ನಮಸ್ತೇ ಸ್ನೇಹಿತರೇ, ನೆಂಟರಿಷ್ಟರು, ಸ್ನೇಹಿತರು ಊರಿನ ಜನ ಎಲ್ಲರನ್ನ ಮದ್ವೆಗೆ ಆಹ್ವಾನಿಸಿ ಅದ್ದೂರಿಯಾಗಿ ಮದ್ವೆಯಾಗಬೇಕೆಂಬ ಆಸೆ ಯಾರಿಗೆ ತಾನೇ ಇರೋದಿಲ್ಲ ಹೇಳಿ. ಏಕೆಂದರೆ ಮದುವೆ ಅನ್ನೋದು ಜೀವನದಲ್ಲಿ ಒಮ್ಮೆ ಮಾತ್ರ ಬರುವ ಒಂದು ಸಂಭ್ರಮ. ಇದು ಜೀವನಪರ್ಯಂತ ನೆನಪಿನಲ್ಲಿ ಉಳಿಯುವಂತದ್ದು. ಆದರೆ, ಇದೆ ರೀತಿ ತಾನು ಅದ್ದೂರಿಯಾಗಿ ಮದ್ವೆಯಾಗಬೇಕು ಎಂದು ಕನಸು ಕಂಡಿದ್ದ ಯುವಕನೊಬ್ಬ, ತಾನು ಅಂದುಕೊಂಡಂತೆ ನಡೆಯಲಿಲ್ಲ. ತಾನೊಂದು ಬಗೆದರೆ ದೈವವೊಂದು ಬಗೆಯಿತು ಎಂಬ ಗಾದೆ ಮಾತಿನಂತೆ ಆ ಯುವಕನ ಮದ್ವೆ ಆಸ್ಪತೆಯ ಬೆಡ್ ಮೇಲೆ ಆಗಬೇಕಾದ ಪರಿಸ್ಥಿತಿ ಬಂತು.

ಹೌದು, ಈ ಘಟನೆ ನಡೆದಿರುವುದು ಪಕ್ಕದ ಕೇರಳ ರಾಜ್ಯದ ವೆಂಬಾಯಮ್ ಎಂಬ ಸ್ಥಳದಲ್ಲಿ. ಇನ್ನು ಈ ರೀತಿ ಆಸ್ಪತ್ರೆಯ ಬೆಡ್ ಮೇಲೆ ಮದ್ವೆಯಾ ನವ ವಧು ವರನ ಹೆಸರು ಮನೋಜ್ ಮತ್ತು ರೇವತಿ ಎಂದು. ಇನ್ನು ಈ ಜೋಡಿಯ ಮದ್ವೆ ಕುಟುಂದವರು ನಿಚ್ಚಯ ಮಾಡಿದಂತೆ ಫೆಬ್ರವರಿ ೪ ರಂದು ನಡೆಯಬೇಕಿತ್ತು. ಆದರೆ ವಿಧಿಯಾಟವೇ ಬೇರೆ ಇತ್ತು. ಹೌದು, ವರ ಮನೋಜ್ ತುರ್ತು ಶ’ಸ್ತ್ರಚಿ’ಕಿತ್ಸೆಗೆ ಒಳಗಾಗಬೇಕಾಯಿತು. ಆಪ್ತರು ಸ್ನೇಹಿತರು ಬಂಧು ಬಾಂಧವರ ನಡುವೆ ಅದ್ದೂರಿಯಾಗಿ ಮದ್ವೆಯಾಗಬೇಕೆಂದು ಕಂಡಿದ್ದ ಕನಸು ಕಮರಿ ಹೋಗಿತ್ತು. ಇನ್ನು ಇದೆ ಪರಿಸ್ಥಿತಿಯನ್ನ ಎರಡು ಕುಟುಂಬಗಳು ಎದುರಿಸಬೇಕಾಯಿತು.

ಆದರೆ ಈ ನಿರಾಸೆಯನ್ನೆಲ್ಲಾ ಬದಿಗೊತ್ತಿ, ಮದ್ವೆ ನಡೆಯಲೇಬೇಕು ಎಂದು ನಿರ್ಧಾರ ಮಾಡಿದ ಹೆಣ್ಣು ಗಂಡಿನ ಎರಡು ಕಡೆಯ ಕುಟುಂಬಗಳು ಆಸ್ಪತ್ರೆಯಲ್ಲೇ ಮದ್ವೆ ಮಾಡುವ ನಿರ್ಧಾರಕ್ಕೆ ಬಂದರು. ಅದರಂತೆ ಫೆಬ್ರುವರಿ ೬ ರಂದು ಆಸ್ಪತ್ರೆಯಲ್ಲೇ ಮದ್ವೆ ನೆರವೇರಿಸಲಾಯಿತು. ಇನ್ನು ಮನೋಜ್ ದಾಖಲಾಗಿದ್ದ ಪ್ರೈವೇಟ್ ಆಸ್ಫತ್ರೆಯ ರೂಮ್ ನ್ನೇ ಮದ್ವೆ ಮಂಟಪದಂತೆ ಮಾಡಿದ್ದು, ಮನೋಜ್ ತಾನು ಮಲಗಿದ್ದ ಬೆಡ್ ನಿಂದಲೇ ವಧು ರೇವತಿಗೆ ತಾಳಿ ಕಟ್ಟುವ ಮೂಲಕ ವಿಶೇಷವಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಇನ್ನು ಈ ಸಂಭ್ರಮಕ್ಕೆ ಎರಡೂ ಕಡೆಯ ಕುಟುಂಬದವರು ಹಾಗೂ ಆಸ್ಪತ್ರೆಯ ಸಿಬ್ಬಂದಿ ಮತ್ತು ವೈದ್ಯರು ಸಾಕ್ಷಿಯಾಗಿದ್ದು, ನವ ಜೋಡಿಗೆ ಶುಭಾಶಯ ಕೋರಿದ್ದಾರೆ.