Advertisements

ಸಿನಿಮಾ ಬಿಡುಗಡೆ ಆಗುವ ಮುನ್ನವೇ ಮತ್ತೊಂದು ದಾಖಲೆ ನಿರ್ಮಿಸಿದ ಕೆಜಿಎಫ್ 2

Cinema

ದೇಶದಲ್ಲೇ ಸಿನಿಮಾ ಪ್ರಿಯರು ಕಾತರುದಿಂದ ಕಾಯತ್ತಿರುವ ಸಿನಿಮಾ ಎಂದರೆ ಅದು ಕೆಜಿಎಪ್ ಚಾಪ್ಟರ್ 2. ಈ ಹಿಂದೆ ನಿಗದಿಯಾಗಿದ್ದ ದಿನಾಂಕದಂದು ಈ ಸಿನಿಮಾ ಬಿಡುಗಡೆ ಆಗುವುದು ಸಾಧ್ಯವಾಗುವುದೇ ಎಂಬ ಅನುಮಾನ ಮೂಡಿತ್ತು ಎಂದು ಚಿತ್ರತಂಡವು ತಿಳಿಸಿತ್ತು. ಇನ್ನೂ ಕೊರೊನಾ ವೈರಸ್ ಮಧ್ಯೆ ಲಾಕ್ ಡೌನ್ ಸಮಯದಲ್ಲಿ, ಶೂಟಿಂಗ್ ಮುಗಿದಿರುವ ಪೋಸ್ಟ್ ಪ್ರೊಡಕ್ಷನ್ ಕೆಲಸಗಳನ್ನು ಈಗಾಗಲೇ ನಡೆಸಲಾಗಿದೆ‌.

Advertisements

ಅದರೆ ಇನ್ನೂ 25 ದಿನಗಳವರೆಗೆ ಶೂಟಿಂಗ್ ಬಾಕಿ ಇದ್ದು ಸಾಕಷ್ಟು ಕೆಲಸಗಳು ಪೂರ್ಣಗೊಳ್ಳಬೇಕಾಗಿದೆ. ಈ ಸಮಯದಲ್ಲಿ ಸಧ್ಯಕ್ಕೆ ಶೂಟಿಂಗ್ ಮಾಡಲು ಸಾಧ್ಯವಿಲ್ಲ, ಏಕೆಂದರೆ ಸರ್ಕಾರ ನೀಡಿರುವಂತ ಷರತ್ತುಗಳ ಅನುಗುಣವಾಗಿ ಶೂಟಿಂಗ್ ನಡೆಸುವುದು ಕಷ್ಟ. ಯಾಕೆಂದರೆ.  ಸರ್ಕಾರದ ಮಾರ್ಗಸೂಚಿ ಅನುಸಾರವಾಗಿ ನಾವು ಸಿನಿಮಾ ಮಾಡಲು ಮುಂದಾದರೆ ಚಿತ್ರಕಥೆಯನ್ನೇ ಬದಲಿಸಬೇಕಾಗುವ ಸಂದರ್ಭ ಉಂಟಾಗುತ್ತದೆ. ಆದರೂ  ಈ ಎಲ್ಲಾ ಸಂಕಟಗಳ ನಡುವೆಯೂ ಕೆಜಿಎಪ್ ಚಾಪ್ಟರ್ 2 ಮತ್ತೊಂದು ದಾಖಲೆಯನ್ನು ಬರೆದಿದೆ.

ಕೆಜಿಪ್ 2 ಅಕ್ಟೋಬರ್ 23 ರಂದು ರಿಲೀಸ್ ಆಗುತ್ತದೆ ಎಂದು ಮಾರ್ಚ್ 13 ರಂದು ಚಿತ್ರತಂಡ ಘೋಷಣೆ ಮಾಡಿದ್ದರು‌. ಇದು ಅಭಿಮಾನಿಗಳಲ್ಲಿಯೂ ಸಹ ಸಿನಿಮಾ ಯಾವಾಗ ರಿಲಿಸ್ ಆಗುತ್ತದೆಯೋ ಎಂದು ಕಾತುರರಾಗಿ ನಿಂತಿದ್ದಾರೆ, ಇನ್ನೂ ಇದೆ ಸಮಯದಲ್ಲಿ ಬಾಲಿವುಡ್ ನ ಅನೇಕ ದಿಗ್ಗಜ ನಟರ ಸಿನಿಮಾಗಳು ರಿಲಿಸ್ ಆಗಲು ಸಜ್ಜಾಗಿದೆ. ಆದರೆ ಹಿಂದಿ ಸಿನಿಮಾ ಪ್ರಿಯರು ಕನ್ನಡಿಗರ ಕೆಜಿಎಪ್ ಚಿತ್ರವನ್ನು ನೋಡಲು ಕಾತುರರಾಗಿ ಕಾದಿರುವುದು ವಿಶೇಷ.

ಪ್ರತಿ ತಿಂಗಳೂ ಓರ್ಮ್ಯಾಕ್ಸ್ ಮೀಡಿಯಾ ಸಂಸ್ಥೆ ಒಂದು ಸಮೀಕ್ಷೆ ಮಾಡುತ್ತದೆ. ಹಿಂದಿ ಚಿತ್ರರಂಗದ ಸಿನಿಮಾಗಳಲ್ಲಿ ನೀವು ಯಾವ ಸಿನಿಮಾ ನೋಡಲು ಕಾತುರರಾಗಿದ್ದೀರಿ ಎಂದು ಕೇಳಿದ್ದಾರೆ. ವಿಶೇಷ ಏನೆಂದರೆ ಈ ಹಿಂದೆ ಕೂಡ ಈ ಪಟ್ಟಿಯಲ್ಲಿ ಕೆಜಿಪ್ 2 ಸ್ಥಾನಗಳಿಸಿದೆ. ಆದರೆ ಬಾಲಿವುಡ್‌ ಹಿಂದಿ ಪ್ರೇಕ್ಷಕರು ಸಹ ಅತಿ ಹೆಚ್ಚು ಕಾತುರದಿಂದ ಕಾದಿರುವ ಸಿನಿಮಾವಾಗಿದೆ. ಪೆಭ್ರವರಿಯಿಂದ ಜುಲೈವರೆಗೂ ಕೆಜಿಪ್ ಚಾಪ್ಟರ್ 2  ಮೊದಲಸ್ಥಾನದಲ್ಲಿ ಇರುವಂತೆ ಕಾಪಾಡಿಕೊಂಡು ಬಂದಿದ್ದು, ಕೆಜಿಪ್ ತಂಡಕ್ಕೆ ಮತ್ತೊಂದು ದಾಖಲೆಯನ್ನು ತಂದಕೊಟ್ಟಿದೆ.