Advertisements

ಸಾಲ ಮಾಡಿ ಈರುಳ್ಳಿ ಹಾಕಿದ ಈ ರೈತನಿಗೆ ಬಂದಿದ್ದು ಎಷ್ಟು ಕೋಟಿ ಗೊತ್ತಾ? ಎಲ್ಲರೂ ಶಾಕ್..

Kannada Mahiti

ರೈತ ಈ ದೇಶದ ಬೆನ್ನೆಲುಬು ಆದರೆ ಅದೇ ರೈತನ ಕುಟುಂಬಕ್ಕೆ ಬೆನ್ನೆಲುಬಾಗಿ ಯಾರು ಇಲ್ಲಾ.. ಸಾಲ ಸೂಲ ಮಾಡಿ ನೀರಿಗಾಗಿ ಪರದಾಡಿ ಹಗಲು ರಾತ್ರಿ ಎನ್ನದೇ ಬೆವರು ಸುರಿಸಿ ಪಸಲನ್ನು ತೆಗೆದರೆ ಅದಕ್ಕೆ ತಕ್ಕ ಬೆಲೆ ಸಿಗುವುದಿಲ್ಲಾ.. ಕೆಲವೊಮ್ಮೆ ಲಾಭ ಬರೋದಿರಲಿ, ಹಾಕಿರುವ ಬಂಡವಾಳವು ಸಹ ಬರಲ್ಲ.. ಕೃಷಿಗಾಗಿ ಮಾಡಿರುವ ಸಾಲವನ್ನು ತೀರಿಸುವುದಕ್ಕೆ ವರ್ಷಗಳೆ ಬೇಕು. ಆದರೆ ಈ ಚಿತ್ರದುರ್ಗದ ರೈತ ಮಾತ್ರ ಈ ವರ್ಷ ಜಾಕ್ಪಾಟ್ ಹೊಡೆದಿದ್ದಾರೆ.. ಅದು ಹೇಗೆ ಗೊತ್ತಾ.. ಚಿತ್ರದುರ್ಗ ಜಿಲ್ಲೆಯ ದೊಡ್ಡ ಸಿದ್ದವನಹಳ್ಳಿಗೆ ಸೇರಿದ ಈ ರೈತನ ಹೆಸರು ಮಲ್ಲಿಕಾರ್ಜುನ.. ತನಗಿರುವ 10 ಎಕರೆ ಜಮೀನಿನಲ್ಲಿ ಏನಾದರೂ ಹಾಕೋಣ ಅಂದರೆ ಮಲ್ಲಿಕಾರ್ಜುನ ಅವರ ಬಳಿ ಹಣ ಇರಲಿಲ್ಲಾ. ಆಗ 15 ಲಕ್ಷ ಸಾಲ ಪಡೆದ ಇವರು ದೈರ್ಯ ಮಾಡಿ ಈರುಳ್ಳಿ ಬೀಜ ಖರೀದಿ ಮಾಡಿ..

[widget id=”custom_html-3″]

Advertisements

ತಮ್ಮ ಜಮೀನಿನ ಜೊತೆ ಇನ್ನೊಂದು 10 ಎಕರೆ ಜಮೀನನ್ನು ಲೀಸ್ ಗೆ ಪಡೆದು ಈರುಳ್ಳಿ ಬಿತ್ತನೆ ಮಾಡಿದರು. ಮಳೆಗಾಲ ಆಗಿದ್ದರಿಂದ ನೀರು ಏಗೋ ಸರಿ ಹೋಗುತ್ತಿತ್ತು.. ಆದರೆ ಮಲ್ಲಿಕಾರ್ಜುನ ಅವರಿಗೆ ಮಾತ್ರ ಪ್ರತಿದಿನ ಭ’ಯ ಮತ್ತು ಚಿಂತೆ ಕಾಡುತ್ತಿತ್ತು. ಕಾರಣ ಈರುಳ್ಳಿಗೆ ಸರಿಯಾದ ಬೆಲೆ ಸಿಗಲಿಲ್ಲಾ ಅಂದರೆ ನಾನು ದೊಡ್ಡ ಸಾಲಗಾರ ಆಗ್ ಬಿಡ್ತೀನಿ ಅನ್ನೋದು.. ತೆಗೆದುಕೊಂಡ ಸಾಲ ತೀರಿಸೋಕೆ ಏನಿಲ್ಲಾ ಅಂದರು 3 ವರ್ಷ ಬೇಕು. ಯಾಕೆಂದರೆ ಕಳೆದ ವರ್ಷ ಈರುಳ್ಳಿ ಹಾಕಿದ್ದ ಮಲ್ಲಿಕಾರ್ಜುನ ಅವರಿಗೆ ಸಿಕ್ಕಿದ್ದು ಬರೀ 5 ಲಕ್ಷ ಮಾತ್ರ.. ಆದರೆ ಮಲ್ಲಿಕಾರ್ಜುನ ಅವರಿಗೆ ಕೊನೆಗೂ ಅದೃಷ್ಟ ಕುಲಾಯಿಸಿದೆ.. ಹೌದು ಒಳ್ಳೆ ಬೆಲೆ ಇರುವಾಗಲೇ ಮಲ್ಲಿಕಾರ್ಜುನ ಅವರು ಹಾಕಿದ್ದ ಈರುಳ್ಳಿ ಬಂತು.

[widget id=”custom_html-3″]

ಅದೇ ರೀತಿ ಬೆಳೆ ಕೂಡ ಚೆನ್ನಾಗಿ ಹಾಗಿದ್ದ ಕಾರಣ 240 ಟನ್ ಈರುಳ್ಳಿಯನ್ನು ಕ್ವಿಂಟಾಲ್ ಗೆ ಏಳು ಸಾವಿರ ಲೆಕ್ಕದಲ್ಲಿ ಮಾರಾಟ ಮಾಡಿದ ಮಲ್ಲಿಕಾರ್ಜುನ ಅವರು ಸುಮಾರು ಒಂದು ಕೋಟಿ 60 ಲಕ್ಷ ಲಾಭ ಗಳಿಸಿದ್ದಾರೆ.. ಬಂದ ಹಣದಿಂದ ತನಗಿದ್ದ ಸಾಲಗಳನ್ನು ತೀರಿಸಿರುವ ಮಲ್ಲಿಕಾರ್ಜುನ ಅವರು ಒಂದು ಒಳ್ಳೆಯ ಮನೆ ಕಟ್ಟಬೇಕು ಎಂದು ಪ್ಲಾನ್ ಮಾಡಿದ್ದಾರೆ.. ಅಷ್ಟೇ ಅಲ್ಲದೇ ಚಿತ್ರದುರ್ಗದ ಸುತ್ತಮುತ್ತಲಿನ ಹಳ್ಳಿಗಳಲ್ಲಿ ಮಲ್ಲಿಕಾರ್ಜುನ ಅವರು ಈಗ ಸೆಲೆಬ್ರಿಟಿ ಆಗಿದ್ದಾರೆ..

[widget id=”custom_html-3″]

ಇನ್ನೊಂದು ಕಡೆ ನೋಡುವುದಾದ್ರೆ ಏನೋ ಬೆಲೆ ಬಂತು ಮಲ್ಲಿಕಾರ್ಜುನ ಅವರು ಬಚಾವ್ ಆದರೂ.. ಬೆಲೆ ಸಿಗಲಿಲ್ಲಾ ಅಂದರೆ ಅವರ ಸ್ಥಿತಿ ಏನು ಅನ್ನೋದು. ಯಾಕೆಂದರೆ ಮಾಡಿದ್ದ 15 ಲಕ್ಷ ತೀರಿಸಲು ಸುಮಾರು ವರ್ಷ ಬೇಕಾಗಿತ್ತು ಮಲ್ಲಿಕಾರ್ಜುನ ಅವರಿಗೆ.. ರೈತನ ಸ್ಥಿತಿ ಯಾವ ಹಂತಕ್ಕೆ ತಲುಪಿದೆ ಅಂದರೆ ನಾವು ಹಲ್ಲು ಹುಜ್ಜುವ ಟೂತ್ ಪೇಸ್ಟ್ ನಿಂದ ಹಿಡಿದು ಕಾಲಿಗೆ ಹಾಕುವ ಚಪ್ಪಲಿವರೆಗೂ ಎಲ್ಲಾ ವಸ್ತುಗಳಿಗೂ ಒಂದು ನಿಗಧಿತ ಬೆಲೆ ಅಂಥ ಇದೆ.. ಆದರೆ ರೈತನ ಬೆಳೆಗೆ ಮಾತ್ರ ನಿಗಧಿತ ಬೆಲೆ ಅಂಥ ಇಲ್ಲಾ. ಗ್ಯಾರಂಟಿ ಒಂದಷ್ಟು ಹಣ ಬರುತ್ತೆ ಎಂಬ ನಂಬಿಕೆ ಇಲ್ಲಾ.. ಅದೇ ರೀತಿ ಸರ್ಕಾರಗಳು ಕಣ್ಣು ತೆರೆದು ರೈತರ ಬೆಳೆಗೆ ನಿಗಧಿತ ಬೆಲೆ ಪಿಕ್ಸ್ ಮಾಡಿದರೆ ಉತ್ತಮ.