Advertisements

ಸೋಫಾ ಮಾರಲು ಹೋಗಿ ಹಣ ಕಳೆದುಕೊಂಡು ಟೋಪಿ ಹಾಕಿಸಿಕೊಂಡ ಸಿಎಂ ಮಗಳು !

Kannada Mahiti

ಸ್ನೇಹಿತರೇ, ಇದು ಇಂಟರ್ನೆಟ್ ಜಮಾನ. ಸ್ಮಾರ್ಟ್ ಮೊಬೈಲ್ ಜೊತೆಗೆ ಹಣ ಇದ್ದರೆ ಸಾಕು ಕೂತಿದ್ದಲ್ಲಿಗೆ ಎಲ್ಲವೂ ಬರುತ್ತದೆ. ತಂತ್ರಜ್ನ್ಯಾನದ ಕಾರಣದಿಂದಾಗಿ ಜೀವನ ಸುಲಭವೇನೋ ಆಗಿದೆ. ಆದರೆ ಮುಂದುವರಿದ ತಂತ್ರಜ್ನ್ಯಾನದಿಂದ ಎಷ್ಟು ಲಾಭವಿದೆಯೋ, ಅಷ್ಟೇ ಅ’ಪಾಯವೂ ಕೂಡ ಇದೆ. ಆನ್ಲೈನ್ ವ್ಯವಹಾರ ಮಾಡುವಾಗ ತುಂಬಾ ಉಷಾರಾಗಿರಬೇಕು. ಯಾಮಾರಿದ್ರೆ ಪಂಗನಾಮ ಗ್ಯಾರಂಟಿ. ಇನ್ನು ಅನೇಕರು ಈ ಆನ್ಲೈನ್ ನಿಂದಾಗಿ ಮೋಸಹೋದವರಿದ್ದಾರೆ. ಅಚ್ಚರಿ ಎಂದರೆ ಈ ರೀತಿ ಪಂಗನಾಮ ಹಾಕಿಸಿಕೊಳ್ಳುವವರು ಅವಿಧ್ಯಾವಂತರಿಗಿಂತ ವಿದ್ಯಾವಂತರೇ ಹೆಚ್ಚು ಅನ್ನೋದು ಅಚ್ಚರಿಯ ವಿಷಯ. ಇದಕ್ಕೆ ನೈಜ ಉದಾಹರಣೆಯಾಗಿದ್ದಾರೆ ಸಿಎಂ ಮಗಳು.

Advertisements

ಅಂತರ್ಜಾಲ ದೋಖದಿಂದಾಗಿ ಒಬ್ಬ ಮುಖ್ಯಮಂತಿಯ ಮಗಳೇ ಮೋಸ ಹೋಗುತ್ತಾಳೆ ಎಂದರೆ, ಆನ್ಲೈನ್ ನಲ್ಲಿ ವ್ಯವಹಾರ ಮಾಡುವಾಗ ನಾವು ಎಷ್ಟು ಜಾಗರೂಕರಾಗಿರಬೇಕು ಎಂಬುದನ್ನ ನೀವೇ ಒಮ್ಮೆ ಯೋಚಿಸಿ ನೋಡಿ. ಇನ್ನು ಈ ಮೋಸಕ್ಕೆ ಒಳಗಾದವರು ದೆಹಲಿಯ ಮುಖ್ಯಮಂತ್ರಿಯಾಗಿರುವ ಕೇಜ್ರಿವಾಲ್ ಮಗಳು ಹರ್ಷಿತಾ. ತಮ್ಮ ಮನೆಯಲ್ಲಿದ್ದ ಸೋಫಾವೊಂದನ್ನ ಮಾರುವುದಾಗಿ OLX ನಲ್ಲಿ ಜಾಹಿರಾತು ನೀಡಿದ್ದರು. ಇನ್ನು ಇದನ್ನ ನೋಡಿದ ಆನ್ಲೈನ್ ಕಳ್ಳರು ಹರಿಶಿತಾ ಅವರನ್ನ ಮೋಸ ಮಾಡಲೆಂದೇ ಉಪಾಯ ಮಾಡಿದ್ದು ನಾವು ಸೋಫಾಗೆ ತಗಲುವ ಬೆಲೆಯನ್ನ ಆನ್ಲೈನ್ ಮೂಲಕ ಪಾವತಿಸುವುದಾಗಿ ಹೇಳಿದ್ದು, ಕಡಿಮೆ ಮೊತ್ತದ ಹಣವನ್ನ ಹರ್ಷಿತಾ ಅವರ ಖಾತೆಗೆ ಜಮಾ ಮಾಡಿದ್ದಾರೆ.

ಬಳಿಕ ದೊಡ್ಡ ಮೊತ್ತದ ಹಣ ಕಳುಹಿಸಲು QR ಕೋಡ್ ಸ್ಕ್ಯಾನ್ ಮಾಡುವ ಅವಶ್ಯಕತೆ ಇದೆ ಎಂದು ನಂಬಿಸಿದ ಖದೀಮ, QR ಕೋಡ್ ಸ್ಕ್ಯಾನ್ ಮಾಡಿದ ಬಳಿಕ ಉಳಿದ ಹಣ ನಿಮ್ಮ ಖಾತೆಗೆ ಜಮಾ ಆಗಲಿದೆ ಎಂದು ಆ QR ಕೋಡ್ ನ್ನ ಕಳುಹಿಸಿದ್ದಾನೆ. ಇನ್ನು ಈ ಮೋಸದ ಬಗ್ಗೆ ಅರಿಯದ ಸಿಎಂ ಮಗಳು ಎರಡು ಬಾರಿ QR ಕೋಡ್ ಸ್ಕ್ಯಾನ್ ಮಾಡಿದ್ದಾರೆ. ಮೊದಲೇ ಬಾರಿ ಮಾಡಿದಾಗ 20 ಸಾವಿರ ಹಾಗೂ ಎರಡನೇ ಬಾರಿ ಸ್ಕ್ಯಾನ್ ಮಾಡಿದಾಗ 14 ಸಾವಿರ ಹೀಗೆ ಒಟ್ಟು 34 ಸಾವಿರ ರುಗಳನ್ನ ಕಳೆದುಕೊಂಡು ಮೋಸಹೋಗಿದ್ದಾರೆ. ಇನ್ನು QR ಕೋಡ್ ಸ್ಕ್ಯಾನ್ ಮಾಡಿದಾಗ ತನ್ನ ಖಾತೆಯಿಂದ ಹಣ ಕಟ್ ಆಗಿದೆ ಎಂದು ಗೊತ್ತಾಗುವಷ್ಟರಲ್ಲಿ ಸಿಎಂ ಮಗಳು ಟೋಪಿ ಹಾಕಿಸಿಕೊಂಡಿದ್ದಾಗಿತ್ತು.

ಸ್ನೇಹಿತರೇ, QR ಕೋಡ್ ಸ್ಕ್ಯಾನ್ ತಂತ್ರಜ್ಞಾನ ಉಪಯೋಗಿಸಿಕೊಂಡು ಮೋಸ ಮಾಡುವ ಜಾಲ ದೊಡ್ಡದಾಗಿ ಬೆಳೆದಿದೆ. ನಾವು ಇಲ್ಲಿ ಗಮನಿಸಬೇಕಾದ ವಿಚಾರ ಏನೆಂದರೆ ನಾವು ಯಾರಿಗಾದ್ರು ಹಣ ಕಳುಹಿಸಿದ್ರೆ ಮಾತ್ರ QR ಕೋಡ್ ಸ್ಕ್ಯಾನ್ ಮಾಡಬಹುದೇ ವಿನಃ ಬೇರೆಯವರಿಂದ ಹಣ ಪಡೆದುಕೊಳ್ಳಲು QR ಕೋಡ್ ಸ್ಕ್ಯಾನ್ ಮಾಡುವ ಅವಶ್ಯಕತೆ ಇಲ್ಲ. ಇನ್ನು ಈಗಾಗಲೇ ಸಿಎಂ ಕೇಜ್ರಿವಾಲ್ ಮಗಳು ಹರ್ಷಿತಾ ಇದರ ಬಗ್ಗೆ ದೂರು ನೀಡಿದ್ದು ಪೊಲೀಸರು ತನಿಖೆ ಮಾಡುತ್ತಿದ್ದಾರೆ.