Advertisements

ಮಹಾವೀರ ಕರ್ಣನ ಬಗ್ಗೆ ಇವತ್ತಿಗೂ ಈ ಒಂದು ವಿಷಯ ಚರ್ಚೆಯಾಗುತ್ತಲೇ ಇದೆ ! ಹಾಗಾದ್ರೆ ಕರ್ಣ ಮಾಡಿದ ತಪ್ಪಾದ್ರೂ ಏನು ಗೊತ್ತಾ ?

Adyathma

ಸ್ನೇಹಿತರೇ, ಹಿಂದೂಗಳ ಮಹಾಕಾವ್ಯಗಳಲ್ಲಿ ಒಂದಾದ ಮಹಾಭಾರತ ಕತೆ ಹಾಗೂ ಅದರಲ್ಲಿ ಬರುವ ಪಾತ್ರಗಳ ಬಗ್ಗೆ ಆಗಾಗ ಚರ್ಚೆಯಾಗುತ್ತಲೇ ಇರುತ್ತದೆ. ಇನ್ನು ಮಹಾಭಾರತದ ಪ್ರಮುಖ ಪಾತ್ರಗಳಲ್ಲಿ ಒಂದು ದಾನ ವೀರ ಶೂರ ಕರ್ಣನ ಪಾತ್ರ. ಮಹಾಭಾರತದ ದು’ರಂತ ನಾಯಕನೆಂದು ಮಹಾವೀರ ಕರ್ಣನಿಗೆ ಹೇಳಲಾಗುತ್ತದೆ. ವೀರರಲ್ಲಿ ಅತಿ ಶ್ರೇಷ್ಠ, ದಾನಿಗಳಲ್ಲಿ ಅಪ್ರತಿಮನಾಗಿರುವ ಕರ್ಣ ನಾಯಕನೋ ಖ’ಳನಾಯಕನೋ ಎಂಬ ಚರ್ಚೆ ಇವತ್ತಿಗೂ ಆಗುತ್ತಲೇ ಇದೆ. ಇನ್ನು ಕರ್ಣನ ಪಾತ್ರದ ಬಗ್ಗೆ ಸಹಾನುಭೂತಿ ಹೊಂದಿರುವ ಬಹುತೇಕರು ಅದಕ್ಕೆ ಕಾರಣಗಳನ್ನು ನೀಡಿದ್ದಾರೆ.

Advertisements

ಹೌದು, ತನ್ನ ಜನನವಾಗುತ್ತಲೇ ಹೆತ್ತ ತಾಯಿಯಿಂದ ದೂರವಾದವನು ಸೂರ್ಯಪುತ್ರ ಕರ್ಣ. ನದಿಯಲ್ಲಿ ಸಿಕ್ಕ ಕರ್ಣನನ್ನ ಸಾಕಿ ಸಲುಹಿ ದೊಡ್ಡವನನ್ನಾಗಿ ಮಾಡಿದ್ದ ಸೂತಾ’ರಾಗಿದ್ದ ಅಧಿರಥ ಮತ್ತು ರಾಧಾ ದಂಪತಿ. ಅಧಿರಥ ಮಹಾಮಹಿಮ ಭೀಷ್ಮರಿಗೆ ಸಾರಥಿಯಾಗಿದ್ದವರು. ಇನ್ನು ಹಸ್ತಿನಾವತಿಯ ರಾಜಕುಮಾರರಿಗೆ ಬಿಲ್ವಿದ್ಯೆ ಹೇಳಿಕೊಡುತ್ತಿದ್ದ ಗುರು ದ್ರೋಣಾಚಾರ್ಯರು ಕರ್ಣನಿಗೆ ಬಿಲ್ವಿದ್ಯೆ ಹೇಳಿಕೊಡಲು ತಿರಸ್ಕರಿಸಿದ್ದರು ಎಂದು. ಇನ್ನು ರಾಜಕುಮಾರರ ವಿದ್ಯಾ ಪ್ರದರ್ಶನದ ನಡುವೆಯೂ ಸಹ ಕರ್ಣನನ್ನ ಜಾ’ತಿಯ ಕಾರಣದಿಂದ ಅವಮಾನ ಮಾಡಲಾಗಿತ್ತು. ಇದೆ ಕಾರಣವನ್ನಿಟ್ಟುಕೊಂಡು ಆಗಿನ ರಾಜರು ಮತ್ತು ಅವರ ಜೊತೆಗಿದ್ದರೂ ಕರ್ಣನಿಗೆ ಅ’ವಮಾನ ಮಾಡುತ್ತಿದ್ದರು. ಇನ್ನು ಪಾಂಡವ ಪುತ್ರರಾದ ಭೀಮ ಸೇನಾ ಮತ್ತು ಮಧ್ಯಮ ಪಾಂಡವ ಅರ್ಜುನ ಕರ್ಣ ಜೀವಂತ ಇರುವವರೆಗೂ ಅವನಿಗೆ ಅ’ವಮಾನ ಮಾಡುತ್ತಲೇ ಇದ್ದರು.

ಇನ್ನು ಸ್ವಯಂವರದಲ್ಲಿ ದ್ರುಪದ ಕನ್ಯೆ ದ್ರೌಪದಿಯು ಕರ್ಣನನ್ನ ಸೂ’ತ ಎಂದು ತಿರಸ್ಕಾರ ಮಾಡಿ ಅ’ವಮಾನ ಮಾಡಿದ್ದಳು. ಬ್ರಾಹ್ಮಣನ ವೇಷದಲ್ಲಿ ಬಂದ ದೇವತೆಗಳ ರಾಜ ಇಂದ್ರದೇವ ಕರ್ಣನ ರಕ್ಷಾಕವಚ ಮತ್ತು ಕರ್ಣ ಕುಂಡಲಗಳನ್ನ ಮೋ’ಸದಿಂದ ದಾನವಾಗಿ ಪಡೆದ. ಇನ್ನು ಮಹಾಭಾರತ ಯು’ದ್ಧ ಶುರುವಾಗುವುದಕ್ಕೆ ಮುಂಚೆ ವಾಸುದೇವ ಶ್ರೀ ಕೃಷ್ಣ ಕರ್ಣನ ಜನ್ಮ ರಹಸ್ಯವನ್ನ ಹೇಳುತ್ತಾನೆ. ತನ್ನ ಸಹೋದರರ ವಿರುದ್ಧವೇ ಯು’ದ್ಧ ಮಾಡಬೇಕಾಯಿತಲ್ಲ ಎಂದು ಮಾನಸಿಕವಾಗಿ ನೊಂದಿದ್ದ ಮಹಾವೀರ ಕರ್ಣ. ತಾಯಿ ಕುಂತಿದೇವಿಯೂ ಕೂಡ ತೊಟ್ಟ ಬಾಣ ಮತ್ತೆ ತೊಡಬಾರದು ಎಂದು ಕರ್ಣನಿಂದ ಮಾತನ್ನ ಪಡೆದುಕೊಳ್ಳುತ್ತಾಳೆ. ಇನ್ನು ಯುದ್ಧದ ಸಮಯದಲ್ಲಿ ಕರ್ಣನ ಸಾರಥಿಯಾಗಿದ್ದ ರಾಜ ಶಲ್ಯನು ಕರ್ಣನನ್ನ ಅ’ವಮಾನ ಮಾಡುತ್ತಾನೆ.

ಇಂದ್ರ ದೇವನು ಕರ್ಣನಿಗೆ ನೀಡಿದ ಒಮ್ಮೆ ಮಾತ್ರ ಶ’ತ್ರುವಿನ ಮೇಲೆ ಉಪಯೋಗಿಸಬಹುದಾಗಿದ್ದ ಮಹಾ ಆಸ್ತ್ರವನ್ನ ಭೀಮನ ಮಗ ಘಟೋತ್ಕಚನ ಮೇಲೆ ಪ್ರಯೋಗ ಮಾಡುವಂತೆ ಮಾಡುತ್ತಾನೆ ಕೃಷ್ಣ. ಕರ್ಣ ಅರ್ಜುನನ ಮೇಲೆ ಬಿಟ್ಟಿದ್ದ ಸರ್ಪಾಸ್ತ್ರದ ಬಾಣದಿಂದ ಅರ್ಜುನನ್ನ ರಕ್ಷಣೆ ಮಾಡುವ ಸಲುವಾಗಿ ರಥವನ್ನ ತನ್ನ ಕಾಲಿನಿಂದ ಒತ್ತಿ ಕರ್ಣನ ಮಹಾಸ್ತ್ರದಿಂದ ಅರ್ಜುನನ್ನ ರಕ್ಷಣೆ ಮಾಡುತ್ತಾನೆ ಕೃಷ್ಣ. ಇನ್ನು ಯು’ದ್ಧದ ಸಮಯದಲ್ಲಿ ಭೂಮಿಯಲ್ಲಿ ಹೂತು ಹೋಗಿದ್ದ ರಥದ ಚಕ್ರವನ್ನ ಎತ್ತಲು ಅನುಮತಿ ನೀಡಲಿಲ್ಲ ವಾಸುದೇವ ಕೃಷ್ಣ. ಇನ್ನು ಇದೆ ವೇಳೆ ನಿರಾಯುಧನಾಗಿದ್ದ ಕರ್ಣನ ಮೇಲೆ ಅರ್ಜುನ ಕರ್ಣನ ಮೇಲೆ ಬಾಣ ಪ್ರಯೋಗಿಸಿ ಕೊಂ’ದುಬಿಡುತ್ತಾನೆ. ದಾನಿಗಳಲ್ಲಿ ಮಹಾದಾನಿ, ವೀರರಲ್ಲಿ ಮಹಾವೀರ ಕರ್ಣ ಸೂರ್ಯ ದೇವನ ಮಗನಾಗಿದ್ದ ಕಾರಣ ಅತ್ಯಂತ ಸುಂದರ ಹಾಗೂ ಸೂರ್ಯನಂತೆ ಪ್ರಜ್ವಲಿಸುತ್ತಿದ್ದ. ಇನ್ನು ಮಹಾಮಹಿರಾಗಿದ್ದ ಭೀಷ್ಮ ಅವರು ಕೂಡ ಕರ್ಣನನ್ನ ಅರ್ಧರಥ ಎಂದು ಕರೆದು ಹತ್ತು ದಿನ ಕುರುಕ್ಷೇತ್ರ ಮ’ಹಾಯು’ದ್ದದಿಂದ ದೂರ ಉಳಿಯುವಂತೆ ಮಾಡಿದ.

ಇನ್ನು ಮತ್ತೊಂದು ಕಡೆ ಮಹಾವೀರ ಕರ್ಣ ಭೂಮಿತಾಯಿ, ಗುರುಪರಶು ರಾಮ, ಬ್ರಾಹ್ಮಣ ಹಾಗೂ ಭೂ ದೇವಿಯಿಂದ ಶಾಪಗ್ರಸ್ತನಾಗುತ್ತಾನೆ ಕರ್ಣ. ಹಾಗಾಗಿಯೇ ಯುದ್ಧದ ಸಮಯದಲ್ಲಿ ಕರ್ಣನ ರಥ ಹೂತುಹೋಗುತ್ತದೆ, ಬಿಲ್ವಿದ್ಯೆಯ ಮಂತ್ರಗಳು ಮರೆತುಹೋಗುತ್ತವೆ. ಇಷ್ಟೆಲ್ಲಾ ಇದ್ದರೂ ಮಹಾವೀರ ಕರ್ಣ ದುರ್ಯೋಧನನ ಪರ ಅಂದರೆ ಅಧರ್ಮದ ಪರ ಇದ್ದ ಎಳ್ಳುವ ಕಾರಣವವೊಂದೇ ಅವನ ಸಾ’ವಿಗೆ ಪ್ರಮುಖ ಕಾರಣವಾಯಿತು. ಹೀಗಾಗಿ ಕರ್ಣನ ದಾನ ಧರ್ಮ ಹಾಗೂ ವೀರತ್ವದ ಕಾರಣದಿಂದಾಗಿ ನಾಯಕನೆಂಬುದು ಬಹುತೇಕರ ವಾದವಾದರೆ, ಅಧರ್ಮದ ಪರವಾಗಿದ್ದ ಕಾರಣಗೋಸ್ಕರ ಕರ್ಣ ಖಳನಾಯಕ ಎಂಬುದು ಕೆಲವರ ವಾದವಾಗಿದೆ. ಸ್ನೇಹಿತರೇ, ಇಲ್ಲಿ ಯಾರ ಮನಸನ್ನ ನೋಯಿಸುವ ಉದ್ದೇಶ ನಮ್ಮದಲ್ಲ. ಮಹಾಭಾರತದ ಬಗ್ಗೆ ನಾವೆಷ್ಟೇ ವಿಷಯ ತಿಳಿದ್ರೂ ಮತ್ತಷ್ಟೂ ಪ್ರಶ್ನೆಗಳು ಹುಟ್ಟಿಕೊಳ್ಳುತ್ತಲೇ ಇರುತ್ತವೆ. ಹಾಗಾಗಿ ಮಹಾಭಾರತದ ಬಗ್ಗೆ ನಿಮಗೆ ಗೊತ್ತಿರುವ ವಿಷಯವನ್ನು ನಮಗೆ ತಿಳಿಸಿ..ತಪ್ಪಾಗಿದ್ದರೆ ಕ್ಷಮಿಸಿ..