Advertisements

ಅರ್ಧ ಎಕರೆ ಜಮೀನಿನಲ್ಲಿ ಕರಿ ಬೇವು ಬೆಳೆದು ತಿಂಗಳಿಗೆ 20 ರಿಂದ 25 ಸಾವಿರ ರೂಪಾಯಿ ಆದಾಯ ಪಡೆಯುತ್ತಿರುವ ರೈತ! ಸಂಪೂರ್ಣ ಮಾಹಿತಿ ನೋಡಿ..

Uncategorized

ಪ್ರಿಯ ಓದುಗರೆ ನಮ್ಮದು ಕೃಷಿ ಪ್ರಧಾನ ದೇಶ. ಕೃಷಿಯೇ ಜೀವನಾಧಾರ. ರೈತರಿಗೆ ಯಾವ ಬೆಳೆಯಿಂದ ಹೆಚ್ಚು ಲಾಭ ಪಡೆಯಬೇಕು ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲ. ಕೆಲವರು ಸಾವಿರಾರು ಎಕರೆ ಕೃಷಿ ಭೂಮಿ ಇದ್ದರೂ ಸಾಲಬಾದೆಗೆ ತು’ತ್ತಾಗಿ ಆ’ತ್ಮಹ’ತ್ಯೆಯ ದಾರಿ ಹಿಡಿಯುತ್ತಿದ್ದಾರೆ. ಇಂತಹ ರೈತರಿಗೆ ಇಲ್ಲೊಬ್ಬ ರೈತ ಮಾದರಿಯಾಗಿದ್ದಾನೆ. ಕೇವಲ ಕರಿಬೇವು ಬೆಳೆದು ಮನೆಯ ಖರ್ಚು ನಿಭಾಯಿಸಿ ತಿಂಗಳಿಗೆ 20ರಿಂದ 25 ಸಾವಿರ ರೂಪಾಯಿ ಆದಾಯ ತೆಗೆಯುತ್ತಿದ್ದಾರೆ.

[widget id=”custom_html-3″]

ಈ ಕುರಿತು ಒಂದು ವರದಿ ನಿಮಗಾಗಿ. ಸಾವಿರಾರು ಎಕರೆ ಭೂಮಿ ಇದ್ದರೂ ಯಾವ ಬೆಳೆ ಹಾಕಬೇಕು? ಹೇಗೆ ಲಾಭ ಪಡೆಯಬೇಕು? ಎಂದು ತಿಳಿಯುವುದಿಲ್ಲ. ಇಲ್ಲೋಬ್ಬರು ಕೇವಲ ಅರ್ಧ ಎಕರೆ ಕೃಷಿಭೂಮಿಯಲ್ಲಿ 500 ಕರಿಬೇವಿನ ಗಿಡ ಬೆಳೆದು ತಿಂಗಳು 20ರಿಂದ 25 ಸಾವಿರ ಲಾಭ ಪಡೆಯುತ್ತಿದ್ದಾರೆ. ಇದರಿಂದ ಯಾವುದೇ ಹೆಚ್ಚಿನ ಖರ್ಚಿಲ್ಲದೆ, ಕಡಿಮೆ ಬಂಡವಾಳ ಹಾಕಿ ನೆಮ್ಮದಿ ಜೀವನ ನಡೆಸುತ್ತಿದ್ದಾರೆ.

Advertisements

[widget id=”custom_html-3″]

[widget id=”custom_html-3″]

ಯಾರು ಈ ರೈತ ಅಂತೀರಾ? ಅವರು ಚಿತ್ರದುರ್ಗ ಜಿಲ್ಲೆಯ ಮೆದೆಹಳ್ಳಿ ಗ್ರಾಮದ ಗಿರಿರಾಜ್ ಎಂಬುವರು. ಇವರದು ಕೃಷಿ ಹಿನ್ನೆಲೆ ಕುಟುಂಬ. ಒಂದು ಕರಿಬೇವು ಗಿಡ ನೆಟ್ಟ ಒಂದು ವರ್ಷಕ್ಕೆ ಕಟಾವಿಗೆ ಬರುತ್ತದೆ. ಇದೀಗ ಒಂದು ವರ್ಷಕ್ಕೆ 4 ಬಾರಿ ಕಟಾವು ಮಾಡಿ ಕರಿಬೇವು ಸೊಪ್ಪನ್ನು ಮಾರಿ ಲಾಭ ಪಡೆಯುತ್ತಿದ್ದಾರೆ. ಈ ಕರಿಬೇವಿನ ಕಟಾವಿಗೂ ಕೆಲ ನಿಯಮಗಳಿವೆ. ಕಟಾವು ಮಾಡುವಾಗ ಯಾವುದೇ ಹಳೆ ಎಲೆಗಳನ್ನು ಬಿಡಬಾರದು. ಚಿಗುರು ಹೊಸದಾಗಿ ಬರುವಂತೆ ಕಟಾವು ಮಾಡಬೇಕು. ಕೈಯಿಂದ ಮುರಿಯುವುದು, ಕಡೆಯುವುದು ಮಾಡಬಾರದು. ಸಂಪೂರ್ಣವಾಗಿ ಎಲೆಯನ್ನು ತೆಗೆಯುವುದರಿಂದ ಯಾವುದೇ ರೋಗಗಳು ಬರುವುದಿಲ್ಲ. ಇದಕ್ಕೆ ನೀರು ಕೂಡ ಹೆಚ್ಚಾಗಿ ಬೇಕಾಗುವುದಿಲ್ಲ.

[widget id=”custom_html-3″]

[widget id=”custom_html-3″]

ಬೇಸಿಗೆಯಲ್ಲಿ ವಾರಕ್ಕೊಮ್ಮೆ ನೀರು ಉಣಿಸಿದರೆ ಸಾಕು. ವರ್ಷಕ್ಕೆ ಒಂದು ಬಾರಿಯಂತೆ ಈ ಕರಿಬೇವಿನ ಬುಡಕ್ಕೆ ಕುರಿ ಗೊಬ್ಬರ ಹಾಕುತ್ತಾರೆ. ಇಲ್ಲವೇ ಸಾವಯವ ಗೊಬ್ಬರ ಹಾಕುತ್ತಾರೆ. ಈ ಕೃಷಿ ವಿಭಿನ್ನವಾಗಿದ್ದರೂ ಇದು ರೈತರ ಜೀವನಕ್ಕೆ ಒಂದು ದಾರಿಯಾಗಿದೆ. ಇದೇ ತರಹ ರೈತರು ಬದುವಿನಲ್ಲಿ ಬೆಳೆದ ಬಾರೆ ಹಣ್ಣು, ಪೇರಲ ಹಣ್ಣುಗಳ ಗಿಡಗಳಿಂದ ಲಾಭ ಪಡೆಯಬಹುದಾಗಿದೆ. ಹೆಚ್ಚಿನ ಬಂಡವಾಳ ಹಾಕದೆ, ನೀರಿನ ಸಮಸ್ಯೆ ಇಲ್ಲದೆ ನೀವು ಕೂಡಾ ಹಲವಾರು ಬೆಳೆಗಳನ್ನು ಬೆಳೆಯಬಹುದಾಗಿದೆ.

[widget id=”custom_html-3″]