Advertisements

ಕೋನ್ ಬನೇಗಾ ಕರೋಡ್ ಪತಿಯಲ್ಲಿ ಕೇಳಿದ 1 ಕೋಟಿಯ ಪ್ರಶ್ನೆ ಇದು ! ಪ್ರಶ್ನೆ ಯಾವುದು ಗೊತ್ತಾ ? ಸ್ಪರ್ಧಿ ಮಾಡಿದ್ದೇನು ನೋಡಿ..

Entertainment

ನಮಸ್ಕಾರ ಸ್ನೇಹಿತರೇ, ಬಾಲಿವುಡ್ ನ ಬಿಗ್ ಬಿ ಅಮಿತಾ ಬಚ್ಚನ್ ಅವರ ಸಾರಥ್ಯದಲ್ಲಿ ನಡೆಯುತ್ತಿರುವ ಕೋನ್ ಬನೇಗಾ ಕರೋಡ್ ಪತಿ ತುಂಬಾನೇ ಫೇಮಸ್ ಕಾರ್ಯಕ್ರಮ. ಇನ್ನು ಈ ಷೋ ಹಲವು ವಿಚಾರಗಳ ಕಾರಣದಿಂದ ಆಗಾಗ ಸುದ್ದಿಯಲ್ಲಿರುತ್ತದೆ. ಕೋನ್ ಬನೇಗಾ ಕರೋಡ್ ಪತಿ ಕಾರ್ಯಕ್ರಮದಲ್ಲಿ ಅಭ್ಯರ್ಥಿಗಳು ಒಂದು ಕೋಟಿಯ ಹಂತಕ್ಕೆ ತಲುಪುವುದು ಅಷ್ಟು ಸುಲಭವಲ್ಲ. ಒಂದು ವೇಳೆ ಯಾರಾದ್ರೂ ಒಂದು ಕೋಟಿಯ ಅಂತಿಮ ಹಂತಕ್ಕೆ ತಲುಪಿದ್ರೆ ಒಂದು ಕೋಟಿಗಾಗಿ ಕೇಳುವ ಪ್ರಶ್ನೆ ಹೇಗಿರುತ್ತೆ ಎಂಬ ಕುತೂಹಲ ಪ್ರತಿಯೊಬ್ಬರಲ್ಲೂ ಇದ್ದೆ ಇರುತ್ತೆ.

Advertisements

ಇನ್ನು ಈಗ ಸೋನಿ ಎಂಟರ್ಟೈನ್ಮೆಂಟ್ ಟಿವಿಯಲ್ಲಿ ಪ್ರಸಾರವಾಗುತ್ತಿರುವ ಈ ಕಾರ್ಯಕ್ರಮದ ೧೨ ಆವೃತ್ತಿಯಲ್ಲಿ ಮೊದಲ ಬಾರಿಗೆ ಒಬ್ಬ ಸ್ಪರ್ಧಿ ಒಂದು ಕೋಟಿಯ ಹಂತಕ್ಕೆ ತಲುಪಿದ್ದು ಪ್ರಶ್ನೆಯನ್ನು ಸಹ ಎದುರಿಸಿದ್ದಾರೆ ! ಹಾಗಾದ್ರೆ ಆ ಒಂದು ಕೋಟಿಯ ಪ್ರಶ್ನೆ ಯಾವುದೇ ? ಇದಕ್ಕೆ ಆ ಸ್ಪರ್ಧಿ ಉತ್ತರ ಕೊಟ್ಟರಾ ಇಲ್ಲವಾ ? ಎಂಬುದನ್ನ ತಿಳಿಯೋಣ..ಹೌದು, ಸ್ನೇಹಿತರೇ, ಘಾಜಿಯಾಬಾದ್ ನವರಾದ ವೃತ್ತಿಯಲ್ಲಿ ಇಂಗ್ಲಿಷ್ ಶಿಕ್ಷಕಿಯಾಗಿರುವ ಚಾನ್ವಿ ಕುಮಾರ್ ಎಂಬ ಸ್ಪರ್ಧಿ ಒಂದು ಕೋಟಿಯ ಪ್ರಶ್ನೆಯನ್ನ ಎದುರಿಸಿದ್ದಾರೆ..ಅಂದಹಾಗೆ ನಿರೂಪಕರಾಗಿರುವ ಬಿಗ್ ಬಿ ಅಮಿತಾ ಬಚ್ಚನ್ ರವರು ಒಂದು ಕೋಟಿ ಗೆಲ್ಲಲು ಕೇಳಿದ ಪ್ರಶ್ನೆ..

ಚಂದ್ರನ ಅಂಗಳಕ್ಕೆ 2024ರಲ್ಲಿ ಕಾಲಿಡಲಿರುವ ನಾಸಾ ಈ ಕಾರ್ಯಕ್ರಮಕ್ಕೆ ಯಾವ ಗ್ರೀಕ್ ದೇವತೆಯ ಹೆಸರನ್ನು ಇಡಲು ನಿರ್ಧಾರಮಾಡಲಾಗಿದೆ ಎಂಬುದು ಪ್ರಶ್ನೆಯಾಗಿತ್ತು. ಇನ್ನು ಇದಕ್ಕೆ ನಾಲ್ಕು ಉತ್ತರಗಳ ಆಯ್ಕೆಗಳಾಗಿ ನೀಡಲಾಗಿತ್ತು. ರಿಯಾ, ನೆಮೆಸಿಸ್, ಆಫ್ರೋಡೈಟ್ ಹಾಗೂ ಆರ್ಟೆಮಿಸ್ ಎಂಬ ಉತ್ತರಗಳನ್ನ ಕೊಡಲಾಗಿತ್ತು. ಆದರೆ ಸ್ಪರ್ಧಿ ಚಾನ್ವಿ ಕುಮಾರ್ ರವರಿಗೆ ಉತ್ತರಗಳಲ್ಲಿ ಗೊಂದಲ ಏರ್ಪಟ್ಟ ಕರಣ ಆಟದಿಂದ ಕ್ವಿಟ್ ಮಾಡಿದ್ದಾರೆ. ಅವರಿಗೆ ರಿಯಾ ಹಾಗೂ ಆರ್ಟೆಮಿಸ್ ನಡುವೆ ಯಾವುದು ಸರಿಯಾದ ಉತ್ತರವೆಂಬ ಗೊಂದವಿತ್ತು. ಇನ್ನು ಈ ಒಂದು ಕೋಟಿಯ ಪ್ರಶ್ನೆಗೆ ಸರಿಯಾದ ಉತ್ತರ ಆರ್ಟೆಮಿಸ್ ಆಗಿತ್ತು. ಒಟ್ಟಿನಲ್ಲಿ ಆಟದಿಂದ ಕ್ವಿಟ್ ಮಾಡಿ ಒಳ್ಳೆಯ ನಿರ್ಧಾರ ತೆಗೆದುಕೊಂಡಿದ್ದರು ಸ್ಪರ್ಧಿ ಚಾನ್ವಿ ಕುಮಾರ್.