Advertisements

ತನಗೆ ಪಾಠ ಮಾಡುತ್ತಿದ್ದ ಶಿಕ್ಷಕಿ ರೈಲ್ವೆ ಸ್ಟೇಷನ್ ನಲ್ಲಿ ಭಿಕ್ಷೆ ಬೇಡುವುದನ್ನ ನೋಡಿದ ಈ ವಿದ್ಯಾರ್ಥಿನಿ ಮಾಡಿದ್ದೇನು ಗೊತ್ತಾ ?

Kannada Mahiti Uncategorized

ನಮಸ್ತೇ ಸ್ನೇಹಿತರೇ, ತಮ್ಮ ಸುಖವನ್ನೆಲ್ಲಾ ತ್ಯಜಿಸಿ ಮಕ್ಕಳಿಗಾಗಿ ಬೆವರು ಸುರಿಸಿದುಡಿಯುವ ತಂದೆ ತಾಯಿಗಳು ವಯಸ್ಸಾದ ತಮ್ಮ ಕೊನೆಗಾಲದ ದಿನಗಳಲ್ಲಿ ಬೀದಿಗೆ ಬಂದು ಬೀಳುವ ಘಟನೆಗಳು ಹೆಚ್ಚಾಗುತ್ತಿವೆ. ತಾವು ಬೆಳೆದು ದೊಡ್ಡವರಾದ ಮೇಲೆ ತಂದೆ ತಾಯಿಗಳನ್ನ ಸಾಕದೆ ಬೀದಿಗೆ ತಳ್ಳುವ ಮಕ್ಕಳು ಹೆಚ್ಚಾಗುತ್ತಿರುವುದು ತುಂಬಾ ಬೇಜಾರಿನ ಸಂಗತಿಯಾಗಿದೆ. ಇದಕ್ಕೊಂದು ನೈಜ ನಿದರ್ಶನವೆಂಬಂತೆ. ಕೇರಳ ರಾಜ್ಯದ ಮಲ್ಲಪುರಂನಲ್ಲಿ ಗಣಿತ ವಿಷಯದ ಪಾಠ ಮಾಡುತ್ತಿದ್ದ ಶಿಕ್ಷಕಿಯೊಬ್ಬರು, ರೈಲ್ವೆ ನಿಲ್ದಾಣವೊಂದರ ಬಳಿ ಭಿಕ್ಷೆ ಬೇಡಿ ಜೀವನ ನಡೆಸುತ್ತಿರುವ ಕರುಣಾಜನಕ ನೈಜ ಕತೆಯಾಗಿದೆ.

Advertisements

ಹೌದು, ತಮಗೆ ಗಣಿತದ ಪಾಠ ಮಾಡುತ್ತಿದ್ದ ಶಿಕ್ಷಕಿ ಭಿಕ್ಷೆ ಬೇಡುವುದನ್ನ ಅವರ ವಿಧ್ಯಾರ್ಥಿನಿಯೊಬ್ಬರು ಕೇರಳದ ರೈಲ್ವೆ ನಿಲ್ದಾಣವೊಂದರ ಬಳಿ ಭಿಕ್ಷೆ ಬೇಡುವುದನ್ನ ನೋಡಿದ್ದಾರೆ. ಆಗ ಆ ವಿದ್ಯಾರ್ಥಿನಿ ಆಕೆ ಮೊದಲು ನಮ್ಮ ಕ್ಲಾಸ್ ಟೀಚರ್ ಆಗಿದ್ದರು ಎಂದು ತಿಳಿದು ತನ್ನ ಟೀಚರ್ ಬಳಿ ಹೋಗಿ ಮಾತನಾಡಿಸುತ್ತಾಳೆ. ಆದರೆ ಹಿಂದೆ ಟೀಚರ್ ಆಗಿದ್ದ ಆ ಮಹಿಳೆ ಆ ವಿದ್ಯಾರ್ಥಿನಿ ಯಾರೆಂದು ಗುರುತು ಹಿಡಿಯಲಿಲ್ಲ. ಆದರೆ ವಿಧ್ಯಾರ್ಥಿನಿ ಆ ಮಹಿಳೆ (ಟೀಚರ್ ಆಗಿದ್ದವರ) ಬಗ್ಗೆ ಸಂಪೂರ್ಣವಾಗಿ ವಿಚಾರಣೆ ನಡೆಸಿದಾಗ..ನಾನು ನನ್ನ ಶಿಕ್ಷಕ ವೃತ್ತಿಯಿಂದ ನಿವೃತ್ತಿಯಾದಾಗ ಅದರಿಂದ ಬಂದ ಅಷ್ಟೂ ಹಣವನ್ನ ತೆಗೆದುಕೊಂಡು ಹೋಗಿ ನನ್ನ ಮಕ್ಕಳಿಗೆ ಕೊಟ್ಟೆ. ಆದರೆ ಎಲ್ಲಾ ಹಣವನ್ನ ತೆಗೆದುಕೊಂಡ ನನ್ನ ಮಕ್ಕಳು, ನನಗೆ ಮೋಸ ಮಾಡಿ ನನ್ನನ್ನ ಬಿಟ್ಟುಹೋದ್ರು. ಈಗ ನನ್ನ ಮಕ್ಕಳು ಎಲ್ಲಿದ್ದಾರೆ, ಏನು ಮಾಡುತ್ತಿದ್ದಾರೆ ಇದ್ಯಾವುದು ನನಗೆ ಗೊತ್ತಿಲ್ಲ ಎಂದು ಆ ವಿದ್ಯಾರ್ಥಿನಿಗೆ ಟೀಚರ್ ಹೇಳಿದ್ದಾರೆ. ಇದಾದ ಬಳಿಕ ತಿನ್ನಲು ಊಟ ಇಲ್ಲದೆ, ಇರಲು ಮನೆ ಇಲ್ಲದೆ ಕೊನೆಗೆ ರೈಲ್ವೆ ನಿಲ್ದಾಣದಲ್ಲಿ ಭಿಕ್ಷೆ ಬೇಡಲು ಶುರು ಮಾಡಿದೆ ಎಂದು ಆ ಟೀಚರ್ ಹೇಳಿದ್ದಾರೆ.

ತನಗೆ ಪಾಠ ಮಾಡುತ್ತಿದ್ದ ಶಿಕ್ಷಕಿಯ ನೋವಿನ ಕತೆ ಕೇಳಿದ ಆ ವಿದ್ಯಾರ್ಥಿನಿಗೆ ಕಣ್ಣೀರು ತಡೆಯಲಾಗಲಿಲ್ಲ. ಬಳಿಕ ತನ್ನ ಗುರುವನ್ನ ಮನೆಗೆ ಕರೆದುಕೊಂಡು ಹೋದ ಆ ವಿದ್ಯಾರ್ಥಿನೀ ತನ್ನ ಶಿಕ್ಷಕಿಗೆ ಊಟ, ಬಟ್ಟೆ ಎಲ್ಲವನ್ನು ಕಲ್ಪಿಸಿಕೊಡುತ್ತಾಳೆ. ಇದೆಲ್ಲದರ ಬಳಿಕ ತನ್ನ ಶಿಕ್ಷಕಿಯ ಮುಂದಿನ ಜೀವನದ ಬಗ್ಗೆ ಯೋಚನೆ ಮಾಡಿದ ಆ ವಿದ್ಯಾರ್ಥಿನಿ ತನ್ನೊಂದಿಗೆ ಓದಿದ್ದ ಪ್ರತಿಯೊಬ್ಬ ಸ್ನೇಹಿತರನ್ನ ಭೇಟಿ ಮಾಡಿ ತಮ್ಮ ಶಿಕ್ಷಕಿ ಇರುವ ಸಂಕಷ್ಟದ ಪರಿಸ್ಥಿತಿಯನ್ನ ತಿಳಿಸಿ ತಮ್ಮ ಶಿಕ್ಷಕಿಯ ಮುಂದಿನ ಜೀವನಾಕ್ಕಾಗಿ ಬೇಕಾದ ಊಟ, ವಸತಿ ವ್ಯವಸ್ಥೆಯನ್ನ ಕಲ್ಪಿಸಿಕೊಡುತ್ತಾಳೆ. ಗುರು ಶಿಷ್ಯರ ನಡುವಿನ ಶ್ರೇಷ್ಠ ಸಂಬಂಧಕ್ಕೆ ಇದಕ್ಕಿಂತ ಮತ್ತೊಂದು ಉತ್ತಮ ಉದಾಹರಣೆ ಇಲ್ಲ. ಸಾಕಿ ಸಲುಹಿದ ಮಕ್ಕಳೇ ವಯಸ್ಸಾದ ತಾಯಿಯನ್ನ ಬೀದಿಗೆ ತಳ್ಳಿರುವಾಗ, ಆಕೆ ಪಾಠ ಮಾಡಿ ಜೀವನ ರೂಪಿಸಿದ ವಿದ್ಯಾರ್ಥಿಗಳು ಟೀಚರ್ ಕೈ ಬಿಡಲಿಲ್ಲ..