Advertisements

ನಟಿ ಸಂಯುಕ್ತಾ ಹೆಗಡೆ ಮೇಲೆ ಕಿರಿಕ್ ಮಾಡಿಕೊಂಡ ಮಹಿಳೆ. ಅಷ್ಟಕ್ಕು ಸಾರ್ವಜನಿಕ ಸ್ಥಳದಲ್ಲಿ ನಡೆದಿದ್ದೇನು ಗೊತ್ತಾ?

News

ನಮಸ್ತೆ ಸ್ನೇಹಿತರೆ ಕಿರಿಕ್ ಪಾರ್ಟಿ ಸಿನಿಮಾ ಮೂಲಕ ಖ್ಯಾತಿ ಪಡೆದಿದ್ದ ನಟಿ ಸಂಯುಕ್ತ ಹೆಗಡೆ ಹಾಗೂ ಕಾಂಗ್ರೆಸ್ ವಕ್ತಾರೆ ಕವಿತಾ ರೆಡ್ಡಿ ನಡುವೆ ನಡೆದ ಘಟನೆ ನಿಮಗೆಲ್ಲ ತಿಳಿದೆ ಇದೆ. ಹೌದು ಮೊನ್ನೆ ಮೊನ್ನೆಯಷ್ಟೇ ಸಾರ್ವಜನಿಕ ಸ್ಥಳದಲ್ಲಿ ಈ ಘಟನೆ ನಡೆದಿದ್ದು ಸಂಯುಕ್ತ ಹೆಗಡೆ ಸ್ನೇಹಿತರು ಕೂಡ ಈ ಸಮಯದಲ್ಲಿ ಜೊತೆಯಲ್ಲಿದ್ದರು ಆದರೆ ಕವಿತಾ ರೆಡ್ಡಿಯವರು ಇವರ ನಡುವೆ ಕಿರಿಕ್ ಮಾಡಿಕೊಂಡು ಈಗ ಇರಲಾರದೆ ಇರುವೆ ಬಿಟ್ಟು ಕೊಂಡಂತಾಗಿದೆ ಇವರ ಪರಿಸ್ಥಿತಿ. ಹೌದು ಈಗ ಈ ವಿಷಯ ಮೀಡಿಯಾದಲ್ಲಿ ಹರಿದಾಡಿ ದೊಡ್ಡ ಸುದ್ದಿಯಾಗಿದೆ.

Advertisements

ಇನ್ನೂ ಸಂಯುಕ್ತ ಹೆಗಡೆಯವರು ಪಾರ್ಕ್ ನಲ್ಲಿ ಸ್ನೇಹಿತರ ಜೊತೆ ವರ್ಕ್ ಔಟ್ ಮಾಡುತ್ತಿದ್ದ ಸಮಯದಲ್ಲಿ ಕವಿತಾ ರೆಡ್ಡಿಯವರು ಇದ್ದಕಿದ್ದ ಹಾಗೆ ಬಂದು ಸಂಯುಕ್ತಾ ಹೆಗಡೆಯನ್ನು ಪ್ರಶ್ನೆ ಮಾಡಿ ಮಾತಿಗೆ ಮಾತು ಬೆಳೆದು ವಾಗ್ವಾದ ನಡೆದಿದೆ. ಅಷ್ಟೇ ಅಲ್ಲದೆ ಕವಿತಾ ರೆಡ್ಡಿ ಇಲ್ಲದೆ ಇರೋ ಆರೋಪವನ್ನ ಸಂಯುಕ್ತ ಹೆಗಡೆಯವರ ಮೇಲೆ ಮಾಡಿದ್ದಾರೆ.

ಹೌದು ಕವಿತಾ ರೆಡ್ಡಿಯವರ ಜೊತೆ ಬಂದಿದ್ದ ಒಬ್ಬ ಇವರ ಮೇಲೆ ಡ್ರ ಗ್ ಆರೋಪವನ್ನು ಒರೆಸಲು ಮುಂದಾಗಿದ್ದನಂತೆ. ಇನ್ನು ಸಂಯುಕ್ತ ಹೆಗಡೆಯ ಸ್ನೇಹಿತೆಯ ಮೇಲೆ ಕವಿತಾ ರೆಡ್ಡಿಯವರು ಕೈ ಮಾಡಲು ಸಹ ಮುಂದಾಗಿದ್ದರು. ಇನ್ನೂ ಈ ಘಟನೆಯನ್ನು ಸಂಯುಕ್ತ ಹೆಗಡೆ ರೆಕಾರ್ಡ್ ಮಾಡಿದ್ದು ಈ ವೀಡಿಯೋ ಈಗ ತುಂಬಾ ವೈರಲ್ ಹಾಗಿದೆ.

ಇನ್ನೂ ಘಟನೆಯ ಪರಿಣಾಮವಾಗಿ ನಿನ್ನೆ ಕವಿತಾ ರೆಡ್ಡಿಯವರು ಸಂಯುಕ್ತ ಹೆಗಡೆ ಹಾಗೂ ಅವರ ಸ್ನೇಹಿತರಿಗೆ ಕ್ಷಮೆಯನ್ನು ಕೇಳಿದ್ದಾರೆ. ಹೌದು ವೀಡಿಯೋ ಮೂಲಕ ಕ್ಷಮೆಯನ್ನಾಚಿಸಿ ಜಾಲತಾಣದಲ್ಲಿ ಶೇರ್ ಮಾಡಿಕೊಂಡಿದ್ದಾರೆ. ನನ್ನಿಂದ ತಪ್ಪಾಗಿದೆ, ಮೊನ್ನೆ ನಡೆದ ಘಟನೆಯ ಬಗ್ಗೆ ಅರಿವಾಗಿದೆ ಜವಾಬ್ದಾರಿಯುತ, ನಾಗರಿಕ ಮಹಿಳೆಯಾಗಿ ನಾನು ಪ್ರಾಮಾಣಿಕತೆಯಿಂದ ನಿಮ್ಮಲ್ಲಿ ಕ್ಷಮೆ ಯಾಚಿಸುತ್ತಿದ್ದೇನೆ ಎಂದು ಕ್ಷಮೆ ಕೇಳಿದ್ದಾರೆ.