Advertisements

ಕೆಜಿಎಫ್ ರಿಯಲ್ ಕಥೆ ಏನು ಗೊತ್ತಾ? ಇದರ ಬಗ್ಗೆ ಗೊತ್ತಾದ್ರೆ ನಿಜಕ್ಕೂ ಶಾ’ಕ್ ಆಗ್ತೀರಾ.. ಇಷ್ಟೆಲ್ಲಾ ನಡೆದಿತ್ತಾ!

Kannada Mahiti

ನಮಸ್ತೆ ಸ್ನೇಹಿತರೆ, ಕೆಜಿಎಪ್ ಇಡೀ ಭಾರತದಲ್ಲಿ ಹೆಚ್ಚು ಸದ್ದು ಮಾಡಿದಂತಹ ಪದ ಇದು. ನಮ್ಮ ಕನ್ನಡ ಚಿತ್ರ ಇಡೀ ಭಾರತದಲ್ಲಿ ಪ್ರಚಾರ ಪಡೆದಿರುವುದು ನಮ್ಮೆಲ್ಲರಿಗೂ ಕುಷಿ ವಿಚಾರ.. ಆದರೆ ನಾವು ತಿಳಿಸಲು ಹೊರಟಿರುವ ಈ ಸ್ಟೋರಿ ನಿಜವಾದ ಕೆಜಿಎಫ್ ನ ಬಗ್ಗೆ. ಕೆಜಿಎಫ್ ಪ್ರಪಂಚದಲ್ಲೇ ಹಳೆಯ ಚಿನ್ನದ ಗಣಿ ಹಾಗೂ ತುಂಬಾ ಆಳವಾದ ಚಿನ್ನದ ಗಣಿ ಎಂದು ಹೇಳಬಹುದು.. ಇದರ ಇತಿಹಾಸದ ಬಗ್ಗೆ ತಿಳಿಯಲು ಹೊರಟರೇ ಚೋಳರ ಕಾಲದಲ್ಲಿ ಚಿನ್ನದ ನಿಕ್ಷೇಪವನ್ನ ಶೋದಿಸುತ್ತಿದ್ದರು ಎಂದು ತಿಳಿದು ಬರುತ್ತದೆ.. ಇನ್ನೂ ಇವರ ನಂತರ ಹೈದರಾಲಿ ಹಾಗು ಟಿಪ್ಪು ಸುಲ್ತಾನ್ ಕೂಡ ಇಲ್ಲಿ ಚಿನ್ನವನ್ನು ಹೊರ ತೆಗೆಯುತ್ತಿದ್ದರು ಎಂದು ಈಸ್ಟ್ ಇಂಡಿಯಾ ಕಂಪನಿಗಳ ದಾಖಲೆಗಳು ತಿಳಿಸುತ್ತವೆ.

Advertisements

1799 ರಲ್ಲಿ ಶ್ರೀರಂಗಪಟ್ಟಣದ ಯು’ದ್ಧ’ದಲ್ಲಿ ಬ್ರಿಟೀಷರು ಅವರ ವಿರುದ್ಧ ಟಿಪ್ಪು ಸುಲ್ತಾನ್ ಸೋತು ಹೋಗುತ್ತಾನೆ. ನಂತರ ಆ ಒಂದು ಚಿನ್ನದ ಗಣಿ ಬ್ರಿಟಿಷರ ಕೈವಶವಾಗುತ್ತದೆ.. ನಂತರ ಆ ಗಣಿಯನ್ನ 1802 ನೇ ಇಸವಿಯಲ್ಲಿ ಬ್ರಿಟೀಷರ ಸರ್ವೇಯರ್ ಆಗಿದ್ದ ಕ್ಯಾಪ್ಟನ್ ಜಾನುವರನ್ ಆ ಚಿನ್ನದ ಗಣಿಯನ್ನ ತನ್ನ ತೆಕ್ಕೆಗೆ ತೆಗೆದುಕೊಳ್ಳುತ್ತಾನೆ. ನಂತರ 1850 ರಲ್ಲಿ ಮ್ಯಾಕಲ್ ಲ್ಯಾವೆಲ್ಲಿ ಎಂಬಾತ ತನ್ನ ವಶಕ್ಕೆ ಆ ಪ್ರದೇಶವನ್ನು ಪಡೆದುಕೊಂಡು ಲ್ಯಾವೆಲ್ಲಿ ಅಂಡ್ ಅಸೋಸಿಯೇಟ್ಸ್ ಕಂಪನಿ ಮೂಲಕ ಚಿನ್ನದ ಗಣಿಗಾರಿಕೆಗೆ ಲೈಸೆನ್ಸ್ ಕೊಡಬೇಕು ಎಂದು 1873 ರಲ್ಲಿ ಮೈಸೂರು ಸರ್ಕಾರಕ್ಕೆ ಅರ್ಜಿಯನ್ನು ಸಲ್ಲಿಸುತ್ತಾನೆ.

ಆದರೆ ಆ ಗಣಿಗಾರಿಕೆಯ ಲೈಸೆನ್ಸ್ ಏನಿದೆ ಅದು ಜಾನ್ಟೆರರ್ ಎಂಬುವನ ಪಾಲಾಗುತ್ತೆ.. ನಂತರ ಈತ ಜಾನ್ಟೆರರ್ ಕಂಪನಿ ಸ್ಥಾಪಿಸುವ ಮೂಲಕ ಕೆಜಿಎಫ್ ನಲ್ಲಿ 1880 ರಲ್ಲಿ ಗಣಿಗಾರಿಕೆಯನ್ನು ಪ್ರಾರಂಭಿಸುತ್ತಾನೆ. ಆರಂಭದ ಮೂರು ವರ್ಷಗಳಲ್ಲಿ ಸರಿಯಾದ ಚಿನ್ನದ ನಿಕ್ಷೇಪಗಳು ದೊರೆಯದಿದ್ದ ಕಾರಣ ಕಂಪನಿ ನಷ್ಟದ ಆದಿಯನ್ನು ಹಿಡಿಯುತ್ತದೆ.‌ ಆದರೆ ನಂತರ ದಿನಗಳಲ್ಲಿ ಅಲ್ಲಿ ಹೇರಳವಾಗಿ ಚಿನ್ನ ಸಿಗುವುದಕ್ಕೆ ಪ್ರಾರಂಭವಾಗುತ್ತದೆ.. ನಂತರ ಸತತ 121 ವರ್ಷಗಳ ಕಾಲ ಭೂ’ಗರ್ಭ’ದಿಂದ ಚಿನ್ನವನ್ನು ಹೊರತೆಗಯುವ ಕೆಲಸ ಕೆಜಿಎಫ್ ನಲ್ಲಿ ವಿಜೃಂಭಣೆಯಿಂದ ಸಾಗುತ್ತದೆ.

1947 ರಲ್ಲಿ ದೇಶ ಸ್ವಾತಂತ್ರ್ಯ ಪಡೆದ ನಂತರ ಭಾರತ ಸರ್ಕಾರ ಭಾರತ್ ಗೌರ್ ಮೈನಿಂಗ್ ಲಿಮಿಟೆಡ್ ಅಂದರೆ ಬಿಜೆಎಮ್ ಎಲ್ ಎಂಬು ಸಾರ್ವಜನಿಕ ಉದ್ಯಮಿಯನ್ನು ಸ್ಥಾಪಿಸಿ ಚಿನ್ನದ ಉತ್ಪಾದನೆ ಹಾಗೂ ವಹಿವಾಟನ್ನು ಮುಂದುವರೆಸುತ್ತದೆ.. ಆ ಒಂದು ಬಿಜೆಎಮ್ ಎಲ್ ಪ್ರದೇಶ ಏನಿದೆ ಅದು ಸುಮಾರು 12 ವರೆ ಸಾವಿರ ಎಕರೆ ಪ್ರದೇಶವನ್ನು ಹೊಂದಿದೆ. ಆ ಪ್ರದೇಶಗಳಲ್ಲಿ ಮಾರಿ ಕೂಪಮ್, ಗೋಲ್ಕೊಂಡ, ಚಿಗರಿ ಕುಂಟೆ, ಮೈಸೂರು ಮೈನ್ಸ್, ನಂದಿ ದುರ್ಗಾ ಈ ರೀತಿ 30 ಕ್ಕೂ ಹೆಚ್ಚು ಪ್ರದೇಶಗಳಿಂದ ಚಿನ್ನವನ್ನು ಹೊರತೆಗೆಯಲಾಗುತ್ತಿತ್ತು. ಮತ್ತೆ ಕೆಜಿಎಪ್ ಈ ಪ್ರಪಂಚದಲ್ಲೇ ಅತ್ಯಂತ ಆಳವಾದ ಚಿನ್ನ ಗಣಿಯಾಗಿದೆ..

ಸುಮಾರು 3 ಸಾವಿರದ 200 ಮೀಟರ್ ಗಳಷ್ಟು ಆಳವನ್ನು ಹೊಂದಿದೆ. ಅಂದರೆ ಸುಮಾರು 13 ಸಾವಿರದ 500 ಅಡಿಗಳು ಆಳವನ್ನು ಹೊಂದಿದೆ.. ಮತ್ತೆ ಚಿನ್ನದ ಅದಿರನ್ನು ಹೊರ ತೆಗೆಯಲು ಸುಮಾರು 400 ಕಿಲೋಮೀಟರ್ ಗಳಷ್ಟು ಉದ್ದದ ಸುರಂಗವನ್ನ ಕೊ’ರೆಯಲಾಗಿದೆ. ಮತ್ತೆ ಈ ಒಂದು ಕಂಪನಿ ಉತ್ತಂಗದಲ್ಲಿದ್ದಾಗ ಸುಮಾರು 35 ಸಾವಿರ ಜನ ಕಾರ್ಮಿಕರು ಆ ಒಂದು ಚಿನ್ನದ ಗಣಿಯಲ್ಲಿ ಕೆಲಸ ಮಾಡುತ್ತಿದ್ದರು.‌ ಈ ಒಂದು ಗಣಿಯನ್ನು ಮುಚ್ಚುವ ವರೆಗೂ ಅಧಿಕೃತ ದಾಖಲೆಗಳ ಪ್ರಕಾರ ಒಟ್ಟು 800 ಟನ್ ನಷ್ಟು ಚಿನ್ನವನ್ನ ಉತ್ಪಾದನೆ ಮಾಡಲಾಗಿದೆ.. ಇನ್ನೂ ಇದಕ್ಕಿಂತ ಮುಂಚೆ ಚೋಳರ ಕಾಲದಲ್ಲಿ ಮತ್ತೆ ಹೈದರಾಲಿ, ಟಿಪ್ಪು ಸುಲ್ತಾನ್ ಕಾಲದಲ್ಲಿ ಸುಮಾರು 6 ಸಾವಿರದ 200 ಕೇಜಿಯಷ್ಟು ಚಿನ್ನವನ್ನ ಉತ್ಪಾದಿಸಲಾಗಿತ್ತು ಅಂತ ದಾಖಲೆಗಳು ಹೇಳುತ್ತದೆ.

ಮತ್ತು ಅರ್ಥಿಕವಾಗಿ ಉತ್ತಮ ಸ್ಥಿತಿಯಲ್ಲಿದ್ದ ಬಿಜೆಎಮ್ ಎಲ್ 1980 ರಲ್ಲಿ ಶತಮಾನೋತ್ಸವವನ್ನ ಕೂಡ ಆಚರಿಸಿ ಕೊಂಡಿತ್ತು.. ಮತ್ತೆ 80 ರ ದಶಕದ ನಂತರ ಜಾಗತಿಕ ಮಾರುಕಟ್ಟೆಯಲ್ಲಿ ಅಮೇರಿಕಾದ ಡಾಲರ್ ಹಾಗೂ ಇಂಗ್ಲಂಡ್‌ನ ಪೌಂಡ್ ಬೆಲೆ ಏರಿಕೆಯಿಂದ ಚಿನ್ನದ ಬೆಲೆಯಲ್ಲಿ ಕುಸಿತ ಉಂಟಾಯಿತು. ಮತ್ತೆ ಇದು ಚಿನ್ನದ ಉತ್ಪಾದನೆಯ ಮೇಲೆ ವಿಪರೀತ ಪ’ರಿ’ಣಾಮ ಬೀಳುತ್ತದೆ. ಚಿನ್ನದ ಬೆಲೆಗಿಂತ ಉತ್ಪಾದನೆಯ ವೆಚ್ಚವೇ ಜ್ಯಾಸ್ತಿ ಆಗ್ತಾ ಹೋಯಿತು ನಂತರ ಕಂಪನಿ ನಷ್ಟದ ಸು’ಳಿವಿಗೆ ತಲುಪಿತು..

ನಂತರ ಇದರ ಜೊತೆಗೆ ಅಧಿಕಾರಿಗಳ ನಿರ್ಲಕ್ಷ್ಯ ಮತ್ತು ಭ್ರ’ಷ್ಟಾ’ಚಾರ ಚಿನ್ನದ ಸೋ’ರಿಕೆ ಈ ಎಲ್ಲಾ ಕಾರಣಗಳಿಂದ ಬಿಜಿಎಮ್ ಎಲ್ ಕಂಪನಿ ಸಂಪೂರ್ಣವಾಗಿ ನಷ್ಟದ ಆದಿಯನ್ನು ಹಿಡಿದುಯುತ್ತದೆ. ನಂತರ 2001 ರಲ್ಲಿ ಪೆಬ್ರವರಿ 22 ರಂದು ಗಣಿಯನ್ನ ಮುಚ್ಚುವ ಮೂಲಕ ಕೇಂದ್ರ ಸರ್ಕಾರ ಬಿಜೆಎಮ್ ಎಲ್ ಗೆ ಬೇಗ ಮುದ್ರೆಯನ್ನ ಹಾಕುತ್ತದೆ.. ನೂರಾರು ವರ್ಷಗಳಿಂದ ಚಿನ್ನವನ್ನ ಉತ್ಪಾದಿಸುತ್ತಿದ್ದ ಆ ಕಂಪನಿ ಅಲ್ಲಿಗೆ ಕೊ’ನೆಗೊಂಡಿತು.. ಸ್ನೇಹಿತರೆ ಇದಿಷ್ಟು ಕೆಜಿಎಫ್ ನ ಮಾಹಿತಿ.