Advertisements

ಆಗ ಸಿನಿಮಾ ರಂಗದಲ್ಲಿ ದೊಡ್ಡ ದೊಡ್ಡ ನಟರ ನಡುವೆಯೇ ಕಾಶಿನಾಥ್ ಹವಾ ಹೇಗಿತ್ತು ಗೊತ್ತಾ?

Cinema

ಕಾಶಿನಾಥ್.. ನಾಡು ಕಂಡ ಧೀಮಂತ ನಿರ್ದೆಶಕ, ನಟರಲ್ಲಿ ಮುಂಚೂಣಿಯಲ್ಲಿ ಕಾಣ ಸಿಗುವ ಹೆಸರು, ಅದೆಷ್ಟೋ ಕಲಾವಿದರಿಗೆ ವೇದಿಕೆ ಹಾಕಿಕೊಟ್ಟಂತಹ ಪ್ರೋತ್ಸಾಹಕ, ಅದೆಷ್ಟೋ ಪ್ರತಿಭೆಗ ಮೊದಲ ಕಲಾ ಬದುಕಿಗೆ ನಾಂದಿಯಾದ ನಿರ್ದೆಶಕ, ಕನ್ನೆ ಹಿಂದಿ ಮಲಯಾಳಂ ನಟರಿಗೂ ಆಕ್ಷನ್ ಕ’ಟ್ ಹೇಳಿದ ಅಪ್ರತಿಮಾ ಪ್ರತಿಭಾವಂತ.. ಕಾಮಿಡಿ ಎಂದ್ರೆ ಕಾಮಿಡಿಗೂ ಸೈ, ಸಸ್ಪೆನ್ಸ್ ಅಂದ್ರೆ ಸಸ್ಪೆನ್ಸ್ ಕತಾ ಆಧರಿತ ಸಿನಿಮಾಗಳಿಗೂ ಸೈ, ಸೀರಿಯಸ್ ಕಂಟೆಂಟ್ ಇರುವ ಕತಾ ಹಂ’ದರಕ್ಕೂ ಜೈ.. ಎಲ್ಲ ರೀತಿಯ ವಿಭಿನ್ನ ಪಾತ್ರಗಳಲ್ಲಿ ಅಭಿನಯಿಸಿ ಅದೆಷ್ಟೋ ಹಿಟ್‌ ನಟರಿಗೆ ಮೋಟಿವೇಶನ್ ಆದಂತ ಇನ್ಸ್ಪಿರೇಷನಲ್ ವ್ಯಕ್ತಿತ್ವವೇ ದಿವಂಗತ ಕಾಶಿನಾತ್, ಇವರು ಮೂಲತಃ ಉಡುಪಿ ಜಿಲ್ಲೆಯ ಕುಂದಾಪರರದವರು..

Advertisements

ಕರಾವಳ ಭಾಗದಲ್ಲಿನ ಅಲೆಗಳ ಸದ್ದಿನ ಮಧ್ಯೆ ಪ್ರಕೃತಿಯ ಹಸನಾದ ಹಸಿರ ಮಧ್ಯೆ ಬೆಳೆದಂತಹ ಓರ್ವ ಹುಡುಗ.
ಮುಂದೆ ಇವರ ತಂದೆ ವ್ಯಾಪರದ ಸಲುವಾಗಿ ಬೆಂಗಳೂರಿಗೆ ಬರಬೇಕಾದ ಅನಿವಾರ್ಯತೆ ಬರುತ್ತೆ, ಈ ಹಿನ್ನಲೆ ಸಿಲಿಕಾನ್ ‌ಸಿಟಿಯತ್ತ ಹೆಜ್ಜೆ ಹಾಕ್ತಾರೆ, ಇವರ ಗೆಳೆಯರ ಜೊತೆ ಸೇರಿ ಸಿನಿಮಾ ಗೀಳನ್ನು ಬೆಳೆಸಿಕೊಳ್ತಾರೆ, ಒಂದು ಸಿನಿಮಾ ಮಾಡಬೇಕು ಅಂತ ಅತ್ಯಂತ ದೊಡ್ಡ ಕನಸು ಕಾಣ್ತಾರೆ, ಹಾಗೆಯೇ ಒಂದು ಕಿರು ಚಿತ್ರವನ್ನು ಕೂಡ ಮಾಡಿ ಪ್ರಯೋಗ ಮಾಡ್ತಾರೆ, ಅವರ ಪ್ರಯೋಗ ಸಕ್ಸಸ್ ಆಗುತ್ತೆ ಸಿನಿಮಾ ನೋಡಿದವರು ಕಾಶಿನಾಥ್ ನಿರ್ದೆಶನಾ ಶೈಲಿಗೆ ಮೆಚ್ಚುತ್ತಾರೆ. ಮುಂದೆ ಹಿರಿತೆರೆಯಲ್ಲಿ ದೊಡ್ಡ ಸಿನಿಮಾ ಮಾಡಬೇಕು ಅಂತ ಹಿಡಿದು ಎಷ್ಟೆ ಅಲೆದ್ರು ಅವಕಾಶಗಳು ಸಿಗಲ್ಲಾ..

ಯಾಕಂದ್ರೆ ಹೊಸಮುಖ, ಹೊಸತನ ಜನ ಹೇಗೆ ಸ್ವೀಕಾರ ಮಾಡ್ರೋ ಏನೋ? ಯಾವುದೇ ಸಿನಿಮಾ ಬ್ಯಾಕ್‌ಗ್ರೌಂಡ್ ಇಲ್ಲ ಎಂಬೆಲ್ಲ ಲೆಕ್ಕಚಾರವಿತ್ತು. ಕೊನೆಗೂ ಹೇಗೋ ಒಂದು ಸಿನಿಮಾವನ್ನು ನಿರ್ದೇಶಿಸಿಯೇ ಬಿಡ್ತಾರೆ, ಹೀಗೆ ನಿರ್ಮಾಣವಾದ ಸಿನಿಮಾದ ಹೆಸರೇ ಅಪರೂಪದ ಅತಿಥಿಗಳು. ಈ ಸಿನಿಮಾ ಭರ್ಜರಿ ಹಿಟ್ ಕಾಣುತ್ತೆ. ಮುಂದೆ ಅ’ಪರಿಚಿತ ಎಂಬ ಸಸ್ಪೆನ್ಸ್ ಕತೆಯನ್ನು ನಿರ್ದೆಶಿಸಿ ಒಬ್ಬ ಟ್ರೆಂಡ್ ಮೇಕರ್ ಆಗಿ ಆಗಿನ ಕಾಲದಲ್ಲಿ ಕಾಶಿನಾಥ್ ಗುರುತಿಸಿಕೊಳ್ತಾರೆ. ಮುಂದಿನ ದಿನಗಳಲ್ಲಿ ತಾನೇ ಕತೆ ಬರೆದು ನಿರ್ದೆಶಿಸಿ, ಒಂದು ಸಿನಿಮಾದಲ್ಲಿ ಮೊದಲ ಭಾರೀ ನಾಯಕನಟನಾಗಿ ಅಭಿನಯಿಸ್ತಾರೆ, ಆ ಸಿನಿಮಾ ಭರ್ಜರಿ ಯಶಸ್ಸು ಕಾಣಿಸುತ್ತೆ, ಆ ಸಿನಿಮಾದ ಹೆಸರೇ ಅನುಭವ..

ಈ ಸಿನಿಮಾದ ಮುಖಾಂತರ ಅಭೀನಯ ಎಂಬ ಓರ್ವ ಅದ್ಭುತ ನಟಿಯನ್ನು ಕನ್ನಡ ಸಿನಿಲೋಕಕ್ಕೆ ಉಡುಗೊರೆಯಾಗಿ ಕೊಡುತ್ತಾರೆ.
ಮುಂದೆ ಅನಂತನ ಅವಾಂತರ ಎಂಬ ಸೂಪರ್‌ಹಿಟ್ ಸಿನಿಮಾ ಮಾಡುತ್ತಾರೆ, ಈ ಸಿನಿಮಾದಲ್ಲಿ ನಮ್ಮ ಕನ್ನಡದ ಕಣ್ಮಣಿ ಪ್ರಜಾಕೀಯ ಕರ್ತ ರಿಯಲ್‌ಸ್ಟಾರ್ ಉಪೇಂದ್ರದ ಒಡನಾಟ ಬೆಳೆಯುತ್ತೆ, ಉಪೇಂದ್ರ ಅವರೇ ಹೇಳುವಂತೆ ಅದೆಷ್ಟೋ ಸಿನಿಮಾಗಳಲ್ಲಿ ತಾನೂ ಬರೆದ ಸಂಭಾಷಣೆ ಪಕ್ಕಕ್ಕೆ ಇಟ್ಟು ನಾವು ಬರೆವ ಸಂಭಾಷಣೆಗಳನ್ನು ಸ್ವೀಕರಿಸಿ ನಮಗೆ ಉತ್ತೇಜನ ಕೊಡುತ್ತಿದ್ದರು, ಅತ್ಯಂತ ಸ್ನೇಹಮಯಿ ಆಗಿದ್ರು ಆದರೆ ಸ್ನೇಹಿತ ಎನ್ನುವದಕ್ಕಿಂತ ನಮ್ಮಿಬ್ಬರದ್ದು ಉತ್ತಮವಾದ ಗುರು ಶಿಷ್ಯ ಭಾಂದವ್ಯ ಅಂತ ಉಪ್ಪಿ ಹೇಳುತ್ತಾರೆ.


ಇದಾದ ಬಳಿಕ ಅನೇಕ ಸಿನಿಮಾಗಳಲ್ಲಿ ನಟಿಸಿ ಕಾಶಿನಾಥ್ ಅಪಾರ ಹೆಸರು ಮಾಡಿರುವ ಮಧ್ಯೆಯೇ ಸಿನಿರಂಗದಿಂದ ದೂರವಿದ್ದು ಬಿಡುತ್ತಾರೆ, ನಂತರ ಮತ್ತೆ ತಮ್ಮ ಸೆಕೆಂಡ್ ಇನ್ನಿಂಗ್ಸ್ ನ್ನು ಚೌಕ ಸಿನಿಮಾದ ಮುಖಾಂತರ ಶುರು ಮಾಡಿದ್ರು. ಆದ್ರೆ ವಿ’ಧಿಯಾಟವೇ ಬೇರೆಯಿತ್ತು, ನಕ್ಕು ನಗಿಸಿ ಹೊಟ್ಟೆ ಹುಣ್ಣು ಮಾಡುತ್ತಿದ್ದ ಕಲಾವಿದೆಯ ಸುತನನ್ನ ಜವರಾಯ ಅ’ನಾರೋಗ್ಯದ ನೆಪದಲ್ಲಿ ತನ್ನ ಲೋ’ಕಕ್ಕೆ ಕರೆದುಕೊಂಡು ಹೋ’ಗೇ ಬಿಟ್ಟ. ಅಲ್ಲಿಗೆ ಲೆಜೆಂಡ್ ನಾಯಕನ ಸಿನಿಪಯಣ ಚೌಕ ಸಿನಿಮಾದಲ್ಲಿಯೇ ಕೊ’ನೆಯಾಯಿತು.