Advertisements

ಲವ್ ಮಾಡಿದ ನಂತರ ಕೆಲವರು ದಾರಿ ತಪ್ಪುತ್ತಾರೆ.. ಆದರೆ ಈ ಜೋಡಿಗಳು ಒಟ್ಟಿಗೆ ಓದಿ ಲವ್ ಮಾಡಿ ಈಗ ಜೊತೆಯಾಗಿ ಎಂಥ ಕೆಲಸಕ್ಕೆ ಸೇರಿದ್ದಾರೆ ಗೊತ್ತಾ?

Uncategorized

ಈ ಪ್ರೀತಿ ಅನ್ನೋದು ಯಾವಾಗ ಹುಟ್ಟುತ್ತೆ, ಹೇಗೆ ಹುಟ್ಟುತ್ತೆ ಅಂತ ಗೊತ್ತೆಯಾಗಲ್ಲ ವಯಸಿನ ಅರಿವಿಲ್ಲದೆ ಹದಿನೆಂಟು ವರ್ಷ ತುಂಬಿರೋದಿಲ್ಲಾ ಆಗಲೇ ಪ್ರೀತಿ ಅಂತ ತಮ್ಮ ಜೀವನವನ್ನೇ ಹಾಳು ಮಾಡಿಕೊಳ್ಳುವ ಅದೇಷ್ಟೊ ಹುಡುಗ ಹುಡುಗಿಯರು ನಮ್ಗೆ ನಿದರ್ಶವಾಗಿದ್ದಾರೆ. ಇವತ್ತು ನಾನು ನಿಮ್ಗೆ ಒಂದು ಇನ್ಟ್ರೆಸ್ಟಿಂಗ್ ಸ್ಟೋರಿ ಹೇಳ್ತಿನಿ. ಇವರಿಬ್ಬರ ಕತೆಯನ್ನೊಮ್ಮೆ ನೋಡಿದರೆ ಬಹುಶಃ ಅಂತಹ ತಪ್ಪು ದಾರಿ ತುಳಿಯೋದಿಲ್ಲವೇನೋ.. ಹೌದು ಕಾಲೇಜು ಮೆಟ್ಟಿಲು ಹತ್ತಿರಲ್ಲ ಆಗಲೇ ಮನಸಲ್ಲಿ ಹತ್ತಾರು ಆಸೆ ಬಿತ್ತಿ ಬೆಳೆದು ನಿಂತಿರುತ್ವೆ.. ಈಗಂತೂ ಓದುವ ವಯಸ್ಸಿನಲ್ಲಿ ಆಗುವ ಆಕರ್ಷಣೆಗಳನ್ನೇ ಪ್ರೀತಿ ಎಂದು , ಅದು ಪ್ರೀತಿ ಅಥವಾ ಆಕರ್ಷಣೆನಾ ಅಂತ ಅರಿತುಕೊಳ್ಳುವ ಮೊದಲು ಮೈ ಮರೆತು ಬಿಟ್ಟಿರುತ್ತಾರೆ.. ಆತುರವಯೋಚನೆ ಕೈಗೆ ಬುದ್ಧಿ ಕೊಟ್ಟು ತಂದೆ ತಾಯಿಯನ್ನು ಬಿಟ್ಟು ಮನೆಯಿಂದ ಹೋಗಿ ಅತ್ತ ಜೀವನವೂ ಇಲ್ಲ.. ಇತ್ತ ಹೆತ್ತವರೂ ಇರಲ್ಲ.

Advertisements


ಒಂದೊತ್ತಿನ ಊಟಕ್ಕೂ ಪರದಾಟುವ ಸ್ಥಿತಿಗೆ ಬಂದು ತಲುಪಿರುತ್ತಾರೆ.. ಯೂನಿಫಾರ್ಮ್ ಧರಿಸಿ ಗತ್ತಲ್ಲಿ ನಿಂತಿರುವ ಈ ಇಬ್ಬರನ್ನು ನೋಡಿದರೆ ನೀವು ನಿಜಕ್ಕೂ ಹ್ಯಾಟ್ಸ್ ಆಫ್ ಹೇಳ್ತಿರ.. ಹೌದು ಕ್ಯೂಟಾಗಿ ನಿಂತಿರೋ ಈ ಕಪಲ್ಸ್ ನೋಡಿದ್ರೆ,, ಅವರ ಕತೆ ಕೇಳಿದರೆ ನಿಜಕ್ಕೂ ಇವರಿಬ್ಬರಿಗೂ ಜೀವನದ ಮೇಲಿರುವ ಪ್ರಬುದ್ಧತೆ ಮೆಚ್ಚುವಂತದ್ದು.. ಹೌದು ಈ ಹೆಣ್ಣು ಮಗಳ ಹೆಸರು ರಿಯಾ ಆ ಹುಡುಗನ ಹೆಸರು ಜಾಕ್ಸನ್.. ಇಬ್ಬರೂ ಸಹ ಕೇರಳದ ಮೂಲದವರು.. ಒಬ್ಬರಿಗೊಬ್ಬರಿಗೆ ಯಾವುದೇ ಪರಿಚಯವಿರಲಿಲ್ಲ.. ಇಬ್ಬರೂ ಸಹ ಜೀವನದಲ್ಲಿ ಏನಾದ್ರು ಮಾಡ್ಬೇಕು, ಒಳ್ಳೆಯ ಉದ್ಯೋಗ ಪಡೆದು ಸುಖಿ ಜೀವನ ಸಾಗಿಸಬೇಕು.. ಒಳ್ಳೆಯ ಹೆಸರು ಪಡೆಯಬೇಕು ಎಂಬ ಆಸೆಯ ಜೊತೆ ಛಲಕ್ಕೆ ಬಲ ತುಂಬುವ ತಯಾರಿಯಲ್ಲಿದ್ದರು.. ಇವರಿಬ್ಬರೂ ಸಹ ಒಂದೊಳ್ಳೆ ಸರ್ಕಾರಿ ಉದ್ಯೋಗಕ್ಕಾಗಿ ಪ್ರಯತ್ನ ಮಾಡುತ್ತಿದ್ದರು.. ಒಂದೇ ಕಡೆ ಪರೀಕ್ಷೆಗೆ ತರಬೇತಿ ಪಡೆಯುತ್ತಿದ್ದರು.‌

ಆ ಸಮಯದಲ್ಲಿಯೇ ಇಬ್ಬರಿಗೂ ಪರಿಚಯವಾಗಿದೆ.. ಇವರಿಬ್ಬರ ನಡುವೆ ಗಾಢವಾದ ಸ್ನೇಹ ಪ್ರೀತಿಗೆ ತಿರುಗುತ್ತದೆ.. ಆದರೆ ಪ್ರೀತಿ ಮಾಡಿದ ಕೂಡಲೇ ಅದನ್ನೇ ತಲೆಗೆರಿಸಿಕೊಂಡು ಜೀವನದ ಗುರಿ ಮರೆಯಲಿಲ್ಲ. ಬದಲಿಗೆ ಇಬ್ಬರೂ ಸಹ ಸರ್ಕಾರಿ ಉದ್ಯೋಗಕ್ಕಾಗಿ ತಮ್ಮ ತಮ್ಮ ಸತತ ಪ್ರಯತ್ನವನ್ನು‌ ಮುಂದುವರೆಸಿದರು. ಛಲ ಬಿಡದೇ ಒಳ್ಳೆಯ ತಯಾರಿ ನಡೆಸಿ ಪರೀಕ್ಷೆಯನ್ನೂ ಸಹ ಬರೆದರು.. ಇಬ್ಬರೂ ಸಹ ಪರೀಕ್ಷೆಯಲ್ಲಿ ಉತ್ತೀರ್ಣರಾದರು. ನಂತರ ಈ ಪ್ರೀತಿಯ ವಿಚಾರ ಇಬ್ಬರೂ ಮನೆಯವರಿಗೆ ತಿಳಿಸಿ, ಮದುವೆಯಾದರು..

ಕೇವಲ ಮದುವೆಯಾದ ಎರಡೇ ತಿಂಗಳಿಗೆ ಇಬ್ಬರ ಕೈಗೂ ಕೆಲಸದ ನೇಮಕಾತಿ ಆದೇಶದ ಪತ್ರ ಸೇರಿತು.. ಆ ದಂಪತಿಗಳು ಇದೀಗ ಕೊಣ್ಣಕುಜ್ಜಿ ಅರಣ್ಯ ವಲಯದಲ್ಲಿ ಅರಣ್ಯ ರಕ್ಷಕರಾಗಿ ಒಟ್ಟಿಗೆ ಕೆಲಸ ಮಾಡುತ್ತಿದ್ದಾರೆ.. ಹೌದು ಜೊತೆಯಾಗಿ ಓದಿ ಜೊತೆಯಾಗಿಯೇ ಕೆಲಸಕ್ಕೆ ಸೇರಿಕೊಂಡು ಜೀವನದಲ್ಲಿ ಬರುವ ಸವಾಲುಗಳನ್ನು ಎದುರಿಸಿದ್ದಾರೆ.. ಈ ಜೋಡಿಯ ಜೀವನದ ಪಯಣ ನಿಜಕ್ಕೂ ಜೀವನದ ಗುರಿ ಬದಲಿಸಿಕೊಳ್ಳುವ ಅದೆಷ್ಟೊ ಜನರಿಗೆ ಸ್ಪೂರ್ತಿದಾಯಕ.. ಇನ್ನು ಈ ಜೋಡಿ ಕಳೆದ ಎರಡು ವರ್ಷಗಳಿಂದ ಒಟ್ಟಿಗೆ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದಾರೆ.. ಈ ಕೆಲಸದಲ್ಲಿ ಅನೇಕ ಸವಾಲುಗಳನ್ನು ಎದುರಿಸಿದ್ದು ಈ ಬಗ್ಗೆ ತಮ್ಮ ಜೀವನದ ಪಯಣದ ಕತೆಯನ್ನು ಹಂಚಿಕೊಂಡಿದ್ದಾರೆ..