Advertisements

ಅಂದು ಮೆಜೆಸ್ಟಿಕ್ ನಲ್ಲಿ ಬಂದಿಳಿದ ಯಶ್ ಜೇಬಿನಲ್ಲಿದ್ದ ಹಣ ಎಷ್ಟು ಗೊತ್ತಾ ? ಅಷ್ಟು ಸುಲಭವಾಗಿರಲಿಲ್ಲ KGF ಹೀರೋ ಬೆಳೆದುಬಂದ ದಾರಿ..

Cinema

ಸ್ನೇಹಿತರೇ, ಕನ್ನಡ ಚಿತ್ರಗಳೆಂದರೆ ಪರಭಾಷಿಕರು ಬೇಜವಾಬ್ದಾರಿಯಿಂದ ನೋಡುವ ಕಾಲವೊಂದಿತ್ತು. ಆದರೆ ಕೆಜಿಎಫ್ ಚಿತ್ರ ಬಂದಿದ್ದೆ ಬಂದಿದ್ದು ಇಡೀ ಭಾರತೀಯ ಚಿತ್ರರಂಗ ಸ್ಯಾಂಡಲ್ವುಡ್ ಕಡೆ ನೋಡುವಂತಾಗಿದೆ. ಪ್ರಶಾಂತ್ ನೀಲ್ ಅವರ ನಿರ್ದೇಶನ ಹಾಗೂ ರಾಕಿಂಗ್ ಸ್ಟಾರ್ ಯಶ್ ಅವರ ನಟನೆಯಲ್ಲಿ ಮೂಡಿಬಂದ ಪವರ್ ಫುಲ್ ಸಿನಿಮಾ ಕೆಜಿಎಫ್ ಭಾಗ ೧. ಇನ್ನು ಇದೆ ಚಿತ್ರದಿಂದಲೇ ಯಶ್ ಇಡೀ ದೇಶದಾದ್ಯಂತ ಸ್ಟಾರ್ ಆಗಿ ಬಿಟ್ಟಿದ್ದಾರೆ. ಇನ್ನು ಈಗಾಗಲೇ ಕೆಜಿಎಫ್ ಭಾಗ ಎರಡರ ಟೀಸರ್ ಬಿಡುಗಡೆಗೊಂಡಿದ್ದು ಸಿನಿಮಾ ಜಗತ್ತಿನ ಎಲ್ಲಾ ದಾಖಲೆಗಳನ್ನ ಅಳಿಸಿಹಾಕಿ ನೂರು ಮಿಲಿಯನ್ ಗಿಂತ ಹೆಚ್ಚು ವೀವ್ಸ್ ಗಳಿಸಿದ್ದು ಯೂಟ್ಯೂಬ್ ನಲ್ಲಿ ನಂಬರ್ ಒನ್ ಟ್ರೆಂಡಿಂಗ್ ನಲ್ಲಿದೆ. ಇದು ನಮ್ಮ ಕನ್ನಡದ ಹೆಮ್ಮೆ ಅಲ್ಲವೇ.

Advertisements

ಇನ್ನು ರಾಕಿಂಗ್ ಸ್ಟಾರ್ ಯಶ್ ಬಗ್ಗೆ ಹೇಳಬೇಕೆಂದರೆ ಯಾವುದೇ ಬ್ಯಾಕ್ ಗ್ರೌಂಡ್, ಗಾಡ್ ಫಾದರ್ ಇಲ್ಲದೆ ತನ್ನ ಸ್ವತಃ ಪರಿಶ್ರಮದಿಂದ ಸ್ಯಾಂಡಲ್ವುಡ್ ನಲ್ಲಿ ಹಂತ ಹಂತವಾಗಿ ಬೆಳೆದ ನಟ ಇಂದು ಭಾರತದ ಸ್ಟಾರ್ ನಟನಾಗಿ ಗುರುತಿಸಿಕೊಂಡಿದ್ದಾರೆ. ಆದರೆ ಯಶ್ ಬೆಳೆದು ಬಂದ ದಾರಿ ಅಷ್ಟು ಸುಲಭವಾಗಿರಲಿಲ್ಲ. ಇನ್ನು ಯಶ್ ಅವರ ಕುಟುಂಬ ಕೂಡ ಆರ್ಥಿಕವಾಗಿ ಅಷ್ಟೇನೂ ಉತ್ತಮವಾಗಿರಲಿಲ್ಲ. ತಂದೆ ಬಸ್ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದಾರೆ, ತಾಯಿ ಹೌಸ್ ವೈಫ್ ಆಗಿದ್ದರು. ತನ್ನ ಚಿಕ್ಕಂದಿನಿಂದಲೇ ರೆಬೆಲ್ ಸ್ಟಾರ್ ಅಂಬರೀಷ್ ರವರನ್ನ ನೋಡಿ ಬೆಳೆದಿದ್ದ ಯಶ್ ಗೆ ತಾನೂ ಕೂಡ ಸ್ಯಾಂಡಲ್ವುಡ್ ನಲ್ಲಿ ನಾಯಕನಟನಾಗಿ ಮಿಂಚಬೇಕು ಎಂಬ ಆಸೆ ಆಗಲೇ ಚಿಗುರಿತ್ತು. ಬೆಂಗಳೂರಿನ ಗಾಂಧಿನಗರದಲ್ಲಿ ನನ್ನದೊಂದು ಎತ್ತರದ ಕಟೌಟ್ ನಿಲ್ಲುವಷ್ಟರ ಮಟ್ಟಿಗಿನ ಹಂತಕ್ಕೆ ಬೆಳೆಯಬೇಕು ಎಂಬುದು ಯಶ್ ಅವರ ಕನಸಾಗಿತ್ತು.

ಆದರೆ ಬಸ್ ಡ್ರೈವರ್ ಮಗನಾಗಿದ್ದ ಯಶ್ ಗೆ ಇದೆಲ್ಲಾ ಅಷ್ಟು ಸುಲಭವಾಗಿರಲಿಲ್ಲ. ಎಂದರೂ ಆಗಲಿ ತನ್ನ ಗುರಿಯನ್ನ ಸಾಧಿಸಲೇಬೇಕೆಂಬ ಹಠ ತೊಟ್ಟು ಬೆಂಗಳೂರಿಗೆ ಬಂದು ಮೆಜೆಸ್ಟಿಕ್ ನಲ್ಲಿ ಇಳಿಯುತ್ತಾರೆ. ಆದರೆ ಆಗ ಯಶ್ ಜೋಬಿನಲ್ಲಿ ಇದ್ದದ್ದು ಕೇವಲ ಮುನ್ನೂರು ರೂಗಳು ಮಾತ್ರ. ಮೊದಲಿಗೆ ಬೆಂಗಳೂರಿನ ಬಣ್ಣದ ಲೋಕವನ್ನ ಕಂಡ ಯಶ್ ಗೆ ಭಯ ಆಗಿತ್ತಂತೆ. ಆದರೆ ಸ್ಯಾಂಡಲ್ವುಡ್ ನಲ್ಲಿ ಸ್ಟಾರ್ ನಟನಾಗಿ ಬೆಳೆದು ನಿಲ್ಲಲೇಬೇಕು ಎಂದು ಅಂದುಕೊಂಡಿದ್ದ ಯಶ್ ಇಟ್ಟ ಹೆಜ್ಜೆ ಹಿಂದೆ ಹಿಡದೆ ತಮ್ಮ ಗುರಿಯ ಕಡೆಗೆ ಹೋದೆ, ಒಂದು ವೇಳೆ ಅಂದು ಮನೆಗೆ ಹೋಗಿದ್ದಾರೆ ಮತ್ತೆ ನಾನು ಗಾಂಧಿನಗರದ ಕಡೆಗೆ ಬರಲು ಸಾಧ್ಯವಾಗುತ್ತಿರಲಿಲ್ಲ ಎಂದು ಸ್ವತಃ ಯಶ್ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.

ಬೆಂಗಳೂರಿನ ಕಡೆ ಮತ್ತೆ ಬರಲು ತನ್ನ ಮನೆಯವರು ಬಿಡುತ್ತಿರಲಿಲ್ಲ ಎಂದು ಯಶ್ ಹೇಳಿದ್ದಾರೆ. ತನ್ನ ಕನಸನ್ನ ಹೇಗಾದರೂ ಸಾಕಾರ ಮಾಡಿಕೊಳ್ಳಬೇಕು ಎಂದು ಸ್ವತಃ ಯಶ್ ಅವರೇ ಷರತ್ತುಗಳನ್ನ ವಿಧಿಸಿಕೊಂಡಿದ್ದರಂತೆ. ನಾನು ಆ ದಿನ ಏನಾದರೂ ಹೆಸರಿ ಹಿಂತಿರುಗಿ ಮನೆಗೆ ಹೋಗಿದ್ದಾರೆ ತನ್ನ ತಂದೆ ತಾಯಿ ಹೇಳಿದಂತೆ ಕೇಳಬೇಕಿತ್ತು. ನಾನು ಗಾಂಧಿನಗರದಲ್ಲಿ ಸ್ಟಾರ್ ಆಗಿ ಮೆರೆಯಬೇಕು ಎಂದು ನಾನು ಕಂಡಿದ್ದ ಕನಸು ಕೇವಲ ಕನಸಾಗಿಯೇ ಉಳಿದುಬಿಡುತಿತ್ತು ಎಂದು ಯಶ್ ಹೇಳಿದ್ದಾರೆ. ಒಟ್ಟಿನಲ್ಲಿ ಮಧ್ಯಮ ವರ್ಗದ ಕುಟುಂಬದಿಂದ ಬಂದ ಹುಡುಗನೊಬ್ಬ ಇಂದು ಇಡೀ ಭಾರತವೇ ಪ್ರೀತಿಸುವಂತಹ ಅಭಿಮಾನಿಗಳನ್ನ ಪಡೆದಿದ್ದಾರೆ ಎಂದರೆ ಗ್ರೇಟ್ ಅಲ್ಲವೇ..ನಮ್ಮ ಕನ್ನಡದ ಹೆಮ್ಮೆಯೂ ಕೂಡ..