದಲ್ಲಿ ತನ್ನದೇ ಆದ ಛಾಪು ಮೂಡಿಸಿದ್ರು. ನಂತರ ಯಾರಿಗೆ ಸಾಲುತ್ತೆ ಸಂಬಳ ಸಿನಿಮಾದಲ್ಲಿ ಕನ್ನಡದ ಮತ್ತೊಬ್ಬ ಮೇರು ಹಾಸ್ಯ ಕಲಾವಿದೆ ಉಮಾಶ್ರೀ ಅವರಿಗೆ ಜೋಡಿಯಾಗಿ ಜಬರ್ದಸ್ತ್ ಆಗಿ ಅಭಿನಯಿಸಿದ್ರು. ಇವರಿಬ್ಬರ ಜೋಡಿ ಮಾಡಿದ ಕಮಾಲ್​​ಗೆ ಸಿನಿಮಾ ಸಾಕಷ್ಟು ಸುದ್ದಿಯಾಯ್ತು. ಹೀಗೆ ಚಿತ್ರರಂಗದಲ್ಲಿ ಉತ್ತುಂಗದಲ್ಲಿರುವಾಗಲೇ ಕರಿಬಸವಯ್ಯ ಅವರು ಸಿನಿ ಲೋಕದಿಂದ ಕೊಂಚ ಕೊಂಚ ದೂರ ಸರಿಲಿಕ್ಕೆ ಶುರು ಮಾಡ್ತಾರೆ. ಇದಕ್ಕೆ ಅವರ ಮಗಳು ರಾಧಾ ಮಾಡಿಕೊಂಡ ಆತ್ಮಹತ್ಯೆಯೂ ಸಹ ಕಾರಣ. ಪ್ರೀತಿಯಿಂದ ಸಾಕಿ ಸಲಹಿದ ಮುದ್ದು ಮಗಳು ಆ’ತ್ಮಹ’ತ್ಯೆ’ಗೆ ಶರಣಾಗಿರೋದು ಹಾಸ್ಯನಟನ ಬದುಕಿನಲ್ಲಿ ಅ’ಲ್ಲೋಲ ಕ’ಲ್ಲೋಲ ಆ’ಗಲಿಕ್ಕೆ ಮುಖ್ಯ ಕಾರಣವಾಯ್ತು.

[widget id=”custom_html-3″]

ನಂತರದ ದಿನಗಳಲ್ಲಿ ಆಗೊಂದು ಈಗೊಂದು ಸಿನಿಮಾದಲ್ಲಿ ಕರಿಬಸವಯ್ಯ ಅವರು ಗುರುತಿಸಿಕೊಂಡ್ರು ಮುಂಚೆ ಮೂಡಿಸುತ್ತಿದ್ದ ಛಾಪು ಅವರ ಸಿನಿಮಾಗಳಲ್ಲಿ ಕಾಣಿಸಿಲ್ಲ. ಕರಿಬಸವಯ್ಯ ಅವರು ಕ್ರಮೇಣ ಕಿ’ನ್ನ’ತೆಗೆ ಜಾರಲಿಕ್ಕೆ ಶುರು ಮಾಡಿದ್ರು. ಇವರು ಕೊನೆ ಬಾರಿ ಸಿನಿಮಾದಲ್ಲಿ ನಟಿಸಿದ್ದು ಕೂಡ ಬ್ರೇಕಿಂಗ್ ನ್ಯೂಸ್ ಎಂಬ ಸಿನಿಮಾದಲ್ಲಿ. ಬ್ರೇಕಿಂಗ್ ನ್ಯೂಸ್ ಸಿನಿಮಾ ಶೂ’ಟಿಂಗ್ ಮುಗಿಸಿ ಮನೆಗೆ ಹೋಗುತ್ತಿದ್ದಾಗ ಕಾರು ಅಪ’ಘಾ’ತವಾಗಿ ಕರಿಬಸವಯ್ಯ ಅವರು ಆಸ್ಪತ್ರೆಗೆ ದಾಖಲಾಗ್ತಾರೆ.

ನಂತರ ಮೂರು ದಿನಗಳ ಕಾಲ ಆಸ್ಪತ್ರೆಯಲ್ಲಿಯೇ ಚಿ’ಕಿತ್ಸೆ ಪಡೆದುಕೊಳ್ತಾ ಇರುತ್ತಾರೆ. ಕೋ’ಮಾ’ದಲ್ಲಿದ್ದ ಕರಿಬಸವಯ್ಯ ಅವರು ಚೇತರಿಕೆ ಕಾಣೋದೇ ಇಲ್ಲ. ಚಿ’ಕಿತ್ಸೆ ಫಲಕಾರಿಯಾಗದೇ ಕೊ’ನೆಯು’ಸಿರೆ’ಳೆದೆ ಬಿಡ್ತಾರೆ. ಕನ್ನಡ ಸಿನಿಲೋಕಕ್ಕೆ ತುಂಬಲಾರದ ನಷ್ಟ ಆ ಅ’ಪ’ಘಾತದಿಂದ ಸಂಭವಿಸುತ್ತೆ. ಸ್ನೇಹಿತರೇ ಇದು ಹಾಸ್ಯ ನಟನಾಗಿ ಮಿಂಚಿ ಗಂಭೀರ ಪಾತ್ರಗಳಲ್ಲಿಯು ಜೀವ ತುಂಬಿ ನಟನಾ ಪ್ರೌಢಿಮೆಯನ್ನು ಮೆರೆದ ಕರಿಬಸವಯ್ಯ ಅವರ ದು’ರಂ’ತ ಕಥೆ. ಕರಿಬಸವಯ್ಯ ಅವರ ಬಗ್ಗೆ ನಿವೇನು ಹೇಳಲಿಕ್ಕೆ ಇಷ್ಟ ಪಡ್ತೀರಾ..