Advertisements

ಒಬ್ಬ ವಿಧ್ಯಾರ್ಥಿನಿಗೋಸ್ಕರ 70 ಸೀಟಿನ ದೊಡ್ಡ ಬೋಟ್ ಓಡಿಸಿದ ಸರ್ಕಾರ ! ಖರ್ಚಾಗಿದ್ದೆಷ್ಟು ಗೊತ್ತಾ ?

News

ಮಹಾಮಾರಿ ಕರೋನಾ ಹಿನ್ನಲೆಯಲ್ಲಿ ಲಾಕ್ ಡೌನ್ ಆದ ಕಾರಣ ಸಮಯಕ್ಕೆ ನಡೆಯಬೇಕಾಗಿದ್ದ ಪರೀಕ್ಷೆಗಳು ನಿಂತು ಹೋಗಿ ಪರೀಕ್ಷಾ ದಿನಾಂಕವನ್ನ ಮುಂದಕ್ಕೆ ಹಾಕಲಾಗಿತ್ತು. ಈಗ ದಿನದಿಂದ ದಿನಕ್ಕೆ ಲಾಕ್ ಡೌನ್ ಸಡಿಲಗೊಳ್ಳುತ್ತಿರುವ ಕಾರಣ ಮತ್ತೆ ಪರೀಕ್ಷೆಗಳು ಪುನಾರಂಭಗೊಂಡಿವೆ. ಇನ್ನು ಇದೆ ಸಮಯದಲ್ಲಿ ಒಬ್ಬ ವಿದ್ಯಾರ್ಥಿನಿಗೋಸ್ಕರ ೭೦ ಜನ ಕುಳಿತುಕೊಳ್ಳಬಹುದಾದಂತ ಬೋಟ್ ಓಡಿಸಿದ್ದು, ಸರ್ಕಾರಿ ಅಧಿಕಾರಿಗಳ ಈ ಕಾರ್ಯಕ್ಕೆ ಎಲ್ಲಾ ಕಡೆಯಿಂದ ಮುಚ್ಚುಗೆಗಳು ವ್ಯಕ್ತವಾಗಿವೆ.

Advertisements

ಹೌದು, ಈ ವಿಶೇಷವಾದ ಘಟನೆ ಕೇರಳದ ಕೊಟ್ಟಾಯಂ ಜಿಲ್ಲೆಯ ಕಾಂಜಿರಮ್‍ನಲ್ಲಿ ನಡೆದಿದೆ. ಕೇರಳದ ಜಲ ಸಾರಿಗೆ ಅಧಿಕಾರಿಗಳ ಕಾರ್ಯ ವೈಖರಿಯಿಂದ ಕೂಲಿ ಕಾರ್ಮಿಕರ ದಂಪತಿಯ ಮಗಳಾದ ಸಂದ್ರ ಬಾಬು 12ನೇ ತರಗತಿಯ ಪರೀಕ್ಷೆ ಬರೆಯುವಂತಾಗಿದೆ. ಇನ್ನು ವಿದ್ಯಾರ್ಥಿನಿ ಸಂದ್ರ ಬಾಬು ಒಂದು ವರ್ಷದಿಂದ ಕೊಟ್ಟಾಯಂ ಜಿಲ್ಲೆಯಲ್ಲಿರುವ ಕಾಂಜಿರಾಮ್‍ನ ಎಸ್‍ಎನ್‍ಡಿಪಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದಾಳೆ. ಆಲಪ್ಪುಳದ ಎಂಎನ್ ಬ್ಲಾಕ್‍ನಲ್ಲಿ ವಾಸಮಾಡುತ್ತಿದ್ದಳು ವಿದ್ಯಾರ್ಥಿನಿ.

ಇನ್ನು ತನ್ನ ನಿವಾಸದಿಂದ ಶಾಲೆಗೆ ತಲುಪಲು ಸರ್ಕಾರಿ ಬೋಟ್ ಸೇವೆ ಇದೆ. ಆದರೆ ಕರೋನಾ ಹಿನ್ನಲೆಯಲ್ಲಿ ಲಾಕ್ ಡೌನ್ ಆದ ಕಾರಣ ಎಲ್ಲಾ ಬೋಟ್ ಗಳ ಸಂಚಾರವನ್ನ ನಿಲ್ಲಿಸಲಾಗಿತ್ತು. ಇನ್ನು ಇದೆ ಸಮಯದಲ್ಲಿ ಕೇರಳ ಸರ್ಕಾರ ಹನ್ನೆರಡನೇ ತರಗತಿಯ ಪರೀಕ್ಷಾ ದಿನಾಂಕವನ್ನ ನಿಗದಿಪಡಿಸಿದ್ದು, ಬೋಟ್ ಗಳ ಸಂಚಾರ ನಿಂತಿದ್ದ ಕಾರಣ ವಿದ್ಯಾರ್ಥಿನಿ ಸಂದ್ರ ಬಾಬು ಪರೀಕ್ಷಾ ಕೇಂದ್ರಕ್ಕೆ ಹೋಗುವುದು ಸಾಧ್ಯವಿರಲಿಲ್ಲ. ಆದರೆ ಕೇರಳದ ಜಲಸಾರಿಗೆ ವಿಭಾಗ ವಿದ್ಯಾರ್ಥಿನಿಯ ನೆರವಿಗೆ ಬಂದಿದ್ದು, ವಿದ್ಯಾರ್ಥಿನಿಯ ಪರೀಕ್ಷೆಗೆ ಸಹಾಯ ಮಾಡುವ ಸಲುವಾಗಿ ೭೦ ಜನ ಕುಳಿತು ಪ್ರಯಾಣ ಮಾಡಬಹುದಾದಂತ ಬೋಟ್ ನ್ನ ಮೇ ೨೯ ಮತ್ತು ೩೦ ಎರಡು ದಿನಗಳ ಕಾಲ ಕೇವಲ ಒಬ್ಬರೇ ವಿಧ್ಯಾರ್ಥಿನಿಗಾಗಿ ಓಡಿಸಿದ್ದಾರೆ.

ಇನ್ನು ಪರೀಕ್ಷೆ ಮುಗಿಯುವ ತನಕ ವಿಧ್ಯಾರ್ಥಿನಿಗಾಗಿ ಕಾಯುತ್ತಿದ್ದ ಬೋಟ್, ವಿದ್ಯಾರ್ಥಿನಿ ಸಂದ್ರ ಬಾಬು ಪರೀಕ್ಷೆ ಬರೆದು ಮರಳಿದ ಬಳಿಕ ಬೋಟ್ ಮೂಲಕವೇ ಮನೆಗೆ ಸುರಕ್ಷಿತವಾಗಿ ತಲುಪಿಸಲಾಗಿದೆ. ಇದರಿಂದ ಸರ್ಕಾರಕ್ಕೆ ಖರ್ಚಾಗಿರುವುದು ೪ ಸಾವಿರ. ಆದರೆ ವಿಧ್ಯಾರ್ಥಿನಿಯಿಂದ ದಿನವೊಂದಕ್ಕೆ ಕೇವಲ 18 ರೂಪಾಯಿಗಳನ್ನ ಮಾತ್ರ ಪಡೆದುಕೊಳ್ಳಲಾಗಿದೆ. ಇನ್ನು ಈ ಬೋಟ್ ನಲ್ಲಿ ೫ ಜನ ಸಿಬ್ಬಂದಿಯನ್ನ ನೇಮಿಸಲಾಗಿದ್ದು, ಬೋಟ್ ಡ್ರೈವರ್, ನೇವಿಗೇಟರ್, ಬೋಟ್ ಮಾಸ್ಟರ್ ಹಾಗೂ ಇಬ್ಬರು ಸಹಾಯಕರು ಇದ್ದರು ಎಂದು ಹೇಳಲಾಗಿದೆ. ಒಟ್ಟಿನಲ್ಲಿ ಒಬ್ಬ ವಿದ್ಯಾರ್ಥಿನಿ ಪರೀಕ್ಷೆ ಬರೆಯುವುದಕೋಸ್ಕರ ಸರ್ಕಾರ ಮತ್ತು ಅಧಿಕಾರಿಗಳ ಕೆಲಸಕ್ಕೆ ಎಲ್ಲಾ ಕಡೆಯಿಂದ ಮೆಚ್ಚುಗೆಗಳು ವ್ಯಕ್ತವಾಗಿವೆ.