Advertisements

ಭಾನುವಾರದ ಬಳಿಕ ಲಾಕ್ ಡೌನ್ ? ಏನೆಲ್ಲಾ ಸೇವೆ ಆರಂಭವಾಗುತ್ತೆ ಗೊತ್ತಾ?

News

ಮಡ್ಡಿಲ್ಲದ ಮಹಾಮಾರಿ ಕರೋನಾ ಸೋಂಕು ಹಾರಾಡುತ್ತಿದ್ದ ಹಿನ್ನಲೆಯಲ್ಲಿ ದೇಶದಾದ್ಯಂತ ಲಾಕ್ ಡೌನ್ ಮಾಡಲಾಗಿದ್ದು, ಇದೇ ತಿಂಗಳು ಮೇ 17ರವರಿಗೂ ದೇಶದಲ್ಲೆಡೆ ಲಾಕ್ ಡೌನ್ ಜಾರಿಯಲ್ಲಿದೆ. ಹಾಗಾದ್ರೆ ಮೇ ೧೮ ಸೋಮವಾರದಿಂದ ಲಾಕ್ ಡೌನ್ ಸಡಿಲಗೊಳ್ಳಲಿದೆಯೇ ಎಂಬುದರ ಬಗ್ಗೆ ಈಗಾಗಲೇ ಚರ್ಚೆಗಳು ನಡೆಯುತ್ತಿವೆ.

Advertisements

ಇನ್ನು ಕೆಲವು ಮಾಹಿತಿಗಳ ಪ್ರಕಾರ ಮೇ ೧೭ಕ್ಕೆ ಲಾಕ್ ಡೌನ್ ಅಂತಿಮಗೊಳ್ಳಲಿದ್ದು, ಕೇಂದ್ರ ಸರ್ಕಾರ ಸೋಮವಾರದಿಂದ ಲಾಕ್ ಡೌನ್ 4.0 ಜಾರಿಗೆ ಮಾಡಲಿದೆ ಎಂದು ಹೇಳಲಾಗಿದ್ದು, ಶನಿವಾರವೇ ಇದಕ್ಕೆ ಸಂಬಂಧಪಟ್ಟ ಮಾರ್ಗಸೂಚಿಗಳನ್ನ ಕೇಂದ್ರ ಬಿಡುಗಡೆ ಮಾಡಲಿದೆ ಎಂದು ಹೇಳಲಾಗಿದೆ. ಇನ್ನು ಕರೋನಾ ಹಾಟ್ ಸ್ಪಾಟ್ ಗಳೆಂದು ಗುರುತಿಸಲಾಗಿರುವ ಕಂಟೋನ್ಮೆಂಟ್ ಜೋನ್ ಗಳಲ್ಲಿ ಮೊದಲಿನಂತೆ ಲಾಕ್ ಡೌನ್ ಮುಂದುವರಿಯಲಿದೆ ಎಂದು ಹೇಳಲಾಗಿದ್ದು, ಆರೆಂಜ್ ಜೋನ್ ಗಳಲ್ಲಿ ಸ್ವಲ್ಪ ಮಟ್ಟಿಗೆ ಲಾಕ್ ಡೌನ್ ನಿಯಮಗಳು ಮುಂದುವರಿಯುವ ಸಾಧ್ಯತೆ ಇದ್ದು, ಗ್ರೀನ್ ಜೋನ್ ಗಳಲ್ಲಿ ಲಾಕ್ ಡೌನ್ ನ ಎಲ್ಲಾ ನಿರ್ಬಂಧಗಳನ್ನ ತೆಗೆದುಹಾಕಲಾಗುವುದು ಎಂಬ ಮಾಹಿತಿ ಇದೆ.

ಲಾಕ್ ಡೌನ್ 4.0 ನಲ್ಲಿ ಏನಿರುತ್ತೆ? ಏನಿರಲ್ಲ?

*ಕರೋನಾ ಹಾಟ್ ಸ್ಪಾಟ್ ಗಳೆಂದು ಗುರುತಿಸಿರುವ ಕಂಟೋನ್ಮೆಂಟ್ ಜೋನ್ ಗಳನ್ನ ಹೊರತುಪಡಿಸಿ, ಬೇರೆಡೆ ಬಸ್, ಮೆಟ್ರೋ, ರೈಲುಗಳ ಸಂಚಾರ ಮಾಡುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

*ಇಡೀ ದೇಶದಲ್ಲೆಡೆ ಸದ್ಯಕ್ಕೆ ಶಾಲಾ ಕಾಲೇಜು ಸೇರಿದಂತೆ, ಸಿನಿಮಾ ಮಂದಿರಗಳು, ಮಾಲ್ ಗಳು ಮತ್ತೆ ಪ್ರಾರಂಭವಾಗುವ ಸಾಧ್ಯತೆ ಇಲ್ಲ.

* ಕಂಟೋನ್ಮೆಂಟ್ ಜೋನ್ ಗಳನ್ನ ಬಿಟ್ಟು ಇತರೆಡೆ ಕಟಿಂಗ್ ಶಾಪ್ ಗಳು, ಕನ್ನ್ನಡಕದ ಶಾಪ್ ಗಳು ಓಪನ್ ಗೆ ಅವಕಾಶ ನೀಡುವ ಸಾಧ್ಯತೆ ಇದೆ.

*ರೆಡ್ ಜೋನ್ ನಲ್ಲೂ ಆಟೋ, ಟ್ಯಾಕ್ಸಿ ಗಾಲ ಓಡಾಟಕ್ಕೆ ಅವಕಾಶ ನೀಡಲಾಗುವುದು ಎಂದು ಹೇಳಲಾಗಿದೆ. ಇನ್ನು ಇದೆ ವಲಯದಲ್ಲಿ ಸಮ ಬೆಸೆ ಸಂಖ್ಯೆಯಲ್ಲಿ ಮಾರುಕಟ್ಟೆಗಳ ಓಪನ್ ಗೆ ಎಲ್ಲಾ ರಾಜ್ಯಗಳಲ್ಲಿ ಅವಕಾಶ ನೀಡುವ ಸಾಧ್ಯೆತೆ ಇದೆ ಎಂದು ಹೇಳಲಾಗಿದೆ.

ನಿಮ್ಮ ಮೊಬೈಲ್ ನಲ್ಲೇ ಫೇಸ್ಬುಕ್ ವಿಡಿಯೋ ಡೌನ್ಲೋಡ್ ಮಾಡಿಕೊಳ್ಳೋದು ಹೇಗೆ ಗೊತ್ತಾ.?ಕೆಳಗಿರುವ ಈ ವಿಡಿಯೋ ನೋಡಿ..