ನಮಸ್ತೆ ಸ್ನೇಹಿತರೆ, ಚಿರಂಜೀವಿ ಸರ್ಜಾ ಅವರು ಇಲ್ಲವಾದ ನಂತರ ಮೇಘನ ರಾಜ್ ಅವರು ನಾಲ್ಕು ತಿಂಗಳುಗಳನ್ನ ನಲವತ್ತು ವರ್ಷದಂತೆ ಕಳೆದಿದ್ದಾರೆ.. ದುಃಖದ ಯಾತನೆ ಅನುಭವಿಸಿದ ಕುಟುಂಬಕ್ಕೆ ಸಂತಸದ ಕ್ಷಣವನ್ನು ತಂದದ್ದು ಚಿರು ಮತ್ತು ಮೇಘನಾ ರಾಜ್ ಮಗು.. ಅಕ್ಟೊಬರ್ 22 ರಂದು ಮೇಘನ ರಾಜ್ ಅವರು ಗಂಡು ಮಗುವಿಗೆ ಜನ್ಮ ನೀಡಿದ್ದರು.. ಚಿರಂಜೀವಿ ಸರ್ಜಾ ಹಾಗು ಮೇಘನ ರಾಜ್ ಪ್ರೀತಿಯ ಕಾಣಿಕೆಯಾದ ಜೂನಿಯರ್ ಚಿರುವಿನ ತೊಟ್ಟಿಲು ಶಾಸ್ತ್ರ ಸಂಭ್ರಮ ಇತ್ತೀಚೆಗೆ ನೆರವೇರಿತ್ತು..

ಇದೀಗ ನಾಮಕರಣ ಕೂಡ ಪಿಕ್ಸ್ ಆಗಿದ್ದು, ಕಿಚ್ಚ ಸುದೀಪ್ ಅವರು ಜೂನಿಯರ್ ಚಿರುಗೆ ವಿಶೇಷ ಉಡುಗೊರೆಯನ್ನು ಕಳುಹಿಸಿ ಕೊಟ್ಟಿದ್ದಾರೆ.. ಚಿರು ಮತ್ತು ಕಿಚ್ಚ ಸುದೀಪ್ ಅವರು ರಾಮ ಲಕ್ಷ್ಮಣರಂತೆ ಇದ್ದವರು.. ಇವರಿಬ್ಬರ ಬಾಂಧವ್ಯದ ನಂಟು ಎರಡು ಮೂರು ವರ್ಷದ್ದಲ್ಲ ಬರೋಬ್ಬರಿ ಹತ್ತು ವರ್ಷದ ಬಾಂಧವ್ಯ.. ಕಿಚ್ಚ ಸುದೀಪ್ ಅವರು ಕೇವಲ ಚಿರು ಮಾತ್ರವಲ್ಲದೆ ಸರ್ಜಾ ಕುಟುಂಬ ಹಾಗು ಮೇಘನ ಕುಟುಂಬದಲ್ಲಿ ಒಬ್ಬರಾಗಿದ್ದರು.. ಸಧ್ಯಕ್ಕೆ ಸುದೀಪ್ ಅವರು ಪ್ಯಾಂಟಮ್ ಚಿತ್ರದ ಶೂಟಿಂಗ್ ಗಾಗಿ ಹೈದರಾಬಾದ್’ನಲ್ಲಿ ಇದ್ದಾರೆ..

ಈಗಾಗಿ ಕಿಚ್ಚ ಚಿರು ಮಗುವನ್ನ ನೇರವಾಗಿ ನೋಡಿ ವಿಶ್ ಮಾಡಲು ಆಗಿರಲಿಲ್ಲ. ಆದರೆ ಪೋನ್ ಮಾಡುವ ಮೂಲಕ ಕಿಚ್ಚ ಶುಭಾಶಯಗಳನ್ನು ತಿಳಿಸಿದ್ದರು.. ಈಗ ಕಿಚ್ಚ ಹೈದರಾಬಾದ್ ನಲ್ಲೇ ಇದ್ದುಕೊಂಡು ಚಿರು ಮಗುವಿಗೆ ದುಬಾರಿ ಉಡುಗೊರೆ ಕಳುಹಿಸಿಕೊಟ್ಟಿದ್ದಾರೆ.. ವರದನಾಯಕ ಸಿನಿಮಾದಲ್ಲಿ ಸುದೀಪ್ ಮತ್ತು ಚಿರು ಸಹೋದರರಾಗಿ ಅಭಿನಯಿಸಿದ್ದರು.. ನಿಜ ಜೀವನದಲ್ಲೂ ಕೂಡ ಹಾಗೆ ಇದ್ದರು. ಇದೀಗ ಸಹೋದರನ ಮಗುವಿಗೆ ಕಿಚ್ಚ ಸುದೀಪ್ ಡೈಮೆಂಡ್ ಪೆಂಡೆಂಟ್ ಗಿಪ್ಟ್ ಕೊಟ್ಟಿದ್ದಾರೆ.. ಇನ್ನು ಮಗುವಿನ ನಾಮಕರಣವನ್ನ ಜನವರಿ ತಿಂಗಳಿನಲ್ಲಿ ಮಾಡುತ್ತಾರೆಂದು ತಿಳಿದು ಬಂದಿದೆ..