Advertisements

ಕಾಮಧೇನುವಿನ ಮಗಳು ನದಿಯಾಗಿ ಹರಿದಿದ್ದು ಕರುನಾಡಿನ ಇದೇ ಪುಣ್ಯ ಸ್ಥಳದಲ್ಲಿ ! ಇದರ ಹಿಂದಿದೆ ರೋಚಕ ಕತೆ..

Adyathma

ದೇವಿ ದುರ್ಗೆಯು ಶುಂಬಾ ನಿಶುಂಬರನ್ನು ಸಂ’ಹರಿಸಿದ ನಂತರ ಅವರ ಮಂತ್ರಿ ಅರುಣಾಸುರ ಅಸುರರ ದೊರೆಯಾದನು. ಭೂಲೋಕದ ಜನರನ್ನು ಕಾ’ಡಲು ಆರಂಭಿಸಿದನು. ಯಜ್ಞ ಯಾಗಾದಿಗಳನ್ನು ಹಾಳುಗೆಡುವುತ್ತಿದ್ದನು. ಇತ್ತ ಭೂಲೋಕದಲ್ಲಿ ಮಳೆ ಬೆಳೆ ಇಲ್ಲದೆ ಕ್ಷಾಮ ತಲೆದೋರಿತು. ಇದರ ಪರಿಹಾರಕ್ಕಾಗಿ ಜಪಾಲಿ ಮಾಹಾಮುನಿಗಳು ನಿರ್ಧರಿಸಿದರು. ಇದಕ್ಕಾಗಿ ಅಗತ್ಯವಿರುವ ವಸ್ತುಗಳನ್ನು ಕರುಣಿಸಲು ಕಾಮಧೇನುವನ್ನು ಭೂಲೋಕಕ್ಕೆ ಕರತೆರಬೇಕಾಯಿತು. ಭೂಮಿಗೆ ಕಾಮಧೇನುವನ್ನು ತರಲು ಜಪಾಲಿ ಮುನಿಗಳು ದೇವಲೋಕಕ್ಕೆ ತೆರಳಿ ಇಂದ್ರನನ್ನು ಪ್ರಾರ್ಥಿಸಿದರು. ಆದರೆ ಕಾಮಧೇನು ವರುಣ ಲೋಕಕ್ಕೆ ಕಾರ್ಯವೊಂದರ ನಿಮಿತ್ತ ತೆರಳಿದ್ದ ಕಾರಣ ಇಂದ್ರನು ಕಾಮಧೇನುವಿನ ಮಗಳು ನಂದಿನಿಯನ್ನು ಕರೆದುಕೊಂಡು ಹೋಗುವಂತೆ ಸೂಚಿಸಿದನು.

Advertisements

ಜಪಾಲಿ ಮುನಿಗಳು ನಂದಿನಿಯ ಬಳಿ ಹೋಗಿ ಭೂಲೋಕಕ್ಕೆ ಬರುವಂತೆ ಕೇಳಿಕೊಂಡರು. ತಾನೇ ಪರಮ ಶ್ರೇಷ್ಠ ಅಂದುಕೊಂಡಿದ್ದ ನಂದಿನಿ ಭೂಲೋಕಕ್ಕೆ ಬರಲು ಒಪ್ಪಲಿಲ್ಲ. ಭೂಮಿ ಒಂದು ಪಾಪದ ಲೋಕ. ಪಾಪಿ ಜನರು ಇರುವ ಸ್ಥಳ. ರಾವಣ, ಕೀಚಕ, ಕೌರವರಂತ ಅಧರ್ಮಿಗಳು ಜನಿಸಿರುವ ಅನ್ಯಾಯದ ಸ್ಥಳ. ತಾನು ಅಲ್ಲಿಗೆ ಬರುವುದಿಲ್ಲ ಎಂದು ನಿರಾಕರಿಸಿಬಿಡುತ್ತಾಳೆ. ಆದರೆ ಇದೇ ಭೂಮಿಯಲ್ಲಿ ಪರಮಶಿವ, ನಾರಾಯಣ ಅವತರಿಸಿದ್ದಾರೆ. ಸಜ್ಜನರು ನೆಲೆಸಿದ್ದಾರೆ. ಪವಿತ್ರ ಗಂಗೆ ತುಂಗೆಯರು ಹರಿಯುತ್ತಾರೆ. ನೀನು ದಯಮಾಡಿ ಭೂಮಿಗೆ ಬಂದು ಜನರನ್ನು ರಕ್ಷಿಸಮ್ಮ ಎಂದು ಜಪಾಲಿ ಋಷಿಗಳು ಬೇಡಿಕೊಂಡರೂ ನಂದಿನಿ ಭೂಲೋಕಕ್ಕೆ ಬರಲು ಒಪ್ಪುವುದಿಲ್ಲ. ಇದರಿಂದ ಕೋಪಗೊಂಡ ಜಪಾಲಿ ಋಷಿಗಳು ನಂದಿನಿ ನದಿಯಾಗಿ ಭೂಮಿಯಲ್ಲಿ ಹರಿಯಲಿ ಎಂದು ಶಾಪ ನೀಡುತ್ತಾರೆ. ಆಗ ನಂದಿನಿಗೆ ತನ್ನ ತಪ್ಪಿನ ಅರಿವಾಗಿ ಋಷಿಗಳ ಬಳಿ ಕ್ಷಮೆ ಬೇಡುತ್ತಾಳೆ.

ಆದರೆ ಮಹಾ ಋಷಿಗಳ ಶಾಪ ಹಿಂಪಡೆಯಲು ಸಾಧ್ಯವಾಗದ ಕಾರಣ ದುರ್ಗಾ ಮಾತೆಯ ಮೊರೆ ಹೋಗುವಂತೆ ತಿಳಿಸುತ್ತಾರೆ. ನಂದಿನಿಯು ದುರ್ಗಾ ಮಾತೆಯ ಮೊರೆ ಹೊಕ್ಕಾಗ ದೇವಿಯು ಭೂಲೋಕದಲ್ಲಿ ನದಿಯಾಗಿ ಹುಟ್ಟು, ಅನಂತರ ನಿನ್ನ ಶಾಪ ವಿಮೋಚನೆ ಮಾಡುತ್ತೇನೆ ಎಂದು ಅಭಯ ನೀಡುತ್ತಾರೆ. ಇತ್ತ ಆರುಣಾಸುರನ ಅಟ್ಟಹಾಸ ಮಿತಿಮೀರಿ ದೇವಾನು ದೇವತೆಗಳು ತಮ್ಮನ್ನು ಅವನಿಂದ ರಕ್ಷಿಸುವಂತೆ ದೇವಿಯನ್ನು ಬೇಡುತ್ತಾರೆ. ಆದರೆ ಅರುಣಾಸುರ ತನಗೆ ಎರಡು ಅಥವಾ ನಾಲ್ಕು ಕಾಲಿನ ಜೀವಿಗಳಿಂದ ಸಾ’ವು ಬರಬಾರದು ಎಂದು ಬ್ರಹ್ಮ ದೇವನಿಂದ ವರ ಪಡೆದಿರುತ್ತಾನೆ. ಅಲ್ಲದೆ ಅವನು ಸದಾ ಗಾಯತ್ರಿ ಮಂತ್ರ ಜಪಿಸುವುದರಿಂದ ಅವನನ್ನು ದೇವಿಯು ಸಂ’ಹಾರ ಸಾಧ್ಯವಾಗುವುದಿಲ್ಲ. ಆದರಿಂದ ಮಾತೆ ಆಧಿಪರಾಶಕ್ತಿಯು ಮೋಹಿನಿಯ ರೂಪವನ್ನು ತಾಳಿ ಅರುಣಾಸುರ ಗಾಯತ್ರಿ ಮಂತ್ರ ಜಪಿಸದಂತೆ ತಡೆಯುತ್ತಾಳೆ. ಅರುಣಾಸುರ ದೇವಿಯನ್ನು ಹಿಂಬಾಲಿಸಲು ಪ್ರಾರಂಭಿಸುತ್ತಾನೆ.

ಅಸುರ ದೇವಿಯ ಸಮೀಪ ಬಂದಾಗ ಅವಳು ಬಂಡೆಯ ರೂಪ ತಾಳುತ್ತಾಳೆ. ಇದರಿಂದ ಕೋಪ ಗೊಂಡ ಅರುಣಾಸುರ ಬಂಡೆಯನ್ನು ಹೊಡೆಯುತ್ತಾನೆ. ಆಗ ಬಂಡೆಯ ಮಧ್ಯದಿಂದ ಜೇನುಗಳ ಹಿಂಡು ಹೊರಬಂದು ಅವನನ್ನು ಕ’ಚ್ಚಲು ಪ್ರಾರಂಭಿಸುತ್ತದೆ. ಆಗ ದೇವಿಯು ದೊಡ್ಡ ಗಾತ್ರದ ಜೇನಿನ ರೂಪವನ್ನು ತಾಳಿ ಅರುಣಾಸುರನ್ನು ಕೊ’ಲ್ಲುತ್ತಾಳೆ. ಇದೇ ಕಾರಣಕ್ಕಾಗಿ ದುರ್ಗಾ ಮಾತೆಯನ್ನ ಬ್ರಮರಾ ದೇವಿ ಎಂದು ಕರೆಯಲಾಗುತ್ತದೆ. ಅರುಣಾಸುರನು ಸಂ’ಹಾರದ ನಂತರ ದುರ್ಗಾ ಮಾತೆಯು ಲಿಂಗ ಸ್ವರೂಪಿಯಾಗಿ ಅಲ್ಲೆಯೇ ನೆಲೆಸುತ್ತಾಳೆ. ಅದೇ ಕಟೀಲು ದುರ್ಗಾ ಪರಮೇಶ್ವರಿ ಪುಣ್ಯಕ್ಷೇತ್ರ. ಇಲ್ಲೇ ಕಾಮಧೇನುವಿನ ಮಗಳು ನಂದಿನಿ ನದಿಯಾಗಿ ದೇವಿಯ ಶ್ರೀ ಕ್ಷೇತ್ರದಲ್ಲಿ ಹರಿದು ಸಮುದ್ರ ಸೇರುತ್ತಾಳೆ. ಲಿಂಗ ಸ್ವರೂಪಿ ದುರ್ಗಾ ಪರಮೇಶ್ವರಿ ನಂದಿನಿಯ ಶಾಪ ವಿಮೋಚನೆ ಮಾಡಿ ಭೂ ಲೋಕದ ಜನರನ್ನೂ ಪೊರೆಯುತ್ತಾಳೆ.