Advertisements

ರಾತ್ರೋರಾತ್ರಿ 12 ಕೋಟಿಗೆ ಓಡೆಯ.. ಒಂದೇ ರಾತ್ರಿಯಲ್ಲಿ ಈತನ ಜೀವನ ಬದಲಾಗಿದ್ದು ಹೇಗೆ ಗೊತ್ತಾ?

Kannada Mahiti

ನಮಸ್ತೆ ಸ್ನೇಹಿತರೆ, ಒಬ್ಬ ವ್ಯಕ್ತಿ ಒಂದೇ ರಾತ್ರಿಯಲ್ಲಿ ಕೋಟ್ಯಾಧಿಪತಿಯಾಗಿದ್ದಾನೆ, ಮತ್ತು ಇದರಿಂದ ಆತನ ಜೀವನವೇ ಬದಲಾಗಿದೆ. ಹೌದು ಒಂದಲ್ಲ ಎರಡಲ್ಲ ಕೋಟಿಗಳಷ್ಟು ಹಣವನ್ನು ಗಳಿಸಿದ್ದಾನೆ.. ಈತನೊಬ್ಬ ಕಾರ್ಪೆಂಟರ್. ಹೆಸರು ಅಬ್ದುಲ್ ಸಲಾಂ. ಈತ ಮೂಲತಃ ಕೇರಳದ ತಿರುವನಂತಪುರಂ ಗೆ ಸೇರಿದವನು.. ಈತನಿಗೆ 43 ವರ್ಷ ವಯಸ್ಸು. ತನ್ನ ಜೀವನ ನಡೆಸುವುದಕ್ಕಾಗಿ  ಕಾರ್ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದ.. ಇನ್ನೂ ಡ್ರೈವಿಂಗ್ ಮಾಡಿ ಬಂದ ಹಣದಿಂದ ಕುಟುಂಬವನ್ನು ನಡೆಸಲು ಸಾಲುತ್ತಿರಲಿಲ್ಲ.. ತಾನು ಎಷ್ಟು ಕಷ್ಟಪಟ್ಟರು ಬಡತನದಿಂದ ಮಾತ್ರ ಹೊರಗೆ ಬರಲು ಆಗುತ್ತಿರಲಿಲ್ಲ.. ಮಗಳನ್ನು ಓದಿಸುವುದಕ್ಕೆ ಕಾಲೇಜಿನ ಪೀಸ್ ಗಳನ್ನು ಕಟ್ಟಲು ತುಂಬಾನೆ ಸಾಲ ಮಾಡಿಕೊಂಡಿದ್ದರು..

Advertisements

ದಿನೇ ದಿನೇ ಈತನ ಸಾಲವು ಕೂಡ ಹೆಚ್ಚಾಗುತ್ತಾ ಹೋಗುತ್ತದೆ. ಹೇಗೆ ಜೀವನ ಮಾಡಲಿ, ಮಕ್ಕಳ ಭವಿಷ್ಯವನ್ನು ಹೇಗೆ ರೂಪಿಸಲಿ ಎಂಬುದೇ ಈತನ ದೊಡ್ಡ ಯೋಚನೆಯಾಗಿತ್ತು.. ಇದರ ನಡುವೆ ಸಾಲ ಕೊಟ್ಟವರು ಸಹ ಮನೆಯ ಹತ್ತಿರ ಬಂದು ಹಣವನ್ನು ಇನ್ನೂ ವಾಪಸ್ ಕೊಟ್ಟಿಲ್ಲ ಎಂದು ರಂ’ಪಾಟ ಮಾಡುತ್ತಿದ್ದರು.. ಆದರೆ ಒಂದು ದಿನ ಅಬ್ದುಲ್ ಅವರು ಡ್ರೈವಿಂಗ್ ಕೆಲಸ ಮುಗಿಸಿಕೊಂಡು ಬರುವಾಗ ಅಲ್ಲೇ ಒಂದು ಪೇಮಸ್ ಬಿಗ್ ಟಿಕೇಟ್ ಲಾಟರಿಯನ್ನು ನೋಡಿದ ಈತ ಹಣವನ್ನು ಕೊಟ್ಟು ಕೊಂಡುಕೊಳ್ಳುತ್ತಾನೆ..

ಇಲ್ಲೇ ನೋಡಿ ಈತನ ಜೀವನವೇ ಬದಲಾಗಿಬಿಡುತ್ತದೆ. ಬಿಗ್ ಟಿಕೇಟ್ ಲಾಟರಿ ಪ್ರತಿ ಶುಕ್ರವಾರ ತನ್ನ ವಿಜೇತರನ್ನ ಅನೌನ್ಸ್ ಮಾಡುತ್ತದೆ. ಅದೇ ರೀತಿ ಒಂದು ದಿನ ಬಿಗ್ ಟಿಕೇಟ್ ಲಾಟರಿಯ ವಿಜೇತರನ್ನು ಅನೌನ್ಸ್ ಮಾಡಿದಾಗ ತಿಳಿದು ಬಂದಿದ್ದು ಏನೆಂದರೆ ಅಬ್ದುಲ್ ಸಲಾಂ ಅವರಿಗೆ ಬರೋಬ್ಬರಿ 12 ಕೋಟಿ ಲಾಟರಿ ಹೊಡೆದಿದೆ ಎಂದು. ಈಗ ಅಬ್ದುಲ್ ಸಲಾಂ ಖುಷಿಯಲ್ಲಿ ತೇಲಾಡುತ್ತಾ ಇದ್ದಾರೆ.. ಏಕೆಂದರೆ ಈ ಹಣದಿಂದ ತನ್ನ ಸಾಲವು ಕೂಡ ತೀರುತ್ತದೆ ಮಕ್ಕಳಿಗೆ ಒಳ್ಳೆಯ ವಿದ್ಯಾಭ್ಯಾಸ ಕೊಡಿಸಬಹುದು ಹಾಗೆ ತನ್ನ ಮಕ್ಕಳು ಮೊಮ್ಮಕ್ಕಳು ಕೂಡ ನೆಮ್ಮದಿಯಿಂದ ಜೀವನ ಮಾಡಬಹುದು ಎಂದು. ನೊಡಿದರಲ್ವಾ ಸ್ನೇಹಿತರೆ ಅದೃಷ್ಟ ಅಂದರೆ ಇದೆ ಅಲ್ಲವೇ..