Advertisements

ಕರ್ಣ ತಮ್ಮ ಜೇಷ್ಠನೆಂದು ತಿಳಿದ ಮೇಲೆ ಪಂಚ ಪಾಂಡವರು ಮಾಡಿದ್ದೇನು ! ಯುಧಿಷ್ಠಿರ ಇಡೀ ಸ್ತ್ರೀ ಕುಲಕ್ಕೆ ಶಾಪ ಕೊಟ್ಟಿದ್ದೇಕೆ !

Adyathma

ನಮಸ್ತೇ ಸ್ನೇಹಿತರೇ, ಮಹಾಭಾರತದ ಶ್ರೇಷ್ಠ ಮಹಾಯೋಧರಲ್ಲಿ ದಾನ ವೀರ ಶೂರ ಕರ್ಣ ಶ್ರೇಷ್ಠನಾಗಿದ್ದಾನೆ ಎಂದರೆ ತಪ್ಪಾಗೊದಿಲ್ಲ. ಮಹಾಭಾರತದ ಸಂಗ್ರಾಮದಲ್ಲಿ ಅದೊಂದು ಮಹತ್ವವಾದ ಪರ್ವ. ಜೀವನಪರ್ಯಂತ ಕೇವಲ ಅವಮಾನ, ಅಪಮಾನಗಳನ್ನೇ ಅನುಭವಿಸಿದ ಕರ್ಣ ಕುಂತಿ ಪುತ್ರನೆಂದು, ಪಾಂಡವರ ಜೇಷ್ಠನೆಂದು ಗೊತ್ತಾಗುವ ಸಮಯ ಬಂದೇ ಬಿಡುತ್ತದೆ. ಹೌದು, ನಿಶ್ಶಸ್ತ್ರಧಾರಿಯಾಗಿದ್ದ ಕರ್ಣ ಭೂಮಿಯಲ್ಲಿ ಹೂತುಹೋಗಿದ್ದ ತನ್ನ ರಥದ ಚಕ್ರವನ್ನ ಎತ್ತುವ ಸಮಯದಲ್ಲಿ ವಾಸುದೇವ ಕೃಷ್ಣನ ಆದೇಶದಂತೆ ಅಂಜಲಿಕಾಸ್ತ್ರವನ್ನ ಪ್ರಯೋಗ ಮಾಡಿದ ಅರ್ಜುನ ಕರ್ಣನ ವ’ಧೆ ಮಾಡುತ್ತಾನೆ. ಇನ್ನು ತನ್ನ ಜೇಷ್ಠ ಪುತ್ರನ ಕರ್ಣನ ಅಂ’ತ್ಯವಾಯಿತು ಎಂಬ ವಿಷಯ ತಲುಪುತ್ತಲೇ ರಾಜಮಾತೆ ಕುಂತಿ ದೇವಿ ತನ್ನ ಪುತ್ರ ಕರ್ಣನನ್ನ ಹುಡುಕುತ್ತಾ ರ’ಣಭೂಮಿಗೆ ಬರುತ್ತಾಳೆ.

Advertisements

ತನ್ನ ಮಗುವಿನ ಅಂತಿಮ ಕ್ಷಣಗಳನ್ನ ಕಂಡು ಆ ಮಾತೆಯ ಕರುಳು ಕಡಲಾಗಿ ಹರಿದು ಕರ್ಣನ ತಲೆಗೆ ಎರಡನೆಯ ಹಾಗು ಕೊನೆಯ ಬಾರಿಗೆ ಕುಂತಿ ದೇವಿ ಮಡಿಲಾಗುತ್ತಾಳೆ. ಇದನ್ನ ಕಂಡ ಪಂಚ ಪಾಂಡವರು ಅಚ್ಚರಿಗೊಳ್ಳುತ್ತಾರೆ. ಧಿಗ್ಬ್ರಾಂತರಾಗಿ ತಮ್ಮ ಶ’ತ್ರುವಿಗೇಕೆ ನೀವು ಕಣ್ಣೀರು ಹಾಕುತ್ತಿರುವಿರಿ ಎಂದು ಪ್ರಶ್ನೆಗಳನ್ನ ಕೇಳುತ್ತಾರೆ. ಕೊನೆಗೆ ಕುಂತಿ ದೇವಿಯು ತನ್ನ ಜೀವನದಲ್ಲಿ ತಾನು ಮಾಡಿದ ಮಹಾ ತಪ್ಪನ್ನ ತನ್ನ ಇದು ಜನ ಮಕ್ಕಳಿಗೆ ಹೇಳುತ್ತಾಳೆ. ತಾನು ಕನ್ಯೆಯಾಗಿದ್ದಾಗ ತನಗೆ ದೂರ್ವಾಸ ಮುನಿಗಳು ಕೊಟ್ಟ ವರ ಹಾಗೂ ಆ ವರದ ಬಗ್ಗೆ ಇದ್ದ ಕುತೂಹಲದಿಂದ ಮದುವೆಗೂ ಮುಂಚೆ ಮೊದಲ ವರವನ್ನ ಪರೀಕ್ಷೆ ಮಾಡಲು ಹೋಗಿ ಸೂರ್ಯದೇವನಿಂದ ಕರ್ಣ ಹುಟ್ಟಿದ ರಹಸ್ಯವನ್ನ ಹೇಳುತ್ತಾಳೆ.

ಇನ್ನು ಕರ್ಣನ ಜನ್ಮ ರಹಸ್ಯವನ್ನ ಕೇಳಿದ ಪಂಚ ಪಾಂಡವರು ಕರ್ಣ ತಮ್ಮ ಜೇಷ್ಠನಿಂದ ತಿಳಿದ ಮೇಕೂಡಲೇ ಅವರ ಶೋಕ ಮುಗಿಲುಮುಟ್ಟಿತ್ತದೆ. ತಾವು ಕರ್ಣನನ್ನ ಅವಮಾನ ಮಾಡಿದ ಘಟನೆಗಳನ್ನೆಲ್ಲಾ ಪಂಚ ಪಾಂಡವರು ನೆನಪಿಸಿಕೊಳ್ಳುತ್ತಾರೆ. ಇನ್ನು ತನ್ನ ಜೀವನ ಪರ್ಯಂತ ಕರ್ಣನನ್ನ ತನ್ನ ಶ’ತ್ರುವೇ ಎಂದು ತಿಳಿದಿದ್ದ ಅರ್ಜುನ ಶೋಕವಂತೂ ಮುಗಿಲು ಮುಟ್ಟುತ್ತದೆ. ತನ್ನ ಜೇಷ್ಠ ಭ್ರಾತನ ಸಾ’ವಿಗೆ ನಾನೆ ಕರಣನಾದೆನಾ ಎಂದು ಕಣ್ಣೀರಿನ ಸಾಗರವನ್ನೇ ಹರಿಸುತ್ತಾನೆ ಅರ್ಜುನ. ಬಳಿಕ ಐವರು ಪಾಂಡವರು ತಮ್ಮ ಜೇಷ್ಠ ಭ್ರಾತನಿಗೆ ನಮಿಸುತ್ತಾರೆ. ಆ ಒಂದು ಕ್ಷಣ ಕರ್ಣ ಇಡೀ ಜೀವನಪರ್ಯಂತ ತಾನು ಕಂಡ ನೋವೆಲ್ಲಾ ಅದೇ ಕ್ಷಣ ಕರಗಿಹೋಗುತ್ತದೆ.

ಇನ್ನು ಇದನ್ನ ಕಂಡ ಧರ್ಮರಾಯ ಸಿಂಹಾಸನಕೋಸ್ಕರ ತನ್ನ ಜೇಷ್ಠ ನನ್ನೇ ಸಾ’ವಿಗೆ ತಳ್ಳಬೇಕಾಯಿತಲ್ಲ ಎಂದು ಕುಸಿದು ಹೋಗುತ್ತಾನೆ. ಇದನ್ನೆಲ್ಲಾ ಮೊದಲೇ ಏಕೆ ಹೇಳಲಿಲ್ಲ ಮಾತೆ ಕುಂತಿದೇವಿ..ಮೊದಲೇ ತಿಳಿಸಿದ್ದರೆ ಈ ಘ’ನಘೋ’ರವಾದ ಯು’ದ್ಧವೇ ನಡೆಯುತ್ತಿರಲಿಲ್ಲವಲ್ಲ..ಇಂತಹ ದೊಡ್ಡ ಅಧರ್ಮ ಏಕೆ ಮಾಡಿದೆ ಮಾತೆ..ನಮ್ಮ ಜೇಷ್ಠನ ಹೆ’ಣ’ದ ಮೇಲಿನ ಸಿಂಹಾಸನದ ಮೇಲೆ ಕುಳಿತು ರಾಜ್ಯಭಾರ ನಡೆಸುವ ಇಚ್ಛೆ ನಮಗಿಲ್ಲ. ನೀನು ಮುಚ್ಚಿಟ್ಟ ಒಂದು ರಹಸ್ಯದಿಂದ ಇಂದು ನಮಗೆ ಹಾಗು ಕರ್ಣನಿಗೆ ಘೋ’ರ ಅನ್ಯಾಯವಾಗಿದೆ ಎಂದು ಕುಂತಿ ಮಾತೆಗೆ ಕೋಪದಿಂದ ಹೇಳುತ್ತಾನೆ. ಹಾಗೆಯೆ ನಿಮ್ಮ ಮುಚ್ಚಿಟ್ಟ ಈ ರಹಸ್ಯದಿಂದಲೇ ಇಷ್ಟೆಲ್ಲಾ ಅ’ನಾಹುತಹಾಗಲು ಕಾರಣವಾಗಿದ್ದು..ಹಾಗಾಗಿ ಹೆಂಗಸರು ಇನ್ನು ಮುಂದೆ ಯಾವುದೇ ರಹಸ್ಯವನ್ನ ಮುಚ್ಚಿಟ್ಟುಕೊಳ್ಳುವಂತೆ ಆಗದಿರಲಿ..ಏನೇ ರಹಸ್ಯವಿದ್ದರೂ ಯಾವುದೇ ರೂಪದಲ್ಲಾದರೂ ಆ ರಹಸ್ಯ ಈಚೆ ಬರಲಿ ಎಂದು ಇಡೀ ಸ್ತ್ರೀಕುಲಕ್ಕೆ ಶಾಪ ಕೊಟ್ಟುಬಿಡುತ್ತಾನೆ ಯುಧಿಷ್ಠಿರ.

ಆದರೆ ಆಗ ಕರ್ಣ ಹೇಳುತ್ತಾನೆ ಧರ್ಮರಾಯನಿಗೆ..ಇದರಲ್ಲಿ ಮಾತೆ ಕುಂತಿದೇವಿಯ ತಪ್ಪೇನಿಲ್ಲ..ನನ್ನ ಜನ್ಮ ರಹಸ್ಯವನ್ನ ನಿಮಗೆ ಹೇಳಬಾರದೆಂದು ನಾನೆ ಹೇಳಿದ್ದೇ.. ನೀವು ಐವರು ಪಾಂಡವರು ನನ್ನೊಡನೆ ಯುದ್ಧ ಮಾಡುವುದಿಲ್ಲ ಎಂದು ಮಾತೆಯಿಂದ ಭಾಷೆ ತೆಗೆದುಕೊಂಡಿದ್ದೆ ಎಂದು ಹೇಳುತ್ತಾನೆ ಕರ್ಣ. ಜೊತೆಗೆ ಅರ್ಜುನನಲ್ಲಿ ಕೇಳುತ್ತಾನೆ ತನ್ನ ಮಗನಿಗೆ ನೀನೇ ಶಿಕ್ಷಣವನ್ನ ಕಲಿಸಬೇಕು ಎಂದು ಪಾರ್ಥನಿಂದ ಮಾತು ತೆಗೆದುಕೊಳ್ಳುತ್ತಾನೆ. ಬಳಿಕ ಅದೇ ಕ್ಷಣ ನನ್ನ ಕೊನೆಯ ಆಸೆಯನ್ನ ನೆರವೇರಿಸಬಲ್ಲಿರಾ ಎಂದು ಕರ್ಣ ಪಾಂಡವರಲ್ಲಿ ಕೇಳುತ್ತಾನೆ. ಇದರಿಂದಾದರೂ ನಾವು ಮಾಡಿದ ಪಾಪ ಕರ್ಮಗಳನ್ನ ಕಳೆದುಕೊಳ್ಳುತ್ತೇವೆ ನಿಮ್ಮ ಕೊನೆಯ ಆಸೆ ಏನೆಂದು ಹೇಳಿ ಜೇಷ್ಠ ಭ್ರಾತಾ ಎಂದು ಐವರು ಕರ್ಣನಲ್ಲಿ ಕೇಳಿಕೊಳ್ಳುತ್ತಾರೆ.

ಆಗ ಕರ್ಣನು ನಾನು ಎಷ್ಟೇ ಧರ್ಮ ಮಾರ್ಗದಲ್ಲಿ ನಡೆಯಬೇಕೆಂದರೂ ಮಿತ್ರ ಧರ್ಮದ ಬಲೆಯಲ್ಲಿ ಸಿಲುಕಿ ಅಧರ್ಮಗಳನ್ನೇ ಮಾಡುತ್ತಾ ಬಂದಿದ್ದೇನೆ. ನಾನು ಇದನ್ನೆಲ್ಲಾ ಪರಲೋಕಕ್ಕೆ ಹೊಯ್ಯಲಾರೆ. ಹಾಗಾಗಿ ಎಲ್ಲಿ ಅಧರ್ಮವಿಲ್ಲವೋ ಅಂತಹ ಸ್ಥಳದಲ್ಲಿ ನನ್ನ ಅಂತಿಮ ಸಂಸ್ಕಾರ ಮಾಡಿ ಎಂದು ಕೇಳುತ್ತಾನೆ. ಆಗ ಸಂಕಟಕ್ಕೆ ಸಿಲುಕಿದ ಪಂಚ ಪಾಂಡವರು ಕುರುಕ್ಷೇತ್ರದಲ್ಲಿ ಅಧರ್ಮವಿಲ್ಲದ ಸ್ಥಳ ಯಾವುದು ಎಂದು ಯೋಚಿಸಿ ಕೊನೆಗೆ ಭಗವಂತ ವಾಸುದೇವ ಶ್ರೀಕೃಷ್ಣನ ಅಂಗೈನ ಮೇಲೆ ದಾನ ವೀರ ಶೂರ ಕರ್ಣನ ಅಂತಿಮ ಸಂಸ್ಕಾರವಾಗಿ ಕರ್ಣ ಸ್ವರ್ಗಸ್ತನಾಗುತ್ತಾನೆ.