Advertisements

ಮಧ್ಯರಾತ್ರಿ ದೇವರ ವಿಗ್ರಹ ಬೆವರುವದನ್ನ ಕಂಡಿದ್ದೀರಾ.. ಈ ಬೆವರನ್ನೇ ಇಲ್ಲಿ ತೀರ್ಥವಾಗಿ ಕೊಡುತ್ತಾರೆ! ನೋಡಿ..

Temples

ಪ್ರಿಯ ಓದುಗರೆ ಮನುಷ್ಯ ಬೆವರುವುದನ್ನು ಕಂಡಿದ್ದೇವೆ. ಸಕಲ ಜೀವಿಗಳು ಬೆವರುವುದು ನಿಮಗೆ ಗೊತ್ತು. ಆದರೆ ಮಧ್ಯರಾತ್ರಿಯಾದರೇ ದೇವರ ಮೂರ್ತಿಯಿಂದ ಬೆವರು ಹರಿಯುತ್ತದೆ ಎಂದರೆ ವಿಚಿತ್ರ ಅಲ್ಲವೇ. ಅಷ್ಟೇ ಅಲ್ಲ ಹೀಗೆ ಹರಿದ ದೇವರ ಬೆವರನ್ನು ಇಲ್ಲಿ ತೀರ್ಥ ರೂಪದಲ್ಲಿ ಬಳಸಲಾಗುತ್ತದೆ. ಹಾಗಾದರೆ ಆ ದೇವರು ಯಾರು? ಆ ದೇವಸ್ಥಾನ ಎಲ್ಲಿದೆ? ಏನಿದು ವಿಸ್ಮಯ? ಈ ಎಲ್ಲಾ ಪ್ರಶ್ನೆಗೆ ಈ ಲೇಖನದಲ್ಲಿದೆ ಉತ್ತರ. ಇಲ್ಲಿಯ ದೇವರು ಮಧ್ಯ ರಾತ್ರಿಯಾದರೆ ಸಾಕು ಬೆವರುತ್ತಾನೆ. ಈ ದೃಶ್ಯವನ್ನು ನೋಡಲು ದೇಶ-ವಿದೇಶದಿಂದ ಭಕ್ತಸಾಗರ ಹರಿದುಬರುತ್ತಿದೆ.

[widget id=”custom_html-3″]

ಅಷ್ಟಕ್ಕೂ ಆ ದೇವಸ್ಥಾನ ಎಲ್ಲಿದೆ ಅಂದ್ರೆ ಇದು ಭಾರತದಲ್ಲಿದೆ.
ಹೌದು..ಶಾಪಗ್ರಸ್ತ ಕಾಮಧೇನು ಒಂದು ಭೂಲೋಕಕ್ಕೆ ಬಂದು ಸಕ್ಕಿಂ ನ ಬಳಿಯ ಪುಷ್ಕರಣಿಯಲ್ಲಿ ಮುಳುಗಿ ತನ್ನ ಶಾಪವನ್ನು ವಿಮೋಚನೆ ಮಾಡಿಕೊಂಡಿತಂತೆ. ಈ ಸಂದರ್ಭದಲ್ಲಿ ಕಾಮಧೇನು ಹಾಲನ್ನು ನೀರಾಗಿ ಪುಷ್ಕರಣಿಗೆ ಹರಸಿದ್ದಳಂತೆ. ಆ ದೃಶ್ಯವನ್ನು ಕಂಡ ವಶಿಷ್ಠ ಮುನಿಗಳು ಚಕಿತರಾದ ರಂತೆ.

[widget id=”custom_html-3″]

[widget id=”custom_html-3″]

Advertisements

[widget id=”custom_html-3″]

ನಂತರ ನೀರಿನ ಮೇಲೆ ತೇಲುತ್ತಿದ್ದ ಬೆಣ್ಣೆಯನ್ನು ತೆಗೆದು ಒಂದು ಶಿವಲಿಂಗವನ್ನು ಸ್ಥಾಪಿಸಿ ಅದಕ್ಕೆ ಪೂಜೆ ಮಾಡಿದರಂತೆ. ತದನಂತರ ಮಾಡಿದ ಶಿವಲಿಂಗ ಅಲ್ಲಿ ಸ್ಥಾಪನೆಯಾಗುತ್ತದೆ. ಋಷಿಮುನಿಗಳು ಎಷ್ಟೇ ಪ್ರಯತ್ನ ಪಟ್ಟರು ಅದು ಭೂಮಿಯಿಂದ ಅಲುಗಾಡಲಿಲ್ಲವಂತೆ. ಅದು ಬೆನ್ನೆಯಿಂದ ತಯಾರಾದ್ರೂ ಆ ಸ್ಥಳದಲ್ಲಿ ಸ್ಥಾಪನೆಯಾಯಿತು ಎಂದು ಉಲ್ಲೇಖಗಳು ಹೇಳುತ್ತವೆ. ಇಂದಿಗೂ ಆ ಋಷಿಮುನಿಗಳ ಕೈಬೆರಳುಗಳ ಗುರುತುಗಳು ಶಿವಲಿಂಗದ ಮೇಲೆ ಕಾಣಬಹುದಾಗಿದೆ. ಹಾಗೆ ಇನ್ನೊಂದು ವಿಷಯವೇನೆಂದರೆ “ಸಿಂಗರ ವೇಳ” ನ ವಿಗ್ರಹ ಬೆವರುವುದು. ಹಿಂದೆ ಅಸುರ ರಾಜ ‘ಸುರಾಪದ್ಮನಾಥ ‘ ದೇವತೆಗಳಿಗೆ, ಋಷಿ ಮುನಿಗಳಿಗೆ ಉಪಟಳ ನೀಡುತ್ತಿದ್ದಾನಂತೆ. ಈತ ಶಿವನಿಂದ ವರ ಪಡೆದಿದ್ದರಿಂದ ಶಿವನು ಈತನನ್ನು ನಾಶ ಮಾಡಲು ಸಾಧ್ಯವಾಗುವುದಿಲ್ಲ. ಆಗ ತಾಯಿ ಪಾರ್ವತಿ ಮುರುಗನ್ ಅಂದರೆ ಕಾರ್ತಿಕೇಯನನ್ನು ಕಳುಹಿಸುತ್ತಾಳೆ. ಆಗ ಕರ್ತಿಕೆಯ ರಾಕ್ಷಸನ ಸಂ’ಹಾ’ರಕ್ಕಾಗಿ ಕ್ರೋಧ ಗೊಳ್ಳುತ್ತಾನೆ.

[widget id=”custom_html-3″]

ಆಗ ಆತನ ದೇಹ ಕ್ರೋದದಿಂದ ಕುಡಿ ಆತನ ದೇಹದಿಂದ ಬೆವರು ಹರಿಯಲು ಪ್ರಾರಂಭವಾಗುತ್ತದೆ. ನಂತರ ತಾಯಿ ಪಾರ್ವತಿ ಕಾರ್ತಿಕೇಯನಿಗೆ “ಈಟಿ ” ಎಂಬ ಆಯುಧವನ್ನು ನೀಡುತ್ತಾಳೆ. ನಂತರ ತಾಯಿ ಪಾರ್ವತಿ ನೀಡಿದ ಈಟಿಯಿಂದ ಅಸುರನನ್ನು ಸಂ’ಹ’ರಿಸಿ ದೇವ ಕುಲವನ್ನು ರಕ್ಷಿಸಿದ ಎಂದು ಪುರಾಣ ಇತಿಹಾಸಗಳು ಹೇಳಿವೆ. ಈ ಆಯುಧ ನೀಡಿದ ಸ್ಥಳಕ್ಕೆ “ಸೀಕೆಲ್ ” ಎಂದು ಕರೆಯುತ್ತಾರೆ. ಇದರ ಪ್ರತೀಕವಾಗಿ ತಮಿಳುನಾಡಿನಲ್ಲಿ 1 ವಾರ ಅತ್ಯದ್ಭುತವಾಗಿ ಉತ್ಸವವನ್ನು ನಡೆಸುತ್ತಾರೆ. ರಾಕ್ಷಸರನ್ನು ಸಂ’ಹ’ರಿಸಿದ ಈ ದಿನದ ಪ್ರತೀಕವಾಗಿ ಮತ್ತು ತಾಯಿ ಈಟಿ ಆಯುಧ ನೀಡಿದ ಸಂಕೇತದ ದಿನವಾಗಿ ತಮಿಳುನಾಡಿನ ‘ಆಯ್ಪಾಸಿ ‘ ತಿಂಗಳಿನಲ್ಲಿ ಮಹಾಸಷ್ಟಿ ಸ್ಕಂದದಲ್ಲಿ ಅತಿ ದೊಡ್ಡ ಉತ್ಸವ ನಡೆಸುವರು. 5ನೇ ದಿನ ತಾಯಿ ಇಂದ ಪಡೆದಿರುವ ಈಟಿ ಗರ್ಭ ಗುಡಿಗೆ ಬರುವ ಸಮಯದಲ್ಲಿ ಕಾರ್ತಿಕೇಯ ಬೆವರುತ್ತಾನೆ.

[widget id=”custom_html-3″]

ಪೂಜಾರಿ ರೇಷ್ಮೆ ಬಟ್ಟೆಯಿಂದ ಎಷ್ಟೇ ಬೆವರು ಒರೆಸಿದ್ದರು ಕಾರ್ತಿಕೆಯ ಮತ್ತೆ ಮತ್ತೆ ಬೆವರುತ್ತಲೇ ಇರುತ್ತಾನೆ. ಇದು ಮೂರು ಗಂಟೆಗಳವರೆಗೆ ನಡೆಯುವ ಕ್ರಿಯೆಯಾಗಿದೆ. ಹೀಗೆ ಬೆವರಿಂದ ಹನಿಗಳು ಉಪ್ಪಿನಂಷದಿಂದ ಕೂಡಿದ್ದು ಮತ್ತೊಂದು ವಿಸ್ಮಯ. ಹೀಗೆ ಬೆವರಿದ ನೀರಿನ್ನು ತೀರ್ಥವೆಂದು ಪೂಜಾರಿಗಳು ಭಕ್ತರ ಮೇಲೆ ಹಾಕುತ್ತಾರೆ. ಈ ಕುರಿತು ಬ್ರಿಟಿಷ್ ಅಧಿಕಾರಿಯೋರ್ವ ತನ್ನ ‘ ಮೈ ವಿಜಿಟ್ ಟು ಇಂಡಿಯಾ ‘ ಎಂಬ ಪುಸ್ತಕದಲ್ಲಿ ಉಲ್ಲೇಖಿಸಿದ್ದಾರೆ. ‘ಸಿಕ್ಕೇಲ್ ‘ಇದೀಗ ಒಂದು ಪ್ರವಾಸಿ ತಾಣ. ಕಾರ್ತಿಕೆಯ ನೆಲೆಸಿದ ಒಂದು ಪುಣ್ಯಸ್ಥಳವಾಗಿದೆ. ನೀವು ತಿರುಚನಾಪಳ್ಳಿ ಗೆ ಪ್ರವಾಸಕ್ಕೆ ಹೋದರೆ ಈ ದೇವಸ್ಥಾನಕ್ಕೆ ಒಮ್ಮೆ ಭೇಟಿ ನೀಡಿ..

[widget id=”custom_html-3″]